Home
ಮೊಬೈಲ್

ಬರೀ 6000 ರೂ.! 5000mAh ಬ್ಯಾಟರಿ.. 6.7 ಇಂಚಿನ ಡಿಸ್‌ಪ್ಲೇ.. ಸದ್ದಿಲ್ಲದೆ ಹೊಸ Lava ಫೋನ್ ಲಾಂಚ್

ಲಾವಾ ಸದ್ದಿಲ್ಲದೇ ಹೊಸ ಫೋನನ್ನು ಬಿಡುಗಡೆ ಮಾಡಿದೆ. ಈ ಮೂಲಕ ತನ್ನ 'Yuva' ಸರಣಿಯನ್ನು ವಿಸ್ತರಿಸಿದೆ. ಹೌದು, ದೇಶೀಯ ಸ್ಮಾರ್ಟ್‌ಫೋನ್ ತಯಾರಕ ಕಂಪನಿಯು ಲಾವಾ ಯುವ ಸ್ಮಾರ್ಟ್ (Lava Yuva Smart) ಅನ್ನು ಭಾರತದಲ್ಲಿ ಅನಾವರಣಗೊಳಿಸಿದೆ. ಈ ಸ್ಮಾರ್ಟ್‌ಫೋನ್ ಕೈಗೆಟುಕುವ ಬೆಲೆಯಲ್ಲಿ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ವಿಶೇಷವೆಂದರೆ, ಇತ್ತೀಚೆಗೆ ಬಿಡುಗಡೆಯಾದ ಯುವ 2 5G ಯಶಸ್ಸಿನ ಬಳಿಕ ಯುವ ಸ್ಮಾರ್ಟ್ ಫೋನನ್ನು ಪರಿಚಯಿಸಲಾಗಿದೆ. ಈ ಹೊಸ ಮೊಬೈಲ್ ಬೊಂಬಾಟ್ ಬ್ಯಾಟರಿ, ಡ್ಯುಯಲ್ ಕ್ಯಾಮೆರಾ ಮತ್ತು ಸ್ಟೈಲಿಶ್ ವಿನ್ಯಾಸ ಒಳಗೊಂಡಿದೆ.

ಲಾವಾ ಯುವ ಸ್ಮಾರ್ಟ್ ಮೊಬೈಲ್ ಅತ್ಯಂತ ಅಗ್ಗದೆ ಬೆಲೆಗೆ ಬಿಡುಗಡೆಯಾಗಿದೆ. ಈ ಫೋನಿನಲ್ಲಿ ಡ್ಯುಯಲ್ ಎಐ ಕ್ಯಾಮೆರಾ ಸೆಟಪ್ ಲಭ್ಯವಿದೆ. ಇದು Unisoc 9863A ಆಕ್ಟಾಕೋರ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಫೋನ್ 6.75 ಇಂಚಿನ ಡಿಸ್ಪ್ಲೇ ಹೋಂದಿದೆ. ಜೊತೆಗೆ 3GB RAM, 64GB ಸ್ಟೋರೇಜ್, 5000mAh ಬ್ಯಾಟರಿ ಮತ್ತು 10W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಹೊಸ ಫೋನಿನ ಬೆಲೆ ಮತ್ತು ಲಭ್ಯತೆ ತಿಳಿಯಲು ಮುಂದೆ ಓದಿ.

ಜಸ್ಟ್ 6000 ರೂ.! ಸದ್ದಿಲ್ಲದೆ Lava Yuva Smart ಲಾಂಚ್.. ವಿಶೇಷತೆಗಳೇನು?

ಲಾವಾ ಯುವ ಸ್ಮಾರ್ಟ್ ಬೆಲೆ ಮತ್ತು ಲಭ್ಯತೆ

ಲಾವಾ ಯುವ ಸ್ಮಾರ್ಟ್ ಫೋನನ್ನು ಕೇವಲ 6,000 ರೂ.ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಅಗ್ಗದ ದರದಲ್ಲಿ ಹೊಸ ಮೊಬೈಲ್ ಖರೀದಿಸುವವರಿಗೆ ಉತ್ತಮ ಆಯ್ಕೆಯಾಗಿದೆ. ಈ ಫೋನ್ ಮೂರು ಬಣ್ಣಗಳಲ್ಲಿ ಬರುತ್ತದೆ. ನೀವು ನೀಲಿ, ಬಿಳಿ ಮತ್ತು ಲ್ಯಾವೆಂಡರ್ ಬಣ್ಣಗಳಲ್ಲಿ ಖರೀದಿಸಬಹುದು. ಕಂಪನಿಯು 1 ವರ್ಷದ ವಾರಂಟಿ ನೀಡುವುದಾಗಿ ಹೇಳಿದೆ.

ಲಾವಾ ಯುವ ಸ್ಮಾರ್ಟ್ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಲಾವಾ ಯುವ ಸ್ಮಾರ್ಟ್ ಫೋನ್ 6.75 ಇಂಚಿನ ಎಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು 720 x 1600 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 60Hz ರಿಫ್ರೆಶ್ ದರದ ಬೆಂಬಲ ಪಡೆದಿದೆ. ಈ ಡಿಸ್ಪ್ಲೇ ವಿಡಿಯೋ ವೀಕ್ಷಿಸಲು ಮತ್ತು ವೆಬ್ ಬ್ರೌಸಿಂಗ್‌ಗೆ ಸೂಕ್ತವಾಗಿದೆ. ಈ ಫೋನಿನ ಡಿಸೈನ್ ಆಕರ್ಷಕ ಮತ್ತು ಪ್ರೀಮಿಯಂ ಲುಕ್ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಹೊಸ ಲಾವಾ ಯುವ ಸ್ಮಾರ್ಟ್ ಮೊಬೈಲ್ ಯುನಿಸೊಕ್ 9863A ಆಕ್ಟಾಕೋರ್ ಪ್ರೊಸೆಸರ್‌ ಹೊಂದಿದೆ. ಇದು ಅಗ್ಗದ ಬೆಲೆಯಲ್ಲಿ ವಿಶ್ವಾಸಾರ್ಹ ಕಾರ್ಯಕ್ಷಮತೆ ನೀಡುತ್ತದೆ. ಈ ಲಾವಾ ಯುವ ಸ್ಮಾರ್ಟ್ ಫೋನ್ ಆಂಡ್ರಾಯ್ಡ್ 14 ಗೋ ಆವೃತ್ತಿಯಲ್ಲಿ ಕೆಲಸ ನಿರ್ವಹಿಸುತ್ತದೆ.

ಸ್ಟೋರೇಜ್ ಆಯ್ಕೆ

ಲಾವಾ ಯುವ ಸ್ಮಾರ್ಟ್ ಸ್ಮಾರ್ಟ್‌ಫೋನ್ 3GB ಮತ್ತು 3GB ವರ್ಚುವಲ್ RAM ಅನ್ನು ಹೊಂದಿದೆ. ಜೊತೆಗೆ, ಈ ಫೋನ್ 64GB ಸ್ಟೋರೇಜ್ ಆಯ್ಕೆ ಹೊಂದಿದೆ. ನೀವು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 512GB ವರೆಗೆ ಸ್ಟೋರೇಜ್ ವಿಸ್ತರಿಸಬಹುದು.

ಕ್ಯಾಮೆರಾ ಸೆಟಪ್

ನೂತನ ಲಾವಾ ಯುವ ಸ್ಮಾರ್ಟ್‌ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 13 ಮೆಗಾಪಿಕ್ಸೆಲ್ ಎಐ (AI) ಪ್ರಾಥಮಿಕ ಕ್ಯಾಮೆರಾ ಲಭ್ಯವಿದೆ. ಜೊತೆಗೆ ಎಐ ವೈಶಿಷ್ಟ್ಯಗಳೊಂದಿಗೆ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 5 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ. ಇದು ಸ್ಕ್ರೀನ್ ಫ್ಲ್ಯಾಶ್ ಹೊಂದಿದ್ದು, ಕಡಿಮೆ ಬೆಳಕಿನಲ್ಲೂ ಉತ್ತಮ ಸೆಲ್ಫಿ ಕ್ಲಿಕ್ಕಿಸಬಹುದು.

ಬ್ಯಾಟರಿ ಮತ್ತು ಚಾರ್ಜಿಂಗ್

ಲಾವಾ ಯುವ ಸ್ಮಾರ್ಟ್‌ ಮೊಬೈಲ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ದಿನವಿಡೀ ಬ್ಯಾಕಪ್ ನಿಡುತ್ತದೆ. ಈ ಫೋನ್ 10W ಟೈಪ್ ಸಿ ವೇಗದ ಚಾರ್ಜಿಂಗ್ ಸೌಲಭ್ಯ ಹೊಂದಿದೆ.

ಇತರೆ ವೈಶಿಷ್ಟ್ಯಗಳು

ಲಾವಾ ಯುವ ಸ್ಮಾರ್ಟ್‌ ಫೋನ್ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಫೇಸ್ ಅನ್‌ಲಾಕ್‌ ವೈಶಿಷ್ಟ್ಯಗಳನ್ನು ಹೊಂದಿದೆ. ಇದಲ್ಲದೆ, ಈ ಮೊಬೈಲ್ ಮೊನೊ ಸ್ಪೀಕರ್‌ ಒಳಗೊಂಡಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್, ವೈ-ಫೈ ಸೇರಿದಂತೆ ಹಲವು ವೈಶಿಷ್ಟ್ಯಗಳು ಲಭ್ಯವಿದೆ.

Best Mobiles in India

English summary
Lava Yuva Smart with 6.75 display, 5000mAh battery launched in India, price set at Rs 6000
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+