ಲೆನೊವೊ ವೈಬ್‌ ಝಿ ಕ್ಯಾಮೆರಾ ಹೇಗೆ?

By Ashwath
|

ಚೀನಾದ ಲೆನೊವೊ ಕಂಪೆನಿ ದೇಶೀಯ ಮಾರುಕಟ್ಟೆಗೆ ತನ್ನ ದುಬಾರಿ ಬೆಲೆಯ ಲೆನೊವೊ ವೈಬ್‌ ಝಿ ಫ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದೆ.5.5 ಇಂಚಿನ ಐಪಿಎಸ್‌ ಎಲ್‌ಸಿಡಿ ಸ್ಕ್ರೀನ್‌(1080x1920 ಪಿಕ್ಸೆಲ್‌,401 ಪಿಪಿಐ) ಗೊರಿಲ್ಲ ಗ್ಲಾಸ್‌3 ಹೊಂದಿರುವ ಫ್ಯಾಬ್ಲೆಟ್‌‌ 3000 mAh ಬ್ಯಾಟರಿಯನ್ನು ಹೊಂದಿದೆ.

ವಿಶ್ವದ ಬ್ರ್ಯಾಂಡ್‌ ಸ್ಮಾರ್ಟ್‌‌ಫೋನ್‌ ಕಂಪೆನಿಗಳು ತಮ್ಮ ಸ್ಮಾರ್ಟ್‌‌ಫೋನ್‌‌ಗಳಿಗೆ ನೀಡುವ ಕ್ವಾಲಕಂ ಕಂಪೆನಿಯ ಅಭಿವೃದ್ಧಿ ಪಡಿಸುತ್ತಿರುವ ಪ್ರೊಸೆಸರ್‌‌ನ್ನು ಲೆನೊವೊ ಈ ಫ್ಯಾಬ್ಲೆಟ್‌ಗೆ ನೀಡಿದೆ.2.2 GHz ಕ್ವಾಲಕಂ ಸ್ನಾಪ್‌ಡ್ರಾಗನ್‌ ಕ್ವಾಡ್‌ ಕೋರ್‍ ಕ್ರೈಟ್‌‌400 ಪ್ರೊಸೆಸರ್‌,Adreno 330 ಗ್ರಾಫಿಕ್‌ ಪ್ರೊಸೆಸರ್‌ನ್ನು ಫ್ಯಾಬ್ಲೆಟ್‌ ಒಳಗೊಂಡಿದೆ.

ದೊಡ್ಡ ಗಾತ್ರದ,ಜೊತೆಗೆ ಫುಲ್‌ ಎಚ್‌ಡಿ ಸ್ಕ್ರೀನ್‌ನ್ನು ಹೊಂದಿರುವುದರಿಂದ ಫ್ಯಾಬ್ಲೆಟ್‌‌‌ಗೆ ಲೆನೊವೊ ಶಕ್ತಿಶಾಲಿಯಾದ ಬ್ಯಾಟರಿಯನ್ನು ನೀಡಿದೆ. 3000 mAh ತೆಗೆಯಲು ಅಸಾಧ್ಯವಾದ ಬ್ಯಾಟರಿಯನ್ನು ಫ್ಯಾಬ್ಲೆಟ್‌ ಹೊಂದಿದ್ದು, 648 ಗಂಟೆ ಸ್ಟ್ಯಾಂಡ್‌ ಬೈ ಟೈಂ, 33 ಗಂಟೆ ಟಾಕ್‌ ಟೈಂ ಹೊಂದಿದೆ. ಆಂಡ್ರಾಯ್ಡ್ 4.3 ಜೆಲ್ಲಿ ಬೀನ್ ಓಎಸ್‌,16 ಜಿಬಿ ಆಂತರಿಕ ಮೆಮೊರಿ,2 GB RAM ಒಳಗೊಡಿರುವ ಫ್ಯಾಬ್ಲೆಟ್‌‌‌ಗೆ ಲೆನೊವೊ ಆರಂಭದಲ್ಲಿ 35,999 ರೂಪಾಯಿ ನಿಗದಿ ಮಾಡಿದ್ದರೂ ಈಗ ಲೆನೊವೊ ಆನ್‌ಲೈನ್‌ ಶಾಪಿಂಗ್‌ ತಾಣ thedostore.comನಲ್ಲಿ 33,999 ರೂಪಾಯಿ ಬೆಲೆಯಲ್ಲಿ ಲಭ್ಯವಿದೆ.

ಇಷ್ಟೇ ವಿಶೇಷತೆ ಅಲ್ಲದೇ ಈ ಫ್ಯಾಬ್ಲೆಟ್‌‌ನಲ್ಲಿ ಫೋಟೋಗ್ರಫಿ ಮಾಡುವವರಿಗೆ ಲೆನೊವೊ ಹಿಂದುಗಡೆ ಆಟೋ ಫೋಕಸ್‌ ಹೊಂದಿರುವ 13 ಎಂಪಿ ಕ್ಯಾಮೆರಾವನ್ನು ನೀಡಿದೆ. f1.8 ಅಪರ್ಚರ್‌ ಲೆನ್ಸ್‌,ಎಲ್‌‌ಇಡಿ ಫ್ಲ್ಯಾಶ್‌ ಹೊಂದಿದೆ. 4128 x 3096 ಪಿಕ್ಸೆಲ್‌ ರೆಸೂಲೂಶನ್‌‌ವರೆಗಿನ ಚಿತ್ರಗಳನ್ನು ಈ ಕ್ಯಾಮೆರಾದ ಮೂಲಕ ಕ್ಲಿಕ್‌ ಮಾಡಬಹುದಾಗಿದೆ.ಮುಂದುಗಡೆ ವಿಡಿಯೋ ಕರೆಗಾಗಿ 5 ಎಂಪಿ ಕ್ಯಾಮೆರಾವನ್ನು ಹೊಂದಿದೆ.ಫ್ಯಾಬ್ಲೆಟ್‌‌ನಲ್ಲಿ ಫೋಟೋ ಫಿಲ್ಟರ್‌ಗಳಿದ್ದು, ಫೋಟೋ ತೆಗೆದ ಬಳಿಕ ಬೇಕಾದ ಎಫೆಕ್ಟ್‌‌ನ್ನು ಚಿತ್ರಗಳಿಗೆ ನೀಡಬಹುದು. ಜೊತೆಗೆ ವಿವಿಧ ಸೀನ್‌ ಮೋಡ್‌‌ಗಳಿವೆ. ಒಟ್ಟಿನಲ್ಲಿ ಫೋಟೋ ತೆಗೆಯುವ ಮೊದಲು. ತೆಗೆದ ಬಳಿಕ ಬೇಕಾದ ರೀತಿಯಾಗಿ ಬದಲಾಯಿಸಿ ನಿಮ್ಮಿಷ್ಟದಂತೆ ಫೋಟೋವನ್ನು ರೂಪಿಸಬಹುದು.ಹೀಗಾಗಿ ಇಲ್ಲಿ ಲೆನೊವೊ ವೈಬ್‌ ಝಿಯ ವಿವಿಧ ಮೋಡ್‌ನಲ್ಲಿ ಕ್ಲಿಕ್ಕಿಸಿದ ಕೆಲವು ಫೋಟೋಗಳನ್ನು ನೀಡಲಾಗಿದೆ.

ಲೆನೊವೊ ವೈಬ್‌ ಝಿ
ವಿಶೇಷತೆ:
ಸಿಂಗಲ್‌ ಸಿಮ್‌(ಮೈಕ್ರೋ ಸಿಮ್‌)
5.5 ಇಂಚಿನ ಐಪಿಎಸ್‌ ಎಲ್‌ಸಿಡಿ ಸ್ಕ್ರೀನ್‌(1080x1920 ಪಿಕ್ಸೆಲ್‌)
2.2 GHz ಕ್ವಾಲಕಂ ಸ್ನಾಪ್‌ಡ್ರಾಗನ್‌ ಕ್ವಾಡ್‌ ಕೋರ್‍ ಪ್ರೊಸೆಸರ್‌
Adreno 330 ಗ್ರಾಫಿಕ್‌ ಪ್ರೊಸೆಸರ್‌
ಆಂಡ್ರಾಯ್ಡ್ 4.3 ಜೆಲ್ಲಿ ಬೀನ್ ಓಎಸ್‌
16 ಜಿಬಿ ಆಂತರಿಕ ಮೆಮೊರಿ
2 GB RAM
13 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
ಮೆಮೊರಿ ವಿಸ್ತರಣೆಗೆ ಕಾರ್ಡ್‌‌ ಸ್ಲಾಟ್‌ ಇಲ್ಲ
3ಜಿ,4ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌
3000 mAh ಬ್ಯಾಟರಿ

1

1


ಕೆಲವು ಸ್ಮಾರ್ಟ್‌ಫೋನ್‌ಗಳು ಹಿಂದುಗಡೆ ಕ್ಯಾಮೆರಾವನ್ನು ಹೊಂದಿದ್ದರೂ ಅದನ್ನು ಮತ್ತಷ್ಟು ಸುಂದರವಾಗಿ ಮಾಡಬೇಕಿದ್ದರೆ ಕೆಲವು ಆಪ್‌ಗಳನ್ನು ಡೌನ್‌‌ಲೋಡ್‌ ಮಾಡಬೇಕಾಗುತ್ತದೆ. ಆದರೆ ಲೆನೊವೊ ಫ್ಯಾಬ್ಲೆಟ್‌ನಲ್ಲಿ ಈ ರೀತಿಯ ಆಪ್‌ಗಳನ್ನು ಡೌನ್‌ಲೋಡ್‌ ಮಾಡುವ ಅಗತ್ಯವಿಲ್ಲ.ಆಪ್‌‌‌‌‌ಗಳಲ್ಲಿರುವ ವಿಶೇಷತೆ ಫ್ಯಾಬ್ಲೆಟ್‌‌‌ನಲ್ಲಿದ್ದು ವಿವಿಧ ಫಿಲ್ಟರ್‌ ಮತ್ತು ಮೋಡ್‌ಗಳನ್ನು ಬಳಸಿ ಉತ್ತಮವಾಗಿ ಫೋಟೋಗಳನ್ನು ಕ್ಲಿಕ್ಕಿಸಬಹುದಾಗಿದೆ.

2

2


ಸ್ಮಾರ್ಟ್‌‌ಫೋನಲ್ಲಿ ಸಣ್ಣ ಸಣ್ಣ ವಸ್ತುಗಳ ಚಿತ್ರವನ್ನು ಕ್ಲಿಕ್ಕಿಸಬಹುದಾದರೂ ಅಷ್ಟು ಸ್ಪಷ್ಟವಾಗಿ ಬರುವುದಿಲ್ಲ. ಆದರೆ ಈ ಫ್ಯಾಬ್ಲೆಟ್‌ನಲ್ಲಿ ನೀವು ಚೆನ್ನಾಗಿ ಸಣ್ಣ ಸಣ್ಣ ವಸ್ತುಗಳ ಚಿತ್ರವನ್ನು ಕ್ಲಿಕ್ಕಿಸಬಹುದು.

3

3


ಇನ್ನು ಲೆನೊವೊ ಫ್ಯಾಬ್ಲೆಟ್‌ನಲ್ಲಿ ಪನೋರಮಾ ಚಿತ್ರಗಳನ್ನು ಸುಂದರವಾಗಿ ತೆಗೆಯಬಹುದು.ಈ ವೈಬ್‌‌ ಝಿ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದ ಪನೋರಮಾ ಚಿತ್ರವನ್ನು ಇಲ್ಲಿ ನೀಡಲಾಗಿದೆ.

4

4


ರಾತ್ರಿಯಲ್ಲಿ ಚೆನ್ನಾಗಿ ಫೋಟೋ ತೆಗೆಯಲು ಲೆನೊವೊ ಇದಕ್ಕೆ 'ಸುಪರ್‌ ನೈಟ್‌' ಮೊಡ್‌ನ್ನು ನೀಡಿದ್ದು, ಈ ಮೊಡ್‌ ಮೂಲಕ ರಾತ್ರಿಯಲ್ಲೂ ಉತ್ತಮ ಗುಣಮಟ್ಟದ ಫೋಟೋ ಕ್ಲಿಕ್ಕಿಸಬಹುದು.

5

5


ಕೆಲವೊಮ್ಮೆ ಫೋಟೋ ತೆಗೆಯುವಾಗ ಫೋಟೋ ಫ್ರೇಂನಲ್ಲಿ ಮೂಡುವ ಚಿತ್ರದಲ್ಲಿ ಬೆಳಕಿನ ಪ್ರಮಾಣ ಒಂದೇ ರೀತಿಯಲ್ಲಿರುವುದಿಲ್ಲ. ಕೆಲವೊಂದು ಕಡೆ ಹೆಚ್ಚಿನ ಬೆಳಕಿದ್ದರೆ ಮತ್ತೊಂದು ಕಡೆ ಕಡಿಮೆ ಬೆಳಕು ಇರುತ್ತದೆ.ಈ ಸಮಸ್ಯೆ ನಿವಾರಿಸಲು ಲೆನೊವೊ ಈ ಕ್ಯಾಮೆರಾಕ್ಕೆ ಎಚ್‌ಡಿಆರ್‌ ಮೊಡ್‌ ನೀಡಿದೆ.ಈ ಮೊಡ್‌ ಬಳಸುವ ಮೂಲಕ ಒಂದೇ ದೃಶ್ಯದ ಎರಡು ಚಿತ್ರಗಳನ್ನು ಈ ಕ್ಯಾಮೆರಾದ ಮೂಲಕ ತೆಗೆಯಬಹುದಾಗಿದೆ.

6

6


ಗಿಝ್‌ಬಾಟ್‌ ವಿವಿಧ ಬೆಳಕಿನಲ್ಲಿ ಲೆನೊವೊ ವೈಬ್‌ ಝಿ ಕ್ಯಾಮೆರಾದಿಂದ ಚಿತ್ರಗಳನ್ನು ತೆಗೆದೆದ್ದು ಸಂಜೆಯ ಸಮಯದಲ್ಲಿ ತೆಗೆದ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ.

7

7


ದುಬಾರಿ ಬೆಲೆಯ ಸ್ಮಾರ್ಟ್‌ಫೋನ್‌ಲ್ಲಿರುವ ಡ್ಯುಯಲ್‌ ಕ್ಯಾಮೆರಾ ವಿಶೇಷತೆಯನ್ನು ಲೆನೊವೊ ಈ ಫ್ಯಾಬ್ಲೆಟ್‌ಗೆ ನೀಡಿದೆ.ಈ ಮೂಲಕ ಎರಡು ಕ್ಯಾಮೆರಾದ ಮೂಲಕ ಫೋಟೋಗಳನ್ನು ಕ್ಲಿಕ್‌ ಮಾಡಬಹುದಾಗಿದೆ.

8

8

ವೈಬ್‌ ಝಿ ಬೆಲೆಗೆ ಮಾರುಕಟ್ಟೆಯಲ್ಲಿ ಫೈಟ್‌ ನೀಡಲಿರುವ ಸ್ಮಾರ್ಟ್‌ಫೋನ್‌ ನೆಕ್ಸಸ್‌ 5 .ಹೀಗಾಗಿ ಇಲ್ಲಿ ಈ ಎರಡು ಸ್ಮಾರ್ಟ್‌‌ಫೋನ್‌ಗಳ ಕ್ಯಾಮೆರಾದಲ್ಲಿ ಇಳಿ ಸಂಜೆಯಲ್ಲಿ ಕ್ಲಿಕ್ಕಿಸಿದ ದೃಶ್ಯದ ಫೋಟೋಗಳನ್ನು ನೀಡಲಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X