₹5,000 ಬಜೆಟ್ ಬೆಲೆಗೆ 5000mAh ಬ್ಯಾಟರಿ, IP54 ರೇಟಿಂಗ್ ಫೋನ್: ಶೀಘ್ರ ಬಿಡುಗಡೆ!
ಭಾರತೀಯ ಮಾರುಕಟ್ಟೆಯಲ್ಲಿ Lava Bold N1 Lite ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ. ಕಂಪನಿಯು ಇನ್ನೂ ಯಾವುದೇ ಅಧಿಕೃತ ಘೋಷಣೆ ಮಾಡದಿದ್ದರೂ, ಈ ಫೋನ್ ಅನ್ನು ಅಮೆಜಾನ್‌ನಲ್ಲಿ ಪಟ್ಟಿ ಮಾಡಲಾಗಿದೆ. ಹೌದು, ಜೆಟ್ ವಿಭಾಗದಲ್ಲಿ ಹೊಸ ಸ್ಪರ್ಧೆಯನ್ನು ಹುಟ್ಟುಹಾಕುವ ನಿರೀಕ್ಷೆಯಿರುವ ಈ ಫೋನ್‌ನ ಬೆಲೆ ಮತ್ತು ವಿಶೇಷತೆಗಳ ಬಗ್ಗೆ ಅಮೆಜಾನ್ ಪಟ್ಟಿಯು ಮಹತ್ವದ ಸುಳಿವುಗಳನ್ನು ನೀಡಿದೆ. ಹಾಗಾದರೆ, ಮುಂಬರಲಿರುವ ಹೊಸ Lava Bold N1 Lite ಸ್ಮಾರ್ಟ್‌ಫೋನ್ ಹೇಗಿದೆ?, ಬೆಲೆ ಎಷ್ಟು ಎಂಬುದನ್ನು ನೋಡೋಣ ಬನ್ನಿ.
Lava Bold N1 Lite: ಪ್ರಮುಖ ವೈಶಿಷ್ಟ್ಯಗಳು
Lava Bold N1 Lite 6.75-ಇಂಚಿನ HD+ (720 x 1,600 ಪಿಕ್ಸೆಲ್‌ಗಳು) LCD ಡಿಸ್‌ಪ್ಲೇಯನ್ನು ಹೊಂದಿದೆ. ಇದು ಉತ್ತಮವಾದ ದೃಶ್ಯ ಅನುಭವಕ್ಕಾಗಿ 90Hz ರಿಫ್ರೆಶ್ ದರ ಮತ್ತು 269 PPI ಪಿಕ್ಸೆಲ್ ಸಾಂದ್ರತೆಯನ್ನು ನೀಡುತ್ತದೆ. ಸೆಲ್ಫಿ ಕ್ಯಾಮೆರಾಕ್ಕಾಗಿ ಪರದೆಯ ಮೇಲೆ ಹೋಲ್-ಪಂಚ್ ಕಟೌಟ್ ಅನ್ನು ವಿನ್ಯಾಸಗೊಳಿಸಲಾಗಿದೆ. ಈ ಹ್ಯಾಂಡ್‌ಸೆಟ್ 165.0 x 76.0 x 9.0mm ಆಯಾಮಗಳನ್ನು ಹೊಂದಿದ್ದು, ಇದರ ತೂಕ 193g ಆಗಿದೆ.
ಕಾರ್ಯಕ್ಷಮತೆಗಾಗಿ, ಈ ಸ್ಮಾರ್ಟ್‌ಫೋನ್ ಹೆಸರಿಸದ ಯುನಿಸಾಕ್ ಆಕ್ಟಾ-ಕೋರ್ ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಇದು 3GB RAM ಮತ್ತು 64GB ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಜೋಡಿಯಾಗಿದೆ. ಪ್ರಮುಖವಾಗಿ, RAM ಅನ್ನು ವಾಸ್ತವಿಕವಾಗಿ (Virtually) 6GB ವರೆಗೆ ವಿಸ್ತರಿಸಬಹುದಾಗಿದೆ. ಈ ಹೊಸ ಸಾಧನವು ಇತ್ತೀಚಿನ ಆಂಡ್ರಾಯ್ಡ್ 15 ಕಾರ್ಯಾಚರಣಾ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸಲಿದೆ ಎಂದು ನಿರೀಕ್ಷಿಸಲಾಗಿದೆ.

ಫೋಟೋಗ್ರಫಿಗಾಗಿ, Lava Bold N1 Lite ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್‌ನೊಂದಿಗೆ ಪಟ್ಟಿಮಾಡಲ್ಪಟ್ಟಿದೆ. ಇದು 13-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು ಅನಿರ್ದಿಷ್ಟ ದ್ವಿತೀಯ ಸಂವೇದಕವನ್ನು ಒಳಗೊಂಡಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 5-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ನೀಡಲಾಗಿದೆ. ಇದು 30fps ನಲ್ಲಿ 1080p ರೆಸಲ್ಯೂಶನ್‌ನಲ್ಲಿ ವೀಡಿಯೊ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತದೆ.
ಬಳಕೆದಾರರ ಸುರಕ್ಷತೆಗಾಗಿ, ಫೋನ್ ಫಿಂಗರ್‌ಪ್ರಿಂಟ್ ಸಂವೇದಕ ಮತ್ತು ಮುಖ ಗುರುತಿಸುವಿಕೆ (ಫೇಸ್ ಅನ್‌ಲಾಕ್) ವೈಶಿಷ್ಟ್ಯವನ್ನು ಬೆಂಬಲಿಸುತ್ತದೆ. ಇದರ ಜೊತೆಗೆ, ಸಂಭಾಷಣೆಗಳನ್ನು ಸುರಕ್ಷಿತವಾಗಿಡಲು ಸ್ಮಾರ್ಟ್ ಪ್ರೊಟೆಕ್ಷನ್ ವೈಶಿಷ್ಟ್ಯಗಳೊಂದಿಗೆ ಅನಾಮಧೇಯ ಕರೆ ರೆಕಾರ್ಡಿಂಗ್‌ನಂತಹ ವೈಶಿಷ್ಟ್ಯಗಳು ಸಹ ಇವೆ. ಸಂಪರ್ಕ ಆಯ್ಕೆಗಳಲ್ಲಿ 4G LTE, Wi-Fi, ಬ್ಲೂಟೂತ್, GPS, 3.5mm ಹೆಡ್‌ಫೋನ್ ಜ್ಯಾಕ್ ಮತ್ತು USB ಟೈಪ್-C ಪೋರ್ಟ್ ಸೇರಿವೆ.
ಒಟ್ಟಾರೆಯಾಗಿ, Lava Bold N1 Lite ಕೈಗೆಟುಕುವ ಬೆಲೆಯಲ್ಲಿ 90Hz ಡಿಸ್ಪ್ಲೇ, ಆಂಡ್ರಾಯ್ಡ್ 15 ಮತ್ತು ವಿಸ್ತರಿಸಬಹುದಾದ RAM ನಂತಹ ವೈಶಿಷ್ಟ್ಯಗಳನ್ನು ನೀಡುವ ಮೂಲಕ ಬಜೆಟ್ ಗ್ರಾಹಕರ ಗಮನ ಸೆಳೆಯುವ ನಿರೀಕ್ಷೆಯಿದೆ. Lava ದೃಢೀಕೃತ ಬಿಡುಗಡೆ ದಿನಾಂಕವನ್ನು ಘೋಷಿಸಿದ ನಂತರ ಇದರ ಸಂಪೂರ್ಣ ಮೌಲ್ಯಮಾಪನ ಸಾಧ್ಯವಾಗಲಿದೆ. ಈ ಹೊಸ ಫೋನ್ ಕುರಿತಂತೆ ನಿಮ್ಮ ಅನಿಸಿಕೆಗಳೇನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.
Lava Bold N1 Lite: ಬೆಲೆ ಮತ್ತು ಲಭ್ಯತೆ
Lava Bold N1 Lite ನ ಮೂಲ ಬೆಲೆ ₹6,699 ಎಂದು ಪಟ್ಟಿ ಮಾಡಿರುವುದನ್ನು Gadgets 360 ಗಮನಿಸಿತ್ತು. ಆದರೆ, ಪ್ರಸ್ತುತ ಅಮೆಜಾನ್ ರಿಯಾಯಿತಿಯೊಂದಿಗೆ ಇದನ್ನು ₹5,698 ರ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುವುದಾಗಿ ಪಟ್ಟಿ ಮಾಡಿದೆ. ಈ ಸ್ಮಾರ್ಟ್‌ಫೋನ್ ಕ್ರಿಸ್ಟಲ್ ಬ್ಲೂ ಮತ್ತು ಕ್ರಿಸ್ಟಲ್ ಗೋಲ್ಡ್ ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ಲಭ್ಯವಾಗಲಿದೆ. ಪ್ರಸ್ತುತ, ಈ ಫೋನ್ ಕೇವಲ ಒಂದೇ ಒಂದು ಮಾರಾಟ ಮಾರಾಟಕ್ಕಿದ್ದು, ಇತರ RAM ಮತ್ತು ಸ್ಟೋರೇಜ್ ಆಯ್ಕೆಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ.


Click it and Unblock the Notifications








