ಕಡಿಮೆ ಬೆಲೆಯಲ್ಲಿ ಲಾವಾ ಟ್ಯಾಬ್‌ ಖರೀದಿಸಿ

Posted By: Staff

ಮೊಬೈಲ್‌, ಸ್ಮಾರ್ಟ್ ಫೋನ್‌ನಲ್ಲಿ ದರ ಸಮರ ಆಯ್ತು. ಈಗ ಪ್ಯಾಬ್ಲೆಟ್‌ನಲ್ಲಿ ದರ ಸಮರ ಆರಂಭಗೊಂಡಿದೆ. ಕಡಿಮೆ ಬೆಲೆಯಲ್ಲಿ ಡ್ಯೂಯಲ್‌ ಸಿಮ್‌ ಮೊಬೈಲ್‌ನ್ನು ಮಾರುಕಟ್ಟೆಗೆ ಬಿಡುವು ಮೂಲಕ ಯಶಸ್ವಿಯಾಗಿದ್ದ ಲಾವಾ ಕಂಪೆನಿ ಈಗ ಕಡಿಮೆ ಬೆಲೆಯಲ್ಲಿ ಟ್ಯಾಬ್‌ನ್ನು ಬಿಡುಗಡೆ ಮಾಡಿದೆ.

ಲಾವಾ ಕಂಪೆನಿಯ 7 ಇಂಚು ದರ್ಶಕವಿರುವ ಇ ಟ್ಯಾಬ್ z7H+ ಟ್ಯಾಬ್‌ನ್ನು 5,499 ರೂಪಾಯಿಗೆ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಭಾರತೀಯ ಗ್ರಾಹಕರ ಬಜೆಟ್‌ಗೆ ಅನುಗುಣವಾಗಿ ಈ ಟ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದ್ದೇವೆ ಎಂದು ಲಾವಾ ಕಂಪೆನಿ ಹೇಳಿದೆ. ಇದರ ವಿಶೇಷತೆ ಏನು, ಯಾವೆಲ್ಲಾ ತಂತ್ರಜ್ಞಾನ ಇದೆ ..ಇದರ ಮತ್ತಷ್ಟು ಮಾಹಿತಿಯನ್ನು ಗಿಜ್ಬಾಟ್ ನಿಮಗಾಗಿ ತಂದಿದೆ.

 

 

ಕಡಿಮೆ ಬೆಲೆಯಲ್ಲಿ ಲಾವಾ ಟ್ಯಾಬ್‌ ಖರೀದಿಸಿ

 

ಆಪರೆಟಿಂಗ್‌ ಸಿಸ್ಟಂ : e Tab z7H+ ಆಂಡ್ರಾಯ್ಡ್‌ 4.0 ಐಸ್‌ಕ್ರೀಮ್‌ ಸ್ಯಾಂಡ್‌ವಿಚ್‌ ಆಪರೆಟಿಂಗ್‌ ಸಿಸ್ಟಮ್‌ ಹೊಂದಿದೆ.

ಪ್ರೊಸೆಸರ್‌ : 1GHz Cortex A8 ಪ್ರೊಸೆಸರ್‌

ಸುತ್ತಳತೆ ಮತ್ತು ತೂಕ : 204 x 122 x 11.9 mm ಸುತ್ತಳತೆ ಹೊಂದಿದ್ದು 350 ಗ್ರಾಂ ತೂಕವಿದೆ.

ದರ್ಶಕ : e Tab 27H + 800 x 480 ಪಿಕ್ಸಲ್‌ನೊಂದಿಗೆ 7 ಇಂಚಿನ ಎಲ್‌ಸಿಡಿ ಮಲ್ಟಿ ಟಚ್ ಕ್ಯಾಪಸಿಟಿವ್‌ ಟಚ್‌ ಸ್ಕ್ರೀನ್‌

ಮೆಮೊರಿ ಸಾಮಾರ್ಥ್ಯ : 4GB ಆಂತರಿಕ ಸಾಮಾರ್ಥ್ಯ, 512MB RAM, 32GBವರೆಗೂ ವಿಸ್ತರಿಸಬಲ್ಲ ಶೇಖರಣಾ ಸಾಮಾರ್ಥ್ಯ

ಕ್ಯಾಮೆರಾ : ಎದುರುಗಡೆ 0.3MP ಕ್ಯಾಮೆರಾ ನೀಡಿದ್ದಾರೆ. ಹಿಂದುಗಡೆ ಕ್ಯಾಮೆರಾ ಸೌಲಭ್ಯ ನೀಡಿಲ್ಲ

ಕನೆಕ್ಟ್‌ವಿಟಿ : Wi-Fi, 3G USB 2.0. ಕನೆಕ್ಟ್‌ವಿಟಿ ವಿಶೇಷತೆ ನೀಡಿದ್ದಾರೆ

ಬ್ಯಾಟರಿ : 2,800 mAh ಲಿಯಾನ್‌ ಬ್ಯಾಟರಿ ಸೌಲಭ್ಯ ನೀಡಿದ್ದಾರೆ.

 

ಇಷ್ಟೇ ಅಲ್ಲದೇ ಲಾವಾ ಟ್ಯಾಬ್‌ನಲ್ಲಿ ಪ್ರಿ ಲೋಡೆಡ್‌ ಆಪ್ಲಿಕೇಶನ್‌ ತುಂಬಾ ಲೋಡ್‌ ಮಾಡಿದ್ದಾರೆ. ಟ್ವಿಟ್ಟರ್, ಫೇಸ್‌ಬುಕ್‌, ಯೂಟ್ಯೂಬ್‌,ನಿಂಬುಜ್, ಫ್ಯೂಶನ್‌ ಅಪ್ಲಿಕೇಶನ್, ಗೂಗಲ್‌ ಸರ್ಚ್,ಫ್ಲೈಟ್, ಫ್ಲಿಪ್‌ಕಾರ್ಟ್, 14 ಮ್ಯಾಕ್ ಗ್ರೋ ಹಿಲ್‌ 10 HD ವಿಡಿಯೋ ನೀಡಿದ್ದಾರೆ.

ಓಟ್ನಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಲಾವಾ ಕಂಪೆನಿಯ ಈ ಟ್ಯಾಬ್‌ ಕಡಿಮೆ ಬೆಲೆಯ ಟ್ಯಾಬ್ಲೆಟ್ ಎಂದೇ ಹೇಳಬಹುದು. ನೀವು ಇದನ್ನು ಆನಲೈನ್‌ ತಾಣವಾದ ಸ್ನಾಪ್‌ಡೀಲ್‌ನಲ್ಲಿ 5499 ರೂಪಾಯಿ ನೀಡಿ ಖರೀದಿಸಬಹುದು.

 

ಟಾಪ್ 10 ಮೊಬೈಲ್‌ ಫೋನ್‌

ದಾರಿ ಬಿಡಿ ದೂಳು ಕ್ಲೀನ್‌ ಮಾಡಲು ಆಮೆ ಬಂತು

ಹೊಸ ವರ್ಷಕ್ಕೆ ಕಡಿಮೆ ಬೆಲೆಯ ಟಾಪ್ 5 ಸ್ಮಾರ್ಟ್ ಫೋನ್

 

 

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot