ಕಡಿಮೆ ಬೆಲೆಗೆ ಮತ್ತೊಂದು AMOLED 5G ಫೋನ್: Lava Play Max 5G ಲಾಂಚ್!
ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಸ್ಥಳೀಯ ಬ್ರಾಂಡ್ Lava ತನ್ನ ಹೊಸ Lava Play Max 5G ಸ್ಮಾರ್ಟ್‌ಫೋನ್ ಅನ್ನು ಇಂದು ( 9 ಡಿಸೆಂಬರ್)ಅಧಿಕೃತವಾಗಿ ಬಿಡುಗಡೆ ಮಾಡಿದೆ. ನಿರೀಕ್ಷೆಯಂತೆಯೇ, ಈ ಸ್ಮಾರ್ಟ್‌ಫೋನ್ ಅತ್ಯುತ್ತಮ 120Hz ಡಿಸ್‌ಪ್ಲೇ, ಶಕ್ತಿಶಾಲಿ ಮೀಡಿಯಾ ಟೆಕ್ ಡೈಮೆನ್ಸಿಟಿ ಪ್ರೊಸೆಸರ್, IP54 ರೇಟಿಂಗ್ ಮತ್ತು ಲೇಟೆಸ್ಟ್ Android 15 ಅನುಭವ ಬಯಸುವ ಬಳಕೆದಾರರಿಗೆ ಹೊಸ ಆಕರ್ಷಣೆಯಾಗಿ ಬಂದಿದ್ದು, ಇದರ ಬೆಲೆ ಕೇವಲ ₹12,999 ರೂ.ಗಳಿಂದ ಆರಂಭವಾಗಿದೆ. ಹಾಗಾದರೆ, ಹೊಸ Lava Play Max 5G ಸ್ಮಾರ್ಟ್‌ಫೋನ್ ಹೇಗಿದೆ ಎಂಬುದನ್ನು ನೋಡೋಣ ಬನ್ನಿ.
Lava Play Max 5G: ಪ್ರಮುಖ ವೈಶಿಷ್ಟ್ಯಗಳು
ಹೊಸ Lava Play Max 5G ಫೋನ್ 6.72 ಇಂಚಿನ Full HD+ AMOLED ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್ ಹೊಂದಿದ್ದು, ಸ್ಕ್ರೋಲಿಂಗ್, ರೀಲ್ಸ್ ವೀಕ್ಷಣೆ ಮತ್ತು ಗೇಮಿಂಗ್ ಸಂದರ್ಭಗಳಲ್ಲಿ ಸ್ಮೂತ್ ಮತ್ತು ಪ್ರಕಾಶಮಾನ ಅನುಭವವನ್ನು ಒದಗಿಸುತ್ತದೆ ಎಂದು ಲಾವಾ ಹೇಳಿಕೊಂಡಿದೆ. ಸಾಮಾನ್ಯವಾಗಿ, ಈ ಬೆಲೆಯಲ್ಲಿ AMOLED ಡಿಸ್ಪ್ಲೇ ಸಿಗುವುದೇ ಒಂದು ದೊಡ್ಡ ಪ್ಲಸ್‌ಪಾಯಿಂಟ್ ಎಂದು ಹೇಳಬಹುದು. ಇನ್ನು ಈ ಫೋನ್ IP54 ರೇಟಿಂಗ್ ಹೊಂದಿದ್ದು, ಧೂಳು ಮತ್ತು ನೀರಿನ ಮೂಲಭೂತ ರಕ್ಷಣೆ ಒದಗಿಸಲಿದೆ.
ಕಾರ್ಯಕ್ಷಮತೆಗಾಗಿ, Lava Play Max 5G 4nm MediaTek Dimensity 7300 ಪ್ರೊಸೆಸರ್ ಚಾಲಿತವಾಗಿದ್ದು, ಇದು ದೈನಂದಿನ multitasking, 5G ಕಾರ್ಯಕ್ಷಮತೆ ಮತ್ತು ಹಗುರದಿಂದ ಮಧ್ಯಮ ಮಟ್ಟದ ಗೇಮಿಂಗ್‌ಗಾಗಿ ಸೂಕ್ತವಾಗಿದೆ. ಫೋನ್‌ನಲ್ಲಿ LPDDR4X RAM ಮತ್ತು UFS 3.1 ಸ್ಟೋರೇಜ್ ಇದೆ. ಜೊತೆಗೆ ವರ್ಚುವಲ್ RAM ಸಹಾಯದಿಂದ 8GB ವರೆಗೆ RAM ವಿಸ್ತರಣೆಯಾಗಲಿದೆ. ಬಳಕೆದಾರರು microSD ಕಾರ್ಡ್ ಸಹಾಯದಿಂದ ಸ್ಟೋರೇಜ್ ಅನ್ನು 1TB ವರೆಗೆ ಹೆಚ್ಚಿಸಬಹುದು. ಇದು ಮೆಮೊರಿ ಸಮಸ್ಯೆಯನ್ನು ನೀಗಿಸಲಿದೆ.

ಗೇಮಿಂಗ್‌ಗಾಗಿ, Lava Play Max 5G ಫೋನ್‌ನಲ್ಲಿ Vapour Chamber Cooling ವ್ಯವಸ್ಥೆ ನೀಡಲಾಗಿದೆ. Lava ಹೇಳುವ ಪ್ರಕಾರ BGMI, COD Mobile ಮತ್ತು Free Fire ಹೀಗೆ ಜನಪ್ರಿಯ ಗೇಮ್‌ಗಳನ್ನು ಯಾವುದೇ ಹೀಟಿಂಗ್ ಸಮಸ್ಯೆ ಇಲ್ಲದೆ ಸುಗಮವಾಗಿ ಆಡಬಹುದಾಗಿದೆ. ಇದರ ತಾಪ ನಿರ್ವಹಣಾ ವ್ಯವಸ್ಥೆ ದೀರ್ಘಗಾನ ಬಳಕೆಯಲ್ಲಿಯೂ ಫೋನ್ ಅನ್ನು ತಣ್ಣಗಿರಿಸುತ್ತದೆ. ಬ್ಯಾಟರಿ ವಿಭಾಗದಲ್ಲಿ, Lava Play Max 5G ನಲ್ಲಿ 5,000mAh ಬ್ಯಾಟರಿ ಇದ್ದು, . ಜೊತೆಗೆ 33W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಇರುವುದರಿಂದ ಬ್ಯಾಟರಿ ಶೀಘ್ರವಾಗಿ ಚಾರ್ಜ್ ಆಗಲಿದೆ.
ಫೋಟೋಗ್ರಫಿ ಪ್ರಿಯರಿಗೆ, Lava Play Max 5G ಫೋನ್‌ನಲ್ಲಿ 50MP ಹಿಂಭಾಗದ ಕ್ಯಾಮೆರಾ ಸೆಟಪ್ ಇದೆ. ಹಿಂಬದಿಯ ಕ್ಯಾಮೆರಾ ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ (EIS) ಅನ್ನು ಬೆಂಬಲಿಸುತ್ತದೆ ಮತ್ತು 30fps ನಲ್ಲಿ 4K ವೀಡಿಯೊ ರೆಕಾರ್ಡಿಂಗ್ ಅನ್ನು ನೀಡುತ್ತದೆ. EIS (Electronic Image Stabilisation) ಸಪೋರ್ಟ್ ಇರುವುದರಿಂದ ಚಲನೆಯಲ್ಲಿಯೂ ವಿಡಿಯೋಗಳು ಸ್ಥಿರವಾಗಿ ರೆಕಾರ್ಡ್ ಆಗುತ್ತದೆ. ಸೆಲ್ಫಿ ಮತ್ತು ವಿಡಿಯೋ ಕಾಲ್‌ಗಳಿಗೆ 8MP ಫ್ರಂಟ್ ಕ್ಯಾಮೆರಾ ನೀಡಲಾಗಿದ್ದು, ದೈನಂದಿನ ಬಳಕೆಗೆ ಸಾಕಾಗುವಷ್ಟು ಸಾಮರ್ಥ್ಯವನ್ನು ಹೊಂದಿದೆ.
Lava Play Max 5G ಬೆಲೆ: ಬಜೆಟ್ ಬಳಕೆದಾರರಿಗಾಗಿ ಸೂಕ್ತ ಆಯ್ಕೆ
ದೇಶದಲ್ಲಿ Lava Play Max 5G ಎರಡು ವೇರಿಯಂಟ್‌ಗಳಲ್ಲಿ ಬಿಡುಗಡೆಯಾಗಿದೆ.
6GB RAM + 128GB: ₹12,999
8GB RAM + 128GB: ₹14,999
Deccan Black ಮತ್ತು Himalayan White ಎಂಬ ಎರಡು ಎಲಿಗಂಟ್ ಬಣ್ಣಗಳಲ್ಲಿ ಲಭ್ಯವಾಗಲಿದೆ.
ಈ ಬೆಲೆಯ ವಿಭಾಗದಲ್ಲಿ AMOLED ಡಿಸ್ಪ್ಲೇ, 120Hz ರಿಫ್ರೆಶ್ ರೇಟ್ ಮತ್ತು 4nm Dimensity 7300 ಚಿಪ್‌ಸೆಟ್ ನೀಡಿರುವುದು ಮಿಕ್ಕ ಸ್ಪರ್ಧಿಗಳಿಗಿಂತ Lava Play Max 5G ಫೋನ್ ಅನ್ನು ವಿಭಿನ್ನವಾಗಿಸುತ್ತದೆ. Made in India ಜೊತೆಗೆ ಬಜೆಟ್ 5G ಫೋನ್‌ಗಳನ್ನು ಹುಡುಕುವ ಬಳಕೆದಾರರಿಗೆ ಅತ್ಯುತ್ತಮ ಮೌಲ್ಯ ಒದಗಿಸುವ ಈ ಸ್ಮಾರ್ಟ್‌ಫೋನ್ ಫೀಚರ್ಸ್ ಉತ್ತಮ ಎಂಬುದು ನನ್ನ ಅಭಿಪ್ರಾಯ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








