Home
ಮೊಬೈಲ್

ಪ್ರೀಮಿಯಂ ಲುಕ್, ಕಡಿಮೆ ಬೆಲೆ: ನಾಳೆ Lava Bold N2 ಫೋನ್ ಬಿಡುಗಡೆ!

ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಕಳೆದ ಕೆಲವು ದಿನಗಳಿಂದ ವದಂತಿಯ ಸುದ್ದಿಗಳಿಂದಲೇ ಗಮನಸೆಳೆಯುತ್ತಿರುವ Lava Bold N2 ಸ್ಮಾರ್ಟ್‌ಫೋನಿನ ಆಗಮನವು ಇದೀಗ ಅಧಿಕೃತವಾಗಿದೆ. Lava ತನ್ನ Bold ಸರಣಿಯಲ್ಲಿ ಬಜೆಟ್ ಬೆಲೆಯ Lava Bold N2 ಸ್ಮಾರ್ಟ್‌ಫೋನ್ ಅನ್ನು ಫೆಬ್ರವರಿ 17ರಂದು, ಅಂದರೆ ನಾಳೆ ಮಧ್ಯಾಹ್ನ 12 ಗಂಟೆಗೆ ದೇಶದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. "Be Fearless, Be Bold" ಎಂಬ ಟ್ಯಾಗ್‌ಲೈನ್‌ನೊಂದಿಗೆ ಈ ಫೋನ್ ಪರಿಚಯವಾಗಲಿದ್ದು, ಇದು ಯುವ ಬಳಕೆದಾರರನ್ನು ಗುರಿಯಾಗಿಸಿಕೊಂಡಿರುವುದು ಸ್ಪಷ್ಟವಾಗುತ್ತಿದೆ.

ಈಗಾಗಲೇ ಅಮೆಜಾನ್‌ನಲ್ಲಿ Lava Bold N2 ಸ್ಮಾರ್ಟ್‌ಫೋನ್‌ಗಾಗಿಯೇ ಮೀಸಲಾದ ಮೈಕ್ರೋಸೈಟ್ ಅನ್ನು ತೆರೆಯಲಾಗಿದ್ದು, ಈ ಫೋನ್ ದೇಶದಲ್ಲಿ ಗ್ರೇ ಮತ್ತು ಕಪ್ಪು ಬಣ್ಣಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಇನ್ನು ಡಿಸೈನ್ ದೃಷ್ಟಿಯಿಂದ Lava Bold N2 ಸರಳ ಆದರೆ ಪ್ರೀಮಿಯಂ ಲುಕ್ ನೀಡುವಂತೆ ರೂಪುಗೊಂಡಿದೆ. ಫೋನಿನ ಹಿಂಭಾಗದಲ್ಲಿ ಚೌಕಾಕಾರದ ಕ್ಯಾಮೆರಾ ಮಾಡ್ಯೂಲ್ ನೀಡಲಾಗಿದ್ದು, ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿರುತ್ತದೆ. ಕಂಪನಿ ದೃಢಪಡಿಸಿದಂತೆ, ಇದು 13 ಮೆಗಾಪಿಕ್ಸೆಲ್ ಸಾಮರ್ಥ್ಯದ ಮುಖ್ಯ ಕ್ಯಾಮೆರಾ ಮತ್ತು LED ಫ್ಲ್ಯಾಶ್ ಒಳಗೊಂಡಿರುತ್ತದೆ.

ಪ್ರೀಮಿಯಂ ಲುಕ್, ಕಡಿಮೆ ಬೆಲೆ: ನಾಳೆ Lava Bold N2 ಫೋನ್ ಬಿಡುಗಡೆ!

ಗಮನಿಸಿ ನೋಡಿದಾಗ, ಈ Lava Bold N2 ಫೋನ್ ಫ್ಲಾಟ್ ಮೆಟಲ್ ಫ್ರೇಮ್, ಬಲಭಾಗದಲ್ಲಿ ಪವರ್ ಹಾಗೂ ವಾಲ್ಯೂಮ್ ಬಟನ್‌ಗಳನ್ನು ಒಳಗೊಂಡಿದೆ. ಇದರ ಕೆಳಭಾಗದಲ್ಲಿ USB Type-C ಪೋರ್ಟ್, 3.5 ಮಿಮೀ ಆಡಿಯೋ ಜಾಕ್ ಮತ್ತು ಸ್ಪೀಕರ್ ಗ್ರಿಲ್ ಇರುವುದು ಸಹ ಸ್ಪಷ್ಟವಾಗಿದೆ. ಪ್ರಸ್ತುತ ಇಷ್ಟು ಮಾಹಿತಿಯು ಮಾತ್ರ ಲಭ್ಯವಿದ್ದು, ಈ ಸ್ಮಾರ್ಟ್‌ಫೋನಿನ ಡಿಸ್‌ಪ್ಲೇ ಗಾತ್ರ, ಪ್ರೊಸೆಸರ್, ಬ್ಯಾಟರಿ ಸಾಮರ್ಥ್ಯ ಮತ್ತು ಬೆಲೆ ಕುರಿತು ಕಂಪನಿ ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ. ಆದಾಗ್ಯೂ Lava Bold N1ಗೆ ಉತ್ತರಾಧಿಕಾರಿಯಾಗಿರುವ ಈ ಫೋನ್ ಬಜೆಟ್ ವಿಭಾಗದಲ್ಲಿರುವುದನ್ನು ಊಹಿಸಬಹುದು.

ಕಳೆದ ವರ್ಷ ಬಿಡುಗಡೆಯಾಗಿದ್ದ, ಈ ಹಿಂದಿನ ಪೀಳಿಗೆಯ Lava Bold N1 ನಲ್ಲಿ 6.75 ಇಂಚಿನ HD+ ಡಿಸ್ಪ್ಲೇ, 90Hz ರಿಫ್ರೆಶ್ ರೇಟ್, Unisoc 9863A ಚಿಪ್‌ಸೆಟ್ ಹಾಗೂ 5,000mAh ಬ್ಯಾಟರಿಯಂತಹ ವೈಶಿಷ್ಟ್ಯಗಳನ್ನು ನೀಡಲಾಗಿತ್ತು. ಆದರೆ, ಈ ಫೋನಿನ ಪ್ರಮುಖ ವಿಶೇಷತೆಯಾಗಿ, ಈ ಸ್ಮಾರ್ಟ್‌ಫೋನ್ ಕೇವಲ ₹5,999 ಆರಂಭಿಕ ಬೆಲೆಗೆ ದೇಶದಲ್ಲಿ ಲಭ್ಯವಾಗಿತ್ತು. ಹಾಗಾಗಿ, ಸ್ವಲ್ಪ ಉತ್ತಮ ಅಪ್‌ಗ್ರೇಡ್‌ಗಳೊಂದಿಗೆ Lava Bold N2 ಸ್ಮಾರ್ಟ್‌ಫೋನ್‌ ಕೂಡ ಇದೇ ಬೆಲೆ ವಿಭಾಗದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯನ್ನು ಹೊಂದಬಹುದು.

ಭಾರತದಲ್ಲಿ ಬಜೆಟ್ 4G ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಸ್ಪರ್ಧೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ Lava Bold N2 ಕಡಿಮೆ ಬೆಲೆಯಲ್ಲೇ ಉತ್ತಮ ಕ್ಯಾಮೆರಾ ಮತ್ತು ನವೀನ ವಿನ್ಯಾಸ ನೀಡಲು ಪ್ರಯತ್ನಿಸುತ್ತಿದೆ ಎನ್ನಬಹುದು. ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಮೊದಲ ಬಾರಿಗೆ ಸ್ಮಾರ್ಟ್‌ಫೋನ್ ಖರೀದಿಸುವವರಿಗೆ ಇದು ಆಕರ್ಷಕ ಆಯ್ಕೆಯಾಗಬಹುದು. ನಾಳೆ ಬಿಡುಗಡೆ ದಿನವೇLava Bold N2 ಫೋನಿನ ಸಂಪೂರ್ಣ ವಿಶೇಷಣಗಳು ಮತ್ತು ಬೆಲೆ ವಿವರಗಳು ಬಹಿರಂಗವಾಗಲಿದ್ದು, ಬಜೆಟ್ ಬಳಕೆದಾರರ ನಿರೀಕ್ಷೆಗಳನ್ನು ಇದು ಪೂರೈಸುತ್ತದೆಯೇ ಎಂಬುದು ಆಗ ತಿಳಿಯಲಿದೆ.

Best Mobiles in India

English summary
Lava has officially announced the launch of its new budget smartphone, Lava Bold N2, in India on February 17 at 12 PM. Targeted at young users with the tagline “Be Fearless, Be Bold,” the device features a premium-looking design, dual rear cameras with a 13MP main sensor, and will be available in Grey and Black colour options via Amazon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+