Home
ಮೊಬೈಲ್

ಭರ್ಜರಿ ಸಿಹಿಸುದ್ದಿ: Lava Shark 5G ಫೋನ್ ಕೇವಲ 7,999 ರೂ.ಗೆ ಬಿಡುಗಡೆ!

ಭಾರತೀಯ ಮೊಬೈಲ್ ಬ್ರ್ಯಾಂಡ್ ಲಾವಾ (Lava) ಕಂಪನಿಯು ತನ್ನ ಹೊಸ ಬಜೆಟ್ 5G ಸ್ಮಾರ್ಟ್‌ಫೋನ್, Lava Shark 5G ಅನ್ನು ಇಂದು ದೇಶದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 6nm ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿರುವ ಈ 5G ಸ್ಮಾರ್ಟ್‌ಫೋನ್‌ನ್ನು ಕೇವಲ ₹7,999 ರೂಪಾಯಿಗಳಿಗೆ ಪರಿಚಯಿಸಲಾಗಿದ್ದು, ಇದು ಭಾರತದಲ್ಲಿ ದೊರಕುವ ಅತ್ಯಂತ ಕೈಗೆಟುಕುವ 5G-ಸಕ್ರಿಯ ಫೋನ್‌ಗಳಲ್ಲಿ ಒಂದಾಗಿದೆ. ಹಾಗಾದರೆ, ಹೊಸ Lava Shark 5G ಸ್ಮಾರ್ಟ್‌ಫೋನ್‌ ಹೇಗಿದೆ?, ಇದರ ಪ್ರಮುಖ ವೈಶಿಷ್ಟ್ಯಗಳು ಮತ್ತು ಲಭ್ಯತೆ ಕುರಿತು ಸಂಪೂರ್ಣ ಮಾಹಿತಿಯನ್ನು ಮುಂದೆ ಓದಿ ತಿಳಿಯೋಣ ಬನ್ನಿ.

Lava Shark 5G ಸ್ಮಾರ್ಟ್‌ಫೋನ್ ವೈಶಿಷ್ಟ್ಯಗಳು
ನೂತನ Lava Shark 5G ಸ್ಮಾರ್ಟ್‌ಫೋನ್ 6nm ಆಕ್ಟಾ-ಕೋರ್ ಪ್ರೊಸೆಸರ್ ಆದ ಯುನಿಸಾಕ್ T765 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಇದು 4GB LPDDR4X RAM ಅನ್ನು ಹೊಂದಿದೆ, ಇದನ್ನು ವರ್ಚುವಲ್ RAM ಮೂಲಕ ಹೆಚ್ಚುವರಿ 4GB ವರೆಗೆ ವಿಸ್ತರಿಸಬಹುದು. ಇದರೊಂದಿಗೆ, 64GB ಆಂತರಿಕ ಸಂಗ್ರಹಣೆಯನ್ನು ಸಹ ನೀಡಲಾಗಿದೆ. ಲಾವಾ ಹೇಳುವ ಪ್ರಕಾರ, ಆಂಡ್ರಾಯ್ಡ್ 15 ಆಪರೇಟಿಂಗ್ ಸಿಸ್ಟಂನೊಂದಿಗೆ ಕೆಲಸ ನಿರ್ವಹಿಸುವ ಈ ಸ್ಮಾರ್ಟ್‌ಫೋನ್, ಪೂರ್ವ-ಸ್ಥಾಪಿತ ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ಗಳಿಲ್ಲದೆ, ಕ್ಲೀನ್ ಮತ್ತು ಅಡಚಣೆಯಿಲ್ಲದ ಬಳಕೆದಾರ ಇಂಟರ್ಫೇಸ್ ಅನ್ನು ನೀಡುತ್ತದೆ.

ಡಿಸ್‌ಪ್ಲೇ ವಿಷಯಕ್ಕೆ ಬಂದರೆ, ಈ Lava Shark 5G ಸ್ಮಾರ್ಟ್‌ಫೋನ್ 90Hz ರಿಫ್ರೆಶ್ ದರದೊಂದಿಗೆ 6.75-ಇಂಚಿನ HD+ ಡಿಸ್ಪ್ಲೇಯನ್ನು ಒಳಗೊಂಡಿದೆ. HD+ ರೆಸಲ್ಯೂಶನ್ ದೊಡ್ಡ ಪರದೆಯ ಗಾತ್ರಕ್ಕೆ ಸ್ವಲ್ಪ ಕಡಿಮೆಯಾಗಿದ್ದರೂ, 90Hz ರಿಫ್ರೆಶ್ ದರವು ಸುಗಮವಾದ ಅನಿಮೇಷನ್‌ಗಳು ಮತ್ತು ಸ್ಕ್ರೋಲಿಂಗ್ ಅನುಭವವನ್ನು ಒದಗಿಸುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಜೊತೆಗೆ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು IP54 ನೀರು ಹಾಗೂ ಧೂಳಿನ ಪ್ರತಿರೋಧ ಸೇರಿವೆ. ಈ ಬೆಲೆ ಶ್ರೇಣಿಯಲ್ಲಿ ಈ ವೈಶಿಷ್ಟ್ಯಗಳು ಸಾಮಾನ್ಯವಾಗಿ ದೊರೆಯುವುದಿಲ್ಲ, ಆದರೆ ಈ ಸ್ಮಾರ್ಟ್‌ಫೋನ್ ಹೊಂದಿರುವುದು ವಿಶೇಷವಾಗಿದೆ.

ಕ್ಯಾಮೆರಾ ವಿಭಾಗದಲ್ಲಿ, Lava Shark 5G ಸ್ಮಾರ್ಟ್‌ಫೋನ್ 13MP ಹಿಂಭಾಗದ ಕ್ಯಾಮೆರಾ ಮತ್ತು 5MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಇದು ಮೂಲಭೂತ ಕ್ಯಾಮೆರಾ ಸೆಟಪ್ ಆಗಿದೆ. ಬ್ಯಾಟರಿ ವಿಭಾಗದಲ್ಲಿ, ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಹಾಗೂ ಈ ಫೋನ್ 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಿದರೂ, ಬಾಕ್ಸ್‌ನಲ್ಲಿ ಲಭ್ಯವಿರುವ ಚಾರ್ಜರ್ 10W ಸಾಮರ್ಥ್ಯದ್ದು ಮಾತ್ರ ಎಂದು ಕಂಪೆನಿ ತಿಳಿಸಿದೆ. ಆದ್ದರಿಂದ, ವೇಗವಾಗಿ ಚಾರ್ಜ್ ಮಾಡಲು ಬಳಕೆದಾರರು ಹೆಚ್ಚಿನ ವ್ಯಾಟೇಜ್ ಚಾರ್ಜರ್ ಅನ್ನು ಪ್ರತ್ಯೇಕವಾಗಿ ಖರೀದಿಸಬೇಕಾಗಬಹುದು.

ಭರ್ಜರಿ ಸಿಹಿಸುದ್ದಿ: Lava Shark 5G ಫೋನ್ ಕೇವಲ 7,999 ರೂ.ಗೆ ಬಿಡುಗಡೆ!

Lava Shark 5G ಸ್ಮಾರ್ಟ್‌ಫೋನ್ ಬಣ್ಣ, ಲಭ್ಯತೆ ಮತ್ತು ಸೇವೆಗಳು
Lava Shark 5G ಸ್ಮಾರ್ಟ್‌ಫೋನ್ ಸ್ಟೆಲ್ಲರ್ ಗೋಲ್ಡ್ ಮತ್ತು ಸ್ಟೆಲ್ಲರ್ ಬ್ಲೂ ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. ಹಾಗೂ ಲಾವಾ ರಿಟೇಲ್ ಸ್ಟೋರ್‌ಗಳು ಮತ್ತು ಕಂಪನಿಯ ಆನ್‌ಲೈನ್ ಸ್ಟೋರ್‌ನ ಮೂಲಕ ಖರೀದಿಸಬಹುದು. ಇನ್ನು Lava ಕಂಪೆನಿಯು ತನ್ನ ಗ್ರಾಹಕರಿಗೆ ಉತ್ತಮ ಅನುಭವವನ್ನು ನೀಡಲು, ಪ್ರಮಾಣಿತ 1-ವರ್ಷದ ವಾರಂಟಿ ಜೊತೆಗೆ ಉಚಿತ ಸೇವೆ@ಹೋಮ್ ಕಾರ್ಯಕ್ರಮವನ್ನು ಸಹ ನೀಡುತ್ತಿದೆ. ಈ ಸೇವೆಯನ್ನು ಕಂಪನಿಯ ವೆಬ್‌ಸೈಟ್ ಮೂಲಕ ಪ್ರವೇಶಿಸಬಹುದು ಮತ್ತು ಈ ಸೇವೆಯು ಭಾರತದಾದ್ಯಂತ ಲಭ್ಯವಿದೆ ಎಂದು ಕಂಪೆನಿ ತಿಳಿಸಿದೆ. ಒಟ್ಟಾರೆಯಾಗಿ, ಭಾರತೀಯ ಮಾರುಕಟ್ಟೆಯಲ್ಲಿ ಕೈಗೆಟುಕುವ 5G ಸ್ಮಾರ್ಟ್‌ಫೋನ್ ಅನ್ನು ಹುಡುಕುತ್ತಿರುವವರಿಗೆ Lava Shark 5G ಸ್ಮಾರ್ಟ್‌ಫೋನ್ ಉತ್ತಮ ಆಯ್ಕೆಯಾಗಿ ಹೊರಹೊಮ್ಮಿದೆ.

Best Mobiles in India

English summary
Lava has launched a new budget smartphone, the Shark 5G, priced at ₹7,999. It is now available for purchase at Lava retail stores and on the company's online store.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+