₹25,000 ಬಜೆಟ್‌ನಲ್ಲಿ ಬೆಸ್ಟ್ ಫೋನ್ ಯಾವುದು? ಲಾವಾ ವಿರಾಟ್ ಕರ್ವ್ 5G vs ಮೋಟೋ ಎಡ್ಜ್ 60 ಫ್ಯೂಷನ್ ಫೈಟ್!
ಸೆಪ್ಟೆಂಬರ್ 24, 2026ರ ಹೊತ್ತಿಗೆ, ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ₹25,000 ಕ್ಕಿಂತ ಕಡಿಮೆ ಬೆಲೆಯ ಕರ್ವ್ಡ್-ಡಿಸ್‌ಪ್ಲೇ ಫೋನ್‌ಗಳ ನಡುವೆ ಭರ್ಜರಿ ಪೈಪೋಟಿ ಏರ್ಪಟ್ಟಿದೆ. ಈ ಸಾಲಿಗೆ ಇತ್ತೀಚೆಗಷ್ಟೇ ಲಾವಾ ಸಂಸ್ಥೆ ತನ್ನ 'ವಿರಾಟ್ ಕರ್ವ್ 5G' ಫೋನ್ ಅನ್ನು ₹20,999 ರಿಯಾಯಿತಿ ಆರಂಭಿಕ ಬೆಲೆಗೆ ಅಖಾಡಕ್ಕಿಳಿಸಿದೆ. ಇನ್ನೊಂದೆಡೆ, ಮೋಟೋರೋಲಾದ 'ಎಡ್ಜ್ 60 ಫ್ಯೂಷನ್' ಸದ್ಯ ₹24,999 ಬೆಲೆಯಲ್ಲಿ ಪಟ್ಟಿ ಮಾಡಲ್ಪಟ್ಟಿದ್ದು, ಬ್ಯಾಂಕ್ ಆಫರ್‌ಗಳ ಮೂಲಕ ಇದರ ಬೆಲೆ ಸುಮಾರು ₹23,750 ಕ್ಕೆ ಇಳಿಯುತ್ತಿದೆ. ಈ ಎರಡೂ ಫೋನ್‌ಗಳ ಆಫರ್ ಬೆಲೆ ಹಾಗೂ ಫೀಚರ್‌ಗಳನ್ನು ಪರಿಶೀಲಿಸಿ, ನಿಮ್ಮ ಜೇಬಿಗೆ ಸೂಕ್ತವಾದ ಬೆಸ್ಟ್ ಫೋನ್ ಯಾವುದು ಎಂಬುದರ ಕಂಪ್ಲೀಟ್ ವಿವರ ಇಲ್ಲಿದೆ.
ಎರಡೂ ಫೋನ್‌ಗಳಲ್ಲಿ 120Hz ರಿಫ್ರೆಶ್ ರೇಟ್ ಹೊಂದಿರುವ ಕರ್ವ್ಡ್ AMOLED ಡಿಸ್‌ಪ್ಲೇ ನೀಡಲಾಗಿದ್ದರೂ, ಸೂರ್ಯನ ಬೆಳಕಿನಲ್ಲಿ ಇವುಗಳ ಪ್ರದರ್ಶನ ಭಿನ್ನವಾಗಿದೆ. ಮೋಟೋರೋಲಾ 4,500‑ನಿಟ್ಸ್ HDR ಪೀಕ್ ಬ್ರೈಟ್‌ನೆಸ್ ಹಾಗೂ 1,400‑ನಿಟ್ಸ್ ಹೈ ಬ್ರೈಟ್‌ನೆಸ್ ಮೋಡ್ (HBM) ಹೊಂದಿದ್ದು, ಹೊರಾಂಗಣದಲ್ಲೂ ಅತ್ಯುತ್ತಮ ದೃಶ್ಯಾವಳಿ ನೀಡುತ್ತದೆ. ಲಾವಾ 1,100 ನಿಟ್ಸ್ ಪೀಕ್ ಹಾಗೂ 800‑ನಿಟ್ಸ್ HBM ಹೊಂದಿದ್ದರೂ, ಕಣ್ಣಿನ ರಕ್ಷಣೆಗಾಗಿ 1,920Hz PWM ಡಿಮ್ಮಿಂಗ್ ತಂತ್ರಜ್ಞಾನ ನೀಡಿದೆ. ನೀವು ಬಿಸಿಲಿನಲ್ಲಿ ಹೆಚ್ಚು ಪ್ರಯಾಣಿಸುವವರಾಗಿದ್ದರೆ ಅಥವಾ ಫೋನ್‌ನಲ್ಲಿ ಹೆಚ್ಚು ಓದುವ ಅಭ್ಯಾಸ ನಿಮಗಿದ್ದರೆ, ಈ ವ್ಯತ್ಯಾಸ ಪ್ರಮುಖ ಪಾತ್ರ ವಹಿಸುತ್ತದೆ.

ಲಾವಾ ವಿರಾಟ್ ಕರ್ವ್ 5G vs ಮೋಟೋ ಎಡ್ಜ್ 60 ಫ್ಯೂಷನ್: ಪರ್ಫಾರ್ಮೆನ್ಸ್ ಮತ್ತು ಗೇಮಿಂಗ್
ಮೋಟೋ ಫೋನ್‌ನಲ್ಲಿ ಮೀಡಿಯಾಟೆಕ್ ಡೈಮೆನ್ಸಿಟಿ 7400 ಪ್ರೊಸೆಸರ್ ಇದ್ದರೆ, ಲಾವಾ ಡೈಮೆನ್ಸಿಟಿ 7100 ಪ್ರೊಸೆಸರ್ ಹೊಂದಿದೆ. ಎರಡರಲ್ಲೂ UFS 2.2 ಸ್ಟೋರೇಜ್ ತಂತ್ರಜ್ಞಾನವಿದ್ದರೂ, ಮೋಟೋ 256GB ಯಿಂದಲೇ ಆರಂಭವಾಗುತ್ತದೆ ಮತ್ತು ಮೈಕ್ರೋಎಸ್‌ಡಿ ಕಾರ್ಡ್ ಬೆಂಬಲವನ್ನೂ ಒಳಗೊಂಡಿದೆ. 3DMark ವೈಲ್ಡ್ ಲೈಫ್ ಎಕ್ಸ್‌ಟ್ರೀಮ್ ಬೆಂಚ್‌ಮಾರ್ಕ್ ಪರೀಕ್ಷೆಯಲ್ಲಿ ಮೋಟೋ 996 ಸ್ಕೋರ್ ಮಾಡಿದರೆ, ಲಾವಾ 699 ಸ್ಕೋರ್ ಗಳಿಸಿದೆ. ಡಿಜಿಟ್ ಲ್ಯಾಬ್ ಪರೀಕ್ಷೆಯ ಪ್ರಕಾರ ಮೋಟೋ ಅತ್ಯಂತ ಕಡಿಮೆ ಥ್ರೊಟ್ಲಿಂಗ್ ಹೊಂದಿದ್ದು, ಕೇವಲ 48 ನಿಮಿಷಗಳಲ್ಲಿ 0 ಯಿಂದ 100% ಚಾರ್ಜ್ ಆಗುತ್ತದೆ. 45 ನಿಮಿಷಗಳ ಕಾಲ ನಿರಂತರವಾಗಿ BGMI ಅಥವಾ CoD ನಂತಹ ಗೇಮ್ ಆಡುವವರಿಗೆ ಮೋಟೋ ಫೋನ್ ಹೆಚ್ಚ್ ಸ್ಥಿರ ಪರ್ಫಾರ್ಮೆನ್ಸ್ ನೀಡುತ್ತದೆ.
ಕ್ಯಾಮೆರಾ, ಬ್ಯಾಟರಿ ಮತ್ತು ನೆಟ್‌ವರ್ಕ್: ಲಾವಾ ವಿರಾಟ್ ಕರ್ವ್ 5G vs ಮೋಟೋ ಎಡ್ಜ್ 60 ಫ್ಯೂಷನ್
ಮೋಟೋ ಫೋನ್‌ನಲ್ಲಿರುವ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲಿತ 50MP ಸೋನಿ LYT‑700C ಕ್ಯಾಮೆರಾ, 13MP ಅಲ್ಟ್ರಾವೈಡ್ ಹಾಗೂ 32MP ಸೆಲ್ಫಿ ಕ್ಯಾಮೆರಾಗಳು ನೈಸರ್ಗಿಕ ಬಣ್ಣ ಮತ್ತು 30fps ನಲ್ಲಿ 4K ಬೆಂಬಲದೊಂದಿಗೆ ಅತ್ಯುತ್ತಮ ವೀಡಿಯೊಗಳನ್ನು ನೀಡುತ್ತವೆ. ಲಾವಾದ 50MP ಕ್ಯಾಮೆರಾದಲ್ಲಿ OIS ಇಲ್ಲದೆ ಗರಿಷ್ಠ 2K30 ವೀಡಿಯೊ ಬೆಂಬಲವಷ್ಟೇ ಇದೆ; ನೈಟ್ ಮೋಡ್ ಫೋಟೋಗಳಲ್ಲಿ ಶೇಕ್ ಆಗುವುದು ಕಂಡುಬರುತ್ತದೆ. ಲಾವಾದಲ್ಲಿರುವ 6,000mAh ಬ್ಯಾಟರಿ ಬಾಕ್ಸ್‌ನಲ್ಲಿರುವ 33W ಚಾರ್ಜರ್‌ನಿಂದ ಚಾರ್ಜ್ ಆಗಲು ಸುಮಾರು 1 ಗಂಟೆ 40 ನಿಮಿಷ ತೆಗೆದುಕೊಳ್ಳುತ್ತದೆ. ಮೋಟೋದ 5,500mAh ಬ್ಯಾಟರಿ ಇದಕ್ಕಿಂತ ವೇಗವಾಗಿ ಚಾರ್ಜ್ ಆಗುತ್ತದೆ. ಅಲ್ಲದೆ, 5G ನೆಟ್‌ವರ್ಕ್ ಬ್ಯಾಂಡ್ ಬೆಂಬಲದಲ್ಲೂ (n77/n78) ಮೋಟೋ ಮುಂಚೂಣಿಯಲ್ಲಿದೆ.
ಕಡಿಮೆ ಬೆಲೆ, ದೀರ್ಘಕಾಲ ಬಾಳಿಕೆ ಬರುವ ಬ್ಯಾಟರಿ, ಕಣ್ಣಿಗೆ ಹಿತ ನೀಡುವ PWM ಡಿಮ್ಮಿಂಗ್ ಹಾಗೂ ಕ್ಲೀನ್ ಸಾಫ್ಟ್‌ವೇರ್ ಅನುಭವ ಬಯಸುವವರು, ಜೊತೆಗೆ ತುಸು ನಿಧಾನಗತಿಯ ಚಾರ್ಜಿಂಗ್ ಮತ್ತು ಸಾಧಾರಣ ಕ್ಯಾಮೆರಾಗೆ ಒಪ್ಪುವವರು ಲಾವಾ ವಿರಾಟ್ ಕರ್ವ್ 5G ಆಯ್ಕೆ ಮಾಡಿಕೊಳ್ಳಬಹುದು. ಆದರೆ, ₹25,000 ಒಳಗಿನ ಆಫರ್ ಬೆಲೆಯಲ್ಲಿ ಅತ್ಯುತ್ತಮ ಬ್ರೈಟ್‌ನೆಸ್, ವೇಗದ ಚಾರ್ಜಿಂಗ್, ಹೆಚ್ಚಿನ 5G ಬ್ಯಾಂಡ್‌ಗಳು, OIS ಕ್ಯಾಮೆರಾ ಮತ್ತು ಅದ್ಭುತ ಗೇಮಿಂಗ್ ಪರ್ಫಾರ್ಮೆನ್ಸ್ ಬೇಕಿದ್ದಲ್ಲಿ ಮೋಟೋ ಎಡ್ಜ್ 60 ಫ್ಯೂಷನ್ ಖಂಡಿತವಾಗಿಯೂ ಉತ್ತಮ ಆಯ್ಕೆ.


Click it and Unblock the Notifications
