Home
ಮೊಬೈಲ್

ಜಸ್ಟ್ 6999 ಗುರು! ಹೊಸ Lava Shark ಲಾಂಚ್; 5000mAh ಬ್ಯಾಟರಿ.. 50MP AI ಕ್ಯಾಮೆರಾ.. ಸೇಲ್ ಯಾವಾಗ?

ಲಾವಾ ತನ್ನ ಭಾರತೀಯ ಅಭಿಮಾನಿಗಳಿಗಾಗಿ ಅಗ್ಗದ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಈ ಹೊಸ ಮೊಬೈಲ್ ಅನ್ನು ಶಾರ್ಕ್ ಸರಣಿಯ ಅಡಿಯಲ್ಲಿ ದೇಶೀಯ ಮಾರುಕಟ್ಟೆಗೆ ಪರಿಚಯಿಸಿದೆ. ಹೌದು, ಲಾವಾ ಶಾರ್ಕ್ (Lava Shark) ಮೊಬೈಲ್ ಅಧಿಕೃತವಾಗಿ ಇಂದು ರಿಲೀಸ್ ಆಗಿದೆ. ಈ ಸ್ಮಾರ್ಟ್‌ಫೋನ್ ಬೆಲೆ 7000 ರೂ.ಗಿಂತ ಕಡಿಮೆ ಇದೆ. ಅಗ್ಗದ ಬೆಲೆ ಎಂಬ ಕಾರಣಕ್ಕೆ ಕಾರ್ಯಕ್ಷಮತೆ ಮತ್ತು ವೈಶಿಷ್ಟ್ಯಗಳಲ್ಲಿ ಕಂಪನಿಯು ಯಾವುದೇ ರಾಜಿ ಮಾಡಿಕೊಂಡಿಲ್ಲ. ಬನ್ನಿ. ಈ ಫೋನಿನ ಬೆಲೆ, ಮಾರಾಟದ ವಿವರಗಳು ಮತ್ತು ವಿಶೇಷತೆಗಳನ್ನು ತಿಳಿಯೋಣ.

ಲಾವಾ ಶಾರ್ಕ್ ಸ್ಮಾರ್ಟ್‌ಫೋನ್ ಕೇವಲ ಒಂದೇ ಸ್ಟೋರೇಜ್ ಆಯ್ಕೆಯಲ್ಲಿ ಬರುತ್ತದೆ. ಈ ಫೋನಿನ ವಿಶೇಷತೆಗಳನ್ನು ನೋಡುವುದಾದರೆ, ಇದು ಯುನಿಸಾಕ್ T606 ಆಕ್ಟಾ ಕೋರ್ ಪ್ರೊಸೆಸರ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಎಐ ಕ್ಯಾಮೆರಾ ಲಭ್ಯವಿದೆ. ಈ ಮೊಬೈಲ್ 6.67 ಇಂಚಿನ ದೊಡ್ಡ ಡಿಸ್ಪ್ಲೇ ಹೊಂದಿದೆ. ಇದರೊಂದಿಗೆ 8GB RAM, 5000mAh ಬ್ಯಾಟರಿ ಮತ್ತು 18W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ಶಕ್ತಿಶಾಲಿ ವೈಶಿಷ್ಟ್ಯಗಳನ್ನು ಅಗ್ಗದ ಬೆಲೆಯಲ್ಲಿ ಪಡೆಯಬಹುದು.

ಹೊಸ Lava Shark ಲಾಂಚ್; 5000mAh ಬ್ಯಾಟರಿ, 50MP ಕ್ಯಾಮೆರಾ.. ಜಸ್ಟ್ 6999 ರೂ.!

ಲಾವಾ ಶಾರ್ಕ್ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಲಾವಾ ಶಾರ್ಕ್ ಸ್ಮಾರ್ಟ್‌ಫೋನ್ 6.67 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು ಎಚ್‌ಡಿ ಪ್ಲಸ್ ಪಂಚ್ ಹೋಲ್ ಡಿಸ್ಪ್ಲೇ ಆಗಿದೆ. ಈ ಸ್ಕ್ರೀನ್ 720 x 1612 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಈ ಫೋನ್ 120Hz ರಿಫ್ರೆಶ್ ದರದ ಬೆಂಬಲ ಪಡೆದಿದೆ. ಇದು ಸ್ಕ್ರೋಲಿಂಗ್ ಮತ್ತು ಸುಗಮ ಗೇಮಿಂಗ್ ಮತ್ತು ವಿಳಂಬ ಮುಕ್ತವಾಗಿದೆ.

ಪ್ರೊಸೆಸರ್ ಸಾಮರ್ಥ್ಯ

ಲಾವಾ ಶಾರ್ಕ್ ಮೊಬೈಲ್‌ ಯುನಿಸಾಕ್ T606 ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. ಇದು ಸುಗಮ ಕಾರ್ಯಕ್ಷಮತೆ ಒದಗಿಸುತ್ತದೆ. ಈ ಫೋನ್ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಕೆಲಸ ಮಾಡುತ್ತದೆ. ಇದು 4GB RAM ಜೊತೆಗೆ 4GB ವರ್ಚುವಲ್ RAM ಗೆ ಬೆಂಬಲ ಹೊಂದಿದೆ. ಈ ಲಾವಾ ಮೊಬೈಲ್ 64GB ಸ್ಟೋರೇಜ್ ಹೊಂದಿದೆ. ನೀವು, ಇದನ್ನು 256GB ಸ್ಟೋರೇಜ್ ವರೆಗೆ ವಿಸ್ತರಿಸಬಹುದು.

Take a Poll

ಕ್ಯಾಮೆರಾ ಸೆಟಪ್

ಲಾವಾ ಶಾರ್ಕ್ ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್ ಎಐ (AI) ಕ್ಯಾಮೆರಾ ಹೊಂದಿದೆ. ಇದು ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಬರುತ್ತದೆ. ಈ ಫೋನ್ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸಹ ಒಳಗೊಂಡಿದೆ. ಇದು ಸ್ಕ್ರೀನ್ ಫ್ಲ್ಯಾಷ್‌ನೊಂದಿಗೆ ಬರುತ್ತದೆ. ನೀವು ಕಡಿಮೆ ಬೆಳಕಿನಲ್ಲಿಯೂ ಸಹ ಉತ್ತಮ ಸೆಲ್ಫಿಗಳನ್ನು ಕ್ಲಿಕ್ಕಿಸಬಹುದು.

ಬ್ಯಾಟರಿ ಮತ್ತು ಚಾರ್ಜಿಂಗ್

ಲಾವಾ ಶಾರ್ಕ್ ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 18W ವೇಗದ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ. ಇದು ಸೈಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಫೇಸ್ ಅನ್‌ಲಾಕ್ ವೈಶಿಷ್ಟ್ಯವನ್ನು ಹೊಂದಿದೆ. ಇದು ಫೋನನ್ನು ಸುರಕ್ಷಿತವಾಗಿ ಮತ್ತು ತ್ವರಿತವಾಗಿ ಅನ್‌ಲಾಕ್ ಮಾಡಲು ಸಹಾಯ ಮಾಡುತ್ತದೆ. ಈ ಲಾವಾ ಶಾರ್ಕ್ ಮನೆಯಲ್ಲಿ ಉಚಿತ ಸೇವೆ ಸೌಲಭ್ಯದೊಂದಿಗೆ ಬರುತ್ತದೆ. ಇದರ ಮೂಲಕ ನೀವು ಅತ್ಯುತ್ತಮ ಗ್ರಾಹಕ ಬೆಂಬಲದ ಪ್ರಯೋಜನವನ್ನು ಪಡೆಯಬಹುದು.

ಲಾವಾ ಶಾರ್ಕ್ ಬೆಲೆ ಮತ್ತು ಲಭ್ಯತೆ

ಲಾವಾ ಶಾರ್ಕ್ ಸ್ಮಾರ್ಟ್‌ಫೋನ್ 4GB RAM + 64GB ಸ್ಟೋರೇಜ್‌ ಆಯ್ಕೆಯಲ್ಲಿ ಬರುತ್ತದೆ. ನೀವು ಕೇವಲ 6,999 ರೂ.ಗಳ ಆರಂಭಿಕ ಬೆಲೆಯಲ್ಲಿ ಖರೀದಿಸಬಹುದು. ಇದು ಟೈಟಾನಿಯಂ ಗೋಲ್ಡ್ ಮತ್ತು ಸ್ಟೆಲ್ತ್ ಬ್ಲಾಕ್ ಬಣ್ಣಗಳಲ್ಲಿ ಲಭ್ಯವಿರುತ್ತದೆ. ಲಾವಾ ಶಾರ್ಕ್ ಮೊಬೈಲ್ ಇದೇ ತಿಂಗಳಲ್ಲಿ (ಮಾರ್ಚ್ 2025) ಲಾವಾ ಚಿಲ್ಲರೆ ಮಾರಾಟ ಮಳಿಗೆಗಳ ಮೂಲಕ ಮಾರಾಟವಾಗಲಿದೆ.

Best Mobiles in India

English summary
Lava Shark with 50MP Camera and 5000mAh Battery Launched in India for Rs. 6999
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+