Blaze AMOLED 2 5G ಟೀಸರ್ ಔಟ್: 15 ಸಾವಿರಕ್ಕಿಂತ ಕಡಿಮೆ ಬೆಲೆ, ಪ್ರೀಮಿಯಂ ಲುಕ್!
ಭಾರತದ ಮೊಬೈಲ್ ಮಾರುಕಟ್ಟೆಗೆ ಇತ್ತೀಚಿಗೆ ಹಲವು ಹೊಸ ಫೋನ್‌ಗಳನ್ನು ಪರಿಚಯಿಸುವ ಮೂಲಕ ಜನಪ್ರಿಯತೆಯನ್ನು ಗಳಿಸುತ್ತಿರುವ Lava ಕಂಪನಿಯು ಇದೀಗ ಮತ್ತೊಂದು ಫೋನನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.! Lava ತನ್ನ ಹೊಸ ಫೋನ್ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದು, Lava Blaze AMOLED 2 5G ಹೆಸರಿನ ಫೋನ್ ಶೀಘ್ರದಲ್ಲೇ ದೇಶದಲ್ಲಿ ಲಭ್ಯವಾಗಲಿದೆ. ಹೊಸ ಟೀಸರ್‌ನಲ್ಲಿ, Lava Blaze AMOLED 2 5G ಫೋನಿನ ವಿನ್ಯಾಸ, ಬೆಲೆ ಮತ್ತು ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಲಾಗಿದೆ.
Lava Blaze AMOLED 2 5G ವಿನ್ಯಾಸ ಮತ್ತು ವೈಶಿಷ್ಟ್ಯಗಳು
ಟೀಸರ್‌ನಲ್ಲಿ ತಿಳಿದುಬರುವಂತೆ, ಹೊಸ Lava Blaze AMOLED 2 5G ಫೋನ್ ಬಿಳಿ ಬಣ್ಣದ ಹಿಂಭಾಗದ ಪ್ಯಾನೆಲ್‌ನ್ನು ಹೊಂದಿದ್ದು, ಅದರಲ್ಲಿ ಆಯತಾಕಾರದ ಕಪ್ಪು ಕ್ಯಾಮೆರಾ ಮಾಡ್ಯೂಲ್ ಇದೆ. ಈ ಮಾಡ್ಯೂಲ್‌ನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಮತ್ತು LED ಫ್ಲ್ಯಾಶ್‌ವಿದೆ. ಹಿಂಭಾಗದ ಪ್ಯಾನೆಲ್ ಅಮೃತಶಿಲೆಯಂತಹ ವಿನ್ಯಾಸವನ್ನು ಹೊಂದಿದೆ. ಕೆಳಗಿನ ಎಡ ಮೂಲೆಯಲ್ಲಿ ಕಂಪನಿಯ ಲೋಗೋ ಮತ್ತು ಮೇಲ್ಭಾಗದಲ್ಲಿ ಆಯತಾಕಾರದ ಕ್ಯಾಮೆರಾ ಮಾಡ್ಯೂಲ್ ಇದೆ. ಕಂಪನಿಯು ಈ ಫೋನ್ ತನ್ನ ಬೆಲೆ ವಿಭಾಗದಲ್ಲಿ ಅತ್ಯಂತ ತೆಳ್ಳಗಿನ ಫೋನ್ ಆಗಿರುತ್ತದೆ ಎಂದು ಹೇಳುತ್ತಿದೆ.
ಇನ್ನು Lava Blaze AMOLED 2 5G ಫೋನ್ 15,000 ರೂ.ಗಿಂತ ಕಡಿಮೆ ಬೆಲೆಯ ವಿಭಾಗದಲ್ಲಿ ಅತ್ಯಂತ ತೆಳ್ಳಗಿನ ಫೋನ್ ಆಗಿರುತ್ತದೆ ಎಂದು ಕಂಪನಿಯು ತಿಳಿಸಿದೆ. ಇದು ಈ ಫೋನ್‌ನ ಅಂದಾಜು ಬೆಲೆಯನ್ನು ಸೂಚಿಸುತ್ತದೆ. ಈ ಫೋನ್ ಫೆದರ್ ವೈಟ್ ಮತ್ತು ಮಿಡ್‌ನೈಟ್ ಬ್ಲ್ಯಾಕ್ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿರುತ್ತದೆ. ಈ ಫೋನ್ ಬಿಡುಗಡೆ ದಿನಾಂಕ ಇನ್ನೂ ದೃಢಪಟ್ಟಿಲ್ಲ, ಆದರೆ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇಷ್ಟೇ ಅಲ್ಲದೆ, Lava ತನ್ನ ಗ್ರಾಹಕರಿಗೆ ಮನೆಯಲ್ಲೇ ಉಚಿತ ಸೇವೆ ನೀಡುವ ಭರವಸೆಯನ್ನು ನೀಡುತ್ತಿದೆ.
Lava Blaze AMOLED 2 5G: ನಿರೀಕ್ಷಿತ ವೈಶಿಷ್ಟ್ಯಗಳು
ಹಿಂದಿನ ವರದಿಗಳ ಪ್ರಕಾರ, Lava Blaze AMOLED 2 5G ಫೋನ್ 6.67-ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಇದು ಫುಲ್-HD+ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ರೇಟ್ ನೀಡಲಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7060 ಚಿಪ್‌ಸೆಟ್‌ನಿಂದ ಶಕ್ತಿ ಪಡೆಯಲಿದ್ದು, ಇದರ ಗರಿಷ್ಠ ಕ್ಲಾಕ್ ಸ್ಪೀಡ್ 2.6GHz ಆಗಿರುತ್ತದೆ ಎಂದು ಹೇಳಲಾಗಿದೆ. ಇದು 6GB LPDDR5 RAM ಮತ್ತು ಹೆಚ್ಚುವರಿಯಾಗಿ 6GB ವರ್ಚುವಲ್ ಮೆಮೊರಿ ಹಾಗೂ 128GB UFS 3.1 ಆನ್‌ಬೋರ್ಡ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ.

ಫೋಟೊಗ್ರಫಿಗಾಗಿ, ಈ Lava Blaze AMOLED 2 5G ಫೋನಿನಲ್ಲಿ 50-ಮೆಗಾಪಿಕ್ಸೆಲ್ AI-ಸಕ್ರಿಯ ಸೋನಿ ಸೆನ್ಸರ್ ಇರುವ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಇದೆ. ಈ ಫೋನ್ 5,000mAh ಬ್ಯಾಟರಿಯನ್ನು ಹೊಂದಿದ್ದು, 33W ವೇಗದ ವೈರ್ಡ್ ಚಾರ್ಜಿಂಗ್ ಅನ್ನು USB ಟೈಪ್-C ಕೇಬಲ್ ಮೂಲಕ ಬೆಂಬಲಿಸುತ್ತದೆ. ಇದು "ಪ್ಯೂರ್" ಆಂಡ್ರಾಯ್ಡ್ 15 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ, ಇದರಲ್ಲಿ ಯಾವುದೇ ಜಾಹೀರಾತುಗಳು ಅಥವಾ ಬ್ಲೋಟ್‌ವೇರ್‌ಗಳು ಇರುವುದಿಲ್ಲ ಎಂದು ಹೇಳಲಾಗಿದೆ.
ಈ Lava Blaze AMOLED 2 5G ಸ್ಮಾರ್ಟ್‌ಫೋನ್ 7.55mm ದಪ್ಪ ಮತ್ತು ಲಿನಿಯಾ ವಿನ್ಯಾಸವನ್ನು ಹೊಂದಿರಲಿದೆ. ಭದ್ರತೆಗಾಗಿ, ಇದು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು ಫೇಸ್ ಅನ್‌ಲಾಕ್ ವೈಶಿಷ್ಟ್ಯಗಳನ್ನು ಪಡೆಯಲಿದೆ ಎನ್ನಲಾಗಿದೆ. ಈಗ ನಿರೀಕ್ಷೆಯಿರುವ ವೈಶಿಷ್ಟ್ಯಗಳು ಮತ್ತು ಬೆಲೆ ವಿಭಾಗವನ್ನು ಗಮನಿಸಿದರೆ, Lava ತನ್ನ ಹೊಸ Blaze AMOLED 2 5G ಫೋನ್ ಮೂಲಕ ಮಧ್ಯಮ ಶ್ರೇಣಿಯ ಮೊಬೈಲ್ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಸದ್ದು ಮಾಡಲು ಸಿದ್ಧವಾಗಿದೆ ಎನ್ನಬಹುದು. ಈ ಕುರಿತಂತೆ ನಿಮ್ಮ ಅನಿಸಿಕೆ ಏನು? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








