Home
ಮೊಬೈಲ್

9,500ಕ್ಕಿಂತ ಕಡಿಮೆ! 50MP ಕ್ಯಾಮೆರಾ.. 5000mAh ಬ್ಯಾಟರಿ.. ಹೊಸ ಲಾವಾ ಫೋನ್ ಖರೀದಿಗೆ ಲಭ್ಯ

ನೀವು ಬಜೆಟ್ ವಿಭಾಗದಲ್ಲಿ ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಬಯಸಿದರೆ, ಇಲ್ಲಿದೆ ಒಳ್ಳೆಯ ಸುದ್ದಿ. ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಲಾವಾ ತನ್ನ ಅಭಿಮಾನಿಗಳಿಗಾಗಿ 2024ರ ಅಂತ್ಯದ ಮೊದಲು ಮತ್ತೊಂದು ಹೊಸ ಮೊಬೈಲ್ ಅನ್ನು ಬಿಡುಗಡೆ ಮಾಡಿದೆ. ಇದುವೇ ಫೋನ್ ಲಾವಾ ಯುವ 2 5G ಆಗಿದೆ. ಕಂಪನಿಯು ಲಾವಾ ಯುವ 2 4Gಯ ಉತ್ತರಾಧಿಕಾರಿಯಾಗಿ ಈ ಫೋನನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅಂದಹಾಗೆ, ಈ ಮೊಬೈಲ್ ಖರೀದಿಗೆ ಲಭ್ಯವಿದೆ. ನೀವು, ಕಡಿಮೆ ಬಜೆಟ್ ವಿಭಾಗದಲ್ಲಿ ಶಕ್ತಿಯುತ ಸ್ಮಾರ್ಟ್‌ಫೋನ್‌ಗಾಗಿ ಹುಡುಕುತ್ತಿದ್ದರೆ, ಇದು ನಿಮಗೆ ಅತ್ಯುತ್ತಮ ಆಯ್ಕೆಯಾಗಿದೆ. 10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ದಿನನಿತ್ಯದ ಕೆಲಸಕ್ಕೆ ಇದು ಉತ್ತಮ ಮೊಬೈಲ್ ಆಗಿದೆ. ಬನ್ನಿ, ಈ ಫೋನಿನ ಬೆಲೆ, ಲಭ್ಯತೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಲಾವಾ ಈ ಸ್ಮಾರ್ಟ್‌ಫೋನ್‌ನಲ್ಲಿ (Lava Yuva 2 5G) ಯುನಿಸೊಕ್ T760 ಪ್ರೊಸೆಸರ್‌ ಅನ್ನು ಅಳವಡಿಸಿದೆ. ಈ ಪ್ರೊಸೆಸರ್‌ ಮಲ್ಟಿ ಟಾಸ್ಕಿಂಗ್ ಮತ್ತು ಗೇಮಿಂಗ್'ಗೆ ಫರ್ಪೆಕ್ಟ್ ಆಗಿದೆ. ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿರುವ ಪೊಕೊ, ವಿವೋ, ಮೊಟೊರೊಲಾ ಮತ್ತು ಸ್ಯಾಮ್‌ಸಂಗ್‌ನ ಬಜೆಟ್ ವಿಭಾಗದ ಸ್ಮಾರ್ಟ್‌ಫೋನ್‌ಗಳಿಗೆ ನೇರ ಸ್ಪರ್ಧೆ ನೀಡಿಲಿದೆ. ಈ ಫೋನ್ 6.67 ಇಂಚಿನ ಡಿಸ್ಪ್ಲೇ ಹೊಂದಿದೆ. ಹಾಗೆಯೇ 50 ಮೆಗಾಪಿಕ್ಸೆಲ್ ಕ್ಯಾಮೆರಾ ಲಭ್ಯವಿದೆ. ಈ ಮೊಬೈಲ್ 4GB RAM + 128GB ಸ್ಟೋರೇಜ್, 5000mAh ಬ್ಯಾಟರಿ ಮತ್ತು 18W ಸ್ಪೀಡ್ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

9,500ಕ್ಕಿಂತ ಕಡಿಮೆ! 50MP ಕ್ಯಾಮೆರಾ.. 5000mAh ಬ್ಯಾಟರಿ.. ಯಾವ ಫೋನ್?

ಲಾವಾ ಯುವ 2 5G ಬೆಲೆ ಮತ್ತು ಲಭ್ಯತೆ

ಲಾವಾ ಯುವ 2 5G ಫೋನನ್ನು 4GB RAM + 128GB ಸ್ಟೋರೇಜ್ ಹೊಂದಿರುವ ಒಂದೇ ರೂಪಾಂತರದಲ್ಲಿ ಬಿಡುಗಡೆ ಮಾಡಲಾಗಿದೆ. ಇದರ ಬೆಲೆ 9,499 ರೂ. ಆಗಿದೆ. ನೀವು 10,000 ರೂ. ಬಜೆಟ್‌ನಲ್ಲಿ ಹೊಸ ಮೊಬೈಲ್ ಖರೀದಿಸಲು ಬಯಸಿದರೆ, ಇದು ಉತ್ತಮ ಆಯ್ಕೆಯಾಗಿದೆ. ಈ ಹೊಸ ಲಾವಾ ಸ್ಮಾರ್ಟ್‌ಫೋನ್ ಮಾರ್ಬಲ್ ಬ್ಲಾಕ್ ಮತ್ತು ಮಾರ್ಬಲ್ ವೈಟ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಇದು ಇ-ಕಾಮರ್ಸ್ ವೆಬ್‌ಸೈಟ್ ಮತ್ತು ಕಂಪನಿಯ ಅಧಿಕೃತ ವೆಬ್‌ಸೈಟ್‌ ಮೂಲಕ ಮಾರಾಟವಾಗುತ್ತಿದೆ.

ಲಾವಾ ಯುವ 2 5G ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಲಾವಾ ಯುವ 2 5G ಫೋನ್ 6.67 ಇಂಚಿನ ಎಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು ಪಂಚ್ ಹೋಲ್ ಶೈಲಿಯ 2.5D ಕರ್ವ್ ಐಪಿಎಸ್ ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 720 x 1612 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. ಹಾಗೆಯೇ 90Hz ರಿಫ್ರೆಶ್ ದರ ಮತ್ತು 700 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ.

ಪ್ರೊಸೆಸರ್‌ ಸಾಮರ್ಥ್ಯ

ನೂತನ ಲಾವಾ ಯುವ 2 5G ಮೊಬೈಲ್ ಯುನಿಸೊಕ್ T760 ಆಕ್ಟಾಕೋರ್ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಿದೆ. ಇದನ್ನು 6 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಓಎಸ್‌ನಲ್ಲಿ ಕೆಲಸ ನಿರ್ವಹಿಸುತ್ತದೆ.

ಸ್ಟೋರೇಜ್ ಆಯ್ಕೆ

ಲಾವಾ ಯುವ 2 5G ಫೋನ್ 4GB RAM ಹೊಂದಿದೆ. ಇದರೊಂದಿಗೆ 4GB ವಿಸ್ತರಿಸಬಹುದಾದ RAM ಸಹ ಲಭ್ಯವಿದೆ. ಈ ಫೋನ್ 128GB ಸ್ಟೋರೇಜ್ ಆಯ್ಕೆ ಹೊಂದಿದೆ. ಮತ್ತು ಇದನ್ನು ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಹೆಚ್ಚಿಸಬಹುದು.

ಕ್ಯಾಮೆರಾ ಸೆಟಪ್

ಲಾವಾ ಯುವ 2 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ ಎಲ್ಇಡಿ ಫ್ಲ್ಯಾಶ್‌‌‌ನೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಹಾಗೆಯೇ ದ್ವಿತೀಯ ಎಐ ಕ್ಯಾಮೆರಾ ಸಹ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ ಫೋನಿನಲ್ಲಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಲಾವಾ ಯುವ 2 5G ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 18W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಇತರೆ ವೈಶಿಷ್ಟ್ಯಗಳು

ಲಾವಾ ಯುವ 2 5G ಫೋನ್ ಫೇಸ್ ಅನ್‌ಲಾಕ್ ವೈಶಿಷ್ಟ್ಯ ಮತ್ತು ಸೈಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಸಹ ಹೊಂದಿದೆ. ಹಾಗೆಯೇ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಒಳಗೊಂಡಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಮೊಬೈಲ್ ಬ್ಲೂಟೂತ್, ವೈ-ಫೈ, ಯುಎಸ್‌ಬಿ ಟೈಪ್ ಸಿ ವೈಶಿಷ್ಟ್ಯಗಳೊಂದಿಗೆ OTG ಅನ್ನು ಸಹ ಹೊಂದಿದೆ.

Best Mobiles in India

English summary
Lava Yuva 2 5G Now Available for Purchase in India: price, specs and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+