ಬ್ಯಾಟರಿ ಚಿಂತೆ ಬಿಡಿ,ಸ್ಮಾರ್ಟ್‌ಫೋನಲ್ಲಿ ಕೆಲಸ ಮಾಡಿ

By Ashwath
|

ಭಾರತದ ಮಾರುಕಟ್ಟೆಯಲ್ಲಿ ಈಗ ಲೆನೊವೊ ಸ್ಮಾರ್ಟ್‌ಫೋನ್‌ ಕಂಪೆನಿ ನಿಧಾನವಾಗಿ ಸದ್ದು ಮಾಡುತ್ತಿದೆ. ವಿಶ್ವದ ಮಾರುಕಟ್ಟೆಯಲ್ಲಿ ಏಳನೇ ಸ್ಥಾನದಲ್ಲಿರುವ ಚೀನಾ ಮೂಲದ ಲೆನೊವೊ ಕಂಪೆನಿ ಭಾರತದ ಮಾರುಕಟ್ಟೆಗೆ ಇತ್ತೀಚಿನ ದಿನಗಳಲ್ಲಿ ಗುಣಮಟ್ಟದ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡತೊಡಗಿದೆ. ತನ್ನಸ್ಮಾರ್ಟ್‌ಫೋನ್‌ಗೆ ಶಕ್ತಿಶಾಲಿ ಬ್ಯಾಟರಿ ನೀಡುತ್ತಿರುವ ಲೆನೊವೊ ಕಂಪೆನಿ ತನ್ನ ಪಿ780 ಸ್ಮಾರ್ಟ್‌ಫೋನಿಗೆ ಇದುವರೆಗೂ ಯಾವ ಕಂಪೆನಿ ನೀಡದ 4000 mAh ಬ್ಯಾಟರಿಯನ್ನು ನೀಡಿದೆ.

ಶಕ್ತಿಶಾಲಿ ಬ್ಯಾಟರಿಯ ಜೊತೆಗೆ ಗುಣಮಟ್ಟದ ಪ್ರೊಸೆಸರ್‌, ರ್‍ಯಾಮ್‌,ಕ್ಯಾಮೆರಾಗಳನ್ನು ನೀಡಿದೆ. ದೀರ್ಘಕಾಲ ಪ್ರಯಾಣ ಮಾಡುವವರ ಜೊತೆಗೆ ಗುಣಮಟ್ಟದ ಬ್ಯಾಟರಿ ಹೊಂದಿರುವ ಸ್ಮಾರ್ಟ್‌ಫೋನ್‌ ಖರೀದಿಸುವ ಮಂದಿಗೆ ಈ ಸ್ಮಾರ್ಟ್‌ಫೋನ್‌ ಇಷ್ಟವಾಗತೊಡಗಿದೆ. ಈ ಕಾರಣಕ್ಕಾಗಿ ಗಿಝ್‌ಬಾಟ್‌ ಲೆನೊವೊದ ಶಕ್ತಿಶಾಲಿ ಬ್ಯಾಟರಿ ಹೊಂದಿರುವ ಪಿ 780 ಸ್ಮಾರ್ಟ್‌ಫೋನ್ನು ಒಂದು ವಾರಗಳ ಕಾಲ ಪರೀಕ್ಷಿಸಿದೆ. 3ಜಿ,ವೈಫೈ, ಮೂಲಕ ವಿಡಿಯೋ ವೀಕ್ಷಿಸಿ,ಮ್ಯೂಸಿಕ್‌ ಕೇಳಿ ಈ ಸ್ಮಾರ್ಟ್‌ಫೋನನ್ನು ಪರೀಕ್ಷಿಸಿದೆ. ಹೀಗಾಗಿ ಮುಂದಿನ ಪುಟದಲ್ಲಿ ಹೇಗೆ ಪರೀಕ್ಷೆ ಮಾಡಿದ್ದೇವೆ ಎನ್ನುವ ವಿವರವಿದ್ದು ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಲೆನೊವೊ ಪಿ 780
ಬೆಲೆ: 17,378
ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಐಪಿಎಸ್‌ ಎಚ್‌ಡಿ ಸ್ಕ್ರೀನ್‌(1280 x 720 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.2 GHz ಕ್ವಾಡ್‌ ಕೋರ್‌ ಪ್ರೊಸೆಸರ್‌
4 GB ಆಂತರಿಕ ಮೆಮೋರಿ
1 GB ರ್‍ಯಾಮ್‌
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ಜಿಪಿಎಸ್‌,ವೈಫೈ,ಬ್ಲೂಟೂತ್‌,ಮೈಕ್ರೋ ಯುಎಸ್‌ಬಿ
ಪ್ರಾಕ್ಸಿಮಿಟಿ ಸೆನ್ಸರ್‌,ಲೈಟ್‌ ಸೆನ್ಸರ್‌,ಗ್ರಾವಿಟಿ ಸೆನ್ಸರ್‌
4000 mAh ಬ್ಯಾಟರಿ

ಲೆನೊವೊ ಸ್ಮಾರ್ಟ್‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

#1

#1

ಫುಲ್‌ ಚಾರ್ಜ್‌ ಆಗಿರುವ ಸ್ಮಾರ್ಟ್‌‌ಫೋನಿನ ಸ್ಕ್ರೀನ್‌ ಬ್ರೈಟ್‌ನೆಸ್‌ನ್ನು ಆಟೋಮ್ಯಾಟಿಕ್‌ ಆಗಿ ಸೆಟ್‌ ಮಾಡಿ ನಮ್ಮ ಪರೀಕ್ಷೆಯನ್ನು ಆರಂಭಿಸಿದ್ದೇವು.ಆರಂಭಲ್ಲಿ 30 ನಿಮಿಷಗಳ ಕಾಲ ವೈಫೈ ಮೂಲಕ ಯೂಟ್ಯೂಬ್‌ ವಿಡಿಯೋ ವೀಕ್ಷಣೆ, 20 ನಿಮಿಷ ಕಾಲ ಕರೆ, 3ಜಿ ಮೂಲಕ ದಿನಪೂರ್ತಿ ವಾಟ್ಸ್‌ ಅಪ್‌,ಇನ್ಸಟಾಗ್ರಾಮ್‌ ಸೇರಿದಂತೆ ಉಳಿದ ಆಪ್‌‌ ಆನ್‌ ಮಾಡಿ ಪರೀಕ್ಷೆ ಮಾಡಲು ತೊಡಗಿದೆವು. ಜೊತೆಗೆ ಅರ್ಧ‌ಗಂಟೆ Plants Vs Zombies ಗೇಮ್ಸ್‌ ಆಡಿದ್ದೇವು.

ಇಷ್ಟೆಲ್ಲಾ ಆದರೂ ಕೊನೆಗೆ ಸ್ಮಾರ್ಟ್‌ಫೋನ್ ಬ್ಯಾಟರಿಯ ಶೇ.48 ಭಾಗ ಹಾಗೇಯೆ ಉಳಿದಿತ್ತು.

#2

#2


ಎರಡನೇ ದಿನವು ನಾವು ಮೊದಲಿನ ದಿನದಲ್ಲಿ ಏನೇನು ಪರೀಕ್ಷೆ ನಡೆಸಿದ್ದೇವು ಅದೇ ಪರೀಕ್ಷೆಯನ್ನು ಮತ್ತೊಮ್ಮೆ ಮಾಡಿದ್ದೇವು.ಸಂಜೆ ಏಳು ಗಂಟೆಯಾದಾಗ ಸ್ಮಾರ್ಟ್‌ಫೋನಿನ ಬ್ಯಾಟರಿ ಸಂಪೂರ್ಣ‌ ಖಾಲಿಯಾಯಿತು.

#3

#3


ನಿಮಗೆ ತಿಳಿದಿರಬಹುದು ಇಂಟರ್‌ನೆಟ್‌ ಮತ್ತು ವೈಫೈ ಹೆಚ್ಚು ಬಳಸಿದರೆ ಸ್ಮಾರ್ಟ್‌ಫೋನಿನ ಬ್ಯಾಟರಿ ಹೆಚ್ಚು ಖರ್ಚಾ‌ಗುತ್ತದೆ. ಹೀಗಾಗಿ ಮೂರನೇ ದಿನ ನಾವು ಇಂಟರ್‌ನೆಟ್‌ ದಿನ ಪೂರ್ತಿ‌ ಬಳಸದೇ ಪರೀಕ್ಷೆಗೆ ನಡೆಸಲು ಮುಂದಾದೆವು.ಇದಕ್ಕಾಗಿ ನಾವು ಬ್ಯಾಟರಿಯನ್ನು ಫುಲ್‌ ಚಾರ್ಚ್‌ ಮಾಡದೇ ಶೇ.68 ರಷ್ಟು ಭಾಗವನ್ನು ಮಾತ್ರ ಚಾರ್ಜ್‌ ಮಾಡಿ 30 ನಿಮಿಷಗಳ ಕಾಲ ವೈಫೈ ಮೂಲಕ ಯೂಟ್ಯೂಬ್‌ ವಿಡಿಯೋ ವೀಕ್ಷಣೆ, 20 ನಿಮಿಷ ಕಾಲ ಕರೆ, ಅರ್ಧ‌ಗಂಟೆ Plants Vs Zombies ಗೇಮ್ಸ್‌ ಆಡಿದ್ದೇವು.

#4

#4


ಈ ದಿನ ದಿನ ಪೂರ್ತಿ‌ ಇಂಟರ್‌ನೆಟ್‌ ಬಳಕೆ ಮಾಡಿಲ್ಲ.ಮೊದಲ ದಿನ ದಂತೆಗೇಮಿಂಗ್‌,ಆನ್‌ಲೈನ್‌ ವಿಡಿಯೋ,ಕಾಲ್‌ ಮಾಡಿದ್ದೇವು. ಬ್ಯಾಟರಿ ಅಷ್ಟೇನು ಕಡಿಮೆಯಾಗಲಿಲ್ಲ. ಶೇ.28 ರಷ್ಟು ಚಾರ್ಜ್‌ ಹಾಗೇಯೆ ಉಳಿದಿತ್ತು.

#5

#5


ಐದನೇ ದಿನ ಮಧ್ಯಾಹ್ನ ಯೂ ಟ್ಯೂಬ್‌ ವಿಡಿಯೋ ನೋಡುತ್ತಿರುವಾಗ ಬ್ಯಾಟರಿಯ ಚಾರ್ಜ್‌ ಸಂಪೂರ್ಣ ಖಾಲಿಯಾಯಿತು.ಬ್ಯಾಟರಿ ಖಾಲಿಯಾಗುವ ಮೊದಲು ನಾವು ಅರ್ಧ‌ಗಂಟೆ Plants Vs Zombies ಗೇಮ್ಸ್‌ ಆಡಿದ್ದೇವು.

#6

#6

ಈ ದಿನ ಫುಲ್‌ ಚಾರ್ಜ್‌‌ ಆಗಿರುವ ಸ್ಮಾರ್ಟ್‌ಫೋನನ್ನು ಇಂಟರ್‌ನೆಟ್‌ ಬಳಸದೇ ಪರೀಕ್ಷೆ ಮಾಡಲು ಮುಂದಾದೆವು.ಫೋನ್‌ ಕಾಲ್‌ ಮೆಸೇಜ್‌,ಕ್ಯಾಮೆರಾದಲ್ಲಿ ಫೋಟೋ ತೆಗೆದೆವು, ಜೊತೆಗೆ ಒಂದು ಗಂಟೆ ಮ್ಯೂಸಿಕ್‌ ಕೇಳಿದ್ದೇವು.ಇಷ್ಟೆಲ್ಲಾ ಆದರೂ ಶೇ.79ರಷ್ಟು ಬ್ಯಾಟರಿಯಲ್ಲಿ ಚಾರ್ಜ್ ಹಾಗೇಯೆ ಉಳಿದಿತ್ತು

#7

#7


ಆರನೇ ದಿನ ಏನೇನು ಸ್ಮಾರ್ಟ್‌ಫೋನ್‌ ಹೇಗೆ ಪರೀಕ್ಷೆ ಮಾಡಿದ್ದೇವು ಅದೇ ಕೆಲಸವನ್ನು ಈ ದಿನ ಮಾಡಿದೆವು. ದಿನದ ಕೊನೆಯಲ್ಲಿ ಶೇ.49 ಚಾರ್ಜ್‌ ಬ್ಯಾಟರಿಯಲ್ಲಿ ಹಾಗೇಯೆ ಉಳಿದಿತ್ತು.

#8

#8


3ಜಿ,ವೈಫೈಯನ್ನು ಹೆಚ್ಚಾಗಿ ಬಳಸಿದರೆ 40 ಗಂಟೆಗಳ ಕಾಲ ಸ್ಮಾರ್ಟ್‌ಫೋನ್‌ ಬಳಸಬಹುದು.
3ಜಿಯನ್ನು ಕಡಿಮೆ ಮಾಡಿ ವೈಫೈ ಹೆಚ್ಚು ಬಳಕೆ ಮಾಡಿದ್ದಲ್ಲಿ ಸ್ಮಾರ್ಟ್‌ಫೋನ್‌ ಎರಡುವರೆ ದಿನಗಳ ಕಾಲ ಬಳಸಬಹುದು.
ಇನ್ನೂ ಸಂಪೂರ್ಣ‌ವಾಗಿ ಡೇಟಾ ಬಳಕೆಯನ್ನು ನಿಲ್ಲಿಸಿದರೆ ಮೂರು ದಿನಗಳ ಕಾಲ ಲೆನೆವೊ ಸ್ಮಾರ್ಟ್‌ಫೋನ್‌ ಬಳಸಬಹುದು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X