ಹೊಸ LAVA Bold 5G ಬಿಡುಗಡೆ; 1500 ರಿಯಾಯಿತಿ.. ಕೇವಲ 10,499 ರೂ.! ವಿಶೇಷತೆಗಳೇನು?
ಲಾವಾ ಇಂದು ಭಾರತದಲ್ಲಿ ತನ್ನ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಕಂಪನಿಯು ಈ 5G ಮೊಬೈಲ್ ಅನ್ನು ಕಡಿಮೆ ಬೆಲೆಗೆ ಪರಿಚಯಿಸಿದೆ. ಹೌದು, ಲಾವಾ ಬೋಲ್ಡ್ 5G (LAVA Bold 5G) ಫೋನ್ ಅಧಿಕೃತವಾಗಿ ದೇಶೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಈ ಮೊಬೈಲ್ ಅಮೆಜಾನ್ ಮೂಲಕ ಮಾರಾಟವಾಗಲಿದೆ. ಕಂಪನಿಯು ಆರಂಭಿಕ ಮಾರಾಟದ ಭಾಗವಾಗಿ ಈ 5G ಫೋನ್ ಖರೀದಿ ಮೇಲೆ ಭಾರೀ ರಿಯಾಯಿತಿ ಘೋಷಿಸಿದೆ. ಬನ್ನಿ, ನೂತನ ಲಾವಾ ಬೋಲ್ಡ್ 5G ಬೆಲೆ, ಆಫರ್ ಮತ್ತು ವಿಶೇಷತೆಗಳ ಬಗ್ಗೆ ತಿಳಿಯೋಣ.
ಲಾವಾ ಬೋಲ್ಡ್ 5G ಮೊಬೈಲ್ ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಬರುತ್ತದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್ ಹೊಂದಿದೆ. ಈ ಫೋನಿನಲ್ಲಿ 64 ಮೆಗಾಪಿಕ್ಸೆಲ್ ಸೋನಿ ಕ್ಯಾಮೆರಾ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಈ ಮೊಬೈಲ್ 6.67 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದರೊಂದಿಗೆ 8GB RAM + 28GB ಸ್ಟೋರೇಜ್, 5000mAh ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಿದೆ. ಈ ಹೊಸ ಲಾವಾ 5G ಫೋನ್ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದ್ದರೂ, ಕಾರ್ಯಕ್ಷಮತೆ ಮತ್ತು ವೈಶಿಷ್ಟ್ಯಗಳಲ್ಲಿ ಅದ್ಭುತವಾಗಿದೆ.

ಲಾವಾ ಬೋಲ್ಡ್ 5G ಬೆಲೆ ಮತ್ತು ಮಾರಾಟದ ವಿವರ
8GB RAM + 128GB ಸ್ಟೋರೇಜ್ ಬೆಲೆ = 13,999 ರೂ.
6GB RAM + 128GB ಸ್ಟೋರೇಜ್ ಬೆಲೆ = 12,999 ರೂ.
4GB RAM + 128GB ಸ್ಟೋರೇಜ್ ಬೆಲೆ = 11,999 ರೂ.
ಲಾವಾ ಬೋಲ್ಡ್ 5G ಫೋನ್ ನೀಲಿ (Sapphire Blue) ಬಣ್ಣದಲ್ಲಿ ಬಿಡುಗಡೆಯಾಗಿದೆ. ನೀವು ಮೂರು RAM ರೂಪಾಂತರಗಳಲ್ಲಿ ಈ ಫೋನನ್ನು ಖರೀದಿಸಬಹುದು. ಕಂಪನಿಯು ಆರಂಭಿಕ ಮಾರಾಟದಲ್ಲಿ ಈ 5G ಫೋನ್ ಮೇಲೆ ಭಾರೀ ರಿಯಾಯಿತಿ ಸಹ ಘೋಷಿಸಿದೆ. ಆನ್‌ಲೈನ್ ಶಾಪಿಂಗ್ ಸೈಟ್ ಅಮೆಜಾನ್‌ನಲ್ಲಿ ಈ ಮೊಬೈಲ್ ಖರೀದಿಸಿದರೆ, ಬ್ಯಾಂಕ್ ಆಫರ್ ಸಿಗುತ್ತದೆ. ನೀವು 1500 ರೂ.ಗಳ ರಿಯಾಯಿತಿಯೊಂದಿಗೆ ಈ ಫೋನನ್ನು ಕೊಳ್ಳಬಹುದು. ಈ ಆಫರ್ ಸೈಸಿಐಸಿಐ ಮತ್ತು ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗಳಲ್ಲಿ ಲಭ್ಯವಿರುತ್ತದೆ. ಈ ರಿಯಾಯಿತಿ ಬಳಿಕ ನೀವು ಲಾವಾ ಬೋಲ್ಡ್ 5G ಅನ್ನು ಕೇವಲ 10,499 ರೂ.ಗೆ ನಿಮ್ಮದಾಗಿಸಿಕೊಳ್ಳಬಹುದು.
ಲಾವಾ ಬೋಲ್ಡ್ 5G ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಲಾವಾ ಬೋಲ್ಡ್ 5G ಫೋನ್ 6.67 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು ಪಂಚ್ ಹೋಲ್ ಶೈಲಿಯ 3D ಕರ್ವ್ಡ್ ಅಮೋಲೆಡ್ ಸ್ಕ್ರೀನ್ ಆಗಿದೆ. ಈ ಡಿಸ್ಪ್ಲೇಯು 2400 x 1080 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. ಹಾಗೆಯೇ 120Hz ರಿಫ್ರೆಶ್ ದರದ ಬೆಂಬಲ ಪಡೆದಿದೆ. ಈ ಫೋನ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ತಂತ್ರಜ್ಞಾನ ಸಹ ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಲಾವಾ ಬೋಲ್ಡ್ 5G ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. ಇದು 6 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಮೇಲೆ ನಿರ್ಮಿಸಲಾದ ಪ್ರೊಸೆಸರ್ ಆಗಿದೆ. ಈ ಲಾವಾ 5G ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಕೆಲಸ ಮಾಡಲಿದೆ. ಈ ಮೊಬೈಲ್ ಆಂಡ್ರಾಯ್ಡ್ 16 ನಲ್ಲಿಯೂ ಕೆಲಸ ಮಾಡುತ್ತದೆ. ಈ ಸ್ಮಾರ್ಟ್‌ಫೋನ್ 4GB RAM, 6GB RAM ಮತ್ತು 8GB RAM ಆಯ್ಕೆಗಳೊಂದಿಗೆ ಬರುತ್ತದೆ.
ಸ್ಟೋರೇಜ್ ಆಯ್ಕೆ
ಲಾವಾ ಬೋಲ್ಡ್ 5G ಸ್ಮಾರ್ಟ್‌ಫೋನ್ 4GB RAM, 6GB RAM ಮತ್ತು 8GB RAM ನಲ್ಲಿ ಬಿಡುಗಡೆಯಾಗಿದೆ. ಮೂರು ರೂಪಾಂತರಗಳು ವಿಸ್ತರಿಸಬಹುದಾದ RAM ತಂತ್ರಜ್ಞಾನವನ್ನು ಹೊಂದಿವೆ. ನೀವು 4GB RAM ಮಾದರಿಗೆ ಹೆಚ್ಚುವರಿ 4GB ವರ್ಚುವಲ್ RAM ಅನ್ನು ಸೇರಿಸಬಹುದು. ಇತರೆ ರೂಪಾಂತರಗಳು 12GB RAM ಮತ್ತು 16GB RAM ಹೊಂದಿವೆ.

ಕ್ಯಾಮೆರಾ ಸೆಟಪ್
ಲಾವಾ ಬೋಲ್ಡ್ 5G ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಈ ಫೋನಿನಲ್ಲಿ 64 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಲಭ್ಯವಿರದೆ. ಇದು ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಬರುತ್ತದೆ. ಈ ಫೋನ್ ದ್ವಿತೀಯ ಎಐ ಲೆನ್ಸ್ ಕೂಡ ಹೊಂದಿದೆ. ಈ ಫೋನಿನಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಲಾವಾ ಬೋಲ್ಡ್ 5G ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯ ಬ್ಯಾಟರಿಯೊಂದಿಗೆ ಭಾರತದಲ್ಲಿ ಬಿಡುಗಡೆಯಾಗಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 33W ವೇಗದ ಚಾರ್ಜಿಂಗ್ ತಂತ್ರಜ್ಞಾನ ನೀಡಲಾಗುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು 5G, ವೈ-ಫೈ, ಬ್ಲೂಟೂತ್, ಎನ್‌ಎಫ್‌ಸಿ, ಜಿಪಿಎಸ್ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ.


Click it and Unblock the Notifications








