ಜಸ್ಟ್ 6,499 ರೂ.! ಕಡಿಮೆ ಬೆಲೆಗೆ ರಾಶಿ ಫೀಚರ್ಸ್.. ಯಾವ ಫೋನ್?
Lava Yuva Star 4G Price: ನೀವು ಹೊಸ ಫೋನ್ ಖರೀದಿಸುವ ಬಯಸಿದರೆ, ನಿಮಗಿದೆ ಭರ್ಜರಿ ಸಿಹಿ ಸುದ್ದಿ. ಅದರಲ್ಲೂ ಲಾವಾ ಕಂಪನಿಯ ಮೊಬೈಲ್ ಕೊಳ್ಳುವ ಮನಸ್ಸು ಇದ್ದರೆ, ಇಲ್ಲಿದೆ ಬಂಪರ್ ಆಫರ್. ಹೌದು, ಲಾವಾ (Lava) ಕಂಪನಿಯು ಸದ್ದಿಲ್ಲದೇ ಲಾವಾ ಯುವ ಸ್ಟಾರ್ (Lava Yuva Star 4G) ಫೋನನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ಫೋನನ್ನು ಅಗ್ಗದ ಬೆಲೆಗೆ ಪರಿಚಯಿಸಲಾಗಿದೆ. ವಿಶೇಷವೆಂದರೆ, ಈ ಫೋನ್ 6,500 ರೂ.ಗಿಂತ ಕಡಿಮೆ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಹಾಗಿದ್ರೆ, ಈ ಫೋನಿನ ಬೆಲೆ, ಲಭ್ಯತೆ ಮತ್ತು ಫೀಚರ್ಸ್ ತಿಳಿಯೋಣ ಬನ್ನಿ.
ಲಾವಾ ಯುವ ಸ್ಟಾರ್ (Lava Yuva Star 4G) ಫೊನ್ 6.75 ಇಂಚಿನ HD+ ಡಿಸ್ಪ್ಲೇ, UNISOC 9863A ಚಿಪ್‌ಸೆಟ್ ಹೊಂದಿದೆ. 4GB RAM +64GB ಸ್ಟೋರೇಜ್, 4GB ವರ್ಚುವಲ್ RAM, ಡ್ಯುಯಲ್ ಎಐ (AI) ಕ್ಯಾಮೆರಾದೊಂದಿಗೆ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. 5000mAh ಬ್ಯಾಟರಿ ಸೇರಿದಂತೆ ಹಲವು ವಿಶೇಷತೆಗಳನ್ನು ಹೊಂದಿದೆ. ಈ ಫೋನನ್ನು ಕೇವಲ 6,499 ರೂ.ಗೆ ಬಿಡುಗಡೆ ಮಾಡಲಾಗಿದೆ.

ಲಾವಾ ಯುವ ಸ್ಟಾರ್ 4G ಫೋನಿನ ಬೆಲೆ ಮತ್ತು ಲಭ್ಯತೆ
ಲಾವಾ ಯುವ ಸ್ಟಾರ್ (Lava Yuva Star 4G) ಫೋನನ್ನು ಭಾರತದಲ್ಲಿ ಕೇವಲ ಒಂದು ಸ್ಟೋರೇಜ್ ಆಯ್ಕೆಯಲ್ಲಿ ಲಾಂಚ್ ಮಾಡಲಾಗಿದೆ. ಈ ಫೋನಿನ 4GB + 64GB ಸ್ಟೋರೇಜ್ ಬೆಲೆ ಕೇವಲ 6,499 ರೂ. ಆಗಿದೆ. ನೀವು ಈ ಫೋನನ್ನು ಬಿಳಿ, ಕಪ್ಪು ಮತ್ತು ಲ್ಯಾವೆಂಡರ್ ಬಣ್ಣಗಳಲ್ಲಿ ಖರೀದಿಸಬಹುದು. ಈ ಸ್ಮಾರ್ಟ್‌ಫೋನ್ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ (ಚಿಲ್ಲರೆ ಮಳಿಗೆಗಳಿಂದ) ಖರೀದಿಗೆ ಲಭ್ಯವ ಇದೆ.
ಲಾವಾ ಯುವ ಸ್ಟಾರ್ 4G ಫೋನಿನ ಫೀಚರ್ಸ್
ಡಿಸ್‌ಪ್ಲೇ: ಲಾವಾ ಯುವ ಸ್ಟಾರ್ 4G ಫೋನ್ 6.75 ಇಂಚಿನ ಎಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್ಲ್ಪೇಯು 60Hz ರಿಫ್ರೆಶ್ ದರವನ್ನು ನೀಡುತ್ತದೆ. ಇದಲ್ಲದೆ, ವಾಟರ್‌ಡ್ರಾಪ್ ನಾಚ್ ಸಹ ಇದರಲ್ಲಿ ಲಭ್ಯವಿರುತ್ತದೆ.
ಪ್ರೊಸೆಸರ್: ಪ್ರೊಸೆಸರ್ ಬಗ್ಗೆ ಬಗ್ಗೆ ಹೇಳುವುದಾದರೆ, ಲಾವಾ ಯುವ ಸ್ಟಾರ್ 4G ಫೋನ್ ಆಕ್ಟಾ ಕೋರ್ UNISOC 9863A ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು 4GB RAM ಮತ್ತು 64GB ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ. ಮೈಕ್ರೊ ಎಸ್‌ಡಿ ಕಾರ್ಡ್‌ನ ಸಹಾಯದಿಂದ ನೀವು ಈ ಫೋನಿನ ಸ್ಟೋರೇಜ್ (8 GB ವರೆಗೆ) ವಿಸ್ತರಿಸಬಹುದು.
ಕ್ಯಾಮೆರಾ: ಲಾವಾ ಯುವ ಸ್ಟಾರ್ 4G ಫೋನ್ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು ಎಲ್ಇಡಿ ಫ್ಲ್ಯಾಷ್ ಮತ್ತು ಇನ್ನೊಂದು AI ಲೆನ್ಸ್‌ನೊಂದಿಗೆ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಒಳಗೊಂಡಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 5 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.
ಬ್ಯಾಟರಿ: ಲಾವಾ ಯುವ ಸ್ಟಾರ್ 4G ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ಚಾರ್ಜ್ ಮಾಡಲು 10W ವೇಗದ ಚಾರ್ಜಿಂಗ್ ಸಫೋರ್ಟ್ ಸೌಲಭ್ಯವನ್ನು ನೀಡಲಾಗಿದೆ. ಈ ಲಾವಾ ಯುವ ಸ್ಟಾರ್ 4G ಸ್ಮಾರ್ಟ್‌ಫೋನ್ ಇತ್ತೀಚಿನ Android 14 Go ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ.
ಇತರೆ ಫೀಚರ್ಸ್: ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್, ಡ್ಯುಯಲ್ ಸಿಮ್ 4G, ವೈ-ಫೈ, ಬ್ಲೂಟೂತ್, ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, ಫೇಸ್ ಅನ್‌ಲಾಕ್ ಆಯ್ಕೆಯನ್ನು ಹೊಂದಿದೆ. ಕಡಿಮೆ ಬಜೆಟ್‌ನಲ್ಲಿ ಸ್ಮಾರ್ಟ್‌ಫೋನ್ ಖರೀದಿಸಲು ಬಯಸುವ ಗ್ರಾಹಕರಿಗೆ ಈ ಫೋನ್ ಉತ್ತಮ ಆಯ್ಕೆಯಾಗಿದೆ.
ಗಿಜ್‌ಬಾಟ್ ಕನ್ನಡ ವೆಬ್‌ಸೈಟ್ ತಂತ್ರಜ್ಞಾನ ಸಂಬಂಧಿಸಿದ ಸುದ್ದಿಗಳನ್ನು ತ್ವರಿತವಾಗಿ ನೀಡುತ್ತದೆ. ಜೊತೆಗೆ, ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚೆಗೆ ಬಿಡುಗಡೆಯಾದ ಸ್ಮಾರ್ಟ್‌ಪೋನ್, ಕಂಪ್ಯೂಟರ್, ಗ್ಯಾಡ್ಜೆಟ್‌ಗಳ ಮತ್ತು ಆನ್‌ಲೈನ್ ಜಗತ್ತಿನ ಕ್ಷಣ-ಕ್ಷಣದ ಸುದ್ದಿ, ವಿಡಿಯೋಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಎಕ್ಸ್ ಖಾತೆ, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ತಪ್ಪದೇ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








