Lava: ಶೀಘ್ರದಲ್ಲೇ ಲಾವಾ ಯುವ 5G ಮೊಬೈಲ್ ಲಾಂಚ್..! ಫೀಚರ್ಸ್ ಸೋರಿಕೆ
ಕಡಿಮೆ ಬೆಲೆಯಲ್ಲಿ ಆಕರ್ಷಕ ಫೀಚರ್ಸ್‌ಗಳನ್ನು ಹೊಂದಿರುವ ಮೊಬೈಲ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಗ್ರಾಹಕರನ್ನು ಆಕರ್ಷಿಸಿರುವ ಲಾವಾ ಮೊಬೈಲ್ ಸಂಸ್ಥೆ ಇದೀಗ ಭಾರತದಲ್ಲಿ ನೂತನ 5G ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಿದ್ಧವಾಗಿರುವ ಕುರಿತು ಗೀಕ್‌ಬೆಂಚ್ ಬೆಂಚ್‌ಮಾರ್ಕ್ ಮಾಹಿತಿ ಸೋರಿಕೆ ಮಾಡಿದೆ.
ಲಾವಾ ಯುವ 5ಜಿ ಹೆಸರಿನ ನೂತನ ಯುವ ಸರಣಿ ಫೋನ್ ಅನ್ನು ಲಾವಾ ಸಂಸ್ಥೆ ಬಿಡುಗಡೆಗೆ ಸಿದ್ಧವಾಗಿದೆ. ಮುಂಬರುವ ಸ್ಮಾರ್ಟ್‌ಫೋನ್ ಬಿಡುಗಡೆ ಕುರಿತು ಸಂಸ್ಥೆ ಹಿಂಟ್ ನೀಡಿದ್ದು, ಯುವ 5G ಮೊಬೈಲ್ ಲಾಂಚ್ ಯಾವಾಗ ಹಾಗೂ ಮೊಬೈಲ್ ಫೀಚರ್ಸ್ ಬಗ್ಗೆ ತಿಳಿಯಲು ಈ ಲೇಖನ ಸಂಪೂರ್ಣ ಓದಿ.

ಲಾವಾ (Lava) ಸಂಸ್ಥೆ ಭಾರತದಲ್ಲಿ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಕುರಿತು ಹಿಂಟ್ ಒಂದನ್ನು ನೀಡಿದೆ ಮತ್ತು ಇದು ಲಾವಾ ಯುವ 5ಜಿ ಎಂದು ತಿಳಿದು ಬಂದಿದೆ. ಸ್ಮಾರ್ಟ್‌ಫೋನ್ ತಯಾರಕರು ಹ್ಯಾಂಡ್‌ಸೆಟ್‌ನ ಟೀಸರ್ ವೀಡಿಯೊವನ್ನು ಸಾಮಾಜಿಕ ಮಾಧ್ಯಮದ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಿಕೊಂಡಿದ್ದಾರೆ. ಮೊಬೈಲ್ ವಿನ್ಯಾಸದ ಬಗ್ಗೆ ಒಂದು ನೋಟವನ್ನು ಈ ಟೀಸರ್ ನೀಡಿದೆ.
ಸಂಸ್ಥೆ ಬಿಡುಗಡೆ ಮಾಡಿರುವ ಟೀಸರ್‌ನಲ್ಲಿ ಬಿಡುಗಡೆಯಾಗಲಿರುವ ಫೋನ್‌ನ ಕ್ಯಾಮೆರಾ ಸೇರಿದಂತೆ ಕೆಲವು ಪ್ರಮುಖ ವೈಶಿಷ್ಟ್ಯಗಳನ್ನು ತಿಳಿಸುತ್ತದೆ. ಕಂಪನಿಯು ಮೊಬೈಲ್ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸದಿದ್ದರೂ, ಮುಂದಿನ ತಿಂಗಳ ಮೊದಲ ವಾರದಲ್ಲಿ ಯುವ 5G ಲಾಂಚ್ ಆಗಬಹುದು ಎಂದು ಊಹಿಸಲಾಗಿದೆ. ಈ ವರ್ಷದ ಆರಂಭದಲ್ಲಿ ಲಾವಾ ಯುವ 4 Pro 5G ಚಿತ್ರಗಳನ್ನು ಸೋರಿಕೆ ಮಾಡಿದ್ದ ಆಧಾರದಲ್ಲಿ ಇದೀಗ ಸೋರಿಕೆಯಾಗಿರುವ ಚಿತ್ರಗಳನ್ನು ಗುರುತಿಸಲಾಗಿದೆ.
ಲಾವಾ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ 14 ಸೆಕೆಂಡ್‌ಗಳ ವಿಡಿಯೋ ಜೊತೆಗೆ "ಶೀಘ್ರದಲ್ಲೇ ಬರಲಿದೆ!" ಎಂಬ ಟ್ಯಾಗ್‌ಲೈನ್ ಸೇರಿಸಿ ಟೀಸರ್ ರಿಲೀಸ್ ಮಾಡಿದೆ. ಗಮನಾರ್ಹ ಅಂಶವೆಂದರೆ ಇದು ಲಾವಾ ಸಂಸ್ಥೆ ಬಿಡುಗಡೆ ಮಾಡಿರುವ ಯುವ ಸರಣಿಯ ಮೊದಲ 5G ಮೊಬೈಲ್ ಆಗಿರಲಿದೆ. ಲೀಕ್ ಮಾಡಿರುವ ವಿಡಿಯೋದಲ್ಲಿ ಯಾವುದೇ ಫೀಚರ್ಸ್‌ಗಳನ್ನು ಬಹಿರಂಗಪಡಿಸದಿದ್ದರೂ ಅದರ ವಿನ್ಯಾಸ ಮತ್ತು ಕ್ಯಾಮೆರಾ ಮಾಡೆಲ್‌ಗಳನ್ನು ತಿಳಿಸಲಿದೆ.
ಲಾವಾ ಯುವ 5G ಮೊಬೈಲ್ ಇದು ಆಯತಾಕಾರದ ಬಾಕ್ಸ್ ರೀತಿಯ ವಿನ್ಯಾಸ, ಲಾವಾ ಬ್ರ್ಯಾಂಡಿಂಗ್ ಮತ್ತು 5G ಟೆಕ್ಸ್ಟ್ ಅನ್ನು ನೇರವಾಗಿ ಜೋಡಿಸಿರುವಂತೆ ತೋರುತ್ತಿದೆ. ಹ್ಯಾಂಡ್‌ಸೆಟ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು, ವೃತ್ತಾಕಾರದ ಕ್ಯಾಮೆರಾ ಮಾಡೆಲ್ ಹೊಂದಿದೆ. ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಸೆನ್ಸಾರ್, ದ್ವಿತೀಯ ಕ್ಯಾಮೆರಾ ಕುರಿತಾದ ವಿವರಗಳು ಇನ್ನೂ ತಿಳಿದಿಲ್ಲ, ಜೊತೆಗೆ ಈ ಮಾಡೆಲ್ ಎಲ್ಇಡಿ ಫ್ಲ್ಯಾಷ್ ಅನ್ನು ಒಳಗೊಂಡಿದೆ.
ಲಾವಾ ಯುವ 5G ಸೋರಿಕೆಯಾಗಿರುವ ಫೀಚರ್ಸ್:
ಕಂಪನಿಯು ಅಧಿಕೃತವಾಗಿ ಯಾವುದೇ ಫೀಚರ್ಸ್‌ಗಳನ್ನು ಹಂಚಿಕೊಂಡಿಲ್ಲವಾದರೂ, ಗೀಕ್‌ಬೆಂಚ್ ಬೆಂಚ್‌ಮಾರ್ಕ್ ಈ ವಾರದ ಆರಂಭದಲ್ಲಿ ಲಾವಾ LXX513 ಮಾದರಿಯ ಸ್ಮಾರ್ಟ್‌ಫೋನ್ ಅನ್ನು ಗುರುತಿಸಿದ್ದು, ಮಾಡೆಲ್ ಸಂಖ್ಯೆ ಲಾವಾ ಯುವ 5ಜಿ ಎಂದು ಊಹಿಸಲಾಗಿದೆ. ಈ ಹ್ಯಾಂಡ್‌ಸೆಟ್ ಆಂಡ್ರಾಯ್ಡ್-14 ಔಟ್ ಆಫ್ ದಿ ಬಾಕ್ಸ್ ಅನ್ನು ರನ್ ಮಾಡಬಹುದು ಮತ್ತು 6GB ಮತ್ತು 8GB RAM ರೂಪಾಂತರಗಳಲ್ಲಿ ಬರಬಹುದು ಎಂದು ಗೀಕ್‌ಬೆಂಚ್ ಊಹಿಸಿದೆ.
ಇದಲ್ಲದೆ ಈ ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಪ್ರೊಸೆಸರ್ ಅನ್ನು ಪಡೆದಿರಲಿದೆ, ಇದು ಎರಡು ಕೋರ್‌ಗಳೊಂದಿಗೆ ಗರಿಷ್ಠ ವೇಗ 2.4GHz ಮತ್ತು ಆರು ಕೋರ್‌ಗಳ 2.0GHz ಗರಿಷ್ಠ ವೇಗವನ್ನು ಹೊಂದಿರಲಿವೆ ಎಂದು ತಿಳಿಸಿದೆ.
ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಅಥವಾ ಡೈಮೆನ್ಸಿಟಿ 6080 ಪ್ರೊಸೆಸರ್ ಅನ್ನು ಹೊಂದಿರಬಹುದು ಎಂದು ಊಹಿಸಲಾಗಿದೆ. ಇದಲ್ಲದೆ, ಲಾವಾ ಯುವ 5G ಮೊಬೈಲ್ 16 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. ಹಾಗೂ ಹ್ಯಾಂಡ್‌ಸೆಟ್‌ನ ಬೆಲೆ 10,000 ರೂ. ಒಳಗಿರಬಹುದು ಎಂದು ಊಹಿಸಲಾಗಿದೆ.


Click it and Unblock the Notifications








