Home
ಮೊಬೈಲ್

ಕೇವಲ 10,499 ರೂ.! 64MP SONY ಕ್ಯಾಮೆರಾ.. 5000mAh ಬ್ಯಾಟರಿ.. ಸದ್ದಿಲ್ಲದೆ ಅಗ್ಗದ Lava 5G ಫೋನ್ ಲಾಂಚ್

ಲಾವಾ ತನ್ನ ಅಭಿಮಾನಿಗಳಿಗಾಗಿ ಮತ್ತೊಂದು ಅಗ್ಗದ ಸ್ಮಾರ್ಟ್‌ಫೋನ್ ತಂದಿದೆ. ಇದು ಅತ್ಯಂತ ಅಗ್ಗದ ಬೆಲೆಯಲ್ಲಿ ಬಿಡುಗಡೆಯಾಗಿದೆ. ಹೌದು, ಭಾರತೀಯ ಮೊಬೈಲ್ ಕಂಪನಿ ಲಾವಾ ಅಗ್ಗದ ಫೋನ್‌ಗಳನ್ನು ಖರೀದಿಸಲು ಬಯಸುವವರಿಗೆ ಇಷ್ಟವಾಗುವ ಸ್ಮಾರ್ಟ್‌ಫೋನ್‌ ಪರಿಚಯಿಸಿದೆ. ಇದು ಲಾವಾ ಬೋಲ್ಡ್ 5G (LAVA Bold 5G) ಹೆಸರಿನೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಇದೇ ಏಪ್ರಿಲ್ 8 ರಂದು ಅಮೆಜಾನ್ ಮೂಲಕ ಈ ಮೊಬೈಲ್ ತನ್ನ ಮಾರಾಟ ಶುರು ಮಾಡಲಿದೆ. ಈ ಫೋನಿನ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯಲು ಮುಂದೆ ಓದಿ..

ನೂತನ ಅಗ್ಗದ ಲಾವಾ ಬೋಲ್ಡ್ 5G ಹಲವು ವಿಶೇಷತೆಗಳೊಂದಿಗೆ ಭಾರತದಲ್ಲಿ ಬಿಡುಗಡೆಯಾಗಿದೆ. ಈ ಫೋನಿನಲ್ಲಿ 64 ಮೆಗಾಪಿಕ್ಸೆಲ್ ಎಐ ಸೋನಿ ಕ್ಯಾಮೆರಾ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್ ಹೊಂದಿದೆ. ಈ ಮೊಬೈಲ್ 6.67 ಇಂಚಿನ 3D ಕರ್ವ್ಡ್ ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದರೊಂದಿಗೆ 8GB RAM + 128GB ಸ್ಟೋರೇಜ್, 5000mAh ಬ್ಯಾಟರಿ ಸೇರಿದಂತೆ ಹಲವು ಅತ್ಯುತ್ತಮ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಹೊಸ Lava Bold 5G ಲಾಂಚ್; 64MP ಕ್ಯಾಮೆರಾ, 5000mAh ಬ್ಯಾಟರಿ.. ಅಗ್ಗದ ಬೆಲೆ

ಲಾವಾ ಬೋಲ್ಡ್ 5G ಮಾರಾಟದ ವಿವರ

ಲಾವಾ ತನ್ನ ಹೊಸ ಸ್ಮಾರ್ಟ್‌ಫೋನ್ ಅನ್ನು ಏಪ್ರಿಲ್ 8 ರಂದು ಅಧಿಕೃತವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಈ ಅಗ್ಗದ ಲಾವಾ ಬೋಲ್ಡ್ 5G ಫೋನಿನ ಮಾರಾಟ ಈ ದಿನದಿಂದಲೇ ಪ್ರಾರಂಭವಾಗಲಿದೆ. ನೀವು ಈ ಫೋನನ್ನು ಆನ್‌ಲೈನ್ ಶಾಪಿಂಗ್ ಸೈಟ್ ಅಮೆಜಾನ್ ಮೂಲಕ ಖರೀದಿಸಬಹುದು. ಏಪ್ರಿಲ್ 8 ರಂದು ಮಧ್ಯಾಹ್ನ 12 ಗಂಟೆಯಿಂದ ಇದು ತನ್ನ ಮೊದಲ ಮಾರಾಟವನ್ನು ಪ್ರಾರಂಭಿಸಲಿದೆ. ನೀವು ಸಫೈರ್ ಬ್ಲೂ ಬಣ್ಣದಲ್ಲಿ ಈ ಮೊಬೈಲ್ ಅನ್ನು ಕೊಳ್ಳಬಹುದು.

ಲಾವಾ ಬೋಲ್ಡ್ 5G ಬೆಲೆ

ಲಾವಾ ಬೋಲ್ಡ್ 5G ಫೋನ್ ಅಗ್ಗದ ಬಜೆಟ್ ವಿಭಾಗದಲ್ಲಿ ಬಿಡುಗಡೆಯಾಗಿದೆ. ಈ ಫೋನಿನ ಬೆಲೆ 11 ಸಾವಿರ ರೂ.ಗಿಂತ ಕಡಿಮೆ ಇದೆ. ಈ ಅಗ್ಗದ 5G ಫೋನನ್ನು ಏಪ್ರಿಲ್ 8 ರಂದು 10,499 ರೂ.ಗೆ ಮಾರಾಟ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ. ಇದು ಫೋನಿನ ಬಿಡುಗಡೆ ಬೆಲೆಯಾಗಿದ್ದು, ಇದು ರಿಯಾಯಿತಿಯನ್ನು ಒಳಗೊಂಡಿದೆ. ವಿಶೇಷವೆಂದರೆ, ಇದು 4GB RAM ಹೊಂದಿರುವ ಫೋನಿನ ಆರಂಭಿಕ ಬೆಲೆ ಆಗಿರಲಿದೆ.

ಲಾವಾ ಬೋಲ್ಡ್ 5G ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಲಾವಾ ಬೋಲ್ಡ್ 5G ಮೊಬೈಲ್ 6.67 ಇಂಚಿನ ಡಿಸ್ಪ್ಲೇ ಹೊಂದಿದೆ. ಅಗ್ಗದ ಬಜೆಟ್ ವಿಭಾಗದಲ್ಲಿ ಈ ಡಿಸ್‌ಪ್ಲೇ ಹೊಂದಿರುವ ಮೊದಲ 5G ಫೋನ್ ಇದಾಗಿದೆ. ಇದು ಪಂಚ್ ಹೋಲ್ ಶೈಲಿಯ 3D ಕರ್ವ್ಡ್ ಅಮೋಲೆಡ್ ಸ್ಕ್ರೀನ್ ಆಗಿದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರದ ಬೆಂಬಲ ಪಡೆದಿದೆ. ಹಾಗೆಯೇ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ತಂತ್ರಜ್ಞಾನ ಸಹ ಒಳಗೊಂಡಿದೆ.

ಪ್ರೊಸೆಸರ್ ಸಾಮರ್ಥ್ಯ

ಲಾವಾ ಬೋಲ್ಡ್ 5G ಫೋನ್ ಮೀಡಿಯಾ ಟೆಕ್‌ನ ಡೈಮೆನ್ಸಿಟಿ 6300 ಆಕ್ಟಾ ಕೋರ್ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಿದೆ. ಇದನ್ನು 6 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಮೇಲೆ ನಿರ್ಮಿಸಲಾಗಿದೆ. ಈ ಲಾವಾ ಬೋಲ್ಡ್ 5G ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಕೆಲಸ ಮಾಡಲಿದೆ. ಈ ಲಾವಾ ಮೊಬೈಲ್ ಆಂಡ್ರಾಯ್ಡ್ 16 ನಲ್ಲಿಯೂ ಕೆಲಸ ನಿರ್ವಹಿಸುತ್ತದೆ.

RAM ಮತ್ತು ಸ್ಟೋರೇಜ್ ಆಯ್ಕೆ

ಲಾವಾ ಬೋಲ್ಡ್ 5G ಸ್ಮಾರ್ಟ್‌ಫೋನ್ 4GB RAM, 6GB RAM ಮತ್ತು 8GB RAM ಆಯ್ಕೆಗಳೊಂದಿಗೆ ಬರುತ್ತದೆ. ಈ ಫೋನ್ ವಿಸ್ತರಿಸಬಹುದಾದ RAM ತಂತ್ರಜ್ಞಾನ ಸಹ ಹೊಂದಿದೆ. ಇದು ಫೋನಿನ ಎಲ್ಲಾ ರೂಪಾಂತರಗಳ ಭೌತಿಕ RAMಗೆ ವರ್ಚುವಲ್ RAM ಸೇರಿಸುತ್ತದೆ. ಈ ಮೊಬೈಲ್ 8GB RAM (4GB + 4GB), 12GB RAM (6GB + 6GB) ಮತ್ತು 16GB RAM (8GB + 8GB) ಶಕ್ತಿಯನ್ನು ನೀಡುತ್ತದೆ.

ಕ್ಯಾಮೆರಾ ಸೆಟಪ್

ಲಾವಾ ಬೋಲ್ಡ್ 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ 64 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ ಎಐ ಲೆನ್ಸ್ ಕೂಡ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಲಾವಾ ಬೋಲ್ಡ್ 5G ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯ ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 33W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಮೊಬೈಲ್ 5G, ವೈ-ಫೈ, ಬ್ಲೂಟೂತ್, ಎನ್‌ಎಫ್‌ಸಿ, ಜಿಪಿಎಸ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

Best Mobiles in India

English summary
Lava Bold 5G With MediaTek Dimensity 6300 Launched in India: Check Price, offers, specifications and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+