Home
ಮೊಬೈಲ್

iPhone 17 Air: ಕೈಗೆಟುಕುವ ಬೆಲೆ, ಸ್ಲಿಮ್ ಡಿಸೈನ್ ಪಕ್ಕಾ!..ಆದರೆ ಒಂದು ಟ್ವಿಸ್ಟ್ ಇದೆ!

ಆಪಲ್‌ನ ಮುಂಬರುವ iPhone 17 ಸರಣಿಯಲ್ಲಿ iPhone 17 Air ಅತಿ ಹೆಚ್ಚು ಕುತೂಹಲ ಮೂಡಿಸಿದ ಫೋನ್ ಮಾದರಿಯಾಗಿದೆ. ಈ ಹೊಸ ಫೋನ್, iPhone 16 Plus ಅನ್ನು ಬದಲಾಯಿಸುವ ಉದ್ದೇಶದಿಂದ ಬಂದಿದೆ ಎಂದು ಹೇಳಲಾಗಿದ್ದು, ಸ್ಲಿಮ್ ಮತ್ತು ಹಗುರವಾದ ವಿನ್ಯಾಸವನ್ನು ಹೊಂದುವ ಮೂಲಕ ಬಳಕೆದಾರರನ್ನು ಆಕರ್ಷಿಸುವ ಗುರಿ ಹೊಂದಿದೆ. ಈಗಾಗಲೇ ಈ ಫೋನಿನ ಕೆಲವು ವೈಶಿಷ್ಟ್ಯಗಳು ಮತ್ತು ಬದಲಾವಣೆಗಳು ಸೋರಿಕೆಯಾಗಿವೆ. ಆದರೆ, ಹೊಸ ಮಾಹಿತಿಯ ಪ್ರಕಾರ, iPhone 17 Air ಕೆಲವು ಪ್ರಮುಖ ಹಾರ್ಡ್‌ವೇರ್ ಡೌನ್‌ಗ್ರೇಡ್‌ಗಳನ್ನು ಹೊಂದುವ ಸಾಧ್ಯತೆ ಇದೆ.!

ಹೌದು, ವಿಶ್ವಾಸಾರ್ಹ ಮಾಹಿತಿ ಮೂಲವಾದ Fixed Focus Digital ಪ್ರಕಾರ, iPhone 17 Air ಮಾದರಿಯು Pro ಮಾದರಿಗಳಿಗಿಂತ ಕೆಲವು ಪ್ರಮುಖ ಅಂಶಗಳಲ್ಲಿ ಹಿಂದುಳಿಯಬಹುದು. ಈ ಹೊಂದಾಣಿಕೆಗಳು ಫೋನ್‌ನ ಬೆಲೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವಾದರೂ, ಫೋನ್‌ ಅನ್ನು ಅತಿ ಹೆಚ್ಚು ಬಳಸುವ ಬಳಕೆದಾರರಿಗೆ ಇದು ಉತ್ತಮ ಆಯ್ಕೆಯಾಗದಿರಬಹುದು. ಇದು ಹಲವು ಗ್ರಾಹಕರಿಗೆ ನಿರಾಶೆ ಉಂಟುಮಾಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಹಾಗಾದರೆ, ಈ ಹೊಸ ಫೋನ್‌ ನಲ್ಲಿ ಕಂಡುಬರಬಹುದಾದ ಡೌನ್‌ಗ್ರೇಡ್‌ಗಳು ಯಾವುವು? ಎಂಬುದನ್ನು ಸಹ ನೋಡೋಣ ಬನ್ನಿ.

ಪ್ರೊಸೆಸರ್ ಮತ್ತು ಡಿಸ್‌ಪ್ಲೇ ಡೌನ್‌ಗ್ರೇಡ್‌ಗಳಾಗಬಹುದು
iPhone 17 Air ಮೊದಲು A19 Pro ಚಿಪ್‌ಸೆಟ್‌ನೊಂದಿಗೆ ಬರಲಿದೆ ಎಂದು ವದಂತಿಗಳಿದ್ದವು. ಆದರೆ, ಇತ್ತೀಚಿನ ವರದಿಗಳ ಪ್ರಕಾರ, ಇದು Pro ಮಾದರಿಗಿಂತ ಒಂದು ಕಡಿಮೆ GPU ಕೋರ್ ಅನ್ನು ಹೊಂದಿರುವ ಸಾಧ್ಯತೆ ಇದೆ. ಇದು iPhone 16 ಮತ್ತು iPhone 16 Pro ನಲ್ಲಿರುವ A18 ಮತ್ತು A18 Pro ಚಿಪ್‌ಗಳ ನಡುವಿನ ವ್ಯತ್ಯಾಸದಂತೆಯೇ ಇರಲಿದೆ. ಇದು ಸಾಮಾನ್ಯ ಬಳಕೆಯಲ್ಲಿ ಅಷ್ಟೇನೂ ಗಮನಕ್ಕೆ ಬರದಿದ್ದರೂ, ಗ್ರಾಫಿಕ್ಸ್-ಇಂಟೆನ್ಸಿವ್ ಗೇಮ್‌ಗಳು ಮತ್ತು ಅಪ್ಲಿಕೇಶನ್‌ಗಳಲ್ಲಿ ಕಾರ್ಯಕ್ಷಮತೆಯ ವ್ಯತ್ಯಾಸ ಸ್ಪಷ್ಟವಾಗಿ ಗೋಚರಿಸಬಹುದು ಎನ್ನಲಾಗಿದೆ.

ಹಾಗೆಯೇ, ಡಿಸ್‌ಪ್ಲೇ ವಿಭಾಗದಲ್ಲಿ ಕೂಡ ಕೆಲವು ಡೌನ್‌ಗ್ರೇಡ್‌ಗಳನ್ನು ನಿರೀಕ್ಷಿಸಲಾಗಿದೆ. ಹಲವು ವರ್ಷಗಳಿಂದ ಐಫೋನ್ ಬಳಕೆದಾರರು Pro ಅಲ್ಲದ ಮಾದರಿಗಳಲ್ಲಿ 120Hz ರಿಫ್ರೆಶ್ ರೇಟ್ ಅನ್ನು ಬಯಸುತ್ತಿದ್ದಾರೆ. iPhone 17 Air 120Hz ರಿಫ್ರೆಶ್ ರೇಟ್ ಹೊಂದಿದ್ದರೂ, ಅದು ವೇರಿಯೇಬಲ್ ರಿಫ್ರೆಶ್ ರೇಟ್ ತಂತ್ರಜ್ಞಾನವನ್ನು (LTPO) ಹೊಂದಿರುವ ಸಾಧ್ಯತೆ ಕಡಿಮೆ. ಇದರರ್ಥ, Pro ಮಾದರಿಗಳಲ್ಲಿ ಲಭ್ಯವಿರುವ Always-On Display ವೈಶಿಷ್ಟ್ಯವು ಈ ಫೋನ್‌ ನಲ್ಲಿ ಇರುವುದಿಲ್ಲ. ಅಲ್ಲದೆ, LTPO ತಂತ್ರಜ್ಞಾನ ಇಲ್ಲದ ಕಾರಣ ಮತ್ತು ಬ್ಯಾಟರಿ ಗಾತ್ರವೂ ಚಿಕ್ಕದಾಗಿರುವ ಕಾರಣ, ಇದು ಫೋನ್‌ನ ಬ್ಯಾಟರಿ ಬಾಳಿಕೆಯ ಮೇಲೆ ಪರಿಣಾಮ ಬೀರಬಹುದು ಎನ್ನಲಾಗಿದೆ.

iPhone 17 Air: ಕೈಗೆಟುಕುವ ಬೆಲೆ, ಸ್ಲಿಮ್ ಡಿಸೈನ್!..ಆದರೆ ಒಂದು ಟ್ವಿಸ್ಟ್ ಇದೆ!

ಇಷ್ಟೇ ಅಲ್ಲದೆ, iPhone 17 Air ಕ್ಯಾಮರಾ ವೈಶಿಷ್ಟ್ಯಗಳಲ್ಲೂ ನಿರೀಕ್ಷಿಸಲಾಗಿದೆ. ಈ ಫೋನ್ ಒಂದೇ ಹಿಂಬದಿ ಕ್ಯಾಮರಾವನ್ನು ಹೊಂದಿರಬಹುದು ಎಂದು ವದಂತಿಗಳಿವೆ. ಇದು ಪ್ರಸ್ತುತದ ಮಲ್ಟಿ-ಲೆನ್ಸ್ ಕ್ಯಾಮರಾ ವ್ಯವಸ್ಥೆಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಟೆಲಿಫೋಟೋ ಅಥವಾ ಅಲ್ಟ್ರಾವೈಡ್ ಫೋಟೋಗಳನ್ನು ತೆಗೆಯುವ ಸಾಧ್ಯತೆ ಇಲ್ಲದಿರುವುದರಿಂದ ಫೋಟೋಗ್ರಫಿ ಇಷ್ಟಪಡುವವರಿಗೆ ಇದು ಒಂದು ದೊಡ್ಡ ಹಿನ್ನಡೆಯಾಗಲಿದೆ. ಆಪಲ್ ಡಿಜಿಟಲ್ ಜೂಮ್‌ಗಾಗಿ ಕಂಪ್ಯೂಟೇಶನಲ್ ಫೋಟೋಗ್ರಫಿ ಅನ್ನು ಬಳಸಬಹುದಾದರೂ, ಅಲ್ಟ್ರಾವೈಡ್ ಕ್ಯಾಮರಾದ ಕೊರತೆ ಒಂದು ಪ್ರಮುಖ ಲೋಪವಾಗಬಹುದು.

ಈ ಎಲ್ಲಾ ಹೊಂದಾಣಿಕೆಗಳ ನಡುವೆಯೂ, iPhone 17 Air ಯಶಸ್ವಿಯಾಗಲಿದೆ ಎಂದು ಕೆಲವು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಬೃಹತ್ ಫೋನ್‌ಗಳನ್ನು ಇಷ್ಟಪಡದ ಮತ್ತು ನಯವಾದ, ಹಗುರವಾದ ಫೋನ್ ಬಯಸುವ ಗ್ರಾಹಕರನ್ನು ಈ ಮಾದರಿ ತನ್ನತ್ತ ಸೆಳೆಯುವ ಸಾಧ್ಯತೆ ಇದೆ. ಸದ್ಯದ ಮಾರುಕಟ್ಟೆಯಲ್ಲಿ ವಿಭಿನ್ನ ವಿನ್ಯಾಸ ಮತ್ತು ವೈಶಿಷ್ಟ್ಯಗಳಿರುವ ಫೋನ್‌ಗೆ ಬೇಡಿಕೆ ಹೆಚ್ಚಾಗಿದ್ದು, iPhone 17 Air ಒಂದು ಉತ್ತಮ ಆಯ್ಕೆಯಾಗಿ ಹೊರಹೊಮ್ಮಬಹುದು. ಈ ಕುರಿತಂತೆ ನಿಮ್ಮ ಅನಿಸಿಕೆ ಏನು? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Leaks Confirm: iPhone 17 Air Won’t Match 17 Pro in Processor or Display!. check here for all details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+