ಎಲ್ ಜಿ ತರಲಿದೆ ಅತ್ಯಾಕರ್ಷಕ ಎಕ್ಲಿಪ್ಸ್ ಮೊಬೈಲ್

ಎಲ್ ಜಿ ಅತ್ಯಾಕರ್ಷಕ ವಿನ್ಯಾಸ ಹೊಂದಿರುವ ಮೊಬೈಲ್ ನ್ನು ಹೊರತರಲಿದೆ. ಕ್ವೆರ್ಟಿ ಕೀ ಪ್ಯಾಡ್ ಹೊಂದಿರುವ ಹೊಸ ಎಲ್ ಜಿ ಎಕ್ಲಿಪ್ಸ್ 4ಜಿ ಫೋನನ್ನು ನೋಡುತ್ತಿದ್ದಂತೆಯೇ ಖರೀದಿಸುವ ಮನಸ್ಸಾಗುತ್ತೆ. ಸ್ಲೈಡ್ ಔಟ್ ವಿನ್ಯಾಸದಲ್ಲಿ ಮೂಡಿಬಂದಿರುವ ಈ ಮೊಬೈಲ್ ನಿಮ್ಮ ಮನಸ್ಸು ಗೆಲ್ಲುವುದರಲ್ಲಿ ಸಂಶಯವೇ ಇಲ್ಲ.
ಎಷ್ಟೋ ಆಂಡ್ರಾಯ್ಡ್ ಫೋನ್ ಗಳ ಪೈಕಿ ಈ ಎಲ್ ಜಿ ಹ್ಯಾಂಡ್ ಸೆಟ್ ನಿಮ್ಮ ಕಣ್ಸೆಳೆಯುವ ಲುಕ್ ಹೊಂದಿದೆ. ಕ್ವಾಲ್ಕಂ ಸ್ನ್ಯಾಪ್ ಡ್ರಾಗನ್ MSM8255 1 GHz ಸಿಂಗಲ್ ಕೋರ್ ಪ್ರೊಸೆಸರ್ ಮತ್ತು ಆಂಡ್ರಾಯ್ಡ್ 2.3.5 ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್ ಮೂಲಕ ಮೊಬೈಲ್ ಕಾರ್ಯ ನಿರ್ವಹಿಸಲಿದೆ. ಜೊತೆಗೆ ಎಲ್ ಜಿ ಯೂಸರ್ ಇಂಟರ್ ಫೇಸ್ ಕೂಡ ಮೊಬೈಲ್ ನಲ್ಲಿದೆ.
ಎಲ್ ಜಿ ಎಕ್ಲಿಪ್ಸ್ 4ಜಿ ಮೊಬೈಲ್ ವಿಶೇಷತೆ:
* 3.5 ಇಂಚಿನ ಮಲ್ಟಿ ಟಚ್ ಸ್ಕ್ರೀನ್ ಡಿಸ್ಪ್ಲೇ
* 168 ಗ್ರಾಂ ತೂಕ
* 12.1 x 6.3 x 1.3 ಸೆ.ಮೀ ಸುತ್ತಳತೆ
* ಕ್ವೆರ್ಟಿ ಕೀ ಪ್ಯಾಡ್ ನೊಂದಿಗೆ ಸ್ಲೈಡ್ ಔಟ್ ಕೀ ಬೋರ್ಡ್
* 3.1 ಮೆಗಾ ಪಿಕ್ಸಲ್ ಕ್ಯಾಮೆರಾ, LED ಫ್ಲಾಶ್
* 0.3 ಮೆಗಾ ಪಿಕ್ಸಲ್ ಸೆಕೆಂಡರಿ ಕ್ಯಾಮೆರಾ
* 1ಜಿಬಿ ಆಂತರಿಕ ಮೆಮೊರಿ, 512 ಎಂಬಿ RAM ಸಾಮರ್ಥ್ಯ
* 32 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ
* A2DP V3.0 ಬ್ಲೂಟೂಥ್, v2.0 ಮೈಕ್ರೊ USB ಪೋರ್ಟ್
* 802.11 b/g/n ವೈ-ಫೈ (DLNA)
* GPS, ಜಿಯೋ ಟ್ಯಾಗಿಂಗ್
ಮೈಕ್ರೊ SD, ಮೈಕ್ರೊ SDHC, ಟ್ರಾನ್ಸ್ ಫ್ಲಾಶ್ ಮೆಮೊರಿ ಕಾರ್ಡ್ ಗಳನ್ನೂ ಮೊಬೈಲ್ ಬೆಂಬಲಿಸಲಿದೆ. ಜೊತೆಗೆ ಅಕ್ಸೆಲೆರೊಮೀಟರ್, ಪ್ರಾಕ್ಸಿಮಿಟಿ ಸೆನ್ಸಾರ್ ನೀಡಲಾಗಿದೆ.
1500 mAh ಬ್ಯಾಟರಿ ಹೊಂದಿರುವ ಈ ಮೊಬೈಲ್ 5.5 ಗಂಟೆ ಟಾಕ್ ಟೈಂ ಮತ್ತು 14 ದಿನಗಳ ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ. ಇದರೊಂದಿಗೆ 3ಜಿ HSDPA/HSUPA, 14.4Mbps HSDPA, GPRS, EDGE ಸಂಪರ್ಕವನ್ನೂ ಪಡೆದುಕೊಂಡಿದೆ. ಹೈ ಡೆಫನಿಶನ್ ಗೇಮ್ ಗಳನ್ನು ಬೆಂಬಲಿಸುವ ಈ ಮೊಬೈಲ್ ವೇಗವಾಗಿ ಇಂಟರ್ನೆಟ್ ಸಂಪರ್ಕ ಒದಗಿಸಲಿದೆ.
ಸಾಮಾಜಿಕ ತಾಣಗಳನ್ನು ಬಯಸುವವರಿಗೆ ಈ ಎಲ್ ಜಿ ಎಕ್ಲಿಪ್ಸ್ ಮೊಬೈಲ್ ಹೆಚ್ಚು ಇಷ್ಟವಾಗುತ್ತೆ. ಸಾಮಾಜಿಕ ತಾಣಗಳ ಅಪ್ಲಿಕೇಶನ್ ಗಳನ್ನು ಮೊಬೈಲ್ ಹೊಂದಿದೆ. ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್ ಹಲವು ಆಂಡ್ರಾಯ್ಡ್ ಅಪ್ಲಿಕೇಶನ್ ಗಳನ್ನೂ ಡೌನ್ ಲೋಡ್ ಮಾಡಿಕೊಳ್ಳಲು ನೆರವಾಗಲಿದೆ. ಆದರೆ ಈ ಮೊಬೈಲ್ ಬೆಲೆಯ ಬಗ್ಗೆ ಕಂಪನಿ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ.


Click it and Unblock the Notifications








