ಭಾರತಕ್ಕೆ ಬಂತು ಲೆನೋವೋ A5 ಮತ್ತು K5 ನೋಟ್ (2018)
ದಿನಕ್ಕೆ ಅದೆಷ್ಟು ಫೋನ್ ಗಳು ಮಾರುಕಟ್ಟೆಗೆ ಬರುತ್ತೆ ಹೇಳೋಕೆ ಸಾಧ್ಯವಿಲ್ಲ. ಇವತ್ತು ಮತ್ತೆರಡು ಫೋನ್ ಗಳು ಮಾರುಕಟ್ಟೆ ಪ್ರವೇಶಿಸುತ್ತಿವೆ. ಕಡಿಮೆ ಬಜೆಟ್ ನ ಕೈಗೆಟುಕುವ ಬೆಲೆಯ ಸ್ಮಾರ್ಟ್ ಫೋನ್ ಗಳು ಇವು.. ಅದುವೇ ಲೆನೋವೋ ಸ್ಮಾರ್ಟ್ ಫೋನ್ ಗಳು.. ಹೌದು.. ಚೀನಾದ ಸ್ಮಾರ್ಟ್ ಫೋನ್ ತಯಾರಿಕಾ ಕಂಪೆನಿ ಲೆನೋವೋ ಮಂಗಳವಾರ ಎರಡು ಹೊಸ ಬಜೆಟ್ ನ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಟ್ಟಿದೆ.

ಅದುವೇ ಲೆನೋವೋ ಎ5 ಮತ್ತು ಲೆನೋವೋ ಕೆ5 ನೋಟ್(2018). ಫುಲ್ ಸ್ಕ್ರೀನ್ ಡಿಸೈನ್ ಇದ್ದು 18:9 ಅನುಪಾತದ ಡಿಸ್ಪ್ಲೇ ಸ್ಕ್ರೀನ್ ಹೊಂದಿದೆ. ಆದರೆ ಇದರಲ್ಲಿ ನಾಚ್ ಇಲ್ಲ. ಲೆನೋವೋ ಎ5 ನಲ್ಲಿ ಮೀಡಿಯಾ ಟೆಕ್ MT6739 ಸಾಕೆಟ್ ಇದ್ದು, ಕೆ5 ನೋಟ್(2018) ನಲ್ಲಿ ಸ್ನ್ಯಾಪ್ ಡ್ರ್ಯಾಗನ್ 450 ಸಾಕೆಟ್ ಇದೆ.
. ಲೆನೋವೋ ಕೆ5 ನೋಟ್(2018 ), ಎ5 ನ ಬೆಲೆ
3ಜಿಬಿ RAM/ 32ಜಿಬಿ ಇನ್ ಬಿಲ್ಟ್ ಸ್ಟೋರೇಜ್ ಇರುವ ಲೆನೋವೋ ಕೆ5 ನೋಟ್(2018 ) ನ ಚೀನಾದ ಬೆಲೆ CNY 799 (ಅಂದಾಜು Rs. 8,400) ಮತ್ತು 4ಜಿಬಿ RAM/ 64ಜಿಬಿ ಇನ್ ಬಿಲ್ಟ್ ಸ್ಟೋರೇಜ್ ಇರುವ ಫೋನಿನ ಬೆಲೆ CNY 999 (ಅಂದಾಜು Rs. 10,500). ಕಪ್ಪು, ಚಿನ್ನದ ಬಣ್ಣ, ಮತ್ತು ನೀಲಿ ಬಣ್ಣಗಳಲ್ಲಿ ಫೋನ್ ಲಭ್ಯವಿದೆ. ಇನ್ನು ಲೆನೋವೋ ಎ5 ನ ಬೆಲೆ CNY 599 (ಅಂದಾಜು Rs. 6,300).ಇದು ಕೂಡ ಕಪ್ಪು, ಚಿನ್ನದ ಬಣ್ಣ ಮತ್ತು ರೋಸ್ ಗೋಲ್ಡ್ ಕಲರ್ ಗಳಲ್ಲಿ ಸಿಗುತ್ತೆ.
.ಲೆನೋವೋ ಕೆ5 ನೋಟ್(2018) ರ ವೈಶಿಷ್ಟ್ಯಗಳು
ಡುಯಲ್ ನ್ಯಾನೋ ಸಿಮ್ ಬಳಸಬಹುದು. ZUI 3.9 ಬೇಸ್ಡ್ ಆಂಡ್ರಾಯ್ಡ್ 8.1 Oreoಇದೆ. 6-ಇಂಚಿನ HD+ (720x1440 ಪಿಕ್ಸೆಲ್) IPS ಡಿಸ್ಪ್ಲೇಯು 18:9 ಅನುಪಾತದಲ್ಲಿದೆ.ಅಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 450 ಪ್ರೊಸೆಸರ್ 1.8 GHz ನಲ್ಲಿ ಕಾರ್ಯ ನಿರ್ವಹಿಸುತ್ತೆ. 3ಜಿಬಿ/ 4ಜಿಬಿ RAM ಎರಡು ವೇರಿಯಂಟ್ ನಲ್ಲಿ ಸಿಗುತ್ತೆ.
ಲೆನೋವೋ ಕೆ5 ನೋಟ್(2018) ನಲ್ಲಿ ಡುಯಲ್ ಹಿಂಭಾಗದ ಕ್ಯಾಮರಾ ಸೆಟ್ ಅಪ್ ಇದೆ. 16 ಮೆಗಾ ಪಿಕ್ಸಲ್ ಆಟೋಫೋಕಸ್ ಪ್ರೈಮರಿ ಸೆನ್ಸರ್ f/2.0 ದ್ಯುತಿರಂದ್ರ ಹೊಂದಿದೆ. ಮತ್ತು 2 ಮೆಗಾಪಿಕ್ಸಲ್ ನ ಫಿಕ್ಸ್ಡ್ ಫೋಕರ್ ನ ಸೆಕೆಂಡರಿ ಕ್ಯಾಮರಾ ಸೆನ್ಸರ್ ಇದ್ದು f/2.4 ದ್ಯುತಿರಂದ್ರವನ್ನೊಳಗೊಂಡಿದೆ. ಕ್ಯಾಮರಾ ಸೆಟ್ ಅಪ್ ಮೋನೋಕ್ರೋಮ್ ಫ್ಲ್ಯಾಶ್ ಒಳಗೊಂಡಿದೆ. ಮುಂಭಾಗದ ಕ್ಯಾಮರಾವು 8 ಮೆಗಾಪಿಕ್ಸಲ್ ಸಾಮರ್ಥ್ಯ ಹೊಂದಿದ್ದು f/2.0 ದ್ಯುತಿರಂದ್ರ ಹೊಂದಿದೆ.
ಎರಡು ವೇರಿಯಂಟ್ ನಲ್ಲಿ ಲಭ್ಯವಿದೆ 32ಜಿಬಿ ಮತ್ತು 64ಜಿಬಿ ಇದನ್ನು 256 ಜಿಬಿ ವರೆಗೂ ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಹಿಗ್ಗಿಸಿಕೊಳ್ಳಬಹುದಾಗಿದೆ. ಕನೆಕ್ಟಿವಿಟಿ ವಿಚಾರಕ್ಕೆ ಬಂದರೆ 4G, ವೈಫೈ 802.11 b/g/n, a ಮೈಕ್ರೋ ಯುಎಸ್ ಬಿ ಪೋರ್ಟ್, ಮತ್ತು ಬ್ಲೂ ಟೂತ್ 4.2 ಇದೆ. ಫಿಂಗರ್ ಪ್ರಿಂಟ್ ಸ್ಕ್ಯಾನರ್ ಇದೆ. ಎಕ್ಸೆಲೋಮೀಟರ್, ಏಂಬಿಯಂಟ್ ಲೈಟ್ ಸೆನ್ಸರ್, ಕಂಪಾಸ್ ಕೂಡ ಇದರಲ್ಲಿದೆ. 3760mAh ಬ್ಯಾಟರಿಯನ್ನು ಒಳಗೊಂಡಿರುವ ಈ ಫೋನಿನ ಗಾತ್ರ ಒಟ್ಟು 158.3x76.7x8.5mm ಮತ್ತು 176 ಗ್ರಾಮ್ಸ್ ಆಗಿದೆ.
.ಲೆನೋವೋ ಎ5 ನ ವೈಶಿಷ್ಟ್ಯತೆಗಳು
ಡುಯಲ್ ಸಿಮ್ ಕಾರ್ಡ್ ಬಳಸಬಹುದು. ZUI 3.9 ಬೇಸ್ಡ್ ಆಂಡ್ರಾಯ್ಡ್ 8.1 Oreo ಮೂಲಕ ರನ್ ಆಗುತ್ತೆ. 5.45-ಇಂಚಿನ HD+ (720x1440 ಪಿಕ್ಸಲ್ಸ್) IPS ಡಿಸ್ಪ್ಲೇಯು 18:9 ಅನುಪಾತದಲ್ಲಿದೆ. quad-core MediaTek MT6739 ಸಾಕೆಟ್ ಹೊಂದಿದ್ದು ಅದರ ಸಾಮರ್ಥ್ಯ 1.5 GHz ಆಗಿದೆ. ಇದು 3ಜಿಬಿ RAM ನೊಂದಿಗೆ ಪೇರ್ ಆಗಿರಲಿದೆ.
ಕ್ಯಾಮರಾ ಬಗ್ಗೆ ಮಾತನಾಡುವುದಾದರೆ 13 ಮೆಗಾಪಿಕ್ಸಲ್ ಸೆನ್ಸರ್ ಇದ್ದು f/2.2 ದ್ಯುತಿರಂದ್ರವನ್ನು ಹೊಂದಿದೆ. ಆಟೋ ಫೋಕಸ್ ಕೂಡ ಹಿಂದಿನ ಕ್ಯಾಮರಾಕ್ಕಿದೆ.ಕ್ಯಾಮರಾ ಮೋನೋಕ್ರೋಮ್ ಫ್ಲ್ಯಾಶ್ ನ್ನು ಒಳಗೊಂಡಿದೆ. ಇನ್ನು 8 ಮೆಗಾಪಿಕ್ಸಲ್ ನ ಮುಂಭಾಗದ ಕ್ಯಾಮರಾ ಕೂಡ ಇದ್ದು ಅದು f/2.2 ದ್ಯುತಿರಂದ್ರ ಹೊಂದಿದೆ.
16ಜಿಬಿ ಅಥವಾ 32ಜಿಬಿ ಇನ್ ಬಿಲ್ಟ್ ಸ್ಟೋರೇಜ್ ಸಾಮರ್ಥ್ಯವಿರುವುದನ್ನು ಕೊಳ್ಳಬಹುದು ಅದನ್ನು ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 256 ಜಿಬಿ ವರೆಗೆ ಹಿಗ್ಗಿಸಿಕೊಳ್ಳಬಹುದು. ಕನೆಕ್ಟಿವಿಟಿ ವಿಚಾರಕ್ಕೆ ಬಂದರೆ ವೈಫೈ 802.11 b/g/n/ac, ಬ್ಲೂಟೂತ್ 4.2, ಮೈಕ್ರೋ ಯುಎಸ್ ಬಿ ಪೋರ್ಟ್, ಮತ್ತು 3.5mm ಹೆಡ್ ಫೋನ್ ಜ್ಯಾಕ್ ಇದೆ. ಎಕ್ಸೆಲೋಮೀಟರ್, ಏಂಬಿಯಂಟ್ ಲೈಟ್ ಸೆನ್ಸರ್, ಮತ್ತು ಪ್ರಾಕ್ಸಿಮಿಟಿ ಸೆನ್ಸರ್ ಗಳಿವೆ. ಫಿಂಗರ್ ಪ್ರಿಂಟ್ ಸೆನ್ಸರ್ ಕೂಡ ಇದೆ.
ಈ ಫೋನಿನ ಬ್ಯಾಟರಿ ಸಾಮರ್ಥ್ಯ 4000mAh ಕೆಪಾಸಿಟಿಯಾಗಿದ್ದು . ಫೋನಿನ ಒಟ್ಟು ಗಾತ್ರ 146.2x70.86x9.8mm ಮತ್ತು ತೂಕ 160 ಗ್ರಾಮ್ ನಷ್ಟಿದೆ.


Click it and Unblock the Notifications








