ಎಲ್‌ಜಿಯಿಂದ ಪ್ರಪ್ರಥಮ ವಿಂಡೋಸ್ ಧಮಾಕಾ
2013 ರ ಯಶಸ್ವಿ ಆರಂಭದ ನಂತರ ಎಲ್‌ಜಿ ತನ್ನ ಯಶಸ್ಸನ್ನು ಇನ್ನಷ್ಟು ವಿಸ್ತರಿಸಬೇಕೆಂಬ ಹಂಬದಲ್ಲಿದ್ದಂತೆ ಕಂಡುಬರುತ್ತಿದೆ. ಎಲ್‌ಜಿ ತನ್ನ G2 ಫೋನ್‌ನ ಯಶಸ್ಸನ್ನು ತನ್ನ ಇತರ ಡಿವೈಸ್‌ಗಳಲ್ಲಿ ಕೂಡ ಹೊರತರುವ ಆಶಾಭಾವನೆಯನ್ನು ಹೊಂದಿದ್ದು ಅದಕ್ಕೆ ತಕ್ಕಂತೆ ತನ್ನ G3 ಯನ್ನು ಲಾಂಚ್ ಮಾಡಿದೆ.
ಎಲ್‌ಜಿ ನಿರ್ಮಾಣದ ಹ್ಯಾಂಡ್‌ಸೆಟ್‌ಗಳಿಗೆ ಹೆಚ್ಚುವರಿ ಜನಪ್ರಿಯತೆ ಬಂದ ಬೆನ್ನಲ್ಲೇ, ಕಂಪೆನಿ ತನ್ನ ವಿಂಡೋಸ್ ಫೋನ್ 8.1 ಚಾಲನೆಯ ಪ್ರಪ್ರಥಮ ಹ್ಯಾಂಡ್‌ಸೆಟ್ ಅನ್ನು ಬಿಡುಗಡೆ ಮಾಡುವ ಸನ್ನಾಹದಲ್ಲಿದೆ. ಓಎಸ್ ಮತ್ತು ಆಂಡ್ರಾಯ್ಡ್ ನಂತರ ಮೂರನೇ ಸ್ಥಾನದಲ್ಲಿರುವ ಮೈಕ್ರೋಸಾಫ್ಟ್‌ನ ವಿಂಡೋಸ್ ಫೋನ್ ಮೂಲಕ ತನ್ನ ಅದೃಷ್ಟ ಪರೀಕ್ಷೆಗೆ ಎಲ್‌ಜಿ ಮುಂದಾಗಿದೆ.

ಕೆಲವೊಂದು ವದಂತಿಗಳ ಪ್ರಕಾರ ಸೋನಿ ಸದ್ಯದಲ್ಲೇ ವಿಂಡೋಸ್ ಫೋನ್ ಅನ್ನು ಲಾಂಚ್ ಮಾಡಲಿದೆ. ಬಜೆಟ್ ವಿಂಡೋಸ್ ಫೋನ್ ಅನ್ನು ಎಲ್‌ಜಿ ಸದ್ಯದಲ್ಲೇ ಲಾಂಚ್ ಮಾಡುವ ಸನ್ನಾಹದಲ್ಲಿದೆ. ಎಲ್‌ಜಿ ನಿರ್ಮಾಣದ ವಿಂಡೋಸ್ ಫೋನ್ ಸ್ಮಾರ್ಟ್‌ಫೋನ್ ಹೆಸರು D635 ಎಂದಾಗಿದೆ.
ತಮ್ಮ ನೆಟ್‌ವರ್ಕ್ ಡೇಟಾಬೇಸ್ ಜೊತೆಗೆ ಮಾಡೆಲ್ ಸಂಖ್ಯೆ D635 ನ ಲಗತ್ತಿನೊಂದಿಗೆ ಇದು ಬಂದಿದೆ. ಈ ಫೋನ್ 5 ಇಂಚಿನ 1280 x 720 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಬಂದಿದ್ದು, ಮಾಡೆಲ್ ಸಂಖ್ಯೆ ಬಿಟ್ಟು ಇನ್ನಾವುದೇ ಮಾಹಿತಿ ಲಭ್ಯವಾಗಿಲ್ಲ. ಎಲ್‌ಜಿ ಯ ಮುಂಬರಲಿರುವ ವಿಂಡೋಸ್ ಫೋನ್ ಉತ್ತಮ ಆರಂಭವನ್ನು ನೀಡಲಿದೆ ಎಂದು ಟ್ವಿಟ್ಟರ್ ಸೆನ್ಸೇಶನ್ @evleaks ತಿಳಿಸಿದೆ. LG Uni8 ಎಂಬ ಹೆಸರನ್ನು ಹೊಂದಿರುವ ಈ ಡಿವೈಸ್, ಇದು ಕಂಪೆನಿಯ ಪ್ರಥಮ 8.1 ವಿಂಡೋಸ್ ಫೋನ್ ಆಗಿದೆ.
ಇದೊಂದು ಬಜೆಟ್ ಹ್ಯಾಂಡ್‌ಸೆಟ್ ಎಂಬುದು ಖಚಿತವಾಗಿದ್ದು ಫೋನ್ ಬಗೆಗೆ ಯಾವುದೇ ಹೊಸ ಮಾಹಿತಿ ಇದುವರೆಗೆ ಲಭ್ಯವಾಗಿಲ್ಲ.


Click it and Unblock the Notifications