Home
ಮೊಬೈಲ್

Lava: ಲಾವಾ ಯುವ 5G ಮೊಬೈಲ್ ಸೇಲ್ ಆರಂಭ; ಬೆಲೆ ಎಷ್ಟು ? ಫೀಚರ್ಸ್ ಏನಿವೆ ?

ಕಡಿಮೆ ಬೆಲಯಲ್ಲಿ ಅತ್ಯುತ್ತಮ ಫೀಚರ್ಸ್‌ ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ಗ್ರಾಹಕರಿಗೆ ನೀಡುತ್ತಾ ಬಂದಿರುವ ಲಾವಾ (Lava) ಸಂಸ್ಥೆ ಮದ್ಯಮ ವರ್ಗದ ಹಾಗೂ ಯುವಕರನ್ನು ಗುರಿಯಾಗಿರಿಸುಕೊಂಡು ನೂತನ 5G ಸ್ಮಾರ್ಟ್‌ಫೋನ್‌ ಒಂದನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಹೌದು, ಲಾವಾ ಸಂಸ್ಥೆ ತನ್ನ ಬಹುನಿರೀಕ್ಷಿತ ಯುವ ಸರಣಿಯ ಸ್ಮಾರ್ಟ್‌ಫೋನ್‌ ಅನ್ನು ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದ್ದು ಇಂದಿನಿಂದ ಈ ಸ್ಮಾರ್ಟ್‌ಫೋನ್ ತನ್ನ ಮಾರಾಟವನ್ನು (sale) ಆರಂಭಿಸಿದೆ. ಹಾಗಿದ್ರೆ ಇಂದು ಬಿಡುಗಡೆಯಾಗಿರುವ ಈ ಸ್ಮಾರ್ಟ್‌ಫೋನ್‌ನ ವೈಶಿಷ್ಟ್ಯಗಳೇನು ? ಬೆಲೆ ಎಷ್ಟು ? ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ದೇಶೀಯ ಬ್ರ್ಯಾಂಡ್ ಆಗಿರುವ ಲಾವಾ ಸಂಸ್ಥೆ ಕಡಿಮೆ ಬೆಲೆಯಲ್ಲಿ 5G ಸ್ಮಾರ್ಟ್‌ಫೋನ್‌ ಖರೀದಿಸುವವರಿಗಾಗಿ ಲಾವಾ ಯುವ 5G (Lava Yuva 5G) ಹೆಸರಿನ ನೂತನ ಸ್ಮಾರ್ಟ್‌ಫೋನ್‌ ಅನ್ನು ಇಂದಿನಿಂದ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಲಾವಾ ಯುವ 5G ಇಂದು ಮಧ್ಯಾಹ್ನ ಅಂದರೆ ಮೇ 30 ರಂದು 12 ಗಂಟೆಯಿಂದ ತನ್ನ ಮಾರಾಟ ಆರಂಭಿಸಿದೆ. ಟೀಸರ್‌ ಮೂಲಕ ಗಮನಸೆಳೆದಿದ್ದ ಈ ಫೋನ್‌ ಏನೆಲ್ಲಾ ಫೀಚರ್ಸ್‌ ಹೊಂದಿದೆ. ಇದರ ಲಭ್ಯತೆ ಎಲ್ಲಿ ಹಾಗೂ ಎಷ್ಟು ರೂ. ಗಳಿಗೆ ಗ್ರಾಹಕರ ಕೈ ಸೇರಲಿದೆ ಎಂಬ ಅಂಶಗಳನ್ನು ಈ ಲೇಖನದಲ್ಲಿ ತಿಳಿಯಿರಿ.

Lava: ಲಾವಾ ಯುವ 5G ಸೇಲ್ ಆರಂಭ

ಬೆಲೆ ಮತ್ತು ಲಭ್ಯತೆ:

ಈ ಸ್ಮಾರ್ಟ್‌ಫೋನ್ ಇದೀಗ ಪ್ರಸಿದ್ದ ಈ ಕಾಮರ್ಸ್‌ ತಾಣವಾಗಿರುವ ಅಮೇಜಾನ್ (Amezon India), ಲಾವಾ ಇ-ಸ್ಟೋರ್ (Lava E-store) ಮತ್ತು ಲಾವಾ ರಿಟೇಲ್ ಔಟ್‌ಲೆಟ್‌ಗಳಲ್ಲಿ (Lava Outlet Retail) ಲಭ್ಯವಿದ್ದು, ಇದರ 4GB RAM ಹಾಗೂ 64GB ಆಂತರಿಕ ಸ್ಟೋರೆಜ್ ಹೊಂದಿರುವ ವೇರಿಯಂಟ್‌ನ ಬೆಲೆ 9,499 ರೂ. ಗಳಾಗಿದ್ದು, 4GB RAM ಹಾಗೂ 128GB ಆಂತರಿಕ ಸ್ಟೋರೆಜ್ ಹೊಂದಿರುವ ಸ್ಮಾರ್ಟ್‌ಫೋನ್‌ನ ಬೆಲೆ 9,999 ರೂ. ಗಳಾಗಿವೆ. ಅಂದರೆ ಇದೀಗ ಬಿಡುಗಡೆ ಹೊಂದಿರುವ ಲಾವಾ ಯುವ 5G ಸ್ಮಾರ್ಟ್‌ಫೊನ್‌ನ ಎರಡೂ ವೇರಿಯಂಟ್‌ಗಳ ಬೆಲೆ ನಾವು ಈ ಮೊದಲ ಲೇಖನದಲ್ಲಿ ಹೇಳಿದಂತೆ 10,000 ರೂ. ಗಳಿಗಿಂತ ಕಡಿಮೆ ಇರುವುದನ್ನು ಗಮನಿಸಬಹುದಾಗಿದೆ.

ಇನ್ನೂ ಈ ಸ್ಮಾರ್ಟ್‌ಫೋನ್ ಮಿಸ್ಟಿಕ್ ಬ್ಲೂ ಮತ್ತು ಮಿಸ್ಟಿಕ್ ಹಸಿರು ಬಣ್ಣಗಳ ಮ್ಯಾಟ್ ಫಿನಿಶ್ ನಿಂದ ಕೂಡಿದೆ ಜೊತೆಗೆ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಸೌಲಭ್ಯನ್ನು ಹೊಂದಿದೆ.

ಲಾವಾ ಯುವ 5G ಫೀಚರ್ಸ್‌:

UNISOC T750 ಮತ್ತು 5,000 mAh ಬ್ಯಾಟರಿಯಿಂದ ಈ ಸ್ಮಾರ್ಟ್‌ಫೋನ್‌ ನಡೆಸಲ್ಪಡುತ್ತಿದೆ, ಜೊತೆಗೆ ಈ ಸ್ಮಾರ್ಟ್‌ಫೋನ್ 90Hz ರಿಫ್ರೆಶ್ ರೇಟ್, 6.52 ಇಂಚಿನ HD+ ಡಿಸ್‌ಪ್ಲೇ ಹೊಂದಿದೆ. ಯುವ 5G ಸ್ಮಾರ್ಟ್‌ಫೋನ್‌ ನ ಮುಖ್ಯ ಕಾಮರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಹಾಗೂ 2MP ಬ್ಯಾಕ್ ಕ್ಯಾಮೆರಾ ಸೆನ್ಸಾರ್‌ ಹೊಂದಿದೆ ಮತ್ತು ಸೆಲ್ಫಿ ಹಾಗೂ ವಿಡಿಯೋ ಕಾಲ್‌ಗಾಗಿ 8MP ಸೆಲ್ಫಿ ಸೆನ್ಸಾರ್ ಕ್ಯಾಮೆರಾ ಹೊಂದಿದೆ.

ಕ್ಯಾಮೆರಾ ಫೀಚರ್ಸ್‌ಗಳಿಗೆ ಸಂಬಂಧಿಸಿದಂತೆ ಲಾವಾ ಪೋರ್ಟ್ರೇಟ್, ಸ್ಲೋ ಮೋಷನ್, ಟೈಮ್‌ಲ್ಯಾಪ್ಸ್, ಆಡಿಯೋ ನೋಟ್, ಮೋಷನ್ ಫೋಟೋ, ಅಲ್ಟ್ರಾ ರೆಸಲ್ಯೂಶನ್, ಬ್ಯೂಟಿ, HDR, ನೈಟ್, AI, PRO, ಪನೋರಮಾ ಸೇರಿದಂತೆ ಕ್ಯಾಮೆರಾದಲ್ಲಿ ಇನ್ನೂ ಹೆಚ್ಚಿನ ಆಪ್ಶನ್‌ಗಳನ್ನು ನೀಡಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್ ಅನ್ನು ಕ್ಲೀನ್ ಯೂಸರ್ ಇಂಟರ್‌ಫೇಸ್‌ನೊಂದಿಗೆ ಬೂಟ್ ಮಾಡುತ್ತದೆ. ಕಂಪನಿಯು ಆಂಡ್ರಾಯ್ಡ್‌ 14 ಮತ್ತು ಎರಡು ವರ್ಷಗಳ ಭದ್ರತಾ ನವೀಕರಣದ ಭರವಸೆ ನೀಡಿದೆ

Best Mobiles in India

English summary
Lava Yuva 5G has launched a new smartphone in the market from today. Lava Yuva 5G has started its sale today afternoon May 30 from 12 PM.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+