12 ಸಾವಿರಕ್ಕೆ ಬರುತ್ತಿದೆ Lava Play Max: 50MP ಕ್ಯಾಮೆರಾ, 120Hz ಡಿಸ್‌ಪ್ಲೇ!
ಭಾರತೀಯ ಮೊಬೈಲ್ ಬ್ರ್ಯಾಂಡ್ Lava ತನ್ನ ಮುಂದಿನ ಸ್ಮಾರ್ಟ್‌ಫೋನ್ Lava Play Max ಅನ್ನು ಭಾರತದಲ್ಲಿ ಶೀಘ್ರದಲ್ಲೇ ಪರಿಚಯಿಸಲು ಸಜ್ಜುಗೊಂಡಿದೆ. ಈಗಾಗಲೇ ಆಗಸ್ಟ್‌ನಲ್ಲಿ ಬಿಡುಗಡೆಯಾದ Lava Play Ultra 5G ಉತ್ತಮ ಪ್ರತಿಕ್ರಿಯೆ ಪಡೆದಿದ್ದು, ಈ ಹೊಸ Max ಮಾದರಿಯ ಮೂಲಕ ಕಂಪನಿ ತನ್ನ Play ಸರಣಿಯನ್ನು ವಿಸ್ತರಿಸಲು ಉದ್ದೇಶಿಸಿದೆ. ಟೀಸರ್‌ಗಳು ಹಾಗೂ ಲೀಕ್ಸ್‌ಗಳ ಮೂಲಕ ಈಗಾಗಲೇ Lava Play Max ಫೋನಿನ ಹಲವು ಪ್ರಮುಖ ಮಾಹಿತಿ ಹೊರಬಿದ್ದಿರುವುದರಿಂದ ಇದರ ಬಗ್ಗೆ ಕುತೂಹಲ ಹೆಚ್ಚಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.
Lava Play Max: 50MP ಮುಖ್ಯ ಕ್ಯಾಮೆರಾ ಸೆಟ್‌ಅಪ್, ಹೊಸ ವಿನ್ಯಾಸವು ಹೈಲೈಟ್
Lava ಬಿಡುಗಡೆ ಮಾಡಿರುವ ಅಧಿಕೃತ ಟೀಸರ್ ಪ್ರಕಾರ, ಮುಂಬರುವ Lava Play Max ಫೋನಿನಲ್ಲಿ ಎರಡು ರಿಯರ್ ಕ್ಯಾಮೆರಾಗಳನ್ನು ಲಂಬವಾಗಿ ಅಳವಡಿಸಲಾಗಿರುವುದನ್ನು ನಾವು ನೋಡಬಹುದು. ಇದರಲ್ಲಿ 50 ಮೆಗಾಪಿಕ್ಸೆಲ್ ಸಾಮರ್ಥ್ಯದ ಮುಖ್ಯ ಕ್ಯಾಮೆರಾ ಸೆನ್ಸರ್ ಬಳಸಲಾಗಿದೆ ಮತ್ತು AI ಬೆಂಬಲ ಹಾಗೂ EIS ತಂತ್ರಜ್ಞಾನ ಇರುವುದು ದೃಢಪಟ್ಟಿದೆ. ಇದನ್ನು ಯುವ ಬಳಕೆದಾರರನ್ನು ಗಮನದಲ್ಲಿಟ್ಟು ವಿನ್ಯಾಸಗೊಳಿಸಿದ ಕ್ಯಾಮೆರಾ ವೈಶಿಷ್ಟ್ಯವೆಂದು ಗುರುತಿಸಲಾಗಿದೆ.
Lava Play Max ಫೋನಿನ ಕ್ಯಾಮೆರಾ ಮೊಡ್ಯೂಲ್ ಸುತ್ತಲೂ ಕಾಣುವ ವಿಶೇಷ ಪ್ಯಾಟರ್ನ್ ಅಥವಾ ಲೈಟ್ ಎಫೆಕ್ಟ್ ಈ ಫೋನ್‌ಗೆ ವಿಶಿಷ್ಟ ಲುಕ್ ನೀಡುವ ಸಾಧ್ಯತೆ ಇದೆ. ಟೀಸರ್‌ನಲ್ಲಿ ಕಾಣಬಹುದಾದ ಡಿಸೈನ್ ಅನ್ನು ಗಮನಿಸಿದರೆ, ಈ Lava Play Max ಫೋನ್ ಪ್ಲಾಸ್ಟಿಕ್ ಫ್ರೇಮ್ ಹೊಂದಿರಬಹುದು. ಆಂಟೆನ್ನಾ ಲೈನ್‌ಗಳ ಕೊರತೆ ಇದರ ಪ್ಲಾಸ್ಟಿಕ್ ಬಾಡಿ ಇರುವುದನ್ನು ಸೂಚಿಸುತ್ತದೆ. ಈ ಸ್ಲೀಕ್ ಪ್ಲಾಸ್ಟಿಕ್ ಫ್ರೇಮ್ ಬಹಶಃ ಹಗುರವಾದ ಹ್ಯಾಂಡ್‌ಫೀಲ್ ನೀಡಬಹುದು.

ಜನಪ್ರಿಯ ಟಿಪ್‌ಸ್ಟರ್ ಪರಾಸ್ ಗುಗ್ಲಾನಿ ಹಂಚಿಕೊಂಡಿರುವ ಮಾಹಿತಿಯಂತೆ, ಈ ಫೋನ್ BIS ಪ್ಲಾಟ್‌ಫಾರ್ಮ್‌ನಲ್ಲಿ Lava Storm Gamer ಹೆಸರಿನಲ್ಲಿ ಕಾಣಿಸಿಕೊಂಡಿದೆ. ಲೀಕ್ ಆಗಿದ ಪೋಸ್ಟರ್‌ಗಳು Play Max ಅನ್ನು ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಲಭ್ಯವಿರುವುದನ್ನು ಸೂಚಿಸುತ್ತವೆ. ಇಷ್ಟೇ ಅಲ್ಲದೆ, ಲಾವಾ ಪ್ಲೇ ಮ್ಯಾಕ್ಸ್ ಡಿಸೆಂಬರ್‌ನಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಟಿಪ್‌ಸ್ಟರ್ ಹೇಳಿದ್ದಾರೆ. ಇದರ ಬೆಲೆ ದೇಶದಲ್ಲಿ ರೂ. 12,000 ಕ್ಕಿಂತ ಕಡಿಮೆ ಇರುತ್ತದೆ ಎಂದಿದ್ದಾರೆ.
ಹಲವಾರು ವದಂತಿಯ ಮಾಹಿತಿಗಳಂತೆ, Lava Play Max ನಲ್ಲಿ MediaTek Dimensity 7300 ಚಿಪ್‌ಸೆಟ್ ಬಳಸಲಾಗುವ ಸಾಧ್ಯತೆ ಇದ್ದು, ಇದು ಮಧ್ಯಮ ಶ್ರೇಣಿಯಲ್ಲಿ ಉತ್ತಮ ಕಾರ್ಯಕ್ಷಮತೆ ನೀಡುವ ಪ್ರೊಸೆಸರ್ ಆಗಿದೆ.ಜೊತೆಗೆ 6GB ಮತ್ತು 8GB RAM ಆಯ್ಕೆಗಳು ಲಭ್ಯವಾಗಬಹುದು. ಇನ್ನು ಡಿಸ್‌ಪ್ಲೇ ವಿಭಾಗದಲ್ಲಿ, ಈ Lava Play Max ಫೋನ್‌ನಲ್ಲಿ 6.72 ಇಂಚಿನ Full HD+ ಡಿಸ್‌ಪ್ಲೇ ಹಾಗೂ 120Hz ರಿಫ್ರೆಶ್ ರೇಟ್ ಇರುವುದನ್ನು ಸೂಚಿಸಲಾಗಿದೆ.
ಗಮನಸೆಳೆಯುವ ವಿಚಾರವೇನೆಯಂದರೆ, Lava Play Max ನೇರವಾಗಿ Android 15 ಜೊತೆ ಬರಲಿದೆ. ವೇಗದ ಆ್ಯಪ್ ಲೋಡಿಂಗ್ ಮತ್ತು ಫೈಲ್ ಹ್ಯಾಂಡ್ಲಿಂಗ್‌ಗೆ UFS 3.1 ಸ್ಟೋರೇಜ್ ಒದಗಿಸಲಾಗುತ್ತದೆ ಎಂದು ಹೇಳಲಾಗಿದೆ.ಹೆ ವಿ ಯೂಸ್ ಮತ್ತು ಗೇಮಿಂಗ್ ಸಂದರ್ಭಗಳಲ್ಲಿ ಫೋನ್ ಹೆಚ್ಚು ಬಿಸಿ ಆಗದಂತೆ ಮಾಡಲು ವ್ಯಾಪರ್ ಚೇಂಬರ್ ಕೂಲಿಂಗ್ ವ್ಯವಸ್ಥೆಯನ್ನು Lava ಸೇರಿಸುತ್ತಿದೆ ಎನ್ನಲಾಗಿದೆ. ಇದು ಗೇಮಿಂಗ್ ನೆಚ್ಚಿನ ಬಳಕೆದಾರರನ್ನು ಗುರಿ ಮಾಡಿಕೊಂಡಿರುವುದನ್ನು ಸೂಚಿಸುತ್ತದೆ.
Lava Play Max ಮುನ್ನ ಬಿಡುಗಡೆಯಾಗಿರುವ Lava Play Ultra 5G ಫೋನ್ ₹14,999 ರಿಂದ ಆರಂಭವಾಗಿದ್ದುದನ್ನು ಗಮನಿಸಿದರೆ, ಹೊಸ Max ಮಾದರಿ ಬಜೆಟ್ ಸೆಗ್ಮೆಂಟ್‌ಗೆ ಸ್ಪರ್ಧಾತ್ಮಕ ಆಯ್ಕೆ ಆಗಬಹುದು. ಈ ಕುರಿತಂತೆ ನಿಮ್ಮ ಅನಿಸಿಕೆ ಏನು?, ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








