ಲೆನೊವೊ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್ಸ್‌ ಬಿಡುಗಡೆ

By Vijeth Kumar Dn
|

ಲೆನೊವೊ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್ಸ್‌ ಬಿಡುಗಡೆ

ಹಬ್ಬದ ಸೀಸನ್‌ ಸಮೀಪಿಸುತ್ತಿದ್ದಂತೆ ಭಾರತದಲ್ಲಿನ ಅಗ್ರಮಾನ್ಯ ಕಂಪ್ಯೂಟರ್‌ ಹಾಗೂ ಲ್ಯಾಪ್‌ಟಾಪ್‌ ತಯಾರಿಕಾ ಸಂಸ್ಥೆಯಾದಂತಹ ಲೆನೊವೊ ಇದೇ ಮೊದಲ ಬಾರಿಗೆ ತನ್ನಯ ನೂತನ ಲೆನೊವೊ ಎ60+, ಲೆನೊವೊ ಎಸ್‌880, ಲೆನೊವೊ ಪಿ700i, ಲೆನೊವೊ ಕೆ860 ಹಾಗೂ ಲೆನೊವೊ ಎಸ್‌560 ಹೆಸರಿನ ಐದು ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್ಸ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ.

ಅಂಹಾಗೆ ಲೆನೊವೊ ಕೆ860 ನಲ್ಲಿ 5-ಇಂಚಿನ ಐಪಿಎಸ್‌ ದರ್ಶಕ ಹಾಗೂ 720X1280 ಪಿಕ್ಸೆಲ್ ರೆಸೆಲ್ಯೂಷನ್‌ ನೊಂದಿಗೆ, 1.4 GHz ಕ್ವಾಡ್‌-ಕೋರ್‌ ಪ್ರೊಸೆಸರ್‌ ಸೇರಿದಂತೆ 8GB ಆಂತರಿಕ ಸ್ಟೋರೇಜ್‌ ಹೊಂದಿದೆ. ಇದಲ್ಲದೆ ಬಿಲ್ಟ್‌ ಇನ್‌ ಫೋಟೋ ಡಿಟಿಂಗ್‌ ಫೀಚರ್ ಹೊಂದಿದ್ದು 8-ಮೆಗಾಪಿಕ್ಸೆಲ್‌ ಕ್ಯಾಮೆರಾ ನೀಡಲಾಗಿದೆ ಹಾಗೂ ರೂ.28,499 ಮಾರುಕಟ್ಟೆ ಬೆಲೆಯಲ್ಲಿ ಬಿಡಿಗಡೆ ಮಾಡಲಾಗಿದೆ.

ಲೆನೊವೊ ಎಸ್‌880 ಕೂಡ 5-ಇಂಚಿನ ಸ್ಮಾರ್ಟ್‌ಫೋನ್‌ ಆಗಿದ್ದು. 9.9mm ದಪ್ಪವಿದ್ದು ಸ್ಲೀಕ್‌ ಲುಕ್‌ ನೀಡುತ್ತದೆ. ಅಂದಹಾಗೆ ಈ ನೂತನ ಡ್ಯುಯೆಲ್‌ ಸಿಮ್‌ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ರೂ.18,999 ದರದಲ್ಲಿ ಲಭ್ಯವಾಗಲಿದ್ದು ಮಾರುಕಟ್ಟೆಯಲ್ಲಿನ ಹೆಚ್‌ಟಿಸಿ ಡಿಸೈರ್‌ ವಿ, ಸ್ಯಾಮ್ಸಂಗ್‌ ಗ್ಯಾಲಾಕ್ಸಿ ಎಸ್‌ ಡ್ಯುಯೋಸ್‌ ಎಸ್‌7562 ಹಾಗೂ ಇತರೆ 5 ಇಂಚಿನ ಸ್ಮಾರ್ಟ್‌ಫೋನ್ಸ್‌ ಗಳಾದಂತಹ ಮೈಕ್ರೋಮ್ಯಾಕ್ಸ್‌ ಎ100, ಸ್ಪೈಸ್‌ ಮಿ-500 ಹಾಘೂ ಐಬಾಲ್‌ ಆಂಡಿ 5ಸಿ ಗಳಿಗೆ ಪ್ರಬಲ ಪೈಪೋಟೊ ನೀಡಲಿದೆ.

ಲೆನೊವೊ ಎಸ್‌560 ಸ್ಮಾರ್ಟ್‌ಫೋನ್‌ ಮ್ಯೂಸಿಕ್‌ ಪ್ರಿಯರಿಗಾಗಿ ಸಿದ್ಧಪಡಿಸಲಾಗಿದ್ದು Dolby ಡಿಜಿಟಲ್‌ ಪ್ಲಸ್‌ ತಂತ್ರಜ್ಞಾನ ಹೊಂದಿದೆ. ಇದರೊಂದಿಗೆ 4-ಇಂಚಿನ ಐಪಿಎಸ್‌ ಸ್ಕ್ರೀನ್‌ ಹಾಗೂ ಡ್ಯುಯೆಲ್‌-ಕೋರ್‌ ಪ್ರೊಸೆಸರ್‌ ನೀಡಲಾಗಿದೆ. 5-ಎಂಪಿ ಕ್ಯಾಮೆರಾ ಕೂಡ ನೀಡಲಾಗಿದ್ದು ರೂ.14,499 ದರದಲ್ಲಿ ಮಾರುಕಟ್ಟೆಗೆ ಬರಲಿದೆ.

ಲೆನೊವೊ ಪಿ700ಐ ಮತ್ತೊಂದು ಡ್ಯುಯೆಲ್‌ ಸಿಮ್‌ ಸ್ಮಾರ್ಟ್‌ಫೋನ್‌ ಆಗಿದ್ದು, 4-ಇಂಚಿನ ಸ್ಮಾರ್ಟ್‌ಫೋನ್‌ನಲ್ಲಿ 'ಲೆನೊವೊ ಸ್ಮಾರ್ಟ್‌ ಎನರ್ಜಿ ತಂತ್ರಜ್ಞಾನ' ನೀಡಲಾಗಿದೆ' ಈ ಮೂಲಕ ಉತ್ತಮ ಬ್ಯಾಟರೀ ಬ್ಯಾಕಪ್‌ ನೀಡಲು ಸಹಕರಿಸುತ್ತದೆ. ಸಂಸ್ಥೆಯ ಪ್ರಕಾರ ಪಿ700ಐ 28 ಗಂಟೆಗಳ ವರೆಗಿನ ಟಾಕ್‌ಟೈಮ್‌ ಹಾಗೂ 13 ಬರೋಬ್ಬರಿ ದಿನಗಳವರೆಗಿನ ಸ್ಟ್ಯಾಂಟ್‌ ಬೈ ನೀಡುತ್ತದೆ. ರೂ 12,499,ದರದಲ್ಲಿನ ಲೆನೊವೊ ಪಿ700ಐ ನಲ್ಲಿ 1GHz ನ ಡ್ಯುಯೆಲ್‌-ಕೋರ್‌ ಪ್ರೊಸೆರ್‌ ನೀಡಲಾಗಿದೆ.

ಕೊನೆಯದಾಗಿ, ಲೆನೊವೊ ಎ60+ ಪ್ರಾಥಮಿಕ ಹಂತದ ಸ್ಮಾರ್ಟ್‌ಫೋನ್‌ ಆಗಿದ್ದು. 3.5-ಇಂಚಿನ ಸ್ಕ್ರೀನ್‌ ನೊಂದಿಗೆ, 1GHz ಪ್ರೊಸೆಸರ್‌ ಹಾಗೂ ಆಂಡ್ರಾಯ್ಡ್‌ 2.3 ಆಪರೇಟಿಂಗ್ ಸಿಸ್ಟಂ ಹೊಂದಿದ್ದರೆ, ಉಳಿದ ನಾಲ್ಕೂ ಸ್ಮಾರ್ಟ್‌ಫೋನ್ಸ್‌ಗಳು ಆಂಡ್ರಾಯ್ಡ್‌ 4.1 ಆಪರೇಟಿಂಗ್‌ ಸಿಸ್ಟಂ ಚಾಲಿತವಾಗಿದೆ. ಅಂದಹಾಗೆ ಲೆನೊವೊ ಎ60+ ರೂ.6,499 ದರದಲ್ಲಿ ಲಭ್ಯವಿದೆ.

"ಭಾರತದಲ್ಲಿನ ಪಿಸಿ ತಯಾರಿಕಾ ವಲಯದಲ್ಲಿ ಮೊದಲ ಸ್ಥಾನ ಅಲಂಕರಿಸಿದ ಬಳಿಕ ಇದೀಗ ಸ್ಮಾರ್ಟ್‌ಫೋನ್‌ ತಯಾರಿಕಾ ಕ್ಷೇತ್ರಕ್ಕೆ ಕಾಲಿರಿಸಲಾಗಿದೆ ಅಲ್ಲದೆ ಲೆನೋವೋ ಸ್ಮಾರ್ಟ್‌ಫೋನ್‌ ಗ್ರಾಹಕರಿಗೆ ಆಕರ್ಷಕ ಫೀಚರ್ಸ್‌ಗಲನ್ನು ನೀಡುವ ಮೂಲಕ ತನ್ನತ ಸೆಳೆಯಲಿದೆ" ಎಂದು ಲೆನೋವೋ ಇಂಡಿಯಾ ಸಂಸ್ಥೆಯ ನಿರ್ವಾಹಕ ನಿರ್ದೇಶಕ ಅಮರ್ ಬಾಬು ನೂತನ ಸ್ಮಾರ್ಟ್‌ಫೋನ್ಸ್‌ ಅನಾವರಣ ಗೊಳಿಸಿದ ಬಳಿಕ ಹೇಳಿದರು.

"ಲೆನೊವೊ ಸ್ಮಾರ್ಟ್‌ಫೋನ್‌ ತಯಾರಿಕಾ ಕ್ಷೇತ್ರದಲ್ಲಿ ಈಗಾಗಲೇ ಚೀನಾದ ಮಾರುಕಟ್ಟೆಯಲ್ಲಿ ಉತ್ತಮ ಯಶಸ್ಸನ್ನು ಪಡೆದಿದ್ದು ಕೇವಲ 18 ತಿಂಗಳ ಅವದಿಯಲ್ಲಿ ಒಟ್ಟು ಸ್ಮಾರ್ಟ್‌ಫೋನ್ಸ್‌ ಮಾರಾಟದಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಯಶಸ್ಸಿನ ಬಳಿಕ ಸಂಸ್ಥೆಯು ತನ್ನಯ ಸ್ಮಾರ್ಟ್‌ಫೋನ್‌ಗಳನ್ನು ಇತರೆ ದೇಶಗಳಲ್ಲಿಯೂ ಕೂಡ ವಿಸ್ತರಿಸಲು ನಿರ್ಧರಿಸಿದ್ದು ಸಂಸ್ಥೆಯ ಸರಕುಗಳಿಗೆ ಗ್ರಾಹಕರನ್ನು ಆಕರ್ಷಿಸಲು ಮುಂದಾಗಿರುವುದಾಗಿ" ಲೆನೊವೊ ಎಂಐಡಿಹೆಚ್‌ ನ ಉಪಾಧ್ಯಕ್ಷ ಜೆಡಿ ಹೊವರ್ಡ್‌ ತಿಳಿಸಿದ್ದಾರೆ.

ಅಂದಹಾಗ ಲೆನೊವೊದ ಈ ಐದೂ ಸ್ಮಾರ್ಟ್‌ಫೋನ್‌ಗಳು ಈಗಾಗಲೇ ಕರ್ನಾಟಕ, ತಮಿಳುನಾಡು, ಕೇರಳಾ ಹಾಗೂ ಗುಜರಾತ್‌ ರಾಜ್ಯಗಳಲ್ಲಿನ ಲೆನೊವೊ ರಿಟೇಲ್‌ ಮಳಿಗೆಗಳಲ್ಲಿ ಲಭ್ಯವಿದೆ.

ದೀಪಾವಳಿಗೆ ಬರಲಿರುವ ಆಕರ್ಷಕ ಗ್ಯಾಡ್ಜೆಟ್‌ಗಳು

ಫೋಟೋ ಗ್ಯಾಲರಿ...

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X