ಮಧ್ಯಮ ಕ್ರಮಾಂಕದ ಮನಸೆಳೆಯುವ ಫೋನ್ ಲಾವಾ X10

By Shwetha
|

ಮಾರುಕಟ್ಟೆಗೆ ಈಗೀಗ ಮಧ್ಯಮ ಕ್ರಮಾಂಕದ ಫೋನ್‌ಗಳು ದಾಳಿ ಇಡುತ್ತಿದ್ದು ಈಗೀಗ 4ಜಿ ಎಲ್‌ಟಿಇ ಡಿವೈಸ್‌ಗಳು ಹೆಚ್ಚಿನ ಸದ್ದನ್ನು ಉಂಟುಮಾಡುತ್ತಿವೆ. ಇಂತಹುದೇ ಪಟ್ಟಿಯಲ್ಲಿ ಬರುವ ಫೋನ್ ಎಂದರೆ ಲಾವಾ X10 ಆಗಿದ್ದು 3 ಜಿಬಿ RAM ಅನ್ನು ಒಳಗೊಂಡು ಈ ಡಿವೈಸ್ ಮಾರುಕಟ್ಟೆಯನ್ನಾಳುತ್ತಿದೆ. ಫೋನ್ ಬೆಲೆ ರೂ 11,500 ಆಗಿದೆ.

ಮಲ್ಟಿಟಾಸ್ಕಿಂಗ್ ಸಾಮರ್ಥ್ಯವನ್ನು ಈ ಫೋನ್ ಒಳಗೊಂಡಿದ್ದು, ಉತ್ತಮ ವಿನ್ಯಾಸದೊಂದಿಗೆ ಆಕರ್ಷಕ ವಿಶೇಷತೆಗಳನ್ನು ಪಡೆದುಕೊಂಡಿದೆ. ಇಂದಿನ ಲೇಖನದಲ್ಲಿ ಲಾವಾ X10 ಅದ್ಭುತ ಫೀಚರ್‌ಗಳನ್ನು ಕುರಿತು ಅರಿತುಕೊಳ್ಳೋಣ.

ಡಿಸ್‌ಪ್ಲೇ

ಡಿಸ್‌ಪ್ಲೇ

5 ಇಂಚಿನ ಎಚ್‌ಡಿ ಐಪಿಎಸ್ ಡಿಸ್‌ಪ್ಲೇಯೊಂದಿಗೆ ಫೋನ್ ಬಂದಿದ್ದು ಅನ್‌ಬ್ರೇಕೇಬಲ್ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಅನ್ನು ಮೇಲ್ಭಾಗದಲ್ಲಿ ಹೊಂದಿದೆ. ವೈಬ್ರೇಂಟ್ ಬಣ್ಣಗಳೊಂದಿಗೆ ಡಿಸ್‌ಪ್ಲೇ ತೋರ್ಪಟ್ಟಿದ್ದು ಪ್ರಖರ ಸೂರ್ಯನ ಬೆಳಕಿನಲ್ಲೂ ಇದರ ಡಿಸ್‌ಪ್ಲೇ ಸ್ಪಷ್ಟವಾಗಿ ಕಾಣುತ್ತದೆ.

3 ಜಿಬಿ RAM

3 ಜಿಬಿ RAM

ಡಿವೈಸ್ 3 ಜಿಬಿ RAM ನೊಂದಿಗೆ ಬಂದಿದ್ದು ಹೆಚ್ಚು ವೇಗದ ಕಾರ್ಯಕ್ಷಮತೆಯನ್ನು ಇದು ನೀಡುತ್ತಿದೆ. ಈ ಬೆಲೆಯಲ್ಲಿ ಬಂದಿರುವ ಅತ್ಯಪೂರ್ಣ ಡಿವೈಸ್ ಇದು ಎಂದೆನಿಸಿದೆ. ಹೆಚ್ಚು ಗ್ರಾಫಿಕ್ ಗೇಮ್ಸ್‌ಗಳನ್ನು ಆಡಿದರೂ ಇದು ಬಿಸಿಯಾಗುವುದಿಲ್ಲ.

4ಜಿ ಎಲ್‌ಟಿಇ ಬೆಂಬಲ

4ಜಿ ಎಲ್‌ಟಿಇ ಬೆಂಬಲ

ಲಾವಾ X10 ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಆಗಿದ್ದು ಎರಡೂ ಸಿಮ್‌ಗಳು 4 ಜಿ ಸಂಪರ್ಕಕ್ಕೆ ಬೆಂಬಲವನ್ನು ನೀಡುತ್ತದೆ. 4ಜಿ ಎಲ್‌ಟಿಇ ಬೆಂಬಲದಲ್ಲಿ ಉತ್ತಮ ನೆಟ್‌ವರ್ಕ್ ಸ್ಪೀಡ್ ಅನ್ನು ಇದು ಒದಗಿಸಲಿದೆ.

ಉತ್ತಮ ಕ್ಯಾಮೆರಾ

ಉತ್ತಮ ಕ್ಯಾಮೆರಾ

13 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾದೊಂದಿಗೆ ಇದು ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್ ಅನ್ನು ಪಡೆದುಕೊಂಡಿದೆ.5 ಪಿ ಲೆನ್ಸ್ ಉಳ್ಳ ರಿಯರ್ ಕ್ಯಾಮೆರಾ ಇದರಲ್ಲಿದ್ದು ಪೂರ್ಣ ಎಚ್‌ಡಿ ರೆಕಾರ್ಡಿಂಗ್ ಇದರಲ್ಲಿ ಸಾಧ್ಯ. ಸಣ್ಣ ವೀಡಿಯೊವನ್ನು ಇದರಲ್ಲಿ ನಿಮಗೆ ಶೂಟ್ ಮಾಡಬಹುದಾಗಿದ್ದು ಚಿತ್ರ ತೆಗೆಯಲು ಇದು ಸೂಕ್ತ ಎಂದೆನಿಸಿದೆ.

ಸೂಪರ್ ಸೆಲ್ಫಿಗಳು

ಸೂಪರ್ ಸೆಲ್ಫಿಗಳು

5 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾವನ್ನು ಈ ಡಿವೈಸ್ ಪಡೆದುಕೊಂಡಿದ್ದು 84 ಡಿಗ್ರಿ ವೈಡ್ ಆಂಗಲ್ ಲೆನ್ಸ್ ಬಳಸಿ ವಿಸ್ತಾರವಾದ ಸೆಲ್ಫಿಯನ್ನು ಸೆರೆಹಿಡಿಯಬಹುದಾಗಿದೆ. ಇನ್ನು ಸಮೂಹ ಸೆಲ್ಫಿಗೂ ಡಿವೈಸ್ ಕ್ಯಾಮೆರಾ ಹೇಳಿಮಾಡಿಸಿರುವಂಥದ್ದಾಗಿದೆ.

ಪವರ್ ಫುಲ್ ಪ್ರೊಸೆಸರ್

ಪವರ್ ಫುಲ್ ಪ್ರೊಸೆಸರ್

ಮೀಡಿಯಾಟೆಕ್ MT6735 ಸಿಪಿಯು ಇದರಲ್ಲಿದ್ದು ಕ್ವಾಡ್ ಕೋರ್ 1.3GHZ ಸ್ಪೀಡ್ ಅನ್ನು ಇದು ಒಳಗೊಂಡಿದೆ. 3ಜಿಬಿ DDR3 RAM ಅನ್ನು ಡಿವೈಸ್ ಪಡೆದಿದ್ದು 1.3GHZ 64 ಬಿಟ್ ಕ್ವಾಡ್ ಕೋರ್ ಪ್ರೊಸೆಸರ್ ಇದರಲ್ಲಿದೆ. ವೇಗ ಮತ್ತು ಮಲ್ಟಿಟಾಸ್ಕ್ ಕೆಲಸಗಳನ್ನು ನಿಮಗೆ ಇದರಲ್ಲಿ ನಿರ್ವಹಿಸಬಹುದಾಗಿದೆ.

ಬ್ಯಾಟರಿ ಲೈಫ್

ಬ್ಯಾಟರಿ ಲೈಫ್

ಹೆಚ್ಚು ಪವರ್ ಫುಲ್ 2900mAh ಲಿ-ಪೊ ಬ್ಯಾಟರಿಯನ್ನು ಇದು ಹೊಂದಿದ್ದು 209 ಗಂಟೆಗಳ ಸ್ಟ್ಯಾಂಡ್ ಬೈ ಟೈಮ್‌ನ ಚಾರ್ಜ್ ಅನ್ನು ನೀಡುತ್ತಿದ್ದು 3 ಜಿನಲ್ಲಿ 18 ಗಂಟೆಗಳ ಟಾಕ್ ಟೈಮ್ ಅನ್ನು ನೀಡುತ್ತಿದೆ. ಈ ಡಿವೈಸ್‌ನ ಬ್ಯಾಟರಿಯನ್ನು ತೆಗೆಯಬಹುದಾಗಿದ್ದು, ಬಳಕೆದಾರರಿಗೆ ಬ್ಯಾಟರಿ ರೀಪ್ಲೇಸ್ ಮಾಡುವ ಅನುಕೂಲತೆಯನ್ನು ಉಂಟುಮಾಡಲಿದೆ.

ಸಾಫ್ಟ್‌ವೇರ್ ಮತ್ತು ಇಂಟರ್ಫೇಸ್

ಸಾಫ್ಟ್‌ವೇರ್ ಮತ್ತು ಇಂಟರ್ಫೇಸ್

ಲಾವಾ X 10 ಆಂಡ್ರಾಯ್ಡ್ 5.1 ಲಾಲಿಪಪ್ ಅನ್ನು ಚಾಲನೆ ಮಾಡುತ್ತಿದ್ದು ಇದನ್ನು ಅತ್ಯಾಧುನಿಕ ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊಗೆ ಅಪ್‌ಗ್ರೇಡ್ ಮಾಡಬಹುದಾಗಿದೆ.

ಸಾಕಷ್ಟು ಸ್ಥಳಾವಕಾಶ

ಸಾಕಷ್ಟು ಸ್ಥಳಾವಕಾಶ

ಡಿವೈಸ್ 16 ಜಿಬಿ ಆಂತರಿಕ ಸಂಗ್ರಹಣೆಯೊಂದಿಗೆ ಬಂದಿದ್ದು, ಇದನ್ನು 32 ಜಿಬಿಗೆ ವಿಸ್ತರಿಸಬಹುದಾಗಿದೆ.

ಫೋನ್ ಕುರಿತು ಇನ್ನಷ್ಟು

ಫೋನ್ ಕುರಿತು ಇನ್ನಷ್ಟು

4 ಜಿ ಅಲ್ಲದೆಯೇ, ಇತರ ಕನೆಕ್ಟಿವಿಟಿ ಆಯ್ಕೆಗಳಾದ ವೈಫೈ, ಬ್ಲ್ಯೂಟೂತ್, ಜಿಪಿಎಸ್, ಒಟಿಜಿ ಬೆಂಬಲ ಮತ್ತು 3ಜಿ ಸಾಮರ್ಥ್ಯವನ್ನು ಇದು ಹೊಂದಿದೆ. ಏರ್ ಗೆಸ್ಚರ್ಸ್ ಮತ್ತು ಸ್ಮಾರ್ಟ್ ಗೆಸ್ಚರ್ಸ್‌ಗಳನ್ನು ಇದು ಒಳಗೊಂಡಿದೆ.

Most Read Articles
Best Mobiles in India

English summary
take a look at the slideshow below, and find it out yourself. Lava X10 is definitely a flagship killer and below are the features to prove.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X