ಐಫೋನ್ 6 ಎಸ್ ಪ್ಲಸ್ ಅನ್ನು ಮೀರಿಸಿದ ಲೀಕೊ ಸ್ಮಾರ್ಟ್‌ಫೋನ್

Written By:

ಲೀಕೊ ಇತ್ತೀಚೆಗೆ ತಾನೇ ಫ್ಲ್ಯಾಗ್‌ಶಿಪ್ ಕಿಲ್ಲರ್ ಎಂದೆನಿಸಿರುವ ಲೀ 1ಎಸ್ ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಲಾಂಚ್ ಮಾಡಿ ಹೊಸ ಬ್ರ್ಯಾಂಡ್ ಒಂದನ್ನು ಹುಟ್ಟುಹಾಕಿದೆ. ಕೆಲವೇ ಸೆಕೆಂಡ್‌ಗಳಲ್ಲಿ ಈ ಡಿವೈಸ್ ಮಾರಾಟವಾಗಿ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಫೋನ್ ಬೆಲೆ ರೂ 10,999 ಆಗಿದ್ದು ರೂ 33,900 ರ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6, ರೂ 41,000 ದ ಎಚ್‌ಟಿಸಿ ಒನ್ ಎಮ್9+ ಗೆ ತೀಕ್ಷ್ಣ ಪೈಪೋಟಿಯನ್ನು ನೀಡುತ್ತಿದೆ.

ಆಕರ್ಷಕ ವಿನ್ಯಾಸ, ಉತ್ತಮ ತಂತ್ರಜ್ಞಾನ, ಅದ್ಭುತ ಫೀಚರ್‌ಗಳು ಲೀ 1 ಎಸ್ ಅನ್ನು ವಿಜಯಿಯಾಗಿ ನಿಲ್ಲಿಸಿವೆ. ಲೀ 1 ಎಸ್ ಪೂರ್ಣ ಮೆಟಲ್ ಬಾಡಿಯನ್ನು ಪಡೆದುಕೊಂಡಿದ್ದು ಏರ್‌ಕ್ರಾಫ್ಟ್ ಗ್ರೇಡ್ ಅಲ್ಯುಮಿನಿಯಮ್ ಅನ್ನು ಹೊಂದಿದೆ. ಲೀ ಸೂಪರ್ ಫೋನ್‌ಗಳು ವಿಶ್ವದ ಮೆಟಲ್ ಯೂನಿಬಾಡಿ ಡಿವೈಸ್‌ಗಳು ಎಂಬ ಹೆಸರನ್ನು ಪಡೆದುಕೊಂಡಿದ್ದು ನಿಜಕ್ಕೂ ಅತ್ಯಪೂರ್ಣ ಎಂದೆನಿಸಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಉತ್ತಮ ಕಾರ್ಯಕ್ಷಮತೆ

ಉತ್ತಮ ಕಾರ್ಯಕ್ಷಮತೆ

ಐಫೋನ್ 6ಎಸ್ ಪ್ಲಸ್ ಸ್ಕ್ರೀನ್ ಗಾತ್ರ

5.5 ಇಂಚಿನ ಐಫೋನ್ 6ಎಸ್ ಪ್ಲಸ್ ಸ್ಕ್ರೀನ್ ಗಾತ್ರವನ್ನೇ ಈ ಡಿವೈಸ್ ಪಡೆದುಕೊಂಡಿದ್ದು ಐಫೋನ್ 6ಎಸ್ ಪ್ಲಸ್‌ಗಿಂತಲೂ ಉತ್ತಮ ಕಾರ್ಯಕ್ಷಮತೆ ಅಂತೆಯೇ ವಿನ್ಯಾಸವನ್ನು ಪಡೆದುಕೊಂಡಿದೆ. 2ಜಿ, 3ಜಿ ಮತ್ತು 4ಜಿ ಅಂತೆಯೇ ವೈಫೈನಲ್ಲೂ ಇದು ಉತ್ತಮವಾಗಿ ಕಾರ್ಯನಿರ್ವಹಿಸಲಿದೆ.

ಹೇಲಿಯೊ X10 ಟರ್ಬೊ ಪ್ರೊಸೆಸರ್

ಹೇಲಿಯೊ X10 ಟರ್ಬೊ ಪ್ರೊಸೆಸರ್

ಮಲ್ಟಿ ಟಾಸ್ಕಿಂಗ್

ಲೀ 1 ಎಸ್ ಓಕ್ಟಾ ಕೋರ್ 2.2 GHz, ಹೇಲಿಯೊ X10 ಟರ್ಬೊ ಪ್ರೊಸೆಸರ್ ಅನ್ನು ಒಳಗೊಂಡಿದೆ. 3ಜಿಬಿ RAM ಡಿವೈಸ್‌ನಲ್ಲಿದ್ದು ಮಲ್ಟಿ ಟಾಸ್ಕಿಂಗ್ ನಿರ್ವಹಿಸಲು ಇದು ಹೇಳಿಮಾಡಿಸಿರುವಂಥದ್ದಾಗಿದೆ.

ಲೀ 1 ಎಸ್

ಲೀ 1 ಎಸ್

ಬ್ಯಾಟರಿ 3000mAh

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಮತ್ತು ಎಚ್‌ಟಿಸಿ ಒನ್ ಎಮ್9 ಪ್ಲಸ್‌ಗೆ ಹೋಲಿಸಿದಾಗ ಲೀ 1 ಎಸ್ ಲಿಪೊ ಬ್ಯಾಟರಿ 3000mAh ನೊಂದಿಗೆ ಬಂದಿದೆ.

ಹೆಚ್ಚಿನ ಟಾಕ್ ಟೈಮ್

ಹೆಚ್ಚಿನ ಟಾಕ್ ಟೈಮ್

ಕಡಿಮೆ ಚಾರ್ಜ್‌

ಲೀ 1 ಎಸ್ ಹೆಚ್ಚಿನ ಟಾಕ್ ಟೈಮ್ ಅನ್ನು ಬಳಕೆದಾರರಿಗೆ ಒದಗಿಸುತ್ತಿದ್ದು ಕಡಿಮೆ ಚಾರ್ಜ್‌ನಲ್ಲಿಯೇ ಹೆಚ್ಚು ಮಾತನಾಡಲು ಅನುವು ಮಾಡಿಕೊಡುತ್ತದೆ.

 5 ನಿಮಿಷಗಳಲ್ಲಿ 3.5 ಗಂಟೆಗಳ ಟಾಕ್ ಟೈಮ್

5 ನಿಮಿಷಗಳಲ್ಲಿ 3.5 ಗಂಟೆಗಳ ಟಾಕ್ ಟೈಮ್

ಟೈಪ್ ಸಿ ಚಾರ್ಜರ್

ಲೀ 1 ಎಸ್ ಟೈಪ್ ಸಿ ಚಾರ್ಜರ್ ಅನ್ನು ಹೊಂದಿದೆ. ತ್ವರಿತ ಚಾರ್ಜಿಂಗ್‌ಗೆ ಈ ಚಾರ್ಜರ್ ಅನುವು ಮಾಡಿಕೊಡುತ್ತಿದ್ದು 5 ನಿಮಿಷಗಳಲ್ಲಿ 3.5 ಗಂಟೆಗಳ ಟಾಕ್ ಟೈಮ್ ಅನ್ನು ಒದಗಿಸುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
LeEco's recently launched flagship killer Le1s reiterates the brand's image of bringing disruptive technology to global markets.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot