Home
ಮೊಬೈಲ್

ಲೆನೊವಾ ಸಂಸ್ಥೆಯ ಮೂರು ಹಿಂಭಾಗದ ಕ್ಯಾಮರಾವಿರುವ ಮೊದಲ ಫೋನ್ ಬಿಡುಗಡೆ

ಚೀನಾದ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆ ಕಳೆದ ಹಲವು ದಿನಗಳಿಂದ ನಿರೀಕ್ಷಿಸಲಾಗುತ್ತಿದ್ದ ಲೆನೊವಾ Z5s ನ್ನು ಚೀನಾದಲ್ಲಿ ಬಿಡುಗಡೆಗೊಳಿಸಿದೆ. ಇದು ಈ ಕಂಪೆನಿಯ ಮೊದಲ ಟ್ರಿಪಲ್ ಕ್ಯಾಮರಾವಿರುವ ಫೋನ್ ಆಗಿದೆ. ಇದು ಮೂರು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ – ಜೇನುತುಪ್ಪದಂತ ಕೇಸರಿ(ಹನಿ ಆರೆಂಜ್), ಬೂದು ಬಣ್ಣ(ಗ್ರೇ) ಮತ್ತು ಟೈಟಾನಿಯಂ ಕ್ರಿಸ್ಟಲ್ ನೀಲಿ(ಬ್ಲೂ) ಬಣ್ಣಗಳಲ್ಲಿ ಲಭ್ಯವಾಗುತ್ತದೆ.

ಚೀನಾ ಮಾರುಕಟ್ಟೆಯ ಬೆಲೆ:

ಚೀನಾ ಮಾರುಕಟ್ಟೆಯ ಬೆಲೆ:

4ಜಿಬಿ ಮೆಮೊರಿ ವೇರಿಯಂಟ್ ಫೋನಿನ ಬೆಲೆ 1398 ಯುವಾನ್ ಮತ್ತು 6ಜಿಬಿ ವೇರಿಯಂಟ್ ನ ಬೆಲೆ 1598 ಯುವಾನ್ ಆಗಿದೆ. ಈಗಾಗಲೇ ಪ್ರೀ ಆರ್ಡರ್ ಮಾಡಲು ಚೀನಾದಲ್ಲಿ ಲಭ್ಯವಿದೆ ಮತ್ತು ಡಿಸೆಂಬರ್ 24 ರಿಂದ ಮಾರಾಟ ಪ್ರಕ್ರಿಯೆ ನಡೆಯಲು ಆರಂಭವಾಗುತ್ತದೆ.

ಲೆನೊವಾ Z5s ನ ವೈಶಿಷ್ಟ್ಯತೆಗಳು:

ಲೆನೊವಾ Z5s ನ ವೈಶಿಷ್ಟ್ಯತೆಗಳು:

ಲೆನೊವಾ Z5s 6.39-ಇಂಚಿನ ಫುಲ್ HD+ ಸ್ಕ್ರೀನ್ ಜೊತೆಗೆ 1080x2340 ಪಿಕ್ಸಲ್ ರೆಸಲ್ಯೂಷನ್ ಮತ್ತು 19.5:9 ಅನುಪಾತವನ್ನು ಹೊಂದಿದೆ. ಈ ಡಿವೈಸ್ ಗೆ 92.6% ಸ್ಕ್ರೀನ್-ಟು-ಬಾಡಿ ಅನುಪಾತವಿದೆ ಮತ್ತು ಡಿಸ್ಪ್ಲೇಯು ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ ನಿಂದ ಮೇಲ್ಬಾಗದಲ್ಲಿ ರಕ್ಷಿಸಲಾಗಿದೆ. ಸ್ಮಾರ್ಟ್ ಫೋನ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 710 ಪ್ರೊಸೆಸರ್ ನಿಂದ ಪವರ್ಡ್ ಆಗಿದ್ದು ಆಂಡ್ರಾಯ್ಡ್ 9.0 ಪೈ ಆಪರೇಟಿಂಗ್ ಸಿಸ್ಟಮ್ ಮೂಲಕ ರನ್ ಆಗುತ್ತದೆ ಜೊತೆಗೆ ಕಂಪೆನಿಯ ಸ್ವಂತ ಕಸ್ಟಮೈಸೇಷನ್ ಇದೆ.

ಮೆಮೊರಿ ಮತ್ತು ಸೆನ್ಸರ್ ಗಳು:

ಮೆಮೊರಿ ಮತ್ತು ಸೆನ್ಸರ್ ಗಳು:

ಲೆನೊವಾ Z5s 4GB/6GB RAM ಮತ್ತು 64GB/128GB ಇಂಟರ್ನಲ್ ಸ್ಟೊರೇಜ್ ವ್ಯವಸ್ಥೆಯನ್ನು ಹೊಂದಿದೆ. ಬಳಕೆದಾರರು ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶವಿರುತ್ತದೆ. ಹೈಬ್ರಿಡ್ ಡುಯಲ್ ಸಿಮ್ ಫಂಕ್ಷನಾಲಿಟಿಯನ್ನು ಹ್ಯಾಂಡ್ ಸೆಟ್ ಹೊಂದಿದೆ ಮತ್ತು ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸೆನ್ಸರ್ ನ್ನು ಅಳವಡಿಸಲಾಗಿದೆ.

ಕ್ಯಾಮರಾ ವಿಭಾಗ ಹೇಗಿದೆ?

ಕ್ಯಾಮರಾ ವಿಭಾಗ ಹೇಗಿದೆ?

ಲೆನೊವಾ Z5s ಹಿಂಭಾಗದಲ್ಲಿ ಮೂರು ಕ್ಯಾಮರಾವನ್ನು ಹೊಂದಿದ್ದು 16MP ಪ್ರೈಮರಿ ಸೆನ್ಸರ್ ಜೊತೆಗೆ f/1.8 ಅಪರ್ಚರ್ ಹೊಂದಿದೆ. ಡುಯಲ್ ಟೋನ್ LED ಫ್ಲ್ಯಾಶ್ , 8MP ಟೆಲಿಫೋಟೋ ಲೆನ್ಸ್ ಜೊತೆಗೆ f/2.4 ಅಪರ್ಚರ್ ಮತ್ತು 5MP ಮೂರನೇಯ ಸೆನ್ಸರ್ ಆಗಿದ್ದು ಅದು f/2.4 ಅಪರ್ಚರ್ ಹೊಂದಿದೆ. ಇದರಲ್ಲಿ ಪೊರ್ಟೈಟ್ ಶಾಟ್ಸ್ ಕ್ಲಿಕ್ಕಿಸಬಹುದು. ಸ್ಮಾರ್ಟ್ ಫೋನಿನ ಮುಂಭಾಗದಲ್ಲಿ 16MP ಸೆಲ್ಫೀ ಶೂಟರ್ ಇದ್ದು ಅದರ ಅಪರ್ಚರ್ f/2.0 ಆಗಿದೆ.

ಕನೆಕ್ಟಿವಿಟಿ ಮತ್ತು ಬ್ಯಾಟರಿ:

ಕನೆಕ್ಟಿವಿಟಿ ಮತ್ತು ಬ್ಯಾಟರಿ:

ಗ್ಲಾಸ್ ಬ್ಯಾಕ್ ಪೆನಲ್ ನ್ನು ಸ್ಮಾರ್ಟ್ ಫೋನ್ ಹೊಂದಿದೆ ಮತ್ತು P2i ಸ್ಪ್ಯಾಷ್- ರೆಸಿಸ್ಟೆಂಟ್ ಕೋಟಿಂಗ್ ಇದೆ. ಇದು ಸ್ಮಾರ್ಟ್ ಫೋನ್ ಗೆ ರಕ್ಷಣೆ ನೀಡುತ್ತದೆ. 2,200 mAh ಬ್ಯಾಟರಿ ಸೌಲಭ್ಯವಿದ್ದು 18W ಫಾಸ್ಟ್ ಚಾರ್ಜಿಂಗ್ ಗೆ ಇದು ಬೆಂಬಲ ನೀಡುತ್ತದೆ. ಕನೆಕ್ಟಿವಿಟಿ ವಿಚಾರದಲ್ಲಿ ಲೆನೊವಾ Z5s ನಲ್ಲಿ 4ಜಿ, VoLTE, 3ಜಿ, ವೈ-ಫೈ,ಬ್ಲೂಟೂತ್, GPS ಮತ್ತು USB ಟೈಪ್-C ಇದೆ.

Best Mobiles in India

English summary
Lenovo Z5s with Android Pie, triple rear camera launched
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+