ಕೇವಲ 13 ಸಾವಿರಕ್ಕೆ ನೋಚ್ ಡಿಸ್‌ಪ್ಲೇ ಸ್ಮಾರ್ಟ್‌ಫೋನ್ ರಿಲೀಸ್!..ಖರೀದಿಸಲು ಕ್ಯೂ ನಿಲ್ಲೋದು ಗ್ಯಾರಂಟಿ!!

|

ಮೊಬೈಲ್ ಮಾರುಕಟ್ಟೆಯಲ್ಲಿ ನಿರೀಕ್ಷೆ ಹುಟ್ಟಿಸಿದ ನಂತರ ಬಿಡುಗಡೆಯಾಗುವ ಸ್ಮಾರ್ಟ್‌ಪೋನ್‌ಗಳು ಕೈಕೊಟ್ಟಿರುವುದನ್ನು ನಾವು ನೋಡಬಹುದು. ಆದರೆ, ಮೊಬೈಲ್ ಮಾರುಕಟ್ಟೆಯಲ್ಲಿ ಇಲ್ಲಿಯವರೆಗೂ ಸ್ವಲ್ಪವೂ ಸದ್ದನ್ನೇ ಮಾಡದ ಒಂದು ಬಜೆಟ್ ಸ್ಮಾರ್ಟ್‌ಫೋನ್ ಇಂದು ಬಿಡುಗಡೆಯಾಗಿ ಮೊಬೈಲ್ ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದೆ.

ಹೌದು, ನಾವು ಸ್ವಲ್ಪ ಹೆಚ್ಚಾಗಿ ಹೇಳುತ್ತಿದ್ದೇವೆ ಎಂದು ನಿಮಗನಿಸಿದರೂ ಕೂಡ ಇದು ಸತ್ಯ. ಚೀನಾ ಮೂಲದ ಮೊಬೈಲ್ ತಯಾರಿಕಾ ಕಂಪೆನಿಯಾದ ಲೆನೊವೊ ಇಂದು ಶಿಯೋಮಿ ಸ್ಮಾರ್ಟ್‌ಫೋನ್‌ಗಳನ್ನು ಸಹ ಮೀರಿಸುವಂತಹ 'ಲೆನೊವೊ ಜೆಡ್ 5' ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡಿದೆ. ಈ ಫೋನಿನ ಬೆಲೆ ಮತ್ತು ಫೀಚರ್ಸ್ ಕೂಡ ಗ್ರಾಹಕರನ್ನು ಸೆಳೆಯುತ್ತದೆ.

ಕೇವಲ 13 ಸಾವಿರಕ್ಕೆ ನೋಚ್ ಡಿಸ್‌ಪ್ಲೇ ಸ್ಮಾರ್ಟ್‌ಫೋನ್ ರಿಲೀಸ್!!

ಆಪಲ್ ಐಫೋನ್ ಎಕ್ಸ್ ನೋಚ್ ಮಾದರಿ ಡಿಸ್‌ಪ್ಲೇ, ಸ್ನ್ಯಾಪ್‌ಡ್ರಾಗಲ್ 636 ಪ್ರೊಸೆಸರ್ ಹಾಗೂ ಆಂಡ್ರಾಯ್ಡ್ ಓರಿಯೊನಂತಹ ಫೀಚರ್ಸ್‌ಗಳನ್ನು ಒಳಗೊಂಡಿರುವ ಈ ಸ್ಮಾರ್ಟ್‌ಫೋನ್ ಈಗ ವೈರಲ್ ಆಗಿದೆ. ಹಾಗಾದರೆ, ಶಿಯೋಮಿ ಫೋನ್‌ಗಳನ್ನು ಮೀರಿಸಿರುವ 'ಲೆನೊವೊ ಜೆಡ್ 5' ಸ್ಮಾರ್ಟ್‌ಫೋನ್ ಪೂರ್ತಿ ಫೀಚರ್ಸ್ ಯಾವುವು ಎಂಬುದನ್ನು ಮುಂದೆ ತಿಳಿಯಿರಿ.

ಎಕ್ಸ್ ನೋಚ್ ಮಾದರಿ ಡಿಸ್‌ಪ್ಲೇ

ಎಕ್ಸ್ ನೋಚ್ ಮಾದರಿ ಡಿಸ್‌ಪ್ಲೇ

ಮೊದಲೇ ಹೇಳಿದಂತೆ ಇಲ್ಲಿಯವರೆಗೂ ಯಾವುದೇ ಮಾಹಿತಿಯನ್ನು ಬಿಟ್ಟುಕೊಡದೇ 'ಲೆನೊವೊ ಜೆಡ್ 5' ಸ್ಮಾರ್ಟ್‌ಫೋನ್ ಐಫೋನ್ ನೋಚ್ ಮಾದರಿಯ ಡಿಸ್‌ಪ್ಲೇ ಹೊತ್ತು ಬಿಡುಗಡೆಯಾಗಿದೆ. 90 ಪರ್ಸೆಂಟ್ ಸ್ಕ್ರೀನ್ ರೇಷ್ಯೂ ಹೊಂದಿರುವ 6.2 ಇಂಚ್ (1080x2246 ಪಿಕ್ಸೆಲ್‌ಗಳು) ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಸ್ಮಾರ್ಟ್‌ಪೋನ್ ಹೊಂದಿದೆ.

ಪ್ರೊಸೆಸರ್ ಯಾವುದು?

ಪ್ರೊಸೆಸರ್ ಯಾವುದು?

ಶಿಯೋಮಿಗೆ ಸೆಡ್ಡುಹೊಡೆಯಲು ಮುಂದಾಗಿರುವ ಲೆನೊವೊ ಕಂಪೆನಿ 'ಲೆನೊವೊ ಜೆಡ್ 5' ಸ್ಮಾರ್ಟ್‌ಫೋನಿನಲ್ಲಿ ಸ್ನ್ಯಾಪ್‌ಡ್ರಾಗಲ್ 636 ಪ್ರೊಸೆಸರ್ ಅನ್ನು ಅಳವಡಿಸಿದೆ. ಈ ಮೂಲಕ ಮಧ್ಯಮ ಬಜೆಟ್ ಸ್ಮಾರ್ಟ್‌ಫೋನಿನ ಫೀಚರ್ ಒಂದನ್ನು ಲೆನೊವೊ ಕಂಪೆನಿ ಕಡಿಮೆ ಬೆಲೆಯ ಸ್ಮಾರ್ಟ್‌ಫೋನಿನಲ್ಲಿ ತಂದಿದೆ.

RAM ಮತ್ತು ಮೆಮೊರಿ.

RAM ಮತ್ತು ಮೆಮೊರಿ.

ಸ್ನ್ಯಾಪ್‌ಡ್ರಾಗಲ್ 636 ಪ್ರೊಸೆಸರ್ ಅನ್ನು ಹೊಂದಿರುವ 'ಲೆನೊವೊ ಜೆಡ್ 5' ಸ್ಮಾರ್ಟ್‌ಫೋನ್ 6GB RAM / 64GB ಆಂತರಿಕ ಮೆಮೊರಿ ಮತ್ತು 6GB RAM / 128GB ಆಂತರಿಕ ಮೆಮೊರಿ ಹೊಂದಿರುವ ಎರಡು ವೇರಿಯಂಟ್‌ಗಳಲ್ಲಿ ಮಾರುಕಟ್ಟೆಗೆಬಂದಿದೆ. ಎಸ್‌ಡಿ ಕಾರ್ಡ್ ಮೂಲಕ ಸ್ಮಾರ್ಟ್‌ಫೋನ್ (256GB ವರೆಗೆ) ಮೆಮೊರಿಯನ್ನು ಹೆಚ್ಚಿಸಿಕೊಳ್ಳುವ ಆಯ್ಕೆ ಕೂಡ ಇದೆ.

ಡ್ಯುಯಲ್ ಕ್ಯಾಮೆರಾ ಸೆಟಪ್!

ಡ್ಯುಯಲ್ ಕ್ಯಾಮೆರಾ ಸೆಟಪ್!

ಲೆನೊವೊ ಜೆಡ್ 5' ಸ್ಮಾರ್ಟ್‌ಫೋನ್ 16-ಮೆ ಮತ್ತು 8-ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾಗಳನ್ನು ಹೊಂದಿದೆ. AI ಸಾಮರ್ಥ್ಯದೊಂದಿಗೆ, HDR +, 4K ಬೆಂಬಲ, f / 2.0 ಅಪಾರ್ಚರ್ ಮತ್ತು ಎಲ್ಇಡಿ ಫ್ಲಾಶ್ ಲಭ್ಯವಿದೆ. ಇನ್ನು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಎಫ್ / 2.0 ಅಪಾರ್ಚರ್ ಇದೆ. ಪೂರ್ಣ ಹೆಚ್‌ಡಿ ಸೆಲ್ಫಿ ವಿಡಿಯೋ ರೆಕಾರ್ಡಿಂಗ್ ಫೀಚರ್ ಹೊಂದಿದೆ.

ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

ಲೆನೊವೊ ಜೆಡ್ 5' ಸ್ಮಾರ್ಟ್‌ಫೋನ್ 3300 ಎಮ್ಎಹೆಚ್ ಬ್ಯಾಟರಿ ಮತ್ತು 18 ವ್ಯಾಟ್ ವೇಗದ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ. 4ಜಿ ಎಲ್ ಟಿಇ, ಹಾಟ್‌ಸ್ಪಾಟ್, ಬ್ಲೂಟೂತ್ ವಿ 5.0, ಜಿಪಿಎಸ್, 3.5 ಎಂಎಂ ಹೆಡ್‌ಫೋನ್ ಜ್ಯಾಕ್, ಮತ್ತು ಯುಎಸ್‌ ಟೈಪ್ ಸಿ ಜೊತೆಗೆ ಡ್ಯುಯಲ್ ಬ್ಯಾಂಡ್ ವೈ-ಫೈ 802.11ac ಫೀಚರ್ಸ್ ಒಳಗೊಂಡಿದೆ.

How to send WhatsApp Payments invitation to others - GIZBOT KANNADA
ಲೆನೊವೊ ಜೆಡ್ 5 ಬೆಲೆ?

ಲೆನೊವೊ ಜೆಡ್ 5 ಬೆಲೆ?

6 ಜಿಬಿ RAM / 64 ಜಿಬಿ ಶೇಖರಣಾ ರೂಪಾಂತರದ ಲೆನೊವೊ ಜೆಡ್ 5 ಬೆಲೆ ಚೀನಾದಲ್ಲಿ 1,399 ಸಿಎನ್‌ವೈಗಳಿಗೆ ಬಿಡುಗಡೆಯಾಗಿದೆ. ಅಂದರೆ ಭಾರತದಲ್ಲಿ ಸರಿಸುಮಾರು ರೂ 13,000 ಸಾವಿರ ರೂಪಾಯಿಗಳಿಂದ 14,000 ರೂಪಾಯಿಗಳಾಗಿರಲಿದೆ. ಇನ್ನು 6 ಜಿಬಿ ರಾಮ್ / 128 ಜಿಬಿ ರೂಪಾಂತರದ ಬೆಲೆ 1,799 ಸಿಎನ್‌ವೈಗಳಾಗಿವೆ. ಇದರ ಸರಿಸುಮಾರು ಬೆಲೆ ರೂ .18,900 ರೂಪಾಯಿಗಳಾಗಿರಲಿದೆ.

Best Mobiles in India

English summary
Lenovo Z5 With Snapdragon 636, Vertical Dual Camera Setup Launched: Price, Specifications, Features. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X