Subscribe to Gizbot

ಲಾವಾ ಐರಿಸ್ X1 ಆಂಡ್ರಾಯ್ಡ್ ಕಿಟ್‌ಕ್ಯಾಟ್‌ನೊಂದಿಗೆ

Written By:

ಮೋಟೋ ಇ ಸ್ಮಾರ್ಟ್‌ಫೋನ್‌ನ ಆಗಮನವು ಭಾರತದಲ್ಲಿರುವ ಡೊಮೆಸ್ಟಿಕ್ ಹ್ಯಾಂಡ್‌ಸೆಟ್ ತಯಾರಕರಿಗೆ ಮೈಕ್ರೋಮ್ಯಾಕ್ಸ್, ಲಾವಾ, ಕಾರ್ಬನ್ ಮತ್ತು ಇತರ ಸ್ಮಾರ್ಟ್‌ಫೋನ್ ತಯಾರಕರಿಗೆ ಅಭದ್ರತೆಯನ್ನು ಒದಗಿಸಿದೆ ಎಂದೇ ಹೇಳಬಹುದು. ಸ್ಥಳೀಯ ಹ್ಯಾಂಡ್‌ಸೆಟ್ ತಯಾರಕರು ತಮ್ಮ ಇತ್ತೀಚಿನ ಹ್ಯಾಂಡ್‌ಸೆಟ್‌ಗಳೊಂದಿಗೆ ಆಗಮಿಸಿದ್ದು, ಭಾರತದಲ್ಲಿ ತನ್ನ ರಾಜ್ಯಾಭಾರ ಮಾಡುವ ಮೋಟೋ ಇಗೆ ಸರಿಯಾದ ಪಾಠವನ್ನು ಕಲಿಸಲಿದೆ ಎಂದೇ ಹೇಳಬಹುದು.

ಮೈಕ್ರೋಮ್ಯಾಕ್ಸ್ ಇತ್ತೀಚೆಗೆ ತಾನೇ ಯುನೈಟ್ 2 ವನ್ನು ಲಾಂಚ್ ಮಾಡಿದ್ದು, ಇದು ಅತ್ಯಾಕರ್ಷಕ ವಿಶೇಷಣಗಳಾದ ಆಂಡ್ರಾಯ್ಡ್ ಕಿಟ್‌ಕ್ಯಾಟ್ ಓಎಸ್ ಮತ್ತು ಕ್ವಾಡ್ ಕೋರ್ ಪ್ರೊಸೆಸರ್‌ನೊಂದಿಗೆ ಬಂದಿದೆ. ತನ್ನ ಹೊಸ ಮಾಡೆಲ್ ಆದ ಕ್ಯಾನ್‌ವಾಸ್ ಎಂಗೇಜ್ ಅನ್ನು ಕಂಪೆನಿ ಲಾಂಚ್ ಮಾಡಿದ್ದು ಭಾರತದಲ್ಲಿರುವ ಮೋಟೋ ಇ ಮಾರಾಟಕ್ಕೆ ಇದು ಕಡಿವಾಣ ಹಾಕುವ ಕಾಲ ಸನ್ನಿಹಿತವಾಗಿದೆ.

ಕಿಟ್‌ಕ್ಯಾಟ್ ಓಎಸ್ ಉಳ್ಳ ಲಾವಾ ಐರಿಸ್ X1 ವಿಮರ್ಶೆ

ಮೋಟೋರೋಲಾಗೆ ಪೈಪೋಟಿಯನ್ನು ನೀಡುವಲ್ಲಿ ಮೈಕ್ರೋಮ್ಯಾಕ್ಸ್ ಮಾತ್ರ ಪಾಲು ವಹಿಸದೇ ಈಗ ಲಾವಾ ಕೂಡ ಇದೇ ಹಾದಿಯಲ್ಲಿದೆ. ತನ್ನ ಐರಿಸ್ X1 ಸ್ಮಾರ್ಟ್‌ಫೋನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಲು ಹೊರಟಿರುವ ಲಾವಾ ಇದರಲ್ಲಿ ಎಷ್ಟು ಮಾತ್ರ ಯಶಸ್ಸನ್ನು ಕಾಣುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಐರಿಸ್ X1 ಐರಿಸ್ ಪ್ರೊ ಸಿರೀಸ್ ಎಂಬ ಶ್ರೇಣಿಯಲ್ಲಿ ಬರುತ್ತಿರುವ ಸ್ಮಾರ್ಟ್‌ಫೋನ್ ಆಗಿದೆ. ಇದು 4.5 ಇಂಚಿನ FWVGA IPS 854 x 480 ಪಿಕ್ಸೆಲ್‌ ಡಿಸ್‌ಪ್ಲೇಯೊಂದಿಗೆ ಬಂದಿದೆ. ಇದರಲ್ಲಿ 1.2 GHz ಕ್ವಾಡ್ ಕೋರ್ Broadcom BCM23550 ಪ್ರೊಸೆಸರ್ ಇದ್ದು 1ಜಿಬಿ RAM ಡಿವೈಸ್‌ನಲ್ಲಿದೆ. ಇದು ಎಲ್‌ಇಡಿ ಫ್ಲ್ಯಾಶ್‌ನೊಂದಿಗೆ 8 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದ್ದು 1.4 µm ಪಿಕ್ಸೆಲ್ BSI+ ಸೆನ್ಸಾರ್ ಅನ್ನು ಒಳಗೊಂಡಿದ. ಇದರ ರಿಯರ್ ಕ್ಯಾಮೆರಾ ಪೂರ್ಣ HD ವೀಡಿಯೋ ರೆಕಾರ್ಡಿಂಗ್ ಮತ್ತು ಪ್ಲೇಬ್ಯಾಕ್ ಅನ್ನು ದಾಖಲಿಸಲು ಅನುಮತಿಸುವಂತಿದ್ದು ಆಟೋ ಫೋಕಸ್‌ನೊಂದಿಗೆ ಇದು ಬಂದಿದೆ. ಇದು ವೀಡಿಯೋ ಕರೆಗಾಗಿ ಮುಂಭಾಗದಲ್ಲಿ 2.0 ಮೆಗಾಪಿಕ್ಸೆಲ್ ಫ್ರಂಟ್ ಫೇಸಿಂಗ್ ಕ್ಯಾಮೆರಾವನ್ನು ಕೂಡ ಹೊಂದಿದೆ. ಫೋನ್ 1800 mAh ಬ್ಯಾಟರಿಯನ್ನು ಕೂಡ ಒಳಗೊಂಡಿದೆ.

<center><iframe width="100%" height="360" src="//www.youtube.com/embed/CqcsJitgqqE" frameborder="0" allowfullscreen></iframe></center>

Read more about:
English summary
This article tells that Lava Iris X1 smartphone first look and review
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot