Home
ಮೊಬೈಲ್

ಲೆನೊವೊ 4000 mAh ಬ್ಯಾಟರಿ ಸ್ಮಾರ್ಟ್‌ಫೋನಿನ ವಿಶೇಷತೆ ಏನು?

By Ashwath

ಭಾರತದ ಮಾರುಕಟ್ಟೆಯಲ್ಲಿ ಈಗ ಲೆನೊವೊ ಸ್ಮಾರ್ಟ್‌ಫೋನ್‌ ಕಂಪೆನಿ ನಿಧಾನವಾಗಿ ಸದ್ದು ಮಾಡುತ್ತಿದೆ. ವಿಶ್ವದ ಮಾರುಕಟ್ಟೆಯಲ್ಲಿ ಏಳನೇ ಸ್ಥಾನದಲ್ಲಿರುವ ಚೀನಾ ಮೂಲದ ಲೆನೊವೊ ಕಂಪೆನಿ ಭಾರತದ ಮಾರುಕಟ್ಟೆ ಇತ್ತೀಚಿನ ದಿನಗಳಲ್ಲಿ ಗುಣಮಟ್ಟದ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡತೊಡಗಿದೆ. ಅದರಲ್ಲೂ ಇತ್ತೀಚಿಗೆ ವಿಶ್ವದ ಮಾರುಕಟ್ಟೆಯಲ್ಲಿ ಈ ಕಂಪೆನಿಯ ಒಂದು ಸ್ಮಾರ್ಟ್‌ಫೋನ್‌ ಬಗ್ಗೆ ವಿಮರ್ಷೆ‌ಗಳು ಹೆಚ್ಚು ಹೆಚ್ಚಾಗಿ ಪ್ರಕಟಗೊಂಡಿವೆ. ತನ್ನಸ್ಮಾರ್ಟ್‌ಫೋನ್‌ಗೆ ಶಕ್ತಿಶಾಲಿ ಬ್ಯಾಟರಿ ನೀಡುತ್ತಿರುವ ಲೆನೊವೊ ಕಂಪೆನಿ ತನ್ನ ಪಿ780 ಸ್ಮಾರ್ಟ್‌ಫೋನಿಗೆ ಇದುವರೆಗೂ ಯಾವ ಕಂಪೆನಿ ನೀಡದ 4000 mAh ಬ್ಯಾಟರಿಯನ್ನು ನೀಡಿದೆ.

ಶಕ್ತಿಶಾಲಿ ಬ್ಯಾಟರಿಯ ಜೊತೆಗೆ ಗುಣಮಟ್ಟದ ಪ್ರೊಸೆಸರ್‌, ರ್‍ಯಾಮ್‌,ಕ್ಯಾಮೆರಾಗಳನ್ನು ನೀಡಿದೆ. ದೀರ್ಘಕಾಲ ಪ್ರಯಾಣ ಮಾಡುವವರ ಜೊತೆಗೆ ಗುಣಮಟ್ಟದ ಬ್ಯಾಟರಿ ಹೊಂದಿರುವ ಸ್ಮಾರ್ಟ್‌ಫೋನ್‌ ಖರೀದಿಸುವ ಮಂದಿಗೆ ಈ ಸ್ಮಾರ್ಟ್‌ಫೋನ್‌ ಇಷ್ಟವಾಗತೊಡಗಿದೆ. ಹೀಗಾಗಿ ಇಲ್ಲಿ ಈ ಸ್ಮಾರ್ಟ್‌ಫೋನನ್ನು ನೀವೇನಾದ್ರೂ ಖರೀದಿಸಬೇಕು ಎಂದು ಯೋಚಿಸುತ್ತಿದ್ದಲ್ಲಿ ಈ ಸ್ಮಾರ್ಟ್‌ಫೋನಿನ ವಿಶೇಷತೆಗಳನ್ನು ಮುಂದಿನ ಪುಟದಲ್ಲಿ ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಲೆನೊವೊ ಪಿ 780
ಬೆಲೆ: 17,378
ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಐಪಿಎಸ್‌ ಎಚ್‌ಡಿ ಸ್ಕ್ರೀನ್‌(1280 x 720 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.2 GHz ಕ್ವಾಡ್‌ ಕೋರ್‌ ಪ್ರೊಸೆಸರ್‌
4 GB ಆಂತರಿಕ ಮೆಮೋರಿ
1 GB ರ್‍ಯಾಮ್‌
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ಜಿಪಿಎಸ್‌,ವೈಫೈ,ಬ್ಲೂಟೂತ್‌,ಮೈಕ್ರೋ ಯುಎಸ್‌ಬಿ
ಪ್ರಾಕ್ಸಿಮಿಟಿ ಸೆನ್ಸರ್‌,ಲೈಟ್‌ ಸೆನ್ಸರ್‌,ಗ್ರಾವಿಟಿ ಸೆನ್ಸರ್‌
4000 mAh ಬ್ಯಾಟರಿ

#1

#1

ಸ್ಮಾರ್ಟ್‌ಫೋನ್‌ ಬಳಕೆದಾರಿಗೆ ಕಾಡುವ ದೊಡ್ಡ ಸಮಸ್ಯೆ ಅದರ ಬ್ಯಾಟರಿಯದ್ದು. ದುಬಾರಿ ಬೆಲೆಯ ಸ್ಮಾರ್ಟ್‌ಫೋನ್‌ಗಳು ಫುಲ್‌ ಎಚ್‌ಡಿಯ ದೊಡ್ಡ ಸ್ಕ್ರೀನ್‌,ಕ್ಯಾಮೆರಾ ವಿಶೇಷತೆ,ಪ್ರೊಸೆಸರ್‌ ಸ್ಪೀಡ್‌ ಎಲ್ಲವನ್ನುಹೊಂದಿರುತ್ತದೆ.ಆದರೆ ಶಕ್ತಿಶಾಲಿ ಬ್ಯಾಟರಿಯನ್ನು ನೀಡಿರುವುದಿಲ್ಲ. ಉದಾಹರಣೆಗೆ ಸ್ಯಾಮ್‌ಸಂಗ್‌ನ ಹೊಸ ಫ್ಯಾಬ್ಲೆಟ್‌ ಗೆಲಾಕ್ಸಿ ನೋಟ್‌3 3200 mAh ಬ್ಯಾಟರಿಯನ್ನು ಹೊಂದಿದರೆ ಎಲ್‌ಜಿಯ ಜಿ2 ಮತ್ತು ಸೋನಿ ಎಕ್ಸ್‌ಪೀರಿಯಾ ಝಡ್‌ ಒನ್‌ 3000 mAh ಬ್ಯಾಟರಿಯನ್ನು ಹೊಂದಿದೆ.

ಆದರೆ ಈ ಸ್ಮಾರ್ಟ್‌ಫೋನ್‌ ಶಕ್ತಿಶಾಲಿಯಾದ 4000 mAh ಬ್ಯಾಟರಿಯನ್ನು ಹೊಂದಿದೆ.ಅಷ್ಟೇ ಅಲ್ಲದೇ 3ಜಿ ಬಳಕೆಯಲ್ಲಿ 25 ಗಂಟೆ, 2ಜಿಯಲ್ಲಿ43ಗಂಟೆಗಳ ಕಾಲ ಬಳಸುವ ಸಾಮರ್ಥ್ಯ ಸ್ಮಾರ್ಟ್‌ಫೋನ್‌ ಬ್ಯಾಟರಿಯಲ್ಲಿದೆ.

#2

#2


ಗದ್ದಲವಿರುವ ಪರಿಸರದಲ್ಲಿ ಸ್ಮಾರ್ಟ್‌ಫೋನ್‌‌ಗಲ್ಲಿ ಮಾತನಾಡುವುದು ಬಹಳ ಕಷ್ಟ. ಆದರೆ ಈ ಸ್ಮಾರ್ಟ್‌ಫೋನನ್ನು ಗದ್ದಲವಿರುವ ಸ್ಥಳದಲ್ಲಿ ಗಿಝ್‌ಬಾಟ್‌ ಪರೀಕ್ಷಿಸಿದ್ದು ಸ್ಮಾರ್ಟ್‌ಫೋನಿಂದ ಕರೆ ಸ್ವೀಕರಿಸುವ ವ್ಯಕ್ತಿಗಳಿಗೆ ಧ್ವನಿ ಸ್ಪಷ್ಟವಾಗಿ ಕೇಳಿಸುತ್ತದೆ.

#3

#3

ಇನ್ನೂ ಈ ಸ್ಮಾರ್ಟ್‌ಫೋನ್‌ನಲ್ಲಿ ಪ್ಲಾಸ್ಟಿಕ್‌ ಬಳಕೆ ಕಡಿಮೆ ಮಾಡಿದ್ದಾರೆ.ಹಿಂದುಗಡೆ ಬ್ಯಾಟರಿ ತೆಗೆಯುವ ಕವರ್‌ನ್ನುಲೋಹದಿಂದ(metal)ತಯಾರಿಸಿದ್ದಾರೆ.ಸ್ಮಾರ್ಟ್‌ಫೋನಿನ ನಾಲ್ಕು ಮೂಲೆಗಳು ವೃತ್ತಾಕಾರವಾಗಿದ್ದು(rounded corners)ಸುಲಭವಾಗಿ ಕೈಯಲ್ಲಿ ಹಿಡಿಯಬಹುದಾಗಿದೆ.

#4

#4

ಲೆನೊವೊ ಪಿ780 143x73x9.95 ಮಿ.ಮೀಟರ್‌ ಗಾತ್ರ ಮತ್ತು176 ಗ್ರಾಂ ತೂಕವನ್ನು ಸ್ಮಾರ್ಟ್‌ಫೋನ್‌ ಹೊಂದಿದೆ. ಲೋಹದಿಂದ ತಯಾರಾದ ದೇಹವನ್ನು ಹೊಂದಿರುವುರಿಂದ ಸ್ಮಾರ್ಟ್‌ಫೋನ್‌ ಗಟ್ಟಿಮಟ್ಟಾಗಿದ್ದು ಕೈಯಲ್ಲೂ ಸುಲಭವಾಗಿ ಹಿಡಿಯಬಹುದಾಗಿದೆ.5 ಇಂಚಿನ ಸ್ಕ್ರೀನ್‌ ಹೊಂದಿರುವುದರಿಂದ ಪ್ಯಾಂಟ್‌ನ ಕಿಸೆಯ ಒಳಗೆ ಸುಲಭವಾಗಿ ಈ ಸ್ಮಾರ್ಟ್‌ಫೋನನ್ನು ಇರಿಸಬಹುದು.

#5

#5


ಸ್ಮಾರ್ಟ್‌ಫೋನ್‌ 1.2Ghz ಕ್ವಾಡ್‌ ಕೋರ್‌ ಪ್ರೊಸೆಸರ್‌ 1GB ರ್‍ಯಾಮ್‌ನ್ನು ಹೊಂದಿದೆ. ಹೈ ಕ್ವಾಲಿಟಿ ಗ್ರಾಫಿಕ್ಸ್‌ ಗೇಮ್ಸ್‌ಗಳಾದ Despicable Me ಮತ್ತು Dead Triggerನ್ನು ಸ್ಮಾರ್ಟ್‌ಫೋನಲ್ಲಿ ಆಡಿದ್ದು ಉತ್ತಮವಾಗಿ ಆಡಬಹುದು.ಜೊತೆಗೆ ಮಲ್ಟಿ ಟಾಸ್ಕಿಂಗ್‌ ಮಾಡುವಾಗಲೂ ಈ ಸ್ಮಾರ್ಟ್‌ಫೋನ್‌ಲ್ಲಿ ಯಾವುದೇ ಸಮಸ್ಯೆಇಲ್ಲ.

#6

#6


ಸ್ಮಾರ್ಟ್‌ಫೋನ್‌ ಇನ್ನೊಂದು ವಿಶೇಷತೆ ಉಳಿದ ಸಾಧನಗಳನ್ನು ಚಾರ್ಜ್‌ ಮಾಡಬಹುದು. ಶಕ್ತಿಶಾಲಿ 4000 mAh ಬ್ಯಾಟರಿ ಹೊಂದಿರುವುದರಿಂದ ಬ್ಯಾಟರಿ ಕಡಿಮೆಯಾಗಿರುವ ಸಾಧನಗಳನ್ನು ಮೈಕ್ರೋ ಯುಎಸ್‌ಬಿ ಮೂಲಕ ಚಾರ್ಜ್‌ ಮಾಡಬಹುದಾಗಿದೆ.

#7

#7


ಲೆನೊವೊ ಪಿ 780 ಬಿಸಿನೆಸ್‌ ವ್ಯಕ್ತಿಗಳಿಗೆ ಸಹಾಯವಾಗುವಂತೆ ರೂಪಿಸಿದ್ದು,ಕ್ಯಾಮ್‌ ಕಾರ್ಡ್ (Cam Card ) ಸ್ಕ್ಯಾನರ್‌ ಹೊಂದಿದ್ದು ಮೂಲಕ ಬುಸಿನೆಸ್‌ ಕಾರ್ಡ್‌‌ನ್ನು ಸ್ಕ್ಯಾನ್‌ ಮಾಡಬಹುದಾಗಿದೆ.

#8

#8


ಲೆನೊವೊ ಸ್ಮಾರ್ಟ್‌ಫೋನ್‌ನ್‌ ಡ್ಯುಯಲ್‌ ಸಿಮ್‌ ಹಾಕಬಹುದು. ಜೊತೆಗೆ ಡ್ಯುಯಲ್‌ ಸ್ಟ್ಯಾಂಡ್‌ ಬೈ ಹೊಂದಿದೆ. ಶಕ್ತಿಶಾಲಿ ಬ್ಯಾಟರಿಯ ಜೊತೆಗೆ ಡ್ಯುಯಲ್‌ ಸಿಮ್‌ ನೀಡಿರುವುದರಿಂದ ಡ್ಯುಯಲ್‌ ಸಿಮ್‌ ಸ್ಮಾರ್ಟ್‌ಫೋನ್‌ನಲ್ಲಿ ಪವರ್‌ಪುಲ್‌ ಸ್ಮಾರ್ಟ್‌ಫೋನ್‌‌ ಇದಾಗಿದೆ.

#9

#9


ಎಲ್‌ಇಡಿ ಫ್ಲ್ಯಾಶ್‌ ಹೊಂದಿರುವ 8 ಎಂಪಿ ಹಿಂದುಗಡೆ ಕ್ಯಾಮೆರಾವನ್ನು ಈ ಸ್ಮಾರ್ಟ್‌‌ಫೋನ್‌ ಹೊಂದಿದೆ.ಸ್ಮಾರ್ಟ್‌ಫೋನಲ್ಲಿ ಕಡಿಮೆ ಬೆಳಕಿನಲ್ಲೂ ಉತ್ತಮ ಫೋಟೋಗಳನ್ನು ಕ್ಲಿಕ್ಕಿಸಿದ್ದು ಚೆನ್ನಾಗಿ ಮೂಡಿ ಬಂದಿದೆ. ಅಷ್ಟೇ ಅಲ್ಲದೇ ಫುಲ್‌ ಎಚ್‌ಡಿ ವಿಡಿಯೋ ರೆಕಾರ್ಡ್‌ ಸಹ ಮಾಡಬಹುದಾಗಿದೆ.ಮುಂದುಗಡೆ ವಿಜಿಎ ಕ್ಯಾಮೆರಾವನ್ನು ಈ ಸ್ಮಾರ್ಟ್‌ಫೋನ್‌ ಹೊಂದಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+