ಮೊಬೈಲ್ ಮಾರುಕಟ್ಟೆಯಲ್ಲಿ ಮಿಂಚಲಿರುವ ಲೆನೊವೊ

|
ಮೊಬೈಲ್ ಮಾರುಕಟ್ಟೆಯಲ್ಲಿ ಮಿಂಚಲಿರುವ  ಲೆನೊವೊ

ಲೆನೊವೊ ಉತ್ತಮ ಗುಣಮಟ್ಟದ ಲ್ಯಾಪ್ ಟಾಪ್ ಮತ್ತು ಡೆಸ್ಕ್ ಟಾಪ್ ಗಳನ್ನು ತಯಾರಿಸಿ ಈಗಾಗಲೆ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಹೊಂದಿದೆ. ಇದೀಗ ಈ ಕಂಪನಿ ತನ್ನ ಎಲೆಕ್ಟ್ರಾನಿಕ್ ವಸ್ತುಗ ತಯಾರಿಕೆಯ ವಿಸ್ತಾರವನ್ನು ಮೊಬೈಲ್ ಫೋನ್ ವರೆಗೆ ವಿಸ್ತರಿಸಿದೆ. ಲೆನೊವು ಫೋನ್ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಹೊಂದಿದ್ದು ಈ ಮೊಬೈಲ್ ಅನ್ನು ಲೆನೊವೊ A60 ಎಂದು ಕರೆಯಲಾಗಿದೆ. ಈ ಮೊಬೈಲ್ ನಲ್ಲಿರುವ ಆಂಡ್ರಾಯ್ಡ್ 2.3 ಜಿಂಜರ್ ಬರ್ಡ್ ಆಪರೇಟಿಂಗ್ ಸಿಸ್ಟಮ್ ಮತ್ತು ಈ ಕೆಳಗಿನ ಪ್ರಮುಖ ಲಕ್ಷಣಗಳಿಂದ ಈ ಮೊಬೈಲ್ ಗ್ರಾಹಕರ ಮೆಚ್ಚುಗೆಯನ್ನು ಪಡೆಯುವುದರಲ್ಲಿ ಯಾವುದೆ ಸಂಶಯವಿಲ್ಲ.

ಮುಖ್ಯ ಲಕ್ಷಣಗಳು:

* 3.5 ಇಂಚಿನ ಸ್ಕ್ರೀನ್ ಡಿಸ್ ಪ್ಲೇ

* ಡ್ಯುಯೆಲ್ ಸಿಮ್

* 3.2 ಮೆಗಾ ಪಿಕ್ಸಲ್ ಕ್ಯಾಮೆರಾ

* 320 x 480 ಪಿಕ್ಸಲ್ ಕ್ಯಾಮೆರಾ ರೆಸ್ಯೂಲೇಶನ್

* 650 MHz ಪ್ರೊಸೆಸರ್

* 2GB RAM ಸಾಮರ್ಥ್ಯ

* 02.11 ವೈಫೈ

* GPS ಇದೆ

* USB 2.0 ಪೋರ್ಟ್

* ಬ್ಲೂಟೂಥ್

* ಜಿ-ಸೆನ್ಸಾರ್

* 116.5 x 59.9 x 13.2ಮಿಮಿ ಗಾತ್ರ

ಈ ಮೊಬೈಲ್ ನಲ್ಲಿ 3.5G HSDPA ತಂತ್ರಜ್ಞಾನವನ್ನು ಹೊಂದಿರುವುದರಿಂದ 7.2 Mbps ವೇಗದಲ್ಲಿ ಡೌನ್ ಲೋಡ್ ಮಾಡುವಷ್ಟು ಸಾಮರ್ಥ್ಯವನ್ನು ಹೊಂದಿದೆ.ಈ ಸಾಧನವು MP3, MPEG4 AAC ಮತ್ತು WMAಗೆ ಸಪೋರ್ಟ್ ಮಾಡಲಿದೆ.

ಇನ್ನಷ್ಟೆ ಬಿಡುಗಡೆಯಾಗಲಿರುವ ಈ ಮೊಬೈಲ್ ಬೆಲೆಯ ಬಗ್ಗೆ ಕಂಪನಿಯಿಂದ ಯಾವುದೆ ಮಾಹಿತಿ ದೊರತಿಲ್ಲ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X