ಲಾವಾ Z50 ಆಂಡ್ರಾಯ್ಡ್ ಗೋ(ಒರಿಯೊ) ಸ್ಮಾರ್ಟ್‌ಫೋನ್‌: ಏರ್‌ಟೆಲ್‌ನಿಂದ 2000 ಕ್ಯಾಷ್ ಬ್ಯಾಕ್..!

|

ಬಾರ್ಸಿಲೊನದಲ್ಲಿ ನಡೆಯುತ್ತಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಸಮಾವೇಶದಲ್ಲಿ ಬಜೆಟ್‌ ಬೆಲೆಯ ಲಾವಾ ಆಂಡ್ರಾಯ್ಡ್ ಗೋ ಸ್ಮಾರ್ಟ್‌ಫೋನ್‌ ಲಾಂಚ್ ಆಗಿದ್ದು, ಲಾವಾ Z50 ಎಂದು ಈ ಸ್ಮಾರ್ಟ್‌ಫೋನಿಗೆ ನಾಮಕರಣವನ್ನು ಮಾಡಲಾಗಿದೆ. ಮಾರ್ಚ್ ತಿಂಗಳಿನಲ್ಲಿ ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ಪ್ರವೇಶಿಸಲಿದ್ದು, ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಬದಲಾವಣೆಗೆ ಕಾರಣವಾಗಲಿದೆ.

ಲಾವಾ Z50 ಆಂಡ್ರಾಯ್ಡ್ ಗೋ(ಒರಿಯೊ) ಸ್ಮಾರ್ಟ್‌ಫೋನ್‌

ಈಗಾಗಲೇ ಮೈಕ್ರೊಮ್ಯಾಕ್ಸ್ ಮತ್ತು ನೋಕಿಯಾ ಕಂಪನಿಗಳು ತಮ್ಮ ಆಂಡ್ರಾಯ್ಡ್ ಗೋ(ಒರಿಯೋ ಆವೃತ್ತಿ) ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯ ಮಾಡಿದ್ದು, ಮುಂದಿನ ತಿಂಗಳಿನಿಂದ ಮಾರುಕಟ್ಟೆಯಲ್ಲಿ ಸದ್ದು ಮಾಡಲಿವೆ, ಆದರೆ ಈ ಮೂರು ಕಂಪನಿಗಳ ಸ್ಮಾರ್ಟ್‌ಫೋನ್‌ಗಳ ಬೆಲೆಯೂ ತಿಳಿದುಬಂದಿಲ್ಲ.

ಲಾವಾ Z50 ಸ್ಮಾರ್ಟ್‌ಫೋನ್ ವಿಶೇಷತೆ:

ಲಾವಾ Z50 ಸ್ಮಾರ್ಟ್‌ಫೋನ್ ವಿಶೇಷತೆ:

ಲಾವಾ Z50 ಸ್ಮಾರ್ಟ್‌ಫೋನ್ ನಲ್ಲಿ 4.5 ಇಂಚಿನ FWVGA ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಅಲ್ಲದೇ ಇದಕ್ಕೆ 2.5D ಕಾರ್ನಿಂಗ್ ಗೊರಿಲ್ಲ ಗ್ಲಾಸ್ ಸುರಕ್ಷತೆಯನ್ನು ಅಳವಡಿಸಲಾಗಿದೆ.

ಮೀಡಿಯಾ ಟೆಕ್ ಪ್ರೋಸೆಸರ್:

ಮೀಡಿಯಾ ಟೆಕ್ ಪ್ರೋಸೆಸರ್:

ಇದಲ್ಲದೇ ಲಾವಾ Z50 ಸ್ಮಾರ್ಟ್‌ಫೋನ್ ನಲ್ಲಿ 1.1GHz ಮೀಡಿಯಾ ಟೆಕ್ MT6737M ಪ್ರೋಸೆಸರ್ ಅನ್ನು ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ ನಲ್ಲಿ 1GB RAM ಮತ್ತು 8 GB ಇಂಟರ್ನೆಲ್ ಮೆಮೊರಿಯನ್ನು ಕಾಣಬಹುದು ಎನ್ನಲಾಗಿದೆ. ಅಲ್ಲದೇ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದಾಗಿದೆ.

5MP ಕ್ಯಾಮೆರಾವನ್ನು ನೋಡಬಹುದು:

5MP ಕ್ಯಾಮೆರಾವನ್ನು ನೋಡಬಹುದು:

ಲಾವಾ Z50 ಸ್ಮಾರ್ಟ್‌ಫೋನ್ ನಲ್ಲಿ ಹಿಂಭಾಗ ಮತ್ತು ಮುಂಭಾಗದಲ್ಲಿ 5MP ಕ್ಯಾಮೆರಾವನ್ನು ಕಾಣಬಹುದಾಗಿದ್ದು, ಬಳಕೆದಾರರಿಗೆ ಉತ್ತಮ ಚಿತ್ರಗಳನ್ನು ಸೆರೆಹಿಡಿಯಲು ಸಹಾಯಕಾರಿಯಾಗಲಿದೆ.

10 ಭಾಷೆಗಳಿಗೆ ಸಫೋರ್ಟ್:

10 ಭಾಷೆಗಳಿಗೆ ಸಫೋರ್ಟ್:

ದೇಶದ 10 ಭಾಷೆಗಳಿಗೆ ಲಾವಾ Z50 ಸ್ಮಾರ್ಟ್‌ಫೋನ್ ಸಪೋರ್ಟ್ ಮಾಡಲಿದೆ. ಇದಲ್ಲದೇ ಒಟ್ಟು ಎರಡು ಬಣ್ಣದಲ್ಲಿ ದೊರೆಯಲಿದೆ. ಬ್ಲಾಕ್ ಮತ್ತು ಗೊಲ್ಡ್‌ ಬಣ್ಣಗಳಲ್ಲಿ ಲಭ್ಯವಿರಲಿದೆ.

ಏರ್‌ಟೆಲ್ ಕ್ಯಾಷ್ ಬ್ಯಾಕ್:

ಏರ್‌ಟೆಲ್ ಕ್ಯಾಷ್ ಬ್ಯಾಕ್:

ಈ ಸ್ಮಾರ್ಟ್‌ಫೋನ್ ಬೆಲೆ ಇನ್ನು ತಿಳಿದಿಲ್ಲವಾದರೂ ಸಹ ಏರ್‌ಟೆಲ್ ರೂ.2000 ಕ್ಯಾಷ್ ಬ್ಯಾಕ್ ಆಫರ್ ಘೋಷಣೆ ಮಾಡಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಕಡಿಮೆ ಬೆಲೆಗೆ ದೊರೆಯುವ ಸ್ಮಾರ್ಟ್‌ಫೋನಿಗೆ ಬೊಂಬಾಟ್ ಆಫರ್ ಲಭ್ಯವಿದೆ.

Best Mobiles in India

English summary
Lava Z50 Android Go smartphone announced; India launch slated for March. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X