ಲಾವಾದಿಂದ ಜೆಲ್ಲಿ ಬೀನ್ ಪ್ಯಾಬ್ಲೆಟ್ ಬಿಡುಗಡೆ
ಕಡಿಮೆ ಬೆಲೆಯಲ್ಲಿ ಮೊಬೈಲ್, ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಹೆಸರುವಾಸಿಯಾದ ದೇಶಿಯ ಕಂಪೆನಿ ಲಾವಾ ಈಗ ಕಡಿಮೆ ಬೆಲೆಯಲ್ಲಿ ಮತ್ತೊಂದು ಪ್ಯಾಬ್ಲೆಟ್ ಬಿಡುಗಡೆ ಮಾಡಿದೆ.
ಈ ಹಿಂದೆ ಐಸ್‌ಕ್ರೀಮ್ ಸಾಂಡ್ವಿಚ್ ಓಎಸ್ ಇರುವಂತಹ ಪ್ಯಾಬ್ಲೆಟ್ ಬಿಡುಗಡೆ ಮಾಡಿದ್ದ ಲಾವಾ ಈಗ ಜೆಲ್ಲಿಬೀನ್ ಓಎಸ್ ಇರುವಂತಹ ಪ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದೆ. ಈ ಹಿಂದೆ ಬಿಡುಗಡೆ ಮಾಡಿದ್ದ ಐಸ್‌ಕ್ರೀಮ್ ಸಾಂಡ್ವಿಚ್ ಓಎಸ್ ಪ್ಯಾಬ್ಲೆಟ್‌ಗೆ 9,499 ದರ ನಿಗದಿ ಮಾಡಿದ್ದ ಲಾವಾ ಕಂಪೆನಿ ಈಗ ಬಿಡುಗಡೆಯಾಗುತ್ತಿರುವ ಜೆಲ್ಲಿ ಬೀನ್ ಓಎಸ್ ಇರುವಂತಹ ಪ್ಯಾಬ್ಲೆಟ್‌ಗೆ 13,999 ದರವನ್ನು ನಿಗದಿ ಮಾಡಿದೆ.
ಈ ಹಿಂದೆ ಬೇರೆ ಬೇರೆ ಕಂಪೆನಿಗಳು ಜಿಲ್ಲಿ ಬೀನ್ ಆಪರೇಟಿಂಗ್ ಸಿಸ್ಟಂ ಇರುವಂತಹ ಪ್ಯಾಬ್ಲೆಟ್ ಬಿಡುಗಡೆ ಮಾಡಿವೆ. ಮೈಕ್ರೋಮ್ಯಾಕ್ಸ್ 13,990, ಸ್ಯಾಮ್‌ಸಂಗ್ ಗೆಲಾಕ್ಸಿ ಗ್ರ್ಯಾಂಡ್ 21,500, ಸ್ವೈಪ್ 12,999, ಕಾರ್ಬನ್ 10,990, ವಿಕೆಡ್ ಲೀಕ್ 13,000 ರೂಪಾಯಿಯ ಪ್ಯಾಬ್ಲೆಟ್ ಜೊತೆಯಲ್ಲಿ ಲಾವ ಪ್ಯಾಬ್ಲೆಟ್ ಈಗ ಸ್ಪರ್ಧಿಸಬೇಕಾಗಿದೆ.
ಸ್ಮಾರ್ಟ್‌ಫೋನ್‌ಗಳ ಮತ್ತಷ್ಟು ಚಿತ್ರಗಳಿಗಾಗಿ -ಗಿಜ್ಬಾಟ್ ಗ್ಯಾಲರಿ

ಲಾವಾ Xolo A1000
ವಿಶೇಷತೆ :
1280 x 720 ಪಿಕ್ಸೆಲ್ ಇರುವ 5 ಇಂಚಿನ ಎಚ್‌ಡಿ IPS OGC ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್
1GHz ಡ್ಯುಯಲ್ ಕೋರ್ ಪ್ರೋಸೆಸರ್
ಆಂಡ್ರಾಯ್ಡ್ 4.1 ಜೆಲ್ಲಿಬೀನ್ ಆಪರೇಟಿಂಗ್ ಸಿಸ್ಟಂ
8 ಎಂಪಿ ಹಿಂದುಗಡೆ,1.2 ಎಂಪಿ ಮುಂದುಗಡೆ ಕ್ಯಾಮೆರಾ
4GB ಆಂತರಿಕ ಮೊಮೊರಿ
1GB RAM
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈ-ಫಿ,ಬ್ಲೂಟೂತ್,ಮೈಕ್ರೋ ಯುಎಸ್‌ಬಿ ಸ್ಲಾಟ್
2,100 mAh ಬ್ಯಾಟರಿ
13,999 ರೂ ಬೆಲೆಯಲ್ಲಿ ಖರೀದಿಸಿ


Click it and Unblock the Notifications








