3GB RAM ಹೊಂದಿರುವ ಲಾವಾ Z10 ಸ್ಮಾರ್ಟ್‌ಫೋನಿನೊಂದಿಗೆ ಭರ್ಜರಿ ಆಫರ್
ಸದ್ಯ ಮಾರುಕಟ್ಟೆಯಲ್ಲಿ ಇಷ್ಟು ಗುಣಲಕ್ಷಣಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್‌ನನ್ನ ಇಷ್ಟು ಕಡಿಮೆ ಬೆಲೆಗೆ ಯಾರು ನೀಡುವುದಿಲ್ಲ ಎನ್ನಲಾಗಿದೆ.
ಇಂದು ಭಾರತೀಯ ಸ್ಮಾರ್ಟ್‌ಪೋನ್ ಮಾರುಕಟ್ಟೆಯೂ ಹೆಚ್ಚು ವಿಸ್ತಾರವನ್ನು ಹೊಂದಿದ್ದು, ಜಿಯೋ ಸೇವೆಯನ್ನು ಆರಂಭಿಸಿದ ನಂತರದಲ್ಲಿ ಹೊಸ ಸ್ಮಾರ್ಟ್‌ಫೋನ್ ಕೊಳ್ಳುವ ಗ್ರಾಹಕರ ಸಂಖ್ಯೆ ಹೆಚ್ಚಿದೆ ಈ ಹಿನ್ನಲೆಯಲ್ಲಿ ತಿಂಗಳಿಗೆ ಕನಿಷ್ಠ 5 ಸ್ಮಾರ್ಟ್‌ಫೋನ್‌ಗಳು ಹೊಸದಾಗಿ ಲಾಂಚ್ ಆಗುತ್ತಿವೆ. ಇದೇ ಸಾಲಿಗೆ ಸೇರಲಿದೆ. ಲಾವಾ Z10 ಸ್ಮಾರ್ಟ್‌ಫೋನ್.

ಓದಿರಿ: ದೇಶದಲ್ಲಿ ಮೊದಲಿಗೆ BSNLನಿಂದ ಸ್ಯಾಟಿಲೈಟ್ ಫೋನ್ ಸೇವೆ: ಪ್ರತಿ ನಿಮಿಷಕ್ಕೆ ವಿಧಿಸುವ ದರ ಕೇಳಿದ್ರೆ ಶಾಕ್ ಆಗ್ತೀರ..!
ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟ ಮತ್ತು ಹೆಚ್ಚಿನ ಆಯ್ಕೆಗಳಿರುವ ಫೋನ್‌ಗಳು ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿವೆ, ಇದೇ ಮಾನದಂಡವಿಟ್ಟುಕೊಂಡ ಅನೇಕ ಪೋನ್‌ಗಳು ಇಂದು ಕಾಣಸಿಗುತ್ತಿವೆ ಇದೇ ಮಾದರಿಯ ಫೋನ್ ಲಾವಾ Z10.

ಹೊಸ ಆಫರ್ ನೀಡಿದ ಲಾವಾ:
ಮಾರುಕಟ್ಟೆಯಲ್ಲಿ ಸಣ್ಣ ಫೋನ್‌ಗಳಿಂದಲೇ ಗುರುತಿಸಿಕೊಂಡಿರುವ ಲಾವಾ ಹೊಸದಾಗಿ ಬಿಡುಗಡೆ ಮಾಡಿರುವ ಲಾವಾ Z10 ಜೊತೆಗೆ ಹೊಸದೊಂದು ಆಫರ್ ನೀಡಿದೆ. ಒಂದು ವರ್ಷ ಸ್ಕ್ರಿನ್ ರಿಪ್ಲೇಸ್ ಮೆಂಟ್ ಆಫರ್ ನೀಡಿದೆ. ಒಂದು ವರ್ಷದಲ್ಲಿ ಡಿಸ್‌ಪ್ಲೇ ಒಡೆದುಹೊಂದರೆ ಹೊಸ ಡಿಸ್‌ಪ್ಲೇ ಹಾಕಿಕೊಡಲಿದೆ. ಅಲ್ಲದೇ 30 ದಿನಗಳ ರಿಪ್ಲೇಸ್‌ಮೆಂಟ್ ಪಾಲಸಿಯನ್ನು ನೀಡಿದೆ.

ಲಾವಾ Z10 ವಿಶೇಷತೆಗಳು:
ಲಾವಾ Z10 ಫೋನಿನಲ್ಲಿ 5.5 ಇಂಚಿನ HD ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಅಲ್ಲದೇ ಇದಕ್ಕೆ 2.5D ಕರ್ವಡ್ ಗ್ಲಾಸ್ ಸುರಕ್ಷೆಯನ್ನು ನೀಡಲಾಗಿದೆ, ಅಲ್ಲದೇ ಆಕ್ಡಾ ಕೋರ್ ಪ್ರೋಸೆಸರ್ ಅನ್ನು ಈ ಫೋನ್ ಹೊಂದಿದೆ. 3GB RAM ಈ ಫೋನಿನಲ್ಲಿದ್ದು, ವೇಗದ ಕಾರ್ಯಚರಣೆಗೆ ಸಹಾಯಕಾರಿಯಾಗಲಿದೆ.

ಲಾವಾ Z10 ಗುಣಲಕ್ಷಣಗಳು:
ಈ ಫೋನಿನಲ್ಲಿ 16GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ. ಇದಲ್ಲದೇ 128GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವನ್ನು ಇದು ಮಾಡಿಕೊಡಲಿದೆ. ಅಲ್ಲದೇ ಆಂಡ್ರಾಯ್ಡ್ 6.0ದಲ್ಲಿ ಕಾರ್ಯನಿರ್ವಹಸಲಿದೆ. ಹಿಂಭಾಗದಲ್ಲಿ 8MP ಕ್ಯಾಮೆರಾವನ್ನು ಕಾಣಬಹುದಾಗಿದೆ, ಮುಂಭಾಗದಲ್ಲಿ 5 MP ಕ್ಯಾಮೆರಾ ನೀಡಲಾಗಿದೆ. 4G VoLET ಸಪೋರ್ಟ್ ಮಾಡಲಿದೆ.

ಲಾವಾ Z10 ಬೆಲೆ:
3GB RAM ಹೊಂದಿರುವ ಲಾವಾ Z10 ಸ್ಮಾರ್ಟ್‌ಫೋನಿನ ಬೆಲೆ ರೂ. 11,500 ಆಗಿದೆ. ಸದ್ಯ ಮಾರುಕಟ್ಟೆಯಲ್ಲಿ ಇಷ್ಟು ಗುಣಲಕ್ಷಣಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್‌ನನ್ನ ಇಷ್ಟು ಕಡಿಮೆ ಬೆಲೆಗೆ ಯಾರು ನೀಡುವುದಿಲ್ಲ ಎನ್ನಲಾಗಿದೆ.


Click it and Unblock the Notifications