ಲೆನೊವೊ ಪಿ 780:ಪ್ರವಾಸಿಗರಿಗೆ ಉತ್ತಮ ಸ್ಮಾರ್ಟ್‌ಫೋನ್‌

By Ashwath
|

ಸ್ಮಾರ್ಟ್‌ಫೋನಿನ ಬ್ಯಾಟರಿಯನ್ನು ಚಾರ್ಜ್‌ ಮಾಡುವುದು ಹೇಗೆ? ಪ್ರವಾಸಕ್ಕೆ ಹೋಗುವ ಮೊದಲು ಮತ್ತು ಪ್ರವಾಸದ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಈ ಪ್ರಶ್ನೆ ಕಾಡದೇ ಇರಲಾರದು. ಸ್ಮಾರ್ಟ್‌ಫೋನ್‌ ಬಳಕೆ ಕಡಿಮೆ ಮಾಡಬೇಕು ಎಂದು ಯೋಚಿಸಿದ್ದರೂ, ಫೇಸ್‌ಬುಕ್‌, ಇಂಟರ್‌ನೆಟ್‌,ಫೋನ್‌ ಕರೆಯಿಂದಾಗಿ ಸ್ಮಾರ್ಟ್‌ಫೋನ್‌‌‌ ಬ್ಯಾಟರಿಕಡಿಮೆಯಾಗುತ್ತಿರುತ್ತದೆ.. ಹೀಗಾಗಿ, ಆಗಾಗ ಪ್ರವಾಸಕ್ಕೆ ಹೋಗುತ್ತಿರುವ ವ್ಯಕ್ತಿಗಳಿಗಾಗಿ ಲೆನೊವೊ ಕಂಪೆನಿ ಈಗಾಗಲೇ ಶಕ್ತಿಶಾಲಿ ಬ್ಯಾಟರಿ ಹೊಂದಿರುವ ಸ್ಮಾರ್ಟ್‌‌‌ಫೋನನ್ನು ಬಿಡುಗಡೆ ಮಾಡಿದೆ. 4000 mAh ಬ್ಯಾಟರಿ ಹೊಂದಿರುವ ಸ್ಮಾರ್ಟ್‌ಫೋನ್‌ ಇದಾಗಿದ್ದು ಉತ್ತಮ ವಿಶೇಷತೆಗಳನ್ನು ಹೊಂದಿದೆ.

ಲೆನೊವೊ ಪಿ 780
ಬೆಲೆ: 17,378
ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಐಪಿಎಸ್‌ ಎಚ್‌ಡಿ ಸ್ಕ್ರೀನ್‌(1280 x 720 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.2 GHz ಕ್ವಾಡ್‌ ಕೋರ್‌ ಪ್ರೊಸೆಸರ್‌
4 GB ಆಂತರಿಕ ಮೆಮೋರಿ
1 GB ರ್‍ಯಾಮ್‌
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ಜಿಪಿಎಸ್‌,ವೈಫೈ,ಬ್ಲೂಟೂತ್‌,ಮೈಕ್ರೋ ಯುಎಸ್‌ಬಿ
ಪ್ರಾಕ್ಸಿಮಿಟಿ ಸೆನ್ಸರ್‌,ಲೈಟ್‌ ಸೆನ್ಸರ್‌,ಗ್ರಾವಿಟಿ ಸೆನ್ಸರ್‌
4000 mAh ಬ್ಯಾಟರಿ

ಲೆನೊವೊ ಪಿ780 ಸ್ಮಾರ್ಟ್‌ಫೋನಿನ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

#1

#1


ಪ್ರವಾಸದ ಸಂದರ್ಭದಲ್ಲಿ ಬಳಕೆದಾರಿಗೆ ಕಾಡುವ ದೊಡ್ಡ ಸಮಸ್ಯೆ ಅದರ ಬ್ಯಾಟರಿಯದ್ದು. ದುಬಾರಿ ಬೆಲೆಯ ಸ್ಮಾರ್ಟ್‌ಫೋನ್‌ಗಳು ಫುಲ್‌ ಎಚ್‌ಡಿಯ ದೊಡ್ಡ ಸ್ಕ್ರೀನ್‌,ಕ್ಯಾಮೆರಾ ವಿಶೇಷತೆ,ಪ್ರೊಸೆಸರ್‌ ಸ್ಪೀಡ್‌ ಎಲ್ಲವನ್ನುಹೊಂದಿರುತ್ತದೆ.ಆದರೆ ಶಕ್ತಿಶಾಲಿ ಬ್ಯಾಟರಿಯನ್ನು ನೀಡಿರುವುದಿಲ್ಲ. ಉದಾಹರಣೆಗೆ ಸ್ಯಾಮ್‌ಸಂಗ್‌ನ ಹೊಸ ಫ್ಯಾಬ್ಲೆಟ್‌ ಗೆಲಾಕ್ಸಿ ನೋಟ್‌3 3200 mAh ಬ್ಯಾಟರಿಯನ್ನು ಹೊಂದಿದರೆ ಎಲ್‌ಜಿಯ ಜಿ2 ಮತ್ತು ಸೋನಿ ಎಕ್ಸ್‌ಪೀರಿಯಾ ಝಡ್‌ ಒನ್‌ 3000 mAh ಬ್ಯಾಟರಿಯನ್ನು ಹೊಂದಿದೆ.

ಆದರೆ ಈ ಸ್ಮಾರ್ಟ್‌ಫೋನ್‌ ಶಕ್ತಿಶಾಲಿಯಾದ 4000 mAh ಬ್ಯಾಟರಿಯನ್ನು ಹೊಂದಿದೆ. ಬ್ಯಾಟರಿಯ ಸ್ಟ್ಯಾಂಡ್‌ ಬೈ ಟೈಂ 20 ದಿನವಾಗಿದ್ದು,3ಜಿ ಬಳಕೆಯಲ್ಲಿ 25 ಗಂಟೆ, 2ಜಿಯಲ್ಲಿ43ಗಂಟೆಗಳ ಕಾಲ ಬಳಸುವ ಸಾಮರ್ಥ್ಯ ಸ್ಮಾರ್ಟ್‌ಫೋನ್‌ ಬ್ಯಾಟರಿಯಲ್ಲಿದೆ.

#2

#2

ಲೆನೊವೊ ಪಿ 780 143x73x9.95 ಮಿ.ಮೀಟರ್‌ ಗಾತ್ರ ಮತ್ತು176 ಗ್ರಾಂ ತೂಕವನ್ನು ಹೊಂದಿದೆ. ಲೋಹದಿಂದ ತಯಾರಾದ ದೇಹವನ್ನು ಹೊಂದಿರುವುರಿಂದ ಸ್ಮಾರ್ಟ್‌ಫೋನ್‌ ಗಟ್ಟಿಮಟ್ಟಾಗಿದ್ದು ಕೈಯಲ್ಲೂ ಸುಲಭವಾಗಿ ಹಿಡಿಯಬಹುದಾಗಿದೆ. ಗ್ರಾವಿಟಿ,ಲೈಟ್‌ ಸೆನ್ಸರ್‌,ಪ್ರಾಕ್ಸಿಮಿಟಿ ಸೆನ್ಸರ್‌ ಈ ಸ್ಮಾರ್ಟ್‌ಫೋನಲ್ಲಿದೆ.

#3

#3


ಲೆನೊವೊ ಸ್ಮಾರ್ಟ್‌ಫೋನಲ್ಲಿ ಡ್ಯುಯಲ್‌ ಸಿಮ್‌ ಹಾಕಬಹುದು. ಜೊತೆಗೆ ಡ್ಯುಯಲ್‌ ಸ್ಟ್ಯಾಂಡ್‌ ಬೈ ಹೊಂದಿದೆ. ಶಕ್ತಿಶಾಲಿ ಬ್ಯಾಟರಿಯ ಜೊತೆಗೆ ಡ್ಯುಯಲ್‌ ಸಿಮ್‌ ನೀಡಿರುವುದರಿಂದ ಡ್ಯುಯಲ್‌ ಸಿಮ್‌ ಸ್ಮಾರ್ಟ್‌ಫೋನ್‌ನಲ್ಲಿ ಪವರ್‌ಪುಲ್‌ ಸ್ಮಾರ್ಟ್‌ಫೋನ್‌‌ ಇದಾಗಿದೆ.

#4

#4


ಈ ಸ್ಮಾರ್ಟ್‌ಫೋನ್‌ 1280 x 720 ಪಿಕ್ಸೆಲ್‌ ರೆಸೂಲೂಶನ್‌ ಹೊಂದಿರುವ 5 ಇಂಚಿನ ಎಚ್‌ಡಿ ಐಪಿಎಸ್‌ ಸ್ಕ್ರೀನ್‌(294 ಪಿಪಿಐ) ಹೊಂದಿದೆ. ಹೀಗಾಗಿ ಪ್ರವಾಸದ ಸಂದರ್ಭದಲ್ಲಿ ಗೇಮ್ಸ್ ಆಡಲು ಮತ್ತು ಎಚ್‌ಡಿ ವಿಡಿಯೋಗಳನ್ನು ಉತ್ತಮ ಗುಣಮಟ್ಟದಲ್ಲಿ ವೀಕ್ಷಿಸಬಹುದು.‌

#5

#5


ಇನ್ನೂ ಅಂತಿಮವಾಗಿ ಈ ಸ್ಮಾರ್ಟ್‌ಫೋನ್‌ಗೆ ಬೆಲೆ 18599 ರೂಪಾಯಿ.4 GB ಆಂತರಿಕ ಮೆಮೊರಿ,1 GB ರ್‍ಯಾಮ್‌,1.2 GHz ಕ್ವಾಡ್‌ ಕೋರ್‌ ಪ್ರೊಸೆಸರ್‌,4000 mAh ಬ್ಯಾಟರಿ ಈ ಎಲ್ಲಾ ವಿಶೇಷತೆಗಳು ಈ ಸ್ಮಾರ್ಟ್‌ಫೋನಲ್ಲಿರುವುದರಿಂದ, ಆಗಾಗ ಕೆಲಸ ಸಂಬಂಧ ಪ್ರವಾಸಕ್ಕೆ ಹೋಗುವ ವ್ಯಕ್ತಿಗಳು ಈ ಸ್ಮಾರ್ಟ್‌ಫೋನ್‌ ಖರೀದಿಸಬಹುದು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X