ವಿಶ್ವದ ಪ್ರಥಮ ಮಿರರ್ ಸರ್ಫೇಸ್ ಫೋನ್: ಲೀಕೊ

Written By:

ಲೀಕೊದ ಲೀ 1ಎಸ್ 9 ಸೆಕೆಂಡ್‌ಗಳಲ್ಲಿ 55,000 ಆರ್ಡರ್‌ಗಳ ದಾಖಲೆಯನ್ನು ಸೃಷ್ಟಿಸಿದೆ. ಸಿಲ್ವರ್ ಬಣ್ಣದ ಲೀ 1 ಎಸ್ ಪ್ರಿ ಸೇಲ್ ರಿಜಿಸ್ಟ್ರೇಶನ್ ನಿಜಕ್ಕೂ ಫೋನ್ ಮಾರುಕಟ್ಟೆಯಲ್ಲಿ ಹೊಸ ಹವಾವನ್ನೇ ಸೃಷ್ಟಿಸಿದೆ. ಹಲವಾರು ದಾಖಲೆಗಳನ್ನು ಮುರಿದ ಲೀಕೊ ಫೋನ್ ಇತಿಹಾಸದಲ್ಲಿ ಹೊಸ ಮುನ್ನುಡಿಯನ್ನು ಬರೆದಿದೆ.

30 ದಿನಗಳಲ್ಲಿ ಲೀಕೊ ಯಶಸ್ವಿಯಾಗಿ ಉತ್ತಮ ಆಟಗಾರನೆಂಬುದನ್ನು ನಿರೂಪಿಸಿದ್ದು, 2.2 ಲಕ್ಷಗಳ ಒಟ್ಟು ಆರ್ಡರ್‌ಗಳೊಂದಿಗೆ ಹೊಸ ದಾಖಲೆಯನ್ನೇ ಬರೆದಿದೆ. ಇಂದಿನ ಲೇಖನದಲ್ಲಿ ಈ ಫೋನ್ ಕುರಿತಾದ ಮತ್ತಷ್ಟು ರೋಚಕ ಅಂಶಗಳನ್ನು ನಾವು ನಿಮಗೆ ತಿಳಿಸಲಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಭಾರತೀಯ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವ ಅಂಶ

ಭಾರತೀಯ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವ ಅಂಶ

ಅದ್ಭುತ ಫೋನ್ ವಿನ್ಯಾಸ

ತನ್ನ ಅದ್ಭುತ ಫೋನ್ ವಿನ್ಯಾಸ ಮತ್ತು ಅಂಶಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಬೆಳವಣಿಗೆಯನ್ನು ಲೀಕೊ ಉಂಟುಮಾಡಿದೆ. ಭಾರತೀಯ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವ ಅಂಶವನ್ನು ಕಂಪೆನಿ ಉಂಟುಮಾಡಿದ್ದು ಉತ್ತಮ ಕಾರ್ಯಕ್ಷಮತೆ ತಂತ್ರಜ್ಞಾನ ಬೆಲೆಯೊಂದಿಗೆ ಬಳಕೆದಾರರನ್ನು ಸೆಳೆಯುತ್ತಿದೆ.

ಗ್ರಾಹಕರಿಗೆ ಹತ್ತಿರವಾಗುವ ಯೋಜನೆ

ಗ್ರಾಹಕರಿಗೆ ಹತ್ತಿರವಾಗುವ ಯೋಜನೆ

ಹೊಸ ಅನ್ವೇಷಣೆ

ಇನ್ನಷ್ಟು ಹೊಸ ಅನ್ವೇಷಣೆಗಳೊಂದಿಗೆ ಗ್ರಾಹಕರಿಗೆ ಹತ್ತಿರವಾಗುವ ಯೋಜನೆಗಳನ್ನು ಕಂಪೆನಿ ರೂಪಿಸಿದ್ದು ಇಲ್ಲೂ ಕೂಡ ಇದಕ್ಕೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದು ಮರೆಯುವಂತಿಲ್ಲ.

ಹೆಚ್ಚು ಮಾರಾಟವಾಗಿರುವ ಪ್ರೀಮಿಯಮ್ ಸೂಪರ್ ಫೋನ್

ಹೆಚ್ಚು ಮಾರಾಟವಾಗಿರುವ ಪ್ರೀಮಿಯಮ್ ಸೂಪರ್ ಫೋನ್

ತನ್ನದೇ ಹೊಸ ಭವಿಷ್ಯ

ಲೀಕೊ ಇಂಡಿಯಾದ ಸ್ಮಾರ್ಟ್ ಇಲೆಕ್ಟ್ರಾನಿಕ್ಸ್ ಬ್ಯುಸಿನೆಸ್ ಸಿಒಒ ಅತುಲ್ ಜೈನ್ ಹೇಳುವಂತೆ ಲೀಕೊ ಮಾರುಕಟ್ಟೆಯಲ್ಲಿ ತನ್ನದೇ ಹೊಸ ಭವಿಷ್ಯವನ್ನು ಬರೆದಿದ್ದು ಲೀ ಮ್ಯಾಕ್ಸ್ ಹೆಚ್ಚು ಮಾರಾಟವಾಗಿರುವ ಪ್ರೀಮಿಯಮ್ ಸೂಪರ್ ಫೋನ್ ಆಗಿ ಹೊರಹೊಮ್ಮಿದೆ. ಇದು ಪ್ರಬವಾದ ಸ್ಪರ್ಧಿ ಎಂದೆನಿಸಿದೆ.

ಮೆಟಲ್ ಯೂನಿಬಾಡಿ

ಮೆಟಲ್ ಯೂನಿಬಾಡಿ

ರೂ 10,999 ಬೆಲೆ

ರೂ 10,999 ಬೆಲೆಯಲ್ಲಿ ಲೀ 1ಎಸ್ ಮೆಟಲ್ ಯೂನಿಬಾಡಿಯನ್ನು ಹೊಂದಿದೆ. ವಿಶ್ವದ ಪ್ರಥಮ ಮಿರರ್ ಸರ್ಫೇಸ್ಡ್ ಫಿಂಗರ್ ಪ್ರಿಂಟ್ ಇದರಲ್ಲಿದ್ದು ಫೋನ್ 5.5 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಹೇಲಿಯೊ x10 ಟರ್ಬೊ ಪ್ರೊಸೆಸರ್ ಅನ್ನು ಹೊಂದಿದೆ.

32 ಜಿಬಿ

32 ಜಿಬಿ

ಸಂಗ್ರಹಣಾ ಸಾಮರ್ಥ್ಯ

3 ಜಿಬಿ RAM ಅನ್ನು ಡಿವೈಸ್ ಒಳಗೊಂಡಿದ್ದು 32 ಜಿಬಿ ಸಂಗ್ರಹಣಾ ಸಾಮರ್ಥ್ಯವನ್ನು ಫೋನ್ ಹೊಂದಿದೆ. ಡ್ಯುಯಲ್ ಸಿಮ್ ಕಾರ್ಡ್ ಸ್ಲಾಟ್ಸ್, 4ಜಿ ಎಲ್‌ಟಿಇ ಬೆಂಬಲ ಮತ್ತು ಯುಎಸ್‌ಬಿ ಟೈಪ್ ಸಿ ಪೋರ್ಟ್ ಅನ್ನು ಇದು ಪಡೆದುಕೊಂಡಿದೆ.

ವೈಡ್ ಆಂಗಲ್ ಸೆಲ್ಫಿ

ವೈಡ್ ಆಂಗಲ್ ಸೆಲ್ಫಿ

ಕ್ಯಾಮೆರಾ

ಡಿವೈಸ್ 13 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾವನ್ನು ಪಡೆದಿದ್ದು, 5 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾವನ್ನು ಹೊಂದಿದೆ. ಇದು ವೈಡ್ ಆಂಗಲ್ ಸೆಲ್ಫಿ ತೆಗೆಯಲು ಹೇಳಿಮಾಡಿಸಿದಂತಿದೆ.

3 ಮಿಲಿಯನ್ ಯೂನಿಟ್‌ಗಿಂತಲೂ ಹೆಚ್ಚಿನ ಮಾರಾಟ

3 ಮಿಲಿಯನ್ ಯೂನಿಟ್‌ಗಿಂತಲೂ ಹೆಚ್ಚಿನ ಮಾರಾಟ

ಫೋನ್ ಜನಪ್ರಿಯತೆ

ಇತರ ಮಾರುಕಟ್ಟೆಗಳಲ್ಲೂ ಫೋನ್ ಜನಪ್ರಿಯತೆಯನ್ನು ಪಡೆದುಕೊಂಡಿದ್ದು 3 ತಿಂಗಳಲ್ಲಿ 3 ಮಿಲಿಯನ್ ಯೂನಿಟ್‌ಗಿಂತಲೂ ಹೆಚ್ಚಿನ ಮಾರಾಟವನ್ನು ಡಿವೈಸ್ ಕಂಡುಕೊಂಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
LeEco's Le 1s ended with a record order of 55,000 within 9 seconds for its third flash sale which just concluded today.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot