Home
ಮೊಬೈಲ್

7,499 ರೂ.ಗೆ 5,000mAh ಬ್ಯಾಟರಿಯ ಹೊಸ Lava ಫೋನ್ ಬಿಡುಗಡೆ!

ಭಾರತೀಯ ಬಜೆಟ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮತ್ತೊಂದು ಹೊಸ ಆಯ್ಕೆ ಸೇರ್ಪಡೆಯಾಗಿದೆ. ದೇಶೀಯ ಬ್ರ್ಯಾಂಡ್ ಆಗಿರುವ Lava ತನ್ನ Yuva ಸರಣಿಯಲ್ಲಿ ಹೊಸ Lava Yuva Star 3 ಅನ್ನು ಪರಿಚಯಿಸಿದೆ. ಕಡಿಮೆ ಬೆಲೆಯಲ್ಲೇ ದೊಡ್ಡ ಪರದೆ, ದೀರ್ಘಕಾಲಿಕ ಬ್ಯಾಟರಿ ಮತ್ತು ಆಧುನಿಕ ವಿನ್ಯಾಸ ನೀಡುವ ಮೂಲಕ ಈ ಫೋನ್ ವಿದ್ಯಾರ್ಥಿಗಳು, ಮೊದಲ ಬಾರಿಗೆ ಸ್ಮಾರ್ಟ್‌ಫೋನ್ ಖರೀದಿಸುವವರು ಮತ್ತು ದೈನಂದಿನ ಸರಳ ಬಳಕೆದಾರರನ್ನು ಗುರಿಯಾಗಿಸಿಕೊಂಡಿದೆ. ಹಾಗಾದರೆ, ಹೊಸ Lava Yuva Star 3 ಸ್ಮಾರ್ಟ್‌ಫೋನ್ ಹೇಗಿದೆ?, ಬೆಲೆ ಎಷ್ಟು ಎಂಬುದನ್ನು ನೋಡೋಣ ಬನ್ನಿ.

Lava Yuva Star 3: ಬೆಲೆ ಮತ್ತು ಲಭ್ಯತೆ
ದೇಶದಲ್ಲಿ Lava Yuva Star 3 ಫೋನ್ 4GB RAM + 64GB ಸ್ಟೋರೇಜ್ ಮಾದರಿಯಲ್ಲಿ ರೂ. 7,499 ಕ್ಕೆ ಪರಿಚಯಗೊಂಡಿದೆ. Indus Black ಮತ್ತು Siachen White ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿರುವ ಈ ಫೋನ್ ಇದು ಮಾರ್ಚ್ ತಿಂಗಳಿಂದ ಆಫ್‌ಲೈನ್ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಬರುತ್ತಿದ್ದು, ಕಂಪನಿಯು ಒಂದು ವರ್ಷದ ವಾರಂಟಿ ಜೊತೆಗೆ ಮನೆಬಾಗಿಲಿಗೆ ಸೇವೆ ಒದಗಿಸುತ್ತಿರುವುದಾಗಿ ಘೋಷಿಸಿದೆ. ಸಣ್ಣ ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳ ಬಳಕೆದಾರರಿಗೆ ಇದು ಪ್ರಮುಖ ಲಾಭವಾಗಬಹುದು.

Lava Yuva Star 3: ಪ್ರಮುಖ ವೈಶಿಷ್ಟ್ಯಗಳು
Lava Yuva Star 3 ಸ್ಮಾರ್ಟ್‌ಫೋನ್ 6.75 ಇಂಚಿನ HD+ ಡಿಸ್‌ಪ್ಲೇ ಹೊಂದಿದ್ದು, 90Hz ರಿಫ್ರೆಶ್ ರೇಟ್ ನೀಡುತ್ತದೆ. ಇದರಿಂದ ಸಾಮಾಜಿಕ ಜಾಲತಾಣ ಸ್ಕ್ರೋಲಿಂಗ್, ವೀಡಿಯೊ ವೀಕ್ಷಣೆ ಮತ್ತು ಸಾಮಾನ್ಯ ಬಳಕೆ ಹೆಚ್ಚು ಸೂಕ್ತವಾಗಿರುತ್ತದೆ. Android 15 Go Edition ಆಧಾರಿತ ಸಾಫ್ಟ್‌ವೇರ್ ಹೊಂದಿರುವುದರಿಂದ ಕಡಿಮೆ ಮೆಮೊರಿಯಲ್ಲೂ ಹಗುರ ಮತ್ತು ವೇಗವಾದ ಅನುಭವ ನೀಡಲು ಸಹಾಯಕವಾಗಿದೆ.

ಕಾರ್ಯಕ್ಷಮತೆ ವಿಭಾಗದಲ್ಲಿ Unisoc SC9863A ಆಕ್ಟಾ-ಕೋರ್ ಪ್ರೊಸೆಸರ್ ನೀಡಲಾಗಿದೆ. ದಿನನಿತ್ಯದ ಅಪ್ಲಿಕೇಶನ್‌ಗಳು, ಆನ್‌ಲೈನ್ ತರಗತಿಗಳು, ವಾಟ್ಸಾಪ್, ಯೂಟ್ಯೂಬ್ ಮತ್ತು ಲೈಟ್ ಗೇಮಿಂಗ್‌ಗಾಗಿ ಇದು ಸೂಕ್ತವಾಗಿದೆ. 4GB RAM ಜೊತೆಗೆ ವರ್ಚುವಲ್ RAM ವೈಶಿಷ್ಟ್ಯವಿದ್ದು, ಅಗತ್ಯವಿದ್ದರೆ ಮೆಮೊರಿಯನ್ನು 8GB ವರೆಗೆ ವಿಸ್ತರಿಸಬಹುದು. 64GB ಆಂತರಿಕ ಸ್ಟೋರೇಜ್ ಇರುವುದು ಸ್ವಲ್ಪ ಕಡಿಮೆ ಎನಿಸುತ್ತಿದೆ.

7,499 ರೂ.ಗೆ 5,000mAh ಬ್ಯಾಟರಿಯ ಹೊಸ Lava ಫೋನ್ ಬಿಡುಗಡೆ!

ಕ್ಯಾಮೆರಾ ವಿಭಾಗದಲ್ಲಿ 13 ಮೆಗಾಪಿಕ್ಸೆಲ್ AI ಬೆಂಬಲಿತ ಹಿಂಬದಿ ಕ್ಯಾಮೆರಾ ನೀಡಲಾಗಿದೆ. ಉತ್ತಮ ಬೆಳಕಿನಲ್ಲಿ ಸ್ಪಷ್ಟ ಚಿತ್ರಗಳನ್ನು ಪಡೆಯಲು ಇದು ಸಹಾಯಕವಾಗುತ್ತದೆ ಎಂದು ಕಂಪೆನಿಯು ಹೇಳಿಕೊಂಡಿದೆ. ಸೆಲ್ಫಿ ಮತ್ತು ವೀಡಿಯೊ ಕರೆಗಳಿಗೆ 5 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಇದೆ. IP64 ರೇಟಿಂಗ್ ಇರುವುದರಿಂದ ಧೂಳು ಮತ್ತು ಸಣ್ಣ ಪ್ರಮಾಣದ ನೀರಿನ ಸಿಂಪಡಣೆಗಳಿಂದ ರಕ್ಷಣೆ ಸಿಗುತ್ತದೆ, ಇದು ಬಜೆಟ್ ವಿಭಾಗದಲ್ಲಿ ಗಮನಾರ್ಹ ವೈಶಿಷ್ಟ್ಯವಾಗಿದೆ.

5,000mAh ಸಾಮರ್ಥ್ಯದ ಬ್ಯಾಟರಿ ಈ ಫೋನ್‌ನ ಪ್ರಮುಖ ಹೈಲೈಟ್ ಆಗಿದೆ. ಸಾಮಾನ್ಯ ಬಳಕೆಯಲ್ಲಿ ಒಂದು ದಿನಕ್ಕಿಂತ ಹೆಚ್ಚು ಬ್ಯಾಟರಿ ಬ್ಯಾಕಪ್ ನಿರೀಕ್ಷಿಸಬಹುದು. ಇನ್ನು ಇದಕ್ಕೆ10W ಚಾರ್ಜಿಂಗ್ ಬೆಂಬಲವಿದೆ. Wi-Fi, Bluetooth 4.2, USB Type-C ಪೋರ್ಟ್ ಮತ್ತು 3.5mm ಆಡಿಯೋ ಜಾಕ್ ಸೇರಿದಂತೆ ಅಗತ್ಯವಿರುವ ಎಲ್ಲಾ ಮೂಲಭೂತ ಸಂಪರ್ಕ ಆಯ್ಕೆಗಳು ಲಭ್ಯವಿವೆ. ಜೊತೆಗೆ ಫಿಂಗರ್‌ಪ್ರಿಂಟ್ ಸೆನ್ಸರ್ ಸುರಕ್ಷತೆಯನ್ನು ಹೆಚ್ಚಿಸುತ್ತದೆ.

ಒಟ್ಟಾರೆಯಾಗಿ, Lava Yuva Star 3 ಕಡಿಮೆ ಬೆಲೆಯಲ್ಲೇ ದೊಡ್ಡ ಡಿಸ್‌ಪ್ಲೇ, ದೊಡ್ಡ ಬ್ಯಾಟರಿ ಮತ್ತು ಮೂಲಭೂತ ಭದ್ರತಾ ವೈಶಿಷ್ಟ್ಯಗಳನ್ನು ಒದಗಿಸುವ ಸ್ಮಾರ್ಟ್‌ಫೋನ್ ಆಗಿದೆ. ಬಜೆಟ್ ವಿಭಾಗದಲ್ಲಿ ವಿಶ್ವಾಸಾರ್ಹ ಭಾರತೀಯ ಬ್ರ್ಯಾಂಡ್‌ನ ಹೊಸ ಆಯ್ಕೆಯನ್ನು ಹುಡುಕುತ್ತಿರುವವರಿಗೆ ಇದು ಗಮನಿಸಬಹುದಾದ ಸ್ಮಾರ್ಟ್‌ಫೋನ್ ಎಂಬುದು ನಮ್ಮ ಅಭಿಪ್ರಾಯ.

Best Mobiles in India

English summary
Lava International has launched the Lava Yuva Star 3 in India at an affordable price of ₹7,499. The budget smartphone features 4GB RAM, 64GB storage, and a 5,000mAh battery, making it ideal for students and first-time users. It will be available in Indus Black and Siachen White color options starting March through offline stores.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+