Home
ಮೊಬೈಲ್

Lava Bold N1 ಮತ್ತು Bold N1 Pro ಬಿಡುಗಡೆಗೆ ಸಜ್ಜು: ಆರಂಭಿಕ ಬೆಲೆ 5,999 ರೂ.!

ದೇಶೀಯ ಮೊಬೈಲ್ ಬ್ರ್ಯಾಂಡ್ Lava ತನ್ನ ಹೊಸ Lava Bold N1 ಮತ್ತು Lava Bold N1 Pro ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಮುಂದಿನ ತಿಂಗಳು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಅಧಿಕೃತ ಬಿಡುಗಡೆ ದಿನಾಂಕವನ್ನು Lava ಕಂಪೆನಿಯು ಇನ್ನೂ ಘೋಷಿಸದಿದ್ದರೂ, Amazon India ಈ ಹೊಸ ಸರಣಿಯ ಸ್ಮಾರ್ಟ್‌ಫೋನ್‌ಗಳ ಬೆಲೆ, ಮಾರಾಟ ದಿನಾಂಕಗಳು ಮತ್ತು ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿದೆ. ಎರಡೂ ಮಾದರಿಗಳು ಯುನಿಸಾಕ್ ಚಿಪ್‌ಸೆಟ್‌ಗಳು ಮತ್ತು 5,000mAh ಬ್ಯಾಟರಿಗಳೊಂದಿಗೆ ಬರಲಿವೆ ಎಂಬುದು ದೃಢಪಟ್ಟಿದೆ. Lava Bold N1 ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದರೆ, Lava Bold N1 Pro ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಹಾಗಾದರೆ, ಮುಂಬರುವ Lava Bold N1 ಮತ್ತು Lava Bold N1 Pro ಸ್ಮಾರ್ಟ್‌ಫೋನ್‌ಗಳು ಹೊಂದಿರುವ ವೈಶಿಷ್ಟ್ಯಗಳು ಯಾವುವು ಮತ್ತು ಬೆಲೆಗಳು ಎಷ್ಟು ಎಂಬುದನ್ನು ನೋಡೋಣ ಬನ್ನಿ,

Lava Bold N1 ವೈಶಿಷ್ಟ್ಯಗಳು
Lava Bold N1 ಸ್ಮಾರ್ಟ್‌ಫೋನ್ 6.75-ಇಂಚಿನ HD+ ಡಿಸ್‌ಪ್ಲೇ ಹೊಂದಿದೆ. ಇದು ರೇಡಿಯಂಟ್ ಬ್ಲಾಕ್ ಮತ್ತು ಸ್ಪಾರ್ಕ್ಲಿಂಗ್ ಐವರಿ ಬಣ್ಣಗಳಲ್ಲಿ ಲಭ್ಯವಿರುತ್ತದೆ. ಕ್ಯಾಮೆರಾ ವಿಭಾಗದಲ್ಲಿ, ಈ ಸ್ಮಾರ್ಟ್‌ಫೋನ್ 13-ಮೆಗಾಪಿಕ್ಸೆಲ್ ಮುಖ್ಯ ಸೆನ್ಸರ್ ಮತ್ತು 5-ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಒಳಗೊಂಡಿರುವ AI-ಬೆಂಬಲಿತ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP54 ರೇಟಿಂಗ್ ಪಡೆದುಕೊಂಡಿದೆ.ಕಾರ್ಯಕ್ಷಮತೆಗಾಗಿ, Lava Bold N1 ಆಕ್ಟಾ-ಕೋರ್ ಯುನಿಸಾಕ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 4GB RAM ಮತ್ತು 64GB ಆಂತರಿಕ ಸಂಗ್ರಹಣೆಯೊಂದಿಗೆ ಜೋಡಿಸಲ್ಪಟ್ಟಿದೆ. ವರ್ಚುವಲ್ RAM ವೈಶಿಷ್ಟ್ಯದ ಮೂಲಕ, ಬಳಸದ ಸಂಗ್ರಹಣೆಯನ್ನು ಬಳಸಿಕೊಂಡು ಆನ್‌ಬೋರ್ಡ್ ಮೆಮೊರಿಯನ್ನು 8GB ವರೆಗೆ ವಿಸ್ತರಿಸಬಹುದು. ಫೋನ್ 10W ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಹೊಂದಿದೆ.

Lava Bold N1 Pro ವೈಶಿಷ್ಟ್ಯಗಳು
ಇತ್ತ Lava Bold N1 Pro ಸ್ಮಾರ್ಟ್‌ಫೋನ್ ಸಗ ಸಹ IP54-ರೇಟೆಡ್ ಬಾಡಿ ಹೊಂದಿದೆ ಮತ್ತು ಸ್ಟೆಲ್ತ್ ಬ್ಲಾಕ್ ಮತ್ತು ಟೈಟಾನಿಯಂ ಬ್ಲಾಕ್ ಬಣ್ಣಗಳಲ್ಲಿ ಬರುತ್ತದೆ. ಇದು 120Hz ರಿಫ್ರೆಶ್ ದರದೊಂದಿಗೆ 6.67-ಇಂಚಿನ HD+ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್ ಕೂಡ ಯುನಿಸಾಕ್ T606 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ, 4GB RAM ಮತ್ತು 128GB ಸಂಗ್ರಹಣೆಯೊಂದಿಗೆ ಜೋಡಿಸಲ್ಪಟ್ಟಿದೆ. Lava Bold N1 Pro ಸಹ 4GB ವರ್ಚುವಲ್ RAM ಆಯ್ಕೆಯನ್ನು ನೀಡುತ್ತದೆ.ಕ್ಯಾಮೆರಾ ವಿಭಾಗದಲ್ಲಿ, Lava Bold N1 Pro 50-ಮೆಗಾಪಿಕ್ಸೆಲ್ ಶೂಟರ್ ನೇತೃತ್ವದ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಹೊಂದಿದೆ ಮತ್ತು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಸಹ ನೀಡುತ್ತದೆ ಎಂದು ಕಂಪೆನಿಯು ತಿಳಿಸಿದೆ.

Lava Bold N1 ಮತ್ತು Bold N1 Pro ಬಿಡುಗಡೆಗೆ ಸಜ್ಜು: ಆರಂಭಿಕ ಬೆಲೆ 5,999 ರೂ.!

Lava Bold N1 ಮತ್ತು Lava Bold N1 Pro ಬೆಲೆ ಮತ್ತು ಲಭ್ಯತೆ
Lava Bold N1 ಮತ್ತು Lava Bold N1 Pro ಬಿಡುಗಡೆಗಾಗಿ Amazon ವೆಬ್‌ಸೈಟ್‌ನಲ್ಲಿ ಮೀಸಲಾದ ಲ್ಯಾಂಡಿಂಗ್ ಪುಟವನ್ನು ರಚಿಸಲಾಗಿದೆ. Lava Bold N1 Pro ಸ್ಮಾರ್ಟ್‌ಫೋನ್ ಇದೇ ಜೂನ್ 2 ರಿಂದ ₹6,699 ಆರಂಭಿಕ ಬೆಲೆಗೆ ಮಾರಾಟಕ್ಕೆ ಬರಲಿದ್ದರೆ, ಇತ್ತ Lava Bold N1 ಸ್ಮಾರ್ಟ್‌ಫೋನ್ ಜೂನ್ 4 ರಿಂದ ₹5,999 ಆರಂಭಿಕ ಬೆಲೆಗೆ ಲಭ್ಯವಿರುತ್ತದೆ ಎಂದು ಪಟ್ಟಿಯು ಬಹಿರಂಗಪಡಿಸಿದೆ. ಈ ಎರಡು ಸ್ಮಾರ್ಟ್‌ಫೋನ್‌ಗಳ ಬಿಡುಗಡೆ ಸಮಯದಲ್ಲಿ ಮತ್ತಷ್ಟು ಮಾಹಿತಿಗಳು ಬಹಿರಂಗವಾಗುವ ನಿರೀಕ್ಷೆಯಿದೆ. ಈ ಕುರಿತು ಮತ್ತಷ್ಟು ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್‌ನಲ್ಲಿ ಲೈವ್ ಆಗಿರಿ.

Best Mobiles in India

English summary
Lava Bold N1 Pro features a triple rear camera system, with a 50-megapixel main camera at its forefront.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+