ಲಿನೊವೊದಿಂದ ಮತ್ತೊಂದು ದೊಡ್ಡ ಬ್ಯಾಟರಿ ಫೋನ್ ಲಾಂಚ್
K8 ಸ್ಮಾರ್ಟ್‌ಫೋನ್ 4000mAh ಬ್ಯಾಟರಿಯನ್ನು ಹೊಂದಿದ್ದು, ಇದೇ ಈ ಫೋನಿನ ವಿಶೇಷತೆಗಳಲ್ಲಿ ಪ್ರಮುಖವಾದದ್ದು ಎಂದರೆ ತಪ್ಪಾಗುವುದಿಲ್ಲ. ಮೆಟಲ್ ಬಾಡಿಹೊಂದಿರುವ ಈ ಪೋನ್ ಎರಡು ಬಣ್ಣದಲ್ಲಿ ದೊರೆಯಲಿದೆ.
ಚೀನಾ ಮೂಲದ ಲಿನೊವೊದಿಂದ ಸದ್ಯ ಮೊಬೈಲ್ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದು, ಈಗ ಮತ್ತೊಂದು ದೊಡ್ಡ ಬ್ಯಾಟರಿಯ ಫೋನ್ ವೊಂದನ್ನು ಲಾಂಚ್ ಮಾಡಿದೆ. ಲಿನೊವೊ ರೂ.10,499ಕ್ಕೆ K8 ಎನ್ನುವ ಸ್ಮಾರ್ಟ್‌ಫೋನ್ ಅನ್ನು ಗ್ರಾಹಕರ ಕೈಗೆ ನೀಡಲು ಮಂದಾಗಿದೆ.

K8 ಸ್ಮಾರ್ಟ್‌ಫೋನ್ 4000mAh ಬ್ಯಾಟರಿಯನ್ನು ಹೊಂದಿದ್ದು, ಇದೇ ಈ ಫೋನಿನ ವಿಶೇಷತೆಗಳಲ್ಲಿ ಪ್ರಮುಖವಾದದ್ದು ಎಂದರೆ ತಪ್ಪಾಗುವುದಿಲ್ಲ. ಮೆಟಲ್ ಬಾಡಿಹೊಂದಿರುವ ಈ ಪೋನ್ ಎರಡು ಬಣ್ಣದಲ್ಲಿ ದೊರೆಯಲಿದೆ. ಬ್ಲಾಕ್ ಮತ್ತು ಗೋಲ್ಡ್ ಬಣ್ಣದಲ್ಲಿ ದೊರೆಯಲಿದೆ.

5.2 ಇಂಚಿನ HD ಡಿಸ್‌ಪ್ಲೇ:
K8 ಸ್ಮಾರ್ಟ್‌ಫೋನಿನಲ್ಲಿ 5.2 ಇಂಚಿನ HD ಡಿಸ್‌ಪ್ಲೇಯನ್ನ ಕಾಣಬಹುದಾಗಿದ್ದು, ಇದಕ್ಕೆ 2.5D ಕರ್ವಡ್ ಗ್ಲಾಸ್ ಸುಕ್ಷತೆಯನ್ನು ನೀಡಲಾಗಿದೆ. ಇದರಲ್ಲಿ ಮಿಡಿಯಾ ಟೆಕ್ ಹೆಲಿಯೋ P25 ಆಕ್ಟಾಕೋರ್ ಪ್ರೋಸೆಸರ್ ಅನ್ನು ಕಾಣಬಹುದಾಗಿದೆ. ಅದುವೇ 2.3GHz ವೇಗದಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದೆ.

3GB RAM-32GB ROM:
K8 ಸ್ಮಾರ್ಟ್‌ಫೋನಿನಲ್ಲಿ 3GB RAM ಅನ್ನು ನೀಡಲಾಗಿದ್ದು, ಇದರೊಂದಿಗೆ 32GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ. ಅಲ್ಲದೇ ಮೆಮೊರಿ ಕಾರ್ಡ ಹಾಕಿಕೊಳ್ಳಬಹುದಾಗಿದೆ.

13MP - 8MP ಕ್ಯಾಮೆರಾ:
K8 ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ 12 MP ಕ್ಯಾಮೆರಾವನ್ನು ನೀಡಲಾಗಿದ್ದು, LED ಫ್ಲಾಷ್ ಸಹ ಇದರೊಂದಿಗೆ ಇದೆ. ಇನ್ನು ಮುಂಭಾಗದಲ್ಲಿ 8MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದರೊಂದಿಗೆ LED ಫ್ಲಾಷ್ ಸಹ ಕಾಣಬಹುದಾಗಿದೆ.


Click it and Unblock the Notifications








