ಲೆನೊವೊದಿಂದ ಆರು ಇಂಚಿನ ಫ್ಯಾಬ್ಲೆಟ್ ಬಿಡುಗಡೆ
ಸೋನಿ,ಸ್ಯಾಮ್‌ಸಂಗ್,ಎಲ್‌ಜಿ ಕಂಪೆನಿಗಳು ಆರು ಇಂಚಿನ ಸ್ಕ್ರೀನ್ ಹೊಂದಿರುವ ಫ್ಯಾಬ್ಲೆಟ್‌ನ್ನು ಈಗಾಗಲೇ ಬಿಡುಗಡೆ ಮಾಡಿವೆ.ಈಗ ಲೆನೊವೊ ಸರದಿ. ಚೀನಾದ ಲೆನೊವೊ ಕಂಪೆನಿ 6 ಇಂಚಿನ ಐಪಿಎಸ್ ಎಲ್‌ಸಿಡಿ ಎಚ್‌ಡಿ ಸ್ಕ್ರೀನ್ ಹೊಂದಿರುವ ಫ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದೆ.
ಲೆನೊವೊ ಎಸ್930 ಹೆಸರಿನ ಫ್ಯಾಬ್ಲೆಟ್‌ನ್ನು ರಷ್ಯಾದಲ್ಲಿ ಬಿಡುಗಡೆ ಮಾಡಿದ್ದು, ಈ ಫ್ಯಾಬ್ಲೆಟ್‌ಗೆ 13990 ರಷ್ಯನ್ ರೂಬಲ್(ಅಂದಾಜು 26 ಸಾವಿರ ರೂಪಾಯಿ)ನಿಗದಿ ಮಾಡಿದೆ.ಇದರೊಂದಿಗೆ ಎಸ್650 ಹೆಸರಿನ ಇನ್ನೊಂದು ಸ್ಮಾರ್ಟ್‌ಫೋನನ್ನು ಲೆನೊವೊ ಕಂಪೆನಿ ಬಿಡುಗಡೆ ಮಾಡಿದೆ.ಈ ಸ್ಮಾರ್ಟ್‌ಫೋನ್ 4.7 ಇಂಚಿನ ಕೆಪಾಸಿಟಿವ್ ಟಚ್‌ಸ್ಕ್ರೀನ್ ಹೊಂದಿದ್ದು,11,990 ರೂಬಲ್(ಅಂದಾಜು 22 ಸಾವಿರ ರೂಪಾಯಿ)ಬೆಲೆಯನ್ನು ಲೆನೊವೊ ನಿಗದಿ ಮಾಡಿದೆ.
ಎರಡು ಸ್ಮಾರ್ಟ್‌ಫೋನ್‌ಗಳಲ್ಲಿ ಡ್ಯುಯಲ್ ಸಿಮ್ ಹಾಕಬಹುದಾಗಿದ್ದು,8 GB ಆಂತರಿಕ ಮೆಮೊರಿ,1 GB ರ್‍ಯಾಮ್ ಹೊಂದಿದೆ. ಲೆನೊವೊ ಎಸ್930 ಆರು ಇಂಚಿನ ಸ್ಕ್ರೀನ್‌ನ ಜೊತೆಗೆ ಎಚ್‌ಡಿ ಸ್ಕ್ರೀನ್ ಹೊಂದಿರುವುದರಿಂದ ಫ್ಯಾಬ್ಲೆಟ್‌ಗೆ ಶಕ್ತಿಶಾಲಿ 3000 mAh ಬ್ಯಾಟರಿ ಹೊಂದಿದೆ.4.7 ಇಂಚಿನ ಲೆನೊವೊ ಎಸ್650 ಸ್ಮಾರ್ಟ್‌ಫೋನ್ 2000 mAh ಬ್ಯಾಟರಿಯನ್ನು ಹೊಂದಿದೆ.
ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ
ಇದನ್ನೂ ಓದಿ: ಗೂಗಲ್ ಶಾಪಿಂಗ್ ಹಬ್ಬ-1 ದಿನ ವಿಸ್ತರಣೆ-ಸ್ಮಾರ್ಟ್‌ಫೋನ್‌ಗಳ ಬೆಲೆ ದಿಢೀರ್ ಇಳಿಕೆ

ಲೆನೊವೊ ಎಸ್930
ವಿಶೇಷತೆ
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
6 ಇಂಚಿನ ಐಪಿಎಸ್ ಎಲ್‌ಸಿಡಿ ಎಚ್‌ಡಿ ಸ್ಕ್ರೀನ್(720 x 1280 ಪಿಕ್ಸೆಲ್)
ಆಂಡ್ರಾಯ್ಡ್ 4.2.1 ಜೆಲ್ಲಿ ಬೀನ್ ಓಎಸ್
1.3 GHz ಮೀಡಿಯಾಟೆಕ್‌ಕ್ವಾಡ್‌ಕೋರ್ ಪ್ರೊಸೆಸರ್
8 GB ಆಂತರಿಕ ಮೆಮೊರಿ
1 GB ರ್‍ಯಾಮ್
8 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್)
1.6ಎಂಪಿ ಮುಂದುಗಡೆ ಕ್ಯಾಮೆರಾ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ಬ್ಲೂಟೂತ್,ಜಿಪಿಎಸ್,ಎ-ಜಿಪಿಎಸ್,ವೈಫೈ
3000 mAh ಬ್ಯಾಟರಿ

ಲೆನೊವೊ ಎಸ್650
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
4.7 ಇಂಚಿನ ಕೆಪಾಸಿಟಿವ್ ಟಚ್‌ಸ್ಕ್ರೀನ್(540 x 960 ಪಿಕ್ಸೆಲ್)
ಆಂಡ್ರಾಯ್ಡ್ 4.2.1 ಜೆಲ್ಲಿ ಬೀನ್ ಓಎಸ್
1.3 GHz ಮೀಡಿಯಾಟೆಕ್ ಕ್ವಾಡ್‌ಕೋರ್ ಪ್ರೊಸೆಸರ್
8 GB ರ್‍ಯಾಮ್
8 GB ಆಂತರಿಕ ಮೆಮೊರಿ
8 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್)
ಮುಂದುಗಡೆ ವಿಜಿಎ ಕ್ಯಾಮೆರಾ
3ಜಿ,ಬ್ಲೂಟೂತ್,ಜಿಪಿಎಸ್,ಎ-ಜಿಪಿಎಸ್,ವೈಫೈ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2000 mAh ಬ್ಯಾಟರಿ

ಲೆನೊವೊದಿಂದ ಆರು ಇಂಚಿನ ಸ್ಕ್ರೀನ್ ಫ್ಯಾಬ್ಲೆಟ್ ಬಿಡುಗಡೆ
ಲೆನೊವೊ ಎಸ್930

ಲೆನೊವೊದಿಂದ ಆರು ಇಂಚಿನ ಸ್ಕ್ರೀನ್ ಫ್ಯಾಬ್ಲೆಟ್ ಬಿಡುಗಡೆ
ಲೆನೊವೊ ಎಸ್650


Click it and Unblock the Notifications




