ಕೇವಲ ₹6,999 ಕ್ಕೆ Lava Shark 2 ಸ್ಮಾರ್ಟ್‌ಫೋನ್ ಬಿಡುಗಡೆ!
ಭಾರತೀಯ ಮೊಬೈಲ್ ಬ್ರ್ಯಾಂಡ್ ಲಾವಾ (Lava) ತನ್ನ ಬಜೆಟ್ ಸ್ಮಾರ್ಟ್‌ಫೋನ್ ಸರಣಿಗೆ ಹೊಸ ಸೇರ್ಪಡೆಯಾಗಿ Lava Shark 2 4G ಸ್ಮಾರ್ಟ್‌ಪೋನನ್ನು ಪರಿಚಯಿಸಿದೆ. ಲಾವಾ ಕಂಪನಿಯು ಈ ಹೊಸ Lava Shark 2 4G ಸ್ಮಾರ್ಟ್‌ಫೋನ್ ಅನ್ನು ದೇಶದಲ್ಲಿ ಕೇವಲ ₹6,999 ರೂ.ಗಳಿಗೆ ಪರಿಚಯಿಸಿದ್ದು, ಈ ಸಾಧನವು ಉತ್ತಮ ಕಾರ್ಯಕ್ಷಮತೆ, ಸ್ಮೂತ್ ಡಿಸ್ಪ್ಲೇ ಮತ್ತು ಸ್ವಚ್ಛ ಸಾಫ್ಟ್‌ವೇರ್ ಅನುಭವವನ್ನು ಒದಗಿಸುತ್ತದೆ ಎಂದು ಕಂಪೆನಿಯು ತಿಳಿಸಿದೆ. ಹಾ ಗಾದರೆ, ಲಾವಾ ಪರಿಚಯಿಸಿರುವ ಹೊಸ Lava Shark 2 4G ಸ್ಮಾರ್ಟ್‌ಪೋನ್ ಹೇಗಿದೆ?, ಫೀಚರ್ಸ್ ಯಾವುವು ಎಂಬುದನ್ನು ನೋಡೋಣ ಬನ್ನಿ.
Lava Shark 2 4G: ಪ್ರಮುಖ ವೈಶಿಷ್ಟ್ಯಗಳು
ಲಾವಾ ಪರಿಚಯಿಸಿರುವ ಈ ಹೊಸ Lava Shark 2 4G ಫೋನ್‌ನಲ್ಲಿ 6.75 ಇಂಚಿನ HD+ ನಾಚ್ ಡಿಸ್ಪ್ಲೇ ಇದೆ, ಇದು 120Hz ರಿಫ್ರೆಶ್ ರೇಟ್ ಬೆಂಬಲಿಸುತ್ತದೆ. ಈ ಸೆಗ್ಮೆಂಟ್ ವಿಭಾಗದಲ್ಲೇ ಅತ್ಯುತ್ತಮ ಆಪ್ ಸ್ಕ್ರೋಲಿಂಗ್ ಮತ್ತು ಟ್ರಾನ್ಸಿಷನ್‌ಗಳು ನಯವಾಗಿರುತ್ತವೆ ಎಂದು Lava ಕಂಪೆನಿ ಹೇಳಿಕೊಂಡಿದೆ. ಕಾರ್ಯಕ್ಷಮತೆಗಾಗಿ, ಈ ಫೋನಿನಲ್ಲಿ 4GB RAM ಮತ್ತು 64GB ಆಂತರಿಕ ಸ್ಟೋರೇಜ್ ಸಂಯೋಜನೆಯ UNISOC T7250 ಆಕ್ಟಾ-ಕೋರ್ ಪ್ರೊಸೆಸರ್ ಅಳವಡಿಸಲಾಗಿದೆ. ಜೊತೆಗೆ ವರ್ಚುಯಲ್ RAM ಮೂಲಕ ಹೆಚ್ಚುವರಿ 4GB ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ವಿಭಾಗದಲ್ಲಿ, ಈ Lava Shark 2 4G ಫೋನ್ ಹಿಂಭಾಗದಲ್ಲಿ AI ಆಧಾರಿತ 50MP ಕ್ಯಾಮೆರಾವನ್ನು ಹೊಂದಿದ್ದರೆ, ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ 8MP ಫ್ರಂಟ್ ಕ್ಯಾಮೆರಾ ಇದೆ. ಬ್ಯಾಟರಿ ವಿಭಾಗದಲ್ಲಿ, ಈ ಫೋನ್‌ನಲ್ಲಿ 5000mAh ಬ್ಯಾಟರಿ ಅಳವಡಿಸಲಾಗಿದೆ, ಇದು ದೀರ್ಘಾವಧಿ ಬ್ಯಾಕಪ್ ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಇನ್ನು ಈ ಫೋನ್ 18W ಫಾಸ್ಟ್ ಚಾರ್ಜಿಂಗ್ ಬೆಂಬಲಿತವಾಗಿದ್ದರೂ, ಪ್ಯಾಕೇಜ್‌ನಲ್ಲಿ 10W ಚಾರ್ಜರ್ ನೀಡಲಾಗಿದೆ. Type-C ಪೋರ್ಟ್ ಮೂಲಕ ವೇಗದ ಚಾರ್ಜಿಂಗ್ ಮತ್ತು ಡೇಟಾ ಹಸ್ತಾಂತರ ಸಾಧ್ಯವಾಗುತ್ತದೆ.
ಈ Lava Shark 2 4G ಫೋನಿನ ಮತ್ತೊಂದು ಪ್ರಮುಖ ವಿಶೇಷತೆ ಎಂದರೆ, ಈ ಫೋನ್ Android 15 ಆಧಾರಿತವಾಗಿದ್ದು, ಯಾವುದೇ ಜಾಹೀರಾತು ಅಥವಾ ಅನಗತ್ಯ ಅಪ್ಲಿಕೇಶನ್‌ಗಳಿಲ್ಲದೆ ಕ್ಲೀನ್ ಯೂಸರ್ ಅನುಭವ ನೀಡುತ್ತದೆ. ಕಂಪನಿ ಈ ಫೋನ್‌ಗೆ ಒಂದು ಪ್ರಮುಖ ಸಾಫ್ಟ್‌ವೇರ್ ಅಪ್‌ಡೇಟ್ ಮತ್ತು ಎರಡು ವರ್ಷಗಳ ಭದ್ರತಾ ನವೀಕರಣಗಳು ನೀಡುವುದಾಗಿ ದೃಢಪಡಿಸಿದೆ, ಇದು ಬಜೆಟ್ ವಿಭಾಗದಲ್ಲಿ ಗಮನಾರ್ಹ ಉಡುಗೊರೆ ಎಂದು ಹೇಳಬಹುದು. ಇನ್ನುಳಿದಂತೆ, ಧೂಳು ಮತ್ತು ಸಣ್ಣ ನೀರಿನಿಂದ ರಕ್ಷಣೆಗಾಗಿ ಈ ಫೋನ್ ಸಾಮಾನ್ಯ IP54 ರೇಟಿಂಗ್ ಹೊಂದಿದೆ.
Lava Shark 2 4G: ಬೆಲೆ ಮತ್ತು ಲಭ್ಯತೆ ಮತ್ತು ಸೇವೆ
ಮೊದಲೇ ಹೇಳೀದಂತೆ, Lava Shark 2 4G ಫೋನ್‌ನ ಬೆಲೆ ₹6,999 ಆಗಿದ್ದು, ಇಂದಿನಿಂದಲೇ ಭಾರತದಾದ್ಯಂತ ಲಾವಾ ರಿಟೇಲ್ ಅಂಗಡಿಗಳಲ್ಲಿ ಲಭ್ಯವಾಗುತ್ತಿದೆ. ಗ್ರಾಹಕರು Eclipse Grey ಮತ್ತು Aurora Gold ಎರಡು ಬಣ್ಣಗಳಲ್ಲಿ ಫೋನ್ ಅನ್ನು ಖರೀದಿಸಬಹುದು. ಜೊತೆಗೆ, ಲಾವಾ ತನ್ನ ವಿಶಿಷ್ಟ Free Service@Home ಯೋಜನೆಯಡಿ ದೇಶದಾದ್ಯಂತ ಮನೆಮಟ್ಟದ ಸೇವೆಯನ್ನು ಒದಗಿಸುತ್ತದೆ. ಈ ಫೋನ್ ಖರೀದಿಸಸುವ ಗ್ರಾಹಕರು ಕೂಡ ಮನೆಯಿಂದಲೇ ಸ್ಮಾರ್ಟ್‌ಫೋನ್ ರಿಪೇರ್ ಅಥವಾ ತಾಂತ್ರಿಕ ಸಹಾಯವನ್ನು ವಿನಂತಿಸಬಹುದು ಎಂದು ಲಾವಾ ಕಂಪೆನಿ ತಿಳಿಸಿದೆ.


Click it and Unblock the Notifications








