Home
ಮೊಬೈಲ್

Lava Agni 4 ಬಿಡುಗಡೆಗೆ ಸಜ್ಜು!: ಕಡಿಮೆ ಬೆಲೆಯ ಹೊಸ ಪ್ರೀಮಿಯಂ ಫೋನ್!

ಭಾರತೀಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಲಾವಾ ಮೊಬೈಲ್ಸ್ (Lava Mobiles) ತನ್ನ ಮುಂದಿನ ಪ್ರೀಮಿಯಂ ಸ್ಮಾರ್ಟ್‌ಫೋನ್‌ ಬಿಡುಗಡೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಟೀಸರ್ ಒಂದನ್ನು ಹಂಚಿಕೊಂಡಿದೆ. "Coming Soon" ಎಂಬ ಶೀರ್ಷಿಕೆಯೊಂದಿಗೆ ಪ್ರಕಟವಾದ ಈ ಪೋಸ್ಟ್ ಬಹುನಿರೀಕ್ಷಿತ Lava Agni 4 ಆಗಿರಬಹುದೆಂಬ ಊಹೆಗೆ ಕಾರಣವಾಗಿದೆ. ಈ ಪೋಸ್ಟ್ ಸಾಮಾಜಿಕ ಮಾಧ್ಯಮಗಳಲ್ಲಿ ಬಹುಚರ್ಚೆಗೆ ಕಾರಣವಾಗಿದ್ದು, ಕಡಿಮೆ ಬೆಲೆಯಲ್ಲಿ ಪ್ರೀಮಿಯಂ ಸ್ಮಾರ್ಟ್‌ಫೋನ್ ಎದುರುನೋಡುತ್ತಿರುವ ಅಭಿಮಾನಿಗಳಲ್ಲಿ ಈ ಹೊಸ ಫೋನ್ ಕುರಿತು ಕುತೂಹಲ ಹೆಚ್ಚಾಗಿದೆ.

ಲಾವಾದ ಹೊಸ ಸ್ಮಾರ್ಟ್‌ಫೋನಿನ ಟೀಸರ್ ವೈರಲ್
ಲಾವಾ ತನ್ನ ಅಧಿಕೃತ X (ಹಳೆಯ Twitter) ಖಾತೆಯಲ್ಲಿ ಟೀಸರ್ ಅನ್ನು ಹಂಚಿಕೊಂಡಿದೆ. ಈ ಟೀಸರ್ ಚಿತ್ರದಲ್ಲಿ ಯಾವುದೇ ಮಾದರಿಯ ಹೆಸರು ಇರದಿದ್ದರೂ, ನಾಲ್ಕು ಅಗ್ನಿ ಇಮೋಜಿಗಳು "Agni 4" ಎಂಬ ಹೆಸರಿನತ್ತ ಸ್ಪಷ್ಟ ಸೂಚನೆ ನೀಡುತ್ತಿವೆ. ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸುನಿಲ್ ರೈನಾ ಕೂಡ "Soon" ಎಂಬ ಸಂದೇಶದೊಂದಿಗೆ ಅದೇ ರೀತಿಯ ಇಮೋಜಿಗಳನ್ನು ಹಂಚಿಕೊಂಡಿದ್ದಾರೆ. ಇದರಿಂದ ಅಭಿಮಾನಿಗಳು ಹೊಸ ಮಾದರಿಯ ಲಾಂಚ್ ನಿಕಟವಾಗಿದೆ ಎಂದು ನಂಬುತ್ತಿದ್ದಾರೆ. ಜೊತೆಗೆ ಈಗಾಗಲೇ ಹಲವಾರು ವರದಿಗಳು Lava Agni 4 ಆಗಮನದ ಕುರಿತು ವರದಿ ಮಾಡಿವೆ.

Lava Agni 4 ಸ್ಮಾರ್ಟ್‌ಫೋನ್ ಈಗಾಗಲೇ BIS (Bureau of Indian Standards) ಪ್ರಮಾಣೀಕರಣ ಪಟ್ಟಿಯಲ್ಲಿ ಕಾಣಿಸಿಕೊಂಡಿರುವುದರಿಂದ, ಇದರ ಬಿಡುಗಡೆ ಶೀಘ್ರದಲ್ಲೇ ನಡೆಯುವ ಸಾಧ್ಯತೆ ಬಹಳ ಹೆಚ್ಚಿದೆ. BIS ಪ್ರಮಾಣೀಕರಣ ವೆಬ್‌ಸೈಟ್‌ನಲ್ಲಿ ಈ ಫೋನ್ LXX525 ಮಾದರಿ ಸಂಖ್ಯೆಯೊಂದಿಗೆ ಕಾಣಿಸಿಕೊಂಡಿತ್ತು. ಕಂಪನಿಯು ಅಧಿಕೃತವಾಗಿ ಬಿಡುಗಡೆ ದಿನಾಂಕವನ್ನು ಘೋಷಿಸದಿದ್ದರೂ, ವರದಿಗಳ ಪ್ರಕಾರ ಈ ಸ್ಮಾರ್ಟ್‌ಫೋನ್ ನವೆಂಬರ್ ತಿಂಗಳ ಆರಂಭದಲ್ಲಿ ಬರುವಿಕೆಯನ್ನು ಸೂಚಿಸಿದ್ದವು. ಇದೀಗ ವದಂತಿಗಳಂತೆ, ಮುಂಬರುವ Lava Agni 4 5G ಫೋನ್ ಹೇಗಿರಲಿದೆ ಎಂದಬುದನ್ನು ನೋಡೋಣ ಬನ್ನಿ.

Lava Agni 4 ಬಿಡುಗಡೆಗೆ ಸಜ್ಜು!: ಕಡಿಮೆ ಬೆಲೆಯ ಹೊಸ ಪ್ರೀಮಿಯಂ ಫೋನ್!

Lava Agni 4 5G: ವಿನ್ಯಾಸ ಮತ್ತು ಪ್ರಮುಖ ವೈಶಿಷ್ಟ್ಯಗಳು
ಹೊಸ Lava Agni 4 5G ಫೋನ್‌ನ ವಿನ್ಯಾಸವು ಹಳೆಯ LG ಸ್ಮಾರ್ಟ್‌ಫೋನ್‌ಗಳ ಹಾರಿಜಾಂಟಲ್ ಕ್ಯಾಮೆರಾ ಸೆಟಪ್ ನಂತಿರಲಿದೆ ಎಂದು ಹಲವಾರು ಟೆಕ್ ವರದಿಗಳು ಹೇಳುತ್ತವೆ.
ಈ ಡಿಸೈನ್‌ನಲ್ಲಿ ಮಧ್ಯದಲ್ಲಿ LED ಫ್ಲ್ಯಾಶ್ ಜೊತೆಗೆ ಎರಡೂ ಬದಿಗಳಲ್ಲಿ ಕ್ಯಾಮೆರಾ ಸೆನ್ಸರ್‌ಗಳು ಇರಲಿವೆ ಎನ್ನಲಾಗಿದೆ.
Lava Agni 4 5G ಫೋನ್‌ನಲ್ಲಿ 6.7 ಇಂಚಿನ FHD+ AMOLED ಡಿಸ್ಪ್ಲೇ ಮತ್ತು 120Hz ರಿಫ್ರೆಶ್ ರೇಟ್ ಇರಲಿದೆ.
ಹಿಂದಿನ Lava Agni 3 ನಲ್ಲಿ ಇದ್ದ ಕರ್ವ್‌ಡ್ ಡಿಸ್ಪ್ಲೇ ಬದಲಿಗೆ, ಈ ಬಾರಿ ಫ್ಲಾಟ್ ಸ್ಕ್ರೀನ್ ವಿನ್ಯಾಸ ನೀಡಲಾಗುವ ಸಾಧ್ಯತೆ ಇದೆ.
ಕಾರ್ಯಕ್ಷಮತೆ ವಿಭಾಗದಲ್ಲಿ, Lava Agni 4 5G 5G ನಲ್ಲಿ MediaTek Dimensity 8350 ಚಿಪ್‌ಸೆಟ್ ಬಳಸಲಾಗುತ್ತದೆ ಎಂದು ವರದಿಗಳು ಸೂಚಿಸುತ್ತವೆ.
Lava Agni 4 5G ಫೋನ್‌ನಲ್ಲಿ ಬ್ಯಾಟರಿ ವಿಭಾಗದಲ್ಲಿ ದೊಡ್ಡ ಅಪ್‌ಗ್ರೇಡ್ ನಿರೀಕ್ಷಿಸಲಾಗಿದೆ . ಇದರಲ್ಲಿ 7,000mAh ಕ್ಕಿಂತ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿ ಇರಬಹುದು ಎಂದು ಹೇಳಲಾಗಿದೆ.
ಫೋಟೋಗ್ರಫಿ ಪ್ರಿಯರಿಗೆ, Lava Agni 4 5G ನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಸೆನ್ಸರ್ ಇರಬಹುದು. ಸೆಲ್ಫಿ ಕ್ಯಾಮೆರಾ ಹಾಗೂ ವೀಡಿಯೊ ರೆಕಾರ್ಡಿಂಗ್ ವಿಭಾಗದಲ್ಲಿಯೂ ಉತ್ತಮ ಸುಧಾರಣೆ ನಿರೀಕ್ಷಿಸಲಾಗಿದೆ.
ಇಷ್ಟೇ ಅಲ್ಲದೆ, ಈ ಫೋನ್ AI ಆಧಾರಿತ ಫೋಟೋ ಸಂಸ್ಕರಣಾ ತಂತ್ರಜ್ಞಾನ ಮತ್ತು ಇತರೆ AI ಪೀಚರ್‌ಗಳನ್ನು ಒಳಗೊಂಡಿರುವ ಸಾಧ್ಯತೆ ಇದೆ.

ಲಾವಾ ಈಗಾಗಲೇ ತನ್ನ Agni ಸರಣಿಯ ಮೂಲಕ ಮಧ್ಯಮ ದರದ 5G ವಿಭಾಗದಲ್ಲಿ ಉತ್ತಮ ಹೆಸರನ್ನು ಗಳಿಸಿದೆ. ಸರಿಸುಮಾರು ಒಂದು ವರ್ಷದ ಹಿಂದೆ 20 ಸಾವಿರ ಬೆಲೆಯಲ್ಲಿ Lava Agni 3 5G ಸ್ಮಾರ್ಟ್‌ಫೋನ್ ಬಿಡುಗಡೆಯಾಗಿತ್ತು. ಇದು 1.5K ಬಾಗಿದ AMOLED ಡಿಸ್ಪ್ಲೇ, ಮೀಡಿಯಾ ಟೆಕ್ ಡೈಮೆನ್ಸಿಟಿ 7300X ಪ್ರೊಸೆಸರ್ ಮತ್ತು 8MP ಟೆಲಿಫೋಟೋ ಮತ್ತು 8MP ಅಲ್ಟ್ರಾ-ವೈಡ್ ಲೆನ್ಸ್ ಹೊಂದಿರುವ 50MP ಟ್ರಿಪಲ್ ಹಿಂಬದಿಯ ಕ್ಯಾಮೆರಾ, 16MP ಸೆಲ್ಫಿ ಕ್ಯಾಮೆರಾ, 66W ವೇಗದ ಚಾರ್ಜಿಂಗ್‌ನೊಂದಿಗೆ 5000mAh ಬ್ಯಾಟರಿ, ಡಾಲ್ಬಿ ಅಟ್ಮಾಸ್ ಸೌಂಡ್ ಮತ್ತು IP64 ಧೂಳು ಮತ್ತು ನೀರಿನ ಪ್ರತಿರೋಧ ರೇಟಿಂಗ್‌ನಂತಹ ಅತ್ಯುತ್ತಮ ವೈಶಿಷ್ಟ್ಯಗಳನ್ನು ಒಳಗೊಂಡಿತ್ತು.ಇದೀಗ Agni 4 ಮೂಲಕ ಕಂಪನಿ ಈ ವಿಭಾಗದಲ್ಲಿ ಮತ್ತೊಂದು ಬಲಿಷ್ಠ ಆಯ್ಕೆಯನ್ನು ನೀಡುವ ತಯಾರಿಯಲ್ಲಿದೆ. ಇನ್ನು ನಿರೀಕ್ಷಿತ ಬೆಲೆಯು ಸುಮಾರು 20 ರಿಂದ 25 ಸಾವಿರದ ವರೆಗೂ ಇರಬಹುದು ಎನ್ನಲಾಗಿದೆ.

Best Mobiles in India

English summary
Lava Mobiles recently posted a teaser on social media promoting the upcoming release of a new premium smartphone. The message, labeled “Coming Soon,” has sparked discussions suggesting it might be the anticipated Lava Agni 4.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+