ಬೆಲೆ ದುಬಾರಿಯಾದರೂ ಉತ್ತಮ ಫ್ಯಾಬ್ಲೆಟ್‌‌

Posted By:

ಯಾವುದೇ ದೇಶದ ಕಂಪೆನಿಗಳ ಉತ್ಪನ್ನಗಳ ಖರೀದಿಸಬಹುದು ಆದರೆ ಚೈನಾ ಕಂಪೆನಿಗಳ ಉತ್ಪನ್ನಗಳನ್ನು ಖರೀದಿಸಬಾರದು. ಆದರಲ್ಲೂ ಚೈನಾದಲ್ಲಿ ತಯಾರಾದ ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳನ್ನು ಖರೀದಿಸಲೇಬಾರದು. ಸಾಧನ ಗುಣಮಟ್ಟ ಕಳಪೆ ಜೊತೆಗೆ ವಾರಂಟಿ, ಗ್ಯಾರಂಟಿಯನ್ನು ಚೈನಾ ಕಂಪೆನಿಗಳು ನೀಡುವುದಿಲ್ಲ.ಬೇರೆ ಕಂಪೆನಿಗಳಂತೆ ಚೈನಾ ಕಂಪೆನಿಗಳು ಸರಿಯಾದ ಸೇವೆ ನೀಡುವುದಿಲ್ಲ.ಬಹಳಷ್ಟು ಜನ ಚೈನಾ ಕಂಪೆನಿಗಳ ಬಗ್ಗೆ ಈ ರೀತಿಯ ದೂರನ್ನು ಹೇಳುತ್ತಾರೆ.

ಚೈನಾದ ಕೆಲವೊಂದು ಕಂಪೆನಿಗಳಿಗೆ ಈ ಮಾತು ಅನ್ವಯವಾದರೂ ಕೆಲವೊಂದು ಕಂಪೆನಿಗಳಿಗೆ ಈ ರೀತಿಯ ಆರೋಪ ಮಾಡುವಂತಿಲ್ಲ. ಈ ರೀತಿಯ ಅಪವಾದಕ್ಕೆ ಹೊರತಾದ ಕಂಪೆನಿ ಲೆನೊವೊ.ವಿಶ್ವದ ಪರ್ಸ‌ನಲ್‌ ಕಂಪ್ಯೂಟರ್‌‌ ಮಾರುಕಟ್ಟೆಯಲ್ಲಿ ಕಳೆದ ವರ್ಷ ಎಚ್‌‌ಪಿ ಕಂಪೆನಿಯನ್ನು ಸೋಲಿಸಿ ನಂಬರ್‌ ಒನ್‌‌ ಸ್ಥಾನ ಪಡೆದುಕೊಂಡ ಲೆನೊವೊ ವಿಶ್ವದ ಸ್ಮಾರ್ಟ್‌‌ಫೋನ್ ಉತ್ಪಾದಿಸುವ ಕಂಪೆನಿಗಳ ಪೈಕಿ ಎಂಟನೇ ಸ್ಥಾನದಲ್ಲಿದೆ. ಸ್ಮಾರ್ಟ್‌ಫೋನ್‌ ಕ್ಷೇತ್ರದ ಮಾರುಕಟ್ಟೆಯಲ್ಲಿ ಯಶಸ್ವಿಯಾಗುತ್ತಿರುವ ಲೆನೊವೊ ಕಳೆದ ಜನವರಿಯಲ್ಲಿ ಗೂಗಲ್‌ ತೆಕ್ಕೆಯಲ್ಲಿದ್ದ ಮೋಟರೋಲಾ ಕಂಪೆನಿಯನ್ನು ಖರೀದಿಸಿದೆ. ದುಬಾರಿ ಬೆಲೆಯ ಜೊತೆಗೆ ಕಡಿಮೆ ಬೆಲೆಯಲ್ಲೇ ಸ್ಮಾರ್ಟ್‌‌ಫೋನ್‌ ಬಿಡುಗಡೆ ಮಾಡುತ್ತಿರುವ ಲೆನೊವೊ ಗೂಗಲ್‌ನ ನೆಕ್ಸಸ್‌6 ಸ್ಮಾರ್ಟ್‌ಫೋನ್‌‌ ತಯಾರಿಸಲಿದೆ ಎಂದು ಹೇಳಲಾಗುತ್ತಿದೆ.

ವಿಶ್ವದ ಟಾಪ್‌ ಸ್ಮಾರ್ಟ್‌‌ಫೋನ್‌ ತಯಾರಕ ಕಂಪೆನಿಗಳಲ್ಲಿ ಒಂದಾಗಿರುವ ಲೆನೊವೊ ಭಾರತದ ಮಾರುಕಟ್ಟೆಗೆ ಈಗ ತನ್ನ ದುಬಾರಿ ಬೆಲೆಯ,4ಜಿ ಎಲ್‌ಟಿಇ ನೆಟ್‌ವರ್ಕ್‌ಗೆ ಬೆಂಬಲ ನೀಡುವ ವೈಬ್‌ ಝಿ ಫ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದೆ. ಲೆನೊವೊ ಇಲ್ಲಿಯವರೆಗೆ ಮೂವತ್ತು ಸಾವಿರಕ್ಕೂ ಅಧಿಕ ಬೆಲೆಯಿರುವ ಯಾವುದೇ ಸ್ಮಾರ್ಟ್‌‌ಫೋನ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿರಲಿಲ್ಲ. ಆದರೆ ಈ ಫ್ಯಾಬ್ಲೆಟ್‌ಗೆ 35,999 ರೂಪಾಯಿ ನಿಗದಿ ಮಾಡಿದ್ದು, ಬಲಾಢ್ಯ ಕಂಪೆನಿಗಳ ದುಬಾರಿ ಬೆಲೆಯ ಸ್ಮಾರ್ಟ್‌‌ಫೋನ್‌ಗಳಿಗೆ ಪೈಪೋಟಿ ನೀಡಲು ಲೆನೊವೊ ವೈಬ್‌ ಝಿನ್ನು ದೇಶೀಯ ಮಾರುಕಟ್ಟೆಗೆ ಪರಿಚಯಿಸಿದೆ.


ಲೆನೊವೊ ವೈಬ್‌ ಝಿ
ವಿಶೇಷತೆ:
ಸಿಂಗಲ್‌ ಸಿಮ್‌(ಮೈಕ್ರೋ ಸಿಮ್‌)
5.5 ಇಂಚಿನ ಐಪಿಎಸ್‌ ಎಲ್‌ಸಿಡಿ ಸ್ಕ್ರೀನ್‌(1080x1920 ಪಿಕ್ಸೆಲ್‌)
2.2 GHz ಕ್ವಾಲಕಂ ಸ್ನಾಪ್‌ಡ್ರಾಗನ್‌ ಕ್ವಾಡ್‌ ಕೋರ್‍ ಪ್ರೊಸೆಸರ್‌
Adreno 330 ಗ್ರಾಫಿಕ್‌ ಪ್ರೊಸೆಸರ್‌
ಆಂಡ್ರಾಯ್ಡ್ 4.3 ಜೆಲ್ಲಿ ಬೀನ್ ಓಎಸ್‌
16 ಜಿಬಿ ಆಂತರಿಕ ಮೆಮೊರಿ
2 GB RAM
13 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
ಮೆಮೊರಿ ವಿಸ್ತರಣೆಗೆ ಕಾರ್ಡ್‌‌ ಸ್ಲಾಟ್‌ ಇಲ್ಲ
3ಜಿ,4ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌
3000 mAh ಬ್ಯಾಟರಿ

ಈ ಫ್ಯಾಬ್ಲೆಟ್‌ ಹೇಗಿದೆ? ಇದರ ವಿಶೇಷತೆಯನ್ನು ಮುಂದಿನ ಪುಟದಲ್ಲಿ ನೀಡಲಾಗಿದೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಡಿಸ್ಪ್ಲೇ:

1

5.5 ಇಂಚಿನ ಐಪಿಎಸ್‌ ಎಲ್‌ಸಿಡಿ ಸ್ಕ್ರೀನ್‌(1080x1920 ಪಿಕ್ಸೆಲ್‌,401 ಪಿಪಿಐ) ಹೊಂದಿದೆ. ಜೊತೆಗೆ ಸ್ಮಾರ್ಟ್‌ಫೋನ್‌ ಸ್ಕ್ರೀನ್‌ಗೆ ಗೀರು ಆಗದಂತೆ ತಡೆಯಲು ಕಾರ್ನಿಂಗ್‌ ಕಂಪೆನಿ ಅಭಿವೃದ್ಧಿ ಪಡಿಸಿರುವ ಗೊರಿಲ್ಲ ಗ್ಲಾಸ್‌3ಯನ್ನು ಹೊಂದಿದೆ.

ಕಾರ್ನಿಂಗ್ ಕಂಪನಿ ಗೊರಿಲ್ಲ ಗ್ಲಾಸ್‌‌ನ್ನು ಉತ್ಪಾದಿಸುತ್ತಿದ್ದು ವಿಶ್ವದಾದ್ಯಂತ ಸುಮಾರು 40 ಕೋಟಿಗೂ ಅಧಿಕ ಡಿಸ್ಪ್ಲೇ ಪ್ಯಾನೆಲ್ ಆಗಿ ಉಪಯೋಗಿಸಲ್ಪಡುತ್ತದೆ. ಈ ಗ್ಲಾಸ್ ತೆಳುವಾಗಿದ್ದು ಪ್ಲಾಸ್ಟಿಕ್ ಗಿಂತ 30 ಪಟ್ಟು ಹೆಚ್ಚು ಗಟ್ಟಿತನ ಹೊಂದಿದೆ. ಮೊದಲು ಎಚ್‌ಡಿ ಟಿ.ವಿ ಹಾಗು 3ಡಿ ಕನ್ನಡಕಗಳಲ್ಲಿ ಈ ಗ್ಲಾಸ್‌‌ಗಳನ್ನು ಬಳಸುತ್ತಿದ್ದು ಈಗ ಸ್ಮಾರ್ಟ್‌ಫೋನ್‌,ಫ್ಯಾಬ್ಲೆಟ್‌,ಟ್ಯಾಬ್ಲೆಟ್‌‌‌ಗಳಲ್ಲಿ ಈ ಗೊರಿಲ್ಲ ಗ್ಲಾಸ್‌ ‌ ಸ್ಕ್ರೀನ್‌ ಬಳಸುತ್ತಿದ್ದಾರೆ.ಈ ಗೊರಿಲ್ಲ ಗ್ಲಾಸ್‌ ಇದ್ದಲ್ಲಿ ಪರದೆಯ ಮೇಲೆ ಗೀರುಗಳು ಆಗುವ ಸಾಧ್ಯತೆ ಕಡಿಮೆ.

ಪ್ರೊಸೆಸರ್‌:

2


ವಿಶ್ವದ ಬ್ರ್ಯಾಂಡ್‌ ಸ್ಮಾರ್ಟ್‌‌ಫೋನ್‌ ಕಂಪೆನಿಗಳು ತಮ್ಮ ಸ್ಮಾರ್ಟ್‌‌ಫೋನ್‌‌ಗಳಿಗೆ ನೀಡುವ ಕ್ವಾಲಕಂ ಕಂಪೆನಿಯ ಅಭಿವೃದ್ಧಿ ಪಡಿಸುತ್ತಿರುವ ಪ್ರೊಸೆಸರ್‌‌ನ್ನು ಲೆನೊವೊ ಈ ಫ್ಯಾಬ್ಲೆಟ್‌ಗೆ ನೀಡಿದೆ.2.2 GHz ಕ್ವಾಲಕಂ ಸ್ನಾಪ್‌ಡ್ರಾಗನ್‌ ಕ್ವಾಡ್‌ ಕೋರ್‍ ಕ್ರೈಟ್‌‌400 ಪ್ರೊಸೆಸರ್‌,Adreno 330 ಗ್ರಾಫಿಕ್‌ ಪ್ರೊಸೆಸರ್‌ನ್ನು ಫ್ಯಾಬ್ಲೆಟ್‌ ಒಳಗೊಂಡಿದೆ.

ಬಹುತೇಕ ದೇಶೀಯ ಮತ್ತು ಚೀನಾ ಕಂಪೆನಿಗಳು ತೈವಾನ್‌ ಮೂಲದ ಮೀಡಿಯಾ ಟೆಕ್‌ ಕಂಪೆನಿಯ ಪ್ರೊಸೆಸರ್‌ಗಳನ್ನು ಸ್ಮಾರ್ಟ್‌‌ಫೋನ್‌ ನೀಡಿ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ.ಅಮೆರಿಕದ ಸೆಮಿಕಂಡಕ್ಟರ್‌ ಕ್ವಾಲಕಂ ಕಂಪೆನಿಯ ಪ್ರೊಸೆಸರ್‌‌ ಹೊಂದಿರುವ ಸ್ಮಾರ್ಟ್‌ಫೋನ್‌ ಕಾರ್ಯಕ್ಷಮತೆ ಉತ್ತಮವಾಗಿದ್ದು ಬೆಲೆ ದುಬಾರಿಯಾಗಿರುತ್ತದೆ.

 ಬೆಲೆ:

3


ಲೆನೊವೊ ಕಂಪೆನಿ ಈ ಫ್ಯಾಬ್ಲೆಟ್‌ಗೆ ಭಾರತದಲ್ಲಿ 35,999 ರೂಪಾಯಿ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಆದರೆ ಈ ಸ್ಮಾರ್ಟ್‌ಫೋನ್‌ ಭಾರತದಲ್ಲಿ 32,960 ರೂಪಾಯಿ ಬೆಲೆಯಲ್ಲಿ ಮಾರಲು ಲೆನೊವೊ ನಿರ್ಧರಿಸಿದ್ದು ಏಳು ದಿನದಲ್ಲಿ ಸ್ಮಾರ್ಟ್‌‌ಫೋನ್ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

ಮೆಟಲ್‌ ಬಾಡಿ :

4


ಬಹುತೇಕ ದುಬಾರಿ ಬೆಲೆಯ ಸ್ಮಾರ್ಟ್‌‌ಫೋನ್‌ಗಳು ಪ್ಲಾಸ್ಟಿಕ್‌ (ಪಾಲಿಕಾರ್ಬೊನೇಟ್) ದೇಹವನ್ನು ಹೊಂದಿರುತ್ತದೆ. ಆದರೆ ಈ ಫ್ಯಾಬ್ಲೆಟ್‌ ಮೆಟಲ್‌ ಬಾಡಿಯನ್ನು ಹೊಂದಿದೆ. 5.5 ಇಂಚಿನ ಸ್ಕ್ರೀನ್‌ ಹೊಂದಿರುವ 149.1x77x7.9 ಮಿ.ಮೀ ಗಾತ್ರವನ್ನು ಹೊಂದಿದ್ದು 145.2 ಗ್ರಾಂ ತೂಕವನ್ನು ಹೊಂದಿದೆ.ಈ ಫ್ಯಾಬ್ಲೆಟ್‌ ಆಂಡ್ರಾಯ್ಡ್ 4.3 ಜೆಲ್ಲಿ ಬೀನ್‌ ಓಎಸ್‌ ಹೊಂದಿದೆ. ಲೆನೊವೊದ ದುಬಾರಿ ಬೆಲೆಯ ಫ್ಯಾಬ್ಲೆಟ್‌ ಇದಾಗಿರುವುದರಿಂದ ಸದ್ಯದಲ್ಲೇ ಕಿಟ್‌ಕ್ಯಾಟ್‌ ಓಎಸ್‌ಗೆ ಅಪ್‌ಗ್ರೆಡ್‌ ಅವಕಾಶವನ್ನು ಕಲ್ಪಿಸಲಾಗುವುದು ಎಂದು ಲೆನೊವೊ ಹೇಳಿದೆ.

ಸ್ಮಾರ್ಟ್‌ ವಿಶೇಷತೆಗಳು:

5


ಆಂಡ್ರಾಯ್ಡ್ ಓಎಸ್‌ಗೆ ಗೂಗಲ್‌ ಹೊರತಾಗಿ ಬೇರೆ ಕಂಪೆನಿಗಳು ಅವರದ್ದೇ ಆಗಿರುವ ಯೂಸರ್‌ ಇಂಟರ್‌ಫೇಸ್‌ಗಳನ್ನು ಸೇರಿಸಿ ಸ್ಮಾರ್ಟ್‌‌‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಾರೆ. ಅದೇ ರೀತಿಯಾಗಿ ಲೆನೊವೊ ಕಂಪೆನಿ ಲೆನೊವೊ ಲಾಂಚರ್‌ ಹೆಸರಿನ ಯೂಸರ್‌ ಇಂಟರ್‌ಫೇಸ್‌ನ್ನು ಅಭಿವೃದ್ಧಿ ಪಡಿಸಿದೆ. ಈ ಪ್ಯಾಬ್ಲೆಟ್‌ನಲ್ಲಿ ಒಂದು ಫೋಲ್ಡರ್‌ ಒಳಗಡೆ ಒಂಭತ್ತು ಆಪ್‌ಗಳನ್ನು ಸೇರಿಸಬಹುದಾಗಿದೆ.

 ಸ್ಮಾರ್ಟ್‌ಡಯಲರ್‌:

6


ಲೆನೊವೊ ಫ್ಯಾಬ್ಲೆಟ್‌ನಲ್ಲಿ ಸ್ಮಾರ್ಟ್‌‌ಡಯಲರ್‌ ವಿಶೇಷತೆ ಇದೆ.ಈ ಆಯ್ಕೆಯನ್ನು ಆರಿಸಿದ್ದಲ್ಲಿ ಕರೆ ಮಾಡುವಾಗ ಸ್ಮಾರ್ಟ್‌ಫೋನ್‌ ನಿಮ್ಮ ಕೈಯ ಯಾವ ಕಡೆ ಇರುತ್ತದೋ ಅದೇ ರೀತಿಯಾಗಿ ಡಯಲ್‌ ಪ್ಯಾಡ್‌ ಸಹ ಬದಲಾಗುತ್ತದೆ.ಬಲಗಡೆಗೆ ಸ್ಮಾರ್ಟ್‌ಫೋನ್‌ ವಾಲಿದ್ದರೆ, ಕೀಪ್ಯಾಡ್‌ ಸಹ ಬಲಗಡೆ ಜಾರುತ್ತದೆ.ಇನ್ನುಡಯಲ್‌ ಪ್ಯಾಡ್‌ನ್‌ಲ್ಲೇ ನಂಬರ್‌‌ ಅಥವಾ ಕಾಂಟಾಕ್ಟ್‌ನಲ್ಲಿರುವ ವ್ಯಕ್ತಿಗಳ ಹೆಸರನ್ನು ಟೈಪ್‌ ಮಾಡುವ ಮೂಲಕ ಸುಲಭವಾಗಿ ಕರೆ ಮಾಡಬಹುದಾಗಿದೆ.

ವಾಲ್ಯೂಮ್‌ ಬಟನ್‌ ಮೂಲಕ ಅನ್‌ಲಾಕ್‌ ಮಾಡಿ:

7


ಫ್ಯಾಬ್ಲೆಟ್‌ನ್ನು ಸುಲಭವಾಗಿ ಅನ್‌ಲಾಕ್‌ ಮಾಡಬಹುದು. ಮೇಲುಗಡೆ ಲಾಕ್‌ ಮಾಡಿದ ಬಳಿಕ ಮತ್ತೇ ಮೇಲುಗಡೆ ಹೋಗಿ ಅನ್‌ ಲಾಕ್‌ ಬಟನ್‌ ಒತ್ತಬೇಕಿಲ್ಲ. ವಾಲ್ಯೂಮ್‌ ಬಟನ್‌ ಒತ್ತುವ ಮೂಲಕ ಅನ್‌ಲಾಕ್‌ ಮಾಡಬಹುದು. ಜೊತೆಗೆ ಇನ್‌ಸ್ಟಾಲ್‌ ಆಗಿರುವ ಆಪ್‌ಗಳನ್ನು ನೇರವಾಗಿ ಹೋಮ್ ಸ್ಕ್ರೀನ್‌ನಿಂದಲೇ ಡಿಲೀಟ್‌ ಮಾಡಬಹುದಾಗಿದೆ.

 ಕ್ಯಾಮೆರಾ:

8


ವೈಬ್‌ ಝಿಗೆ ಲೆನೊವೊ ಹಿಂದುಗಡೆ ಆಟೋ ಫೋಕಸ್‌ ಹೊಂದಿರುವ 13 ಎಂಪಿ ಕ್ಯಾಮೆರಾವನ್ನು ನೀಡಿದೆ. f1.8 ಅಪರ್ಚರ್‌ ಲೆನ್ಸ್‌,ಎಲ್‌‌ಇಡಿ ಫ್ಲ್ಯಾಶ್‌ ಹೊಂದಿದೆ. 4128 x 3096 ಪಿಕ್ಸೆಲ್‌ ರೆಸೂಲೂಶನ್‌‌ವರೆಗಿನ ಚಿತ್ರಗಳನ್ನು ಈ ಕ್ಯಾಮೆರಾದ ಮೂಲಕ ಕ್ಲಿಕ್‌ ಮಾಡಬಹುದಾಗಿದೆ.ಮುಂದುಗಡೆ ವಿಡಿಯೋ ಕರೆಗಾಗಿ 5 ಎಂಪಿ ಕ್ಯಾಮೆರಾವನ್ನು ಹೊಂದಿದೆ.ಫ್ಯಾಬ್ಲೆಟ್‌‌ನಲ್ಲಿ ಫೋಟೋ ಫಿಲ್ಟರ್‌ಗಳಿದ್ದು, ಫೋಟೋ ತೆಗೆದ ಬಳಿಕ ಬೇಕಾದ ಎಫೆಕ್ಟ್‌‌ನ್ನು ಚಿತ್ರಗಳಿಗೆ ನೀಡಬಹುದು. ಜೊತೆಗೆ ವಿವಿಧ ಸೀನ್‌ ಮೋಡ್‌‌ಗಳಿವೆ. ಒಟ್ಟಿನಲ್ಲಿ ಫೋಟೋ ತೆಗೆಯುವ ಮೊದಲು. ತೆಗೆದ ಬಳಿಕ ಬೇಕಾದ ರೀತಿಯಾಗಿ ಬದಲಾಯಿಸಿ ನಿಮ್ಮಿಷ್ಟದಂತೆ ಫೋಟೋವನ್ನು ರೂಪಿಸಬಹುದು.

 ಬ್ಯಾಟರಿ:

9


ದೊಡ್ಡ ಗಾತ್ರದ,ಜೊತೆಗೆ ಫುಲ್‌ ಎಚ್‌ಡಿ ಸ್ಕ್ರೀನ್‌ನ್ನು ಹೊಂದಿರುವುದರಿಂದ ಫ್ಯಾಬ್ಲೆಟ್‌‌‌ಗೆ ಲೆನೊವೊ ಶಕ್ತಿಶಾಲಿಯಾದ ಬ್ಯಾಟರಿಯನ್ನು ನೀಡಿದೆ. 3000 mAh ತೆಗೆಯಲು ಅಸಾಧ್ಯವಾದ ಬ್ಯಾಟರಿಯನ್ನು ಫ್ಯಾಬ್ಲೆಟ್‌ ಹೊಂದಿದ್ದು, 648 ಗಂಟೆ ಸ್ಟ್ಯಾಂಡ್‌ ಬೈ ಟೈಂ, 33 ಗಂಟೆ ಟಾಕ್‌ ಟೈಂ ಹೊಂದಿದೆ.

ಕೆಲವೇ ದೇಶಗಳಲ್ಲಿ ಬಿಡುಗಡೆ:

10


ಲೆನೊವೊ ಈ ಫ್ಯಾಬ್ಲೆಟ್‌ನ್ನು ಭಾರತ ಸೇರಿದಂತೆ ಕೆಲವೇ ದೇಶಗಳಲ್ಲಿ ಮಾತ್ರ ಬಿಡುಗಡೆ ಮಾಡಿದೆ.ಅಮೆರಿಕ,ಆಸ್ಟ್ರೇಲಿಯಾ,ಇಂಗ್ಲೆಂಡ್‌ನಲ್ಲಿ ಈ ಫ್ಯಾಬ್ಲೆಟ್‌ ಇನ್ನೂ ಬಿಡುಗಡೆಯಾಗಬೇಕಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot