Lava; ಇಂದಿನಿಂದ ಮಾರಾಟ ಆರಂಭಿಸಲಿದೆ ಲಾವಾ ಯುವ 5G; ಫೀಚರ್ಸ್, ಬೆಲೆ ತಿಳಿಯಿರಿ
ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಸ್ಮಾರ್ಟ್‌ಫೋನ್‌ಗಳನ್ನು ನೀಡುತ್ತಾ ಬಂದಿರುವ ಲಾವಾ (Lava) ಸಂಸ್ಥೆ, ಉತ್ತಮ ಫೀಚರ್ಸ್‌ಗಳ ಮೂಲಕ ಗ್ರಾಹಕರನ್ನು ಆಕರ್ಷಿಸಿದೆ. ಗ್ರಾಹಕರ ನಿರೀಕ್ಷೆಯಂತೆ ಉತ್ತಮ ಗುಣಮಟ್ಟದ ಮೊಬೈಲ್‌ಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಮಧ್ಯಮ ವರ್ಗದ ಜನರನ್ನು ಟಾರ್ಗೆಟ್ ಮಾಡುವ ಈ ಬ್ರಾಂಡ್ ಬೇರೆ ಬೇರೆ ಕಂಪನಿಯ ಮೊಬೈಲ್‌ಗಳಿಗೆ ಪೈಪೋಟಿ ನೀಡುತ್ತಾ ಬಂದಿದೆ. ಇದೀಗ ಇಂದಿನಿಂದ (ಜೂನ್ 5ರಿಂದ) ಲಾವಾ ಸಂಸ್ಥೆಯ ನೂತನ 5G ಸ್ಮಾರ್ಟ್‌ಫೊನ್ ಒಂದು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಮಾರಾಟ ಆರಂಭಿಸಲಿದೆ. ಹಾಗಾದ್ರೆ ಈ ನೂತನ ಸ್ಮಾರ್ಟ್‌ಫೋನ್‌ನ ವಿಶೇಷತೆಗಳ ಕುರಿತು ನೋಡೋಣ ಬನ್ನಿ.
Lava Yuva 5G ಇಂದು ಭಾರತದಲ್ಲಿ ತನ್ನ ಮೊದಲ ಮಾರಾಟ ಆರಂಭಿಸಲು ಸಿದ್ಧವಾಗಿದೆ. ಲಾವಾ ಯುವ 5G ಭಾರತದಲ್ಲಿ ಬಜೆಟ್ ಸ್ನೇಹಿ 5G ಸ್ಮಾರ್ಟ್‌ಫೋನ್ ಆಗಿದ್ದು ಮೇ ತಿಂಗಳಲ್ಲಿ ಲಾಂಚ್ ಆಗಿದೆ. ಇಂದಿನಿಂದ ತನ್ನ ಮಾರಾಟ ಆರಂಭಿಸಲಿದೆ.

Lava Yuva 5G ತನ್ನ ಕ್ಲೀನ್ ಸಾಫ್ಟ್‌ವೇರ್, ಪ್ರೀಮಿಯಂ ಗ್ಲಾಸ್ ಬ್ಯಾಕ್ ವಿನ್ಯಾಸ, UNISOC ಚಿಪ್, ದೊಡ್ಡ ಬ್ಯಾಟರಿ, ನಯವಾದ ಡಿಸ್‌ಪ್ಲೇ ಮತ್ತು 50 MP ಡ್ಯುಯಲ್-ಕ್ಯಾಮೆರಾ ಸೆಟಪ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಇನ್ನೂ ಈ ಸ್ಮಾರ್ಟ್‌ಫೋನ್ 10,000 ರೂ. ಒಳಗೆ ಮೊಬೈಲ್ ಖರೀದಿಸಲು ಭಯಸುವವರಿಗೆ ಉತ್ತಮ ಆಯ್ಕೆಯಾಗಿದೆ. ಜೊತೆಗೆ ಇದು ಅತ್ಯುತ್ತಮ ಸ್ಮಾರ್ಟ್‌ಫೋನ್ ಅನುಭವವನ್ನು ನೀಡುವ ಗುರಿಯನ್ನು ಹೊಂದಿದೆ.
Lava Yuva 5G ಮಾರಾಟ, ಭಾರತದಲ್ಲಿ ಬೆಲೆ:
ಈ ಸ್ಮಾರ್ಟ್‌ಫೋನ್ ಭಾರತದಲ್ಲಿ ಮೊದಲ ಬಾರಿಗೆ ಇಂದು ಮಧ್ಯಾಹ್ನ 12 ಗಂಟೆಗೆ ಪ್ರಸಿದ್ದ ಇ-ಕಾರ್ಟ್ ತಾಣವಾಗಿರುವ ಆಗಿರುವ ಅಮೇಜಾನ್ (Amazon) ಮೂಲಕ ತನ್ನ ಮಾರಾಟ ಆರಂಭಿಸಲಿದೆ. ಭಾರತದಲ್ಲಿ ಲಾವಾ ಯುವ 5G ಮೊಬೈಲ್‌ನ 4GB/64GB ವೇರಿಯಂಟ್‌ನ ಬೆಲೆ 9,499 ರೂ. ಎಂದು ನಿಗದಿಪಡಿಸಲಾಗಿದೆ. ಇದರ ಜೊತೆಗೆ ಯುವ 5G ಮೊಬೈಲ್ 4GB/128GB ವೇರಿಯಂಟ್‌ನಲ್ಲಿ ಲಭ್ಯವಿದ್ದು, ಅದು ನಿಮಗೆ 9,999 ರೂ. ಗಳಿಗೆ ಸಿಗಲಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್ ಮಿಸ್ಟಿಕ್ ಬ್ಲೂ ಮತ್ತು ಮಿಸ್ಟಿಕ್ ಗ್ರೀನ್ ಈ ಎರಡು ಬಣ್ಣಗಳಲ್ಲಿ ಲಭ್ಯವಿದೆ.
Lava Yuva 5G ಫೀಚರ್ಸ್:
ಇದು 269ppi ಪಿಕ್ಸೆಲ್ ಸಾಂದ್ರತೆ ಜೊತೆಗೆ 6.52 ಇಂಚಿನ HD+ LCD ಡಿಸ್‌ಪ್ಲೇ ಹೊಂದಿದೆ. 90Hz ರಿಫ್ರೆಶ್ ರೇಟ್ ಪ್ರದರ್ಶನ ಮತ್ತು 2.5D ಬಾಗಿದ ಡಿಸ್‌ಪ್ಲೇ ಹೊಂದಿದೆ. ಹ್ಯಾಂಡ್‌ಸೆಟ್ ಆಂಡ್ರಾಯ್ಡ್ 13 ರ ಕ್ಲೀನ್ ಆವೃತ್ತಿಯನ್ನು ಬಾಕ್ಸ್‌ನ ಹೊರಗೆ ರನ್ ಮಾಡುತ್ತದೆ. ಲಾವಾ ಫೋನ್ ಆಂಡ್ರಾಯ್ಡ್ 14 ಅಪ್‌ಡೇಟ್ ಅನ್ನು ಸ್ವೀಕರಿಸುತ್ತದೆ ಎಂದು ಸಂಸ್ಥೆ ಭರವಸೆ ನೀಡಿದೆ.
Lava Yuva 5Gಯು UNISOC T750 ಚಿಪ್‌ಸೆಟ್‌ನಿಂದ 4GB RAM ಮತ್ತು 128GB ವರೆಗಿನ UFS 2.2 ಸ್ಟೋರೆಜ್ ಸಾಮರ್ಥ್ಯ ಹೊಂದಿದೆ. ಹೆಚ್ಚುವರಿಯಾಗಿ 4GB ವರೆಗಿನ ಬಳಕೆಯಾಗದಸ್ಟೋರೇಜ್ ಅನ್ನು ವರ್ಚುವಲ್ RAM ಆಗಿ ಬಳಸಿಕೊಳ್ಳಬಹುದು. ಫೋನ್ 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000 mAh ಬ್ಯಾಟರಿಯನ್ನು ಹೊಂದಿದೆ.
ಕ್ಯಾಮರಾ ನೋಡುವುದಾದರೆ Lava Yuva 5G ಇದು 50 MP ಪ್ರಾಥಮಿಕ ಸೆನ್ಸಾರ್ ಸಂವೇದಕ ಮತ್ತು 2 MP ಸೆಕೆಂಡರಿ ಸೆನ್ಸಾರ್ ಜೊತೆಗೆ ಹಿಂಭಾಗದಲ್ಲಿ ಡ್ಯುಯಲ್ AI ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಲಾವಾ 5G 8 MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಯುವ 5G ಫೇಸ್ ಅನ್‌ಲಾಕ್ ಮತ್ತು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G, 5G, ಬ್ಲೂಟೂತ್ 5.0, Wi-Fi 5, 3.5mm ಆಡಿಯೋ ಜ್ಯಾಕ್ ಸೇರಿದಂತೆ ಅನೇಕ ಆಯ್ಕೆಗಳಿವೆ


Click it and Unblock the Notifications








