Home
ಮೊಬೈಲ್

Lava; ಇಂದಿನಿಂದ ಮಾರಾಟ ಆರಂಭಿಸಲಿದೆ ಲಾವಾ ಯುವ ಸರಣಿಯ ಸ್ಮಾರ್ಟ್‌ಫೋನ್; ಬೆಲೆ, ಫೀಚರ್ಸ್ ತಿಳಿಯಿರಿ

ಕಡಿಮೆ ಬೆಲಯಲ್ಲಿ ಆಕರ್ಷಕ ಮೊಬೈಲ್‌ಗಳನ್ನು ಗ್ರಾಹಕರಿಗೆ ನೀಡುತ್ತಾ ಬಂದಿರುವ ಲಾವಾ (Lava) ಸಂಸ್ಥೆ ಇದೀಗ ಅಗ್ಗದ ಬೆಲಯ 5G ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಲಾಂಚ್ ಮಾಡಿದ್ದು ಇಂದಿನಿಂದ ಈ ಫೋನ್ ಮಾರಾಟ ಆರಂಭಿಸಲಿದೆ. ಲಾವಾ ಯುವ 5G ಹೆಸರಿನ ಮೊಬೈಲ್‌ ಭಾರತದಲ್ಲಿ ಇಂದಿನಿಂದ ತನ್ನ ಮಾರಾಟ ಆರಂಭಿಸಲು ಸಿದ್ದವಾಗಿದೆ. ಸೋರಿಕೆಯಾಗಿರುವ ಮಾಹಿತಿ ಪ್ರಕಾರ ಈ ಫೋನ್ 10,000 ರೂ. ಗಳಿಗಿಂತ ಕಡಿಮೆ ಬೆಲೆಯಲ್ಲಿ ಗ್ರಾಹಕರ ಕೈ ಸೇರಲಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಹಾಗಿದ್ರೆ ಇಂದಿನಿಂದ ಮಾರಾಟ ಆರಂಭಿಸಲಿರುವ ಈ ಸ್ಮಾರ್ಟ್‌ಫೋನ್ ಏನೆಲ್ಲಾ ಫೀಚರ್ಸ್ ಹೊಂದಿರಲಿದೆ ಎಂದು ತಿಳಿಯಲು ಈ ಲೇಖನ ಓದಿ.

ಲಾವಾ ಸಂಸ್ಥೆ ತನ್ನ ಯುವ ಸರಣಿಯ ಸ್ಮಾರ್ಟ್‌ಫೋನ್ ಕುರಿತು ಇತ್ತೀಚೆಗೆ ಟೀಸರ್ ಅನ್ನು ಬಿಡುಗಡೆ ಮಾಡಿತ್ತು, ಬಿಡುಗಡೆಯಾದ ಟೀಸರ್‌ ವಿಡಿಯೋದಲ್ಲಿ ಸ್ಮಾರ್ಟ್‌ಫೋನ್‌ನ ಫೀಚರ್ಸ್‌ ಹಾಗೂ ಈ ಮೊಬೈಲ್ 50MP ಕ್ಯಾಮೆರಾ ಹೊಂದಿದೆ ಮತ್ತು ಈ ಮೊಬೈಲ್ ಕೇವಲ 10,000 ರೂ. ಗಳ ಒಳಗೆ ಗ್ರಾಹಕರ ಕೈ ಸೇರಲಿದೆ ಎಂದು ಹೇಳಲಾಗಿತ್ತು.

Lava; ಇಂದಿನಿಂದ ಮಾರಾಟ ಆರಂಭಿಸಲಿದೆ ಲಾವಾ ಯುವ ಸರಣಿಯ ಸ್ಮಾರ್ಟ್‌ಫೋನ್

ಈ ಸ್ಮಾರ್ಟ್‌ಫೋನ್ ಇಂದು ಮಧ್ಯಾಹ್ನ ಅಂದರೆ ಮೇ 30 ರಂದು ಮಧ್ಯಾಹ್ನ 12 ಗಂಟೆಗೆ ತನ್ನ ಮೊದಲ ಮಾರಾಟ ಆರಂಭಿಸಲಿದೆ ಎಂದು ತಿಳಿದು ಬಂದಿದೆ. ಈ ಸ್ಮಾರ್ಟ್‌ಫೋನ್ ಪ್ರಸಿದ್ಧ ಇ ಕಾರ್ಟ್‌ ಜಾಲತಾಣವಾಗಿರುವ ಅಮೇಜಾನ್‌ ನಲ್ಲಿ ತನ್ನ ಮೊದಲ ಮಾರಾಟ ಆರಂಭಿಸುವ ಸಾಧ್ಯತೆ ಇದೆ ಎನ್ನಲಾಗಗಿದೆ. ಇದು 5G ಫೋನ್ ಆಗಿದ್ದು, ಯುವ ಬಳಕೆದಾರರನ್ನು ಸೆಳೆಯಲು ಸಿದ್ಧಪಡಿಸಲಾಗಿದೆ.

ಇದರಲ್ಲಿ 50MP ಕ್ಯಾಮೆರಾ ಇರಲಿದೆ ಎಂಬುದು ಟೀಸರ್ ನಿಂದ ದೃಢಪಟ್ಟಿದೆ. ಫೋಟೋಗ್ರಫಿ ವಿಷಯದಲ್ಲಿ ಲಾವಾ ಯುವ 5G ಕಡಿಮೆ ಬಜೆಟ್‌ನಲ್ಲಿ ಅತ್ಯುತ್ತಮ ಆಯ್ಕೆಯಾಗಿದೆ. ಇದರ ಹೊರತಾಗಿ, ಹಿಂಭಾಗದಲ್ಲಿ ಮತ್ತೊಂದು ಸೆಕೆಂಡರಿ ಲೆನ್ಸ್ ಹೊಂದಿದೆ ಆದರೆ ಅದು ಎಷ್ಟು ಮೆಗಾಪಿಕ್ಸೆಲ್ ಇರಲಿದೆ ಎಂಬುದನ್ನು ಸಂಸ್ಥೆ ಇನ್ನೂ ದೃಢಪಡಿಸಿಲ್ಲ. ಸೆಲ್ಫಿಗಾಗಿ ಇದು ಪಂಚ್ ಹೋಲ್‌ನಲ್ಲಿ 8MP ಫ್ರಂಟ್ ಕ್ಯಾಮೆರಾ ಹೊಂದಿರುತ್ತದೆ.

ಲಾವಾ ಯುವ 5G (lava Yuva 5G) ಫೀಚರ್ಸ್:
ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ ಇದು Unisoc T750 ಚಿಪ್‌ಸೆಟ್ ಅನ್ನು ಹೊಂದಿರಲಿದೆ, ಎರಡು ಕಾರ್ಟೆಕ್ಸ್ A76 ಕೋರ್‌ಗಳು (2.0GHz) ಮತ್ತು ಆರು A55 ಕೋರ್‌ಗಳೊಂದಿಗೆ (1.8GHz) ಇದು 6nm ಚಿಪ್‌ಸೆಟ್ ಹೊಂದಿರಲಿದೆ ಎಂದು ಟ್ವೀಟ್ ಬಹಿರಂಗಪಡಿಸಿದೆ. ಜೊತೆಗೆ Mali-G57 MC2 GPU ಅನ್ನು ಸಹ ಇದರಲ್ಲಿ ಸೇರಿಸಲಾಗಿದೆ. ಇದು 6100+ ಡೈಮೆನ್ಸಿಟಿ ಹೊಂದಿರಲಿದೆ, ಆದರೆ ಇದು CPU ಮತ್ತು GPU ಮೀಡಿಯಾ ಟೆಕ್ ಚಿಪ್‌ಗಿಂತ ಕಡಿಮೆ ಸಮಯದಲ್ಲಿ ಕಾರ್ಯನಿರ್ವಹಿಸುತ್ತವೆ. 5,000mAh ನಷ್ಟು ದೊಡ್ಡದಾದ ಬ್ಯಾಟರಿಯನ್ನು ಈ ಸ್ಮಾರ್ಟ್‌ಫೋನ್‌ನಲ್ಲಿ ಕಾಣಬಹುದು. ಬೆಲೆಯ ಬಗ್ಗೆ ಹೇಳುವುದಾದರೆ ಇದು 10,000 ರೂ.ಗಿಂತ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಗ್ರಾಹಕರ ಕೈ ಸೇರಲಿದೆ ಎನ್ನಲಾಗುತ್ತಿದೆ.

ಈ 5G ಫೋನ್ ಅನ್ನು ಗೀಕ್‌ಬೆಂಚ್‌ನಲ್ಲಿ ಮಾಡೆಲ್ ಸಂಖ್ಯೆ LXX513 ನೊಂದಿಗೆ ಗುರುತಿಸಲಾಗಿದೆ, ಗೀಕ್‌ಬೆಂಚ್‌ ಈ ಸ್ಮಾರ್ಟ್‌ಫೋನ್‌ನ ಕೆಲವು ವಿಶೇಷತೆಗಳನ್ನು ಸಹ ಬಹಿರಂಗಪಡಿಸಿದೆ. ಬಹಿರಂಗಪಡಿಸಿದ ಮಾಹಿತಿಯ ಪ್ರಕಾರ, ಈ ಫೋನ್ ಆಂಡ್ರಾಯ್ಡ್ 14 ರಲ್ಲಿ ಕಾರ್ಯನಿರ್ವಹಿಸಲಿದೆ. ಇದರಲ್ಲಿ 6GB ಅಥವಾ 8GB RAM ಅನ್ನು ಒದಗಿಸುವ ನಿರೀಕ್ಷೆ ಇದೆ. ಅಲ್ಲದೆ, ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಶನ್ ಚಿಪ್‌ಸೆಟ್‌ ಹೊಂದಿರುವ ನಿರೀಕ್ಷೆಯಿದೆ. ಈ ಮೊಬೈಲ್‌ ಕುರಿತಾದ ಇನ್ನು ಹೆಚ್ಚಿನ ಮಾಹಿತಿಗಳು ಅಧಿಕೃತವಾಗಿ ಮಾರುಕಟ್ಟೆಯಲ್ಲಿ ದೊರೆತ ಬಳಿಕವಷ್ಟೇ ತಿಳಿಯಬೇಕಿದೆ

Best Mobiles in India

English summary
The Lava Yuva 5G mobile is all set to go on sale in India from today. According to the leaked information, this phone is priced at Rs 10,000. Information has come to know that it will reach the hands of customers at a lower price
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+