Home
ಮೊಬೈಲ್

Lava Bold 2 5G ಟೀಸರ್ ಬಿಡುಗಡೆ: ಬಜೆಟ್ 5G ಸೆಗ್ಮೆಂಟ್‌ನಲ್ಲಿ ಹೊಸ ಸ್ಪರ್ಧಿ!

ಭಾರತೀಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ Lava ಶೀಘ್ರವೇ ಮತ್ತೊಂದು ಹೊಸ 5G ಫೋನ್ ಬಿಡುಗಡೆಗೆ ಸಿದ್ಧವಾಗಿದೆ. ಕಂಪನಿಯು ತನ್ನ ಜನಪ್ರಿಯ Lava Bold 5G ಮಾದರಿಯ ಮುಂದುವರಿದ ಆವೃತ್ತಿಯಾಗಿ Lava Bold 2 5G ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಶೀಘ್ರದಲ್ಲೇ ಪರಿಚಯಿಸುವುದಾಗಿ ಘೋಷಿಸಿದ್ದು, ಹೊಸ ಫೋನ್ ಸ್ಲಿಮ್ ಡಿಸೈನ್, ಡ್ಯುಯಲ್ ಕ್ಯಾಮೆರಾ ವ್ಯವಸ್ಥೆ ಮತ್ತು ಆಕರ್ಷಕ ಲುಕ್‌ಗಳೊಂದಿಗೆ ಬರಲಿದೆ ಎಂದು ಟೀಸರ್ ಮೂಲಕ ಸೂಚಿಸಿದೆ. ಬಜೆಟ್ 5G ಸೆಗ್ಮೆಂಟ್‌ನಲ್ಲಿ ಈ ಫೋನ್ ಗಮನ ಸೆಳೆಯುವ ಸಾಧ್ಯತೆ ಇದೆ.

Lava Bold 5G: ಭಾರತದಲ್ಲಿ ಶೀಘ್ರದಲ್ಲೇ ಲಾಂಚ್
ಲಾವಾ ಕಂಪನಿ ನೀಡಿದ ಮಾಹಿತಿಯ ಪ್ರಕಾರ, Lava Bold 2 5G ಫೋನ್‌ ಭಾರತದಲ್ಲಿ ಬೇಗನೇ ಬಿಡುಗಡೆಗೊಳ್ಳಲಿದೆ. ಈಗಾಗಲೇ ಈ ಫೋನ್‌ಗೆ ಸಂಬಂಧಿಸಿದ ವಿಶೇಷ ಮೈಕ್ರೋಸೈಟ್ ನಲ್ಲಿ ಲೈವ್ ಆಗಿದ್ದು, ಇದರಿಂದ ಈ ಸ್ಮಾರ್ಟ್‌ಫೋನ್ ಆನ್‌ಲೈನ್ ಮೂಲಕ ಮುಖ್ಯವಾಗಿ ಅಮೆಜಾನ್‌ನಲ್ಲಿ ಮಾರಾಟವಾಗಲಿದೆ ಎಂಬುದು ಸ್ಪಷ್ಟವಾಗಿದೆ. ಈ ಫೋನ್‌ಗಾಗಿ "Brighter, Slimmer, Bolder" ಎಂಬ ಟ್ಯಾಗ್‌ಲೈನ್ ನೀಡಲಾಗಿದೆ. ಇದರಿಂದ ಹೊಸ ಮಾದರಿ ಹಿಂದಿನ ಫೋನ್‌ಗಿಂತ ಹೆಚ್ಚು ಸ್ಟೈಲಿಷ್ ಹಾಗೂ ಸಣ್ಣ ವಿನ್ಯಾಸವನ್ನು ಹೊಂದಿರಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿದೆ.

Lava Bold 2 5G ಟೀಸರ್ ಬಿಡುಗಡೆ: ಬಜೆಟ್ 5G ಸೆಗ್ಮೆಂಟ್‌ನಲ್ಲಿ ಹೊಸ ಸ್ಪರ್ಧಿ!

ಡಿಸೈನ್ ಮತ್ತು ಕ್ಯಾಮೆರಾ ವ್ಯವಸ್ಥೆ
ಟೀಸರ್ ಚಿತ್ರಗಳ ಪ್ರಕಾರ Lava Bold 2 5G ಹಿಂಭಾಗದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಈ ಕ್ಯಾಮೆರಾಗಳು ಚೌಕಾಕಾರದ ಮಾಡ್ಯೂಲ್‌ನಲ್ಲಿ ಅಳವಡಿಸಲಾಗಿದ್ದು ಅದರ ಪಕ್ಕದಲ್ಲಿ LED ಫ್ಲ್ಯಾಶ್ ಕೂಡ ನೀಡಲಾಗಿದೆ.ಫೋನ್‌ಗೆ ಫ್ಲಾಟ್ ಫ್ರೇಮ್ ಹಾಗೂ ಫ್ಲಾಟ್ ಬ್ಯಾಕ್ ಪ್ಯಾನೆಲ್ ವಿನ್ಯಾಸ ನೀಡಲಾಗಿದೆ. ಜೊತೆಗೆ ಬಲಭಾಗದಲ್ಲಿ ಪವರ್ ಬಟನ್ ಮತ್ತು ವಾಲ್ಯೂಮ್ ಬಟನ್‌ಗಳನ್ನು ಕಾಣಬಹುದು. ಫೋನ್‌ನ ಸಂಪೂರ್ಣ ಸ್ಪೆಸಿಫಿಕೇಶನ್‌ಗಳು, ಬೆಲೆ ಹಾಗೂ ಅಧಿಕೃತ ಬಿಡುಗಡೆ ದಿನಾಂಕವನ್ನು ಕಂಪನಿ ಮುಂದಿನ ದಿನಗಳಲ್ಲಿ ಪ್ರಕಟಿಸುವ ನಿರೀಕ್ಷೆ ಇದೆ.

ಹಿಂದಿನ ಮಾದರಿ Lava Bold 5G ವೈಶಿಷ್ಟ್ಯಗಳು
ಇದಕ್ಕೂ ಮೊದಲು ನಾವು ಈಗಿನ Lava Bold 5G ಫೋನ್‌ ಬಗ್ಗೆ ನೋಡುವುದಾದರೆ, ಈ ಸ್ಮಾರ್ಟ್‌ಫೋನ್ ಭಾರತದಲ್ಲಿ 2025ರ ಏಪ್ರಿಲ್‌ನಲ್ಲಿ ಬಿಡುಗಡೆಗೊಂಡಿದ್ದು ಆರಂಭಿಕ ಬೆಲೆ ₹10,499 ಆಗಿತ್ತು. 4GB RAM ಮತ್ತು 128GB ಸ್ಟೋರೇಜ್ ಹೊಂದಿರುವ ಬೇಸ್ ವೇರಿಯಂಟ್ ಈ ಬೆಲೆಯಲ್ಲಿ ಲಭ್ಯವಿತ್ತು. ಈ ಫೋನ್‌ನಲ್ಲಿ 6.67 ಇಂಚಿನ 3D ಕರ್ವ್ಡ್ AMOLED ಡಿಸ್ಪ್ಲೇ ಇದ್ದು, 120Hz ರಿಫ್ರೆಶ್ ರೇಟ್‌ಗೆ ಬೆಂಬಲ ನೀಡುತ್ತದೆ. ಜೊತೆಗೆ 5,000mAh ಬ್ಯಾಟರಿ ಮತ್ತು 33W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ನೀಡಲಾಗಿದೆ.

Lava Bold 5G ಸ್ಮಾರ್ಟ್‌ಫೋನ್‌ಗೆ MediaTek Dimensity 6300 ಚಿಪ್‌ಸೆಟ್ ಶಕ್ತಿ ನೀಡುತ್ತದೆ. ಇದರಲ್ಲಿ 6GB ವರೆಗೆ RAM ಮತ್ತು 128GB ವರೆಗೆ ಸ್ಟೋರೇಜ್ ಆಯ್ಕೆಗಳು ಲಭ್ಯವಿವೆ.ಕ್ಯಾಮೆರಾ ವಿಭಾಗದಲ್ಲಿ 64 ಮೆಗಾಪಿಕ್ಸೆಲ್ AI ಪ್ರೈಮರಿ ಕ್ಯಾಮೆರಾ (Sony ಸೆನ್ಸರ್) ಹಿಂಭಾಗದಲ್ಲಿ ನೀಡಲಾಗಿದೆ. ಸೆಲ್ಫಿ ಹಾಗೂ ವಿಡಿಯೋ ಕಾಲ್‌ಗಾಗಿ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ. ಜೊತೆಗೆ ಈ ಫೋನ್‌ಗೆ IP64 ಡಸ್ಟ್ ಮತ್ತು ಸ್ಪ್ಲ್ಯಾಶ್ ರೆಸಿಸ್ಟೆನ್ಸ್ ರೇಟಿಂಗ್ ಕೂಡ ಇದೆ.

ಹೊಸ ಮಾದರಿಯಿಂದ ಏನು ನಿರೀಕ್ಷೆ?
ಇದೀಗ ಬರಲಿರುವ Lava Bold 2 5G ಹಿಂದಿನ ಮಾದರಿಗಿಂತ ಉತ್ತಮ ಡಿಸೈನ್, ಅಪ್‌ಗ್ರೇಡ್ ಕ್ಯಾಮೆರಾ ಮತ್ತು ಹೊಸ ವೈಶಿಷ್ಟ್ಯಗಳೊಂದಿಗೆ ಬರಬಹುದೆಂಬ ನಿರೀಕ್ಷೆ ಇದೆ. ಬಜೆಟ್ 5G ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಲಾವಾ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಲು ಈ ಹೊಸ ಮಾದರಿ ಸಹಾಯ ಮಾಡಬಹುದು.ಮುಂದಿನ ಕೆಲವು ದಿನಗಳಲ್ಲಿ ಕಂಪನಿ ಅಧಿಕೃತವಾಗಿ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸುವ ಸಾಧ್ಯತೆ ಇದೆ. ಹೊಸ ಫೋನ್ ಯಾವ ಬೆಲೆಯಲ್ಲಿ ಬರುತ್ತದೆ ಮತ್ತು ಯಾವ ವಿಶೇಷತೆಗಳನ್ನು ಹೊಂದಿರುತ್ತದೆ ಎಂಬುದನ್ನು ತಿಳಿಯಲು ಟೆಕ್ ಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.

Best Mobiles in India

English summary
Lava is gearing up to launch its new Lava Bold 2 5G smartphone in India as the successor to the Bold 5G. The upcoming device is teased with a slim design, dual rear cameras, and a stylish look, and it is expected to arrive soon in the budget 5G segment, with sales likely through Amazon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+