ಸದ್ಯದಲ್ಲೇ ಲಾವಾ ಟಚ್ ಸ್ಕ್ರೀನ್ ಹ್ಯಾಂಡ್ ಸೆಟ್

Posted By: Staff
ಸದ್ಯದಲ್ಲೇ ಲಾವಾ ಟಚ್ ಸ್ಕ್ರೀನ್ ಹ್ಯಾಂಡ್ ಸೆಟ್

ಇದು ಟಚ್ ಸ್ಕ್ರೀನ್ ಲೋಕ. ಎಲ್ಲ ಮೊಬೈಲ್ ಕಂಪನಿಗಳೂ ವಿಭಿನ್ನವಾದ ಟಚ್ ಸ್ಕ್ರೀನ್ ಮೊಬೈಲ್ ಗಳನ್ನು ಹೊರತರುವುದರಲ್ಲಿ ಪೈಪೋಟಿ ನಡೆಸುತ್ತಿವೆ. ಇದೀಗ ಆ ಪಟ್ಟಿಯಲ್ಲಿ ಲಾವಾ M70 ಮೊಬೈಲ್ ಸೇರಿಕೊಂಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಮೊಬೈಲ್ ಮಾರುಕಟ್ಟೆಯಲ್ಲಿ ಸುದ್ದಿ ಮಾಡಲಿರುವುದೆಂದು ನಿರೀಕ್ಷಿಸಲಾಗಿದೆ.

ಈ ಹ್ಯಾಂಡ್ ಸೆಟ್ ವಿಶೇಷತೆಗಳಲ್ಲೇನೂ ಕಡಿಮೆಯಿಲ್ಲ. 3.2 ಇಂಚಿನ ವಿಸ್ತಾರ ಸ್ಕ್ರೀನ್ ನೊಂದಿಗೆ ಟಚ್ ಸ್ಕ್ರೀನ್ ಸೌಲಭ್ಯ ಇದರೊಂದಿಗಿದೆ. ಬಳಕೆದಾರರ ಅನುಕೂಲಕ್ಕೆಂದು ಡ್ಯೂಯಲ್ ಸಿಮ್ ಆಯ್ಕೆಯನ್ನೂ ಇದರಲ್ಲಿ ಹೊಂದಿಸಲಾಗಿದೆ.

ಲಾವಾ  M70 ಮೊಬೈಲ್ ನಲ್ಲಿನ 5 ಮೆಗಾ ಪಿಕ್ಸಲ್ ಕ್ಯಾಮೆರಾದೊಂದಿಗೆ ಉತ್ತಮ ಗುಣಮಟ್ಟದ ಚಿತ್ರಣವನ್ನು ನಿರೀಕ್ಷಿಸಬಹುದಾಗಿದೆ. ಜೊತೆಗೆ ವಿಡಿಯೋ ರೆಕಾರ್ಡಿಂಗ್ ಆಯ್ಕೆಯೂ ಇದೆ. ಕ್ಯಾಮೆರಾದೊಂದಿಗೆ ಎಲ್ ಇಡಿ ಫ್ಲಾಶ್ ಸೌಲಭ್ಯವಿದೆ.

ಈ ಮೊಬೈಲ್ ನಲ್ಲಿ ವಿಶೇಷವಾದದ್ದು ಇನ್ನೊಂದಿದೆ. ಅದೇ ಆಡಿಯೋ ಔಟ್ ಪುಟ್. SRS WOW ಸರೌಂಡ್ ಸ್ಪೀಕರ್ ಒಳ್ಳೆಯ ಸಂಗೀತವನ್ನು ನಿಮಗೆ ನೀಡಲು ತಯಾರಾಗಿದೆ. ಮೀಡಿಯಾ ಪ್ಲೇಯರ್ ಮಲ್ಟಿ ಫಾರ್ಮೆಟ್ ಫೈಲ್ ಬೆಂಬಲಿತವಾಗಿದೆ.

ಇನ್ನು ಲಾವಾ M70 ಮೆಮೊರಿ ಸಾಮರ್ಥ್ಯದ ವಿಷಯಕ್ಕೆ ಬಂದರೆ, ಆಂತರಿಕ ಸಾಮರ್ಥ್ಯ 30 ಎಂಬಿಯಾದರೆ, 8ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶವಿದೆ. ಸಂಪರ್ಕಕ್ಕೆಂದು ಮೊಬೈಲ್ ನಲ್ಲಿ ಬ್ಲೂಟೂಥ್, USB ಇದೆ.

1200 mAh ಉನ್ನತ ಬ್ಯಾಟರಿ ಹೊಂದಿರುವ ಈ ಮೊಬೈಲ್ ಬಾಳಿಕೆ ಮಟ್ಟವೂ ಚೆನ್ನಾಗಿದೆ. ಕೇವಲ 4,500ರು ಗೆ ಈ ಲಾವಾ ಸ್ಟೈಲಿಶ್ ಮೊಬೈಲ್ ಲಭ್ಯವಿರುವುದೆಂದು ಅಂದಾಜಿಸಲಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot