ಮಾರುಕಟ್ಟೆಯಲ್ಲಿ ಹೊಸ ಅಲೆ ಹುಟ್ಟಿ ಹಾಕುವ ಲಿನೊವೊ S5: 6000mAh ಬ್ಯಾಟರಿ..!
ಮಾರುಕಟ್ಟೆಗೆ ಕಳೆದ ಕೆಲವು ದಿನಗಳಿಂದ ಯಾವುದೇ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡದ ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕ ಕಂಪನಿ ಲಿನೊವೊ, ಈ ಬಾರಿ ಹೊಸದೊಂದು ಸ್ಮಾರ್ಟ್‌ಫೋನಿನೊಂದಿಗೆ ಕಾಣಿಸಿಕೊಂಡಿದ್ದು, ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟು ಹಾಕಲಿದೆ ಎನ್ನುವ ಮಾತು ಕೇಳಿ ಬಂದಿದೆ.

ಬಿಗ್ ಬ್ಯಾಟರಿ ಹೊಂದಿರುವ ಲಿನೊವೊ ಸ್ಮಾರ್ಟ್‌ಫೋನ್ ಇದೇ ಮಾರ್ಚ್ 20 ರಂದು ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎನ್ನಲಾಗಿದ್ದು, ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಲಿದೆ. ಈಗಾಗಲೇ ದೊಡ್ಡ ಬ್ಯಾಟರಿ ಹೊಂದಿರುವ ಸ್ಮಾರ್ಟ್‌ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಲಿನೊವೊ , ಈ ಬಾರಿ ಇನ್ನು ದೊಡ್ಡ ಮಟ್ಟದ ಬ್ಯಾಟರಿ ಹೊಂದಿರುವ ಸ್ಮಾರ್ಟ್‌ಫೋನ್ ಲಾಂಚ್ ಮಾಡಲಿದೆ.

ಲಿನೊವೊ S5:
ಮಾರುಕಟ್ಟೆಯಲ್ಲಿ ಬ್ಯಾಟರಿ ಬಾಳಿಕೆ ಸಾಲುವುದಿಲ್ಲ ಎನ್ನುವ ಬಳಕೆದಾರರಿಗಾಗಿ ನಿರ್ಮಿಸಿರುವ ಸ್ಮಾರ್ಟ್‌ಫೋನ್ ಇದಾಗಿದ್ದು, ಲಿನೊವೊ S5 6000mAh ಬ್ಯಾಟರಿಯನ್ನು ಒಳಗೊಂಡಿದೆ ಎನ್ನಲಾಗಿದೆ. ಈ ಸ್ಮಾರ್ಟ್‌ಫೋನ್ ಸಾಮಾನ್ಯ ಸ್ಮಾರ್ಟ್‌ಫೋನ್‌ಗಿಂತಲೂ ಮೂರು ಪಟ್ಟು ಬ್ಯಾಕಪ್ ನೀಡಲಿದೆ ಎಂದು ಕಂಪನಿಯೂ ತಿಳಿಸಿದೆ.

ತೆಳುವಾದ ಫೋನ್:
ದೊಡ್ಡ ಬ್ಯಾಟರಿ ಎನ್ನುವ ಕಾರಣಕ್ಕೆ ಸ್ಮಾರ್ಟ್‌ಫೋನ್ ಗಾತ್ರದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಬದಲಾಗಿ ಸಾಮಾನ್ಯ ಸ್ಮಾರ್ಟ್‌ಫೋನ್‌ಗಿಂತಲೂ ಸ್ಲಿಮ್ ಆಗಿ ಕಾಣಿಸಿಕೊಳ್ಳಲಿದೆ ಲಿನೊವೊ S5 ಸ್ಮಾರ್ಟ್‌ಫೋನ್.

ಉತ್ತಮ ವಿನ್ಯಾಸ:
ಇದಲ್ಲದೇ ಈ ಸ್ಮಾರ್ಟ್‌ಫೋನ್ ಉತ್ತಮವ ವಿನ್ಯಾಸವನ್ನು ಹೊಂದಿರಲಿದ್ದು, ಹಿಂಭಾಗದಲ್ಲಿಯೂ ಗಾಜಿನ ಹೊದಿಕೆಯನ್ನು ಹೊಂದಿರಲಿದೆ ಎನ್ನಲಾಗಿದ್ದು, ಮೊದಲಿಗೆ ಚೀನಾ ಮಾರುಕಟ್ಟೆಯಲ್ಲಿ ಬಿಡಗಡೆಯಾಗಲಿದ್ದು, ಇದಾದ ನಂತರದಲ್ಲಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಬ್ಯಾಟರಿ ಪ್ರಮುಖ ಆಕರ್ಷಣೆ:
ಲಿನೊವೊ S5 ಸ್ಮಾರ್ಟ್‌ಫೋನ್ ಮಧ್ಯಮ ಸರಣಿ ಸ್ಮಾರ್ಟ್‌ಫೋನ್ ಆಗಿದ್ದು, ಬ್ಯಾಟರಿಯೇ ಈ ಸ್ಮಾರ್ಟ್‌ಫೋನ್ ಪ್ರಮುಖ ಆಕ್ಷರ್ಷಣೆ ಎಂದರೆ ತಪ್ಪಾಗುವುದಿಲ್ಲ ಎನ್ನಲಾಗಿದ್ದು, ಉತ್ತಮ ಬ್ಯಾಕಪ್ ಅನ್ನು ನೀಡಲಿದೆ 6000mAh ಬ್ಯಾಟರಿ ಇರಲಿದೆ.


ವಿಶೇಷತೆಗಳು:
ಈ ಲಿನೊವೊ S5 ಸ್ಮಾರ್ಟ್‌ಫೋನ್ ವಿಶೇಷತೆಗಳ ಕುರಿತು ಹೆಚ್ಚಿನ ಮಾಹಿತಿಗಳು ದೊರೆತಿಲ್ಲ. ಸದ್ಯ ಬ್ಯಾಟರಿ ಮತ್ತು ವಿನ್ಯಾಸದ ಕುರಿತು ಮಾಹಿತಿ ಲಭ್ಯವಾಗಿದೆ ಎನ್ನಲಾಗಿದ್ದು, ಒಟ್ಟಿನಲ್ಲಿ ಮಧ್ಯಮ ಸರಣಿ ಸ್ಮಾರ್ಟ್‌ಫೋನ್ ಎನ್ನಬಹುದಾಗಿದೆ.


Click it and Unblock the Notifications