ಎಲ್‌ಜಿ ಜಿ3 ಬಳಕೆಯ ಉಪಯುಕ್ತ ಸಲಹೆ ಸೂಚನೆ

By Shwetha
|

ಎಲ್‌ಜಿ ಜಿ3 ಅತ್ಯಂತ ಸುಂದರವಾಗಿರುವ ಡಿಸ್‌ಪ್ಲೇಯನ್ನು ಹೊಂದಿದ್ದು ವೇಗವಾಗಿರುವ ಫೋಕಸ್ ಕ್ಯಾಮೆರಾವನ್ನು ಪಡೆದಿದೆ. ಡಿವೈಸ್ 2560 x 1440 ಪಿಕ್ಸೆಲ್‌ಗಳನ್ನು ಹೊಂದಿದ್ದು 5.5 ಇಂಚಿನ ಡಿಸ್‌ಪ್ಲೇಯನ್ನು ಫೋನ್ ಪಡೆದುಕೊಂಡಿದೆ. ಇದು ಲೇಸರ್ ಫೋಕಸ್ ಉಳ್ಳ 13 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾವನ್ನು ಹೊಂದಿದ್ದು, ನೀವು ಫೋಟೋ ತೆಗೆಯುವ ಅಂಶಕ್ಕೆ ಇದರ ಕ್ಯಾಮೆರಾ ಪೂರಕವಾಗಿದೆ.

ಇಂದಿನ ಲೇಖನದಲ್ಲಿ ಫೋನ್ ಕುರಿತ ಇನ್ನಷ್ಟು ಸಲಹೆ ಸೂಚನೆಗಳನ್ನು ಇಲ್ಲಿ ನೀಡುತ್ತಿದ್ದು ನಿಮ್ಮ ಫೋನ್ ಬಳಕೆಯ ಬಗ್ಗೆ ಸಮಗ್ರ ಮಾಹಿತಿಯನ್ನು ಇದು ನೀಡಲಿದೆ.

#1

#1

ನ್ಯಾವಿಗೇಶನ್ ಬಟನ್‌ಗಳನ್ನು ಬದಲಾಯಿಸುವುದು:
ಆಂಡ್ರಾಯ್ಡ್ ನ್ಯಾವಿಗೇಶನ್ ಪಟ್ಟಿಯನ್ನು ನಿಮಗೆ ಸುಲಭವಾಗಿ ಮರುಜೋಡಿಸಬಹುದು ಮತ್ತು ಕಸ್ಟಮೈಸ್ ಮಾಡಬಹುದು. ಇಲ್ಲಿ ಸೆಟ್ಟಿಂಗ್ಸ್ ನಂತರ ಡಿಸ್‌ಪ್ಲೇ ಹೋಮ್ ಟಚ್ ಬಟನ್ಸ್ ಗೆ ಹೋಗಿ. 'ಬಟನ್ ಕಾಂಬಿನೇಶನ್' ಅನ್ನು ಒತ್ತಿ ಮತ್ತು ನಿಮಗೆ ಉತ್ತಮ ಎಂದೆನಿಸಿರುವಲ್ಲಿ ಈ ಬಟನ್‌ಗಳನ್ನು ಎಳೆಯಿರಿ.

#2

#2

ವೈಬ್ರೇಶನ್ ಶಕ್ತಿ:
ಇದಕ್ಕಾಗಿ ಮೊದಲು ಸೆಟ್ಟಿಂಗ್‌ಗಳಿಗೆ ಹೋಗಿ, ಇಲ್ಲಿ ಸೌಂಡ್‌ನಲ್ಲಿ 'ವೈಬ್ರೇಟ್ ಶಕ್ತಿ' ಯನ್ನು ಒತ್ತಿ. ಐದು ಲಭ್ಯವಿರುವ ಮಾದರಿಗಳಲ್ಲಿ ನೀವಿದನ್ನು ಆರಿಸಬಹುದು.

#3

#3

ಒನ್ ಹ್ಯಾಂಡ್ ಆಪರೇಶನ್:
ಜಿ3 ಹೆಸರೇ ಹೇಳುವಂತೆ ದೊಡ್ಡ ಫೋನ್ ಆಗಿದೆ. ಆದ್ದರಿಂದ ಈ ಹ್ಯಾಂಡ್‌ಸೆಟ್ ಅನ್ನು ಒಂದೇ ಕೈಯಿಂದ ನಿರ್ವಹಿಸುವುದು ಅಸಾಧ್ಯವಾದ ಮಾತಾಗಿದೆ. ಆದರೆ ನಮ್ಮಂತಹ ಸಣ್ಣ ಕೈಗಳ ಜನರ ಅಭಿರುಚಿಗೆ ತಕ್ಕಂತೆ ಎಲ್‌ಜಿ ತನ್ನ ಹ್ಯಾಂಡ್‌ಸೆಟ್‌ನಲ್ಲಿ ವೈಶಿಷ್ಟ್ಯಗಳನ್ನು ಅಳವಡಿಸಿದೆ. ಇದನ್ನು ಹೇಗೆ ಬಳಸುವುದು ಎಂಬುದನ್ನು ಇಲ್ಲಿ ನೀಡಿರುವ ಚಿತ್ರದಲ್ಲಿ ನೋಡಿ.

#4

#4

ಅಧಿಸೂಚನೆ ಫ್ಲ್ಯಾಶ್ ಬ್ಲಿಂಕ್:
ಇದನ್ನು ನಿರ್ವಹಿಸುವುದು ಅತಿ ಸುಲಭವಾಗಿದೆ. ಸೆಟ್ಟಿಂಗ್ - ಸಾಮಾನ್ಯ - ಪ್ರವೇಶ ಮೆನು ಇಲ್ಲಿ ನಿಮಗೆ ಜಿ3 ಕ್ಯಾಮೆರಾ ಫ್ಲ್ಯಾಶ್ ಬ್ಲಿಂಕ್ ಒಳಬರುವ ಕರೆಗಳು ಮತ್ತು ಅಧಿಸೂಚನೆಗಳಿಗಾಗಿ ಫ್ಲ್ಯಾಶ್ ಬ್ಲಿಂಕ್ ಅನ್ನು ತೋರಿಸುತ್ತದೆ. ಇದು ನಿಮಗೆ ಸಹಕಾರಿಯಾಗಿದೆ.

#5

#5

ಫೋಟೋ ಕೊಲೇಜ್:
ಎಲ್‌ಜಿ ಜಿ3 ಯ ಸುಂದರ ಗ್ಯಾಲರಿ ಅಪ್ಲಿಕೇಶನ್‌ನಿಂದ ಸುಂದರವಾದ ಕೊಲೇಜ್‌ಗಳನ್ನು ನಿಮಗೆ ಪಡೆಯಬಹುದಾಗಿದೆ. ಯಾವುದೇ ಆಲ್ಬಮ್ ಅನ್ನು ತೆರೆಯಿರಿ, ಸ್ಕ್ವೇರ್ ಬಟನ್ ಅನ್ನು ಒತ್ತಿ ಮತ್ತು ಇಲ್ಲಿ ಕೊಲೇಜ್ ಮಾಡಿ. ಇಲ್ಲಿ ನಿಮಗೆ ಫೋಟೋಗಳನ್ನು ಆಯ್ಕೆಮಾಡಬಹುದು ಮತ್ತು ಕೊಲೇಜ್ ಆಲ್ಬಮ್‌ನಲ್ಲಿ ಅದನ್ನು ಉಳಿಸಬಹುದಾಗಿದೆ.

#6

#6

ಸಂದೇಶ ಸಂವಹಿಸುವಿಕೆ ಥೀಮ್
ನೀವು ಕಳುಹಿಸುವ ಮತ್ತು ಸ್ವೀಕರಿಸುವ ಪಠ್ಯ ಸಂದೇಶಗಳನ್ನು ನಿರ್ದಿಷ್ಟಪಡಿಸಬಹುದು ಮತ್ತು ಕಸ್ಟಮೈಸ್ ಮಾಡಬಹುದು. ಸ್ಕ್ವೇರ್ ಬಟನ್ ಒತ್ತಿ ನಂತರ ಸೆಟ್ಟಿಂಗ್ಸ್‌ಗೆ ಹೋಗಿ. ನೀವು ಯಾವುದನ್ನು ಇಷ್ಟಪಡುತ್ತೀರೋ ಅದನ್ನು ಕಸ್ಟಮೈಸ್ ಮಾಡಲು "ಸಂವಾದ ಥೀಮ್‌" ನಲ್ಲಿ ತಟ್ಟಿರಿ.

#7

#7

LG QMemo+
ಪರದೆಯಲ್ಲಿರುವ ವಿಷಯಗಳನ್ನು ಸ್ಕ್ರೀನ್‌ಶಾಟ್ ತೆಗೆಯಲು ಈ ಉಪಕರಣ ಸಹಕಾರಿಯಾಗಿದೆ. ಅಧಿಸೂಚನೆ ಪಟ್ಟಿಯನ್ನು ಕೆಳಕ್ಕೆ ಎಳೆಯುವ ಮೂಲಕ, ಕೆಳಭಾಗದಿಂದ ಮೇಲಕ್ಕೆ ಸ್ವೈಪ್ ಮಾಡುವ ಮೂಲಕ ಹೀಗೆ ನಿಮಗೆ ಇದನ್ನು ಪರಿಶೀಲಿಸಬಹುದು.

#8

#8

ಎಲ್‌ಜಿ ಆರೋಗ್ಯ
ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುವ ಎಲ್‌ಜಿ ಆರೋಗ್ಯ ಸಲಹೆ ಈ ಫೋನ್‌ನಲ್ಲಿದೆ. ನೀವು ಎಷ್ಟು ಕ್ಯಾಲೋರಿಗಳನ್ನು ದಿನದಲ್ಲಿ ವಿನಿಯೋಗಿಸಿದ್ದೀರಿ ಎಂಬುದರ ಮಾಹಿತಿಯನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಳಿಗೆ ಚಿತ್ರವನ್ನು ಪರಿಶೀಲಿಸಿ.

#9

#9

ಮಲ್ಟಿ ಫೋಟೋ
ನಿಮ್ಮದೇ ಆದ ವೈಯಕ್ತೀಕರಿಸಿದ ವಾಲ್‌ಪೇಪರ್ ಅನ್ನು ರಚಿಸಲು ನಿಮಗೆ ಇಷ್ಟವಾಗಿರುವ ಚಿತ್ರಗಳನ್ನು ಆಯ್ದುಕೊಳ್ಳಬಹುದು. ಸೆಟ್ಟಿಂಗ್ಸ್‌ನಲ್ಲಿ ಹೆಚ್ಚು ಫೋಟೋ ಆಯ್ಕೆಗೆ ಹೋಗಿ, ಇಲ್ಲಿ ಚಿತ್ರಗಳನ್ನು ಸೇರಿಸಿ ಒತ್ತಿ.

#10

#10

ಮರೆ/ ತೋರಿಸು ಅಪ್ಲಿಕೇಶನ್‌ಗಳು
ಮೆನುವಿನಲ್ಲೇ ನಿಮಗೆ ನೇರವಾಗಿ ಅಪ್ಲಿಕೇಶನ್‌ಗಳನ್ನು ಮರೆಮಾಡಬಹುದು ಇಲ್ಲವೇ ತೋರಿಸಬಹುದು. ಮೊದಲು ಮುಖ್ಯ ಅಪ್ಲಿಕೇಶನ್ ಮೆನುವಿಗೆ ಹೋಗಿ, ಅಪ್ಲಿಕೇಶನ್ ಮೇಲೆ ಹೋಲ್ಡ್ ಮಾಡಿ ಇದು ನಿಮಗೆ ಹೆಚ್ಚುವರಿ ಆಯ್ಕೆಗಳನ್ನು ತೋರಿಸುತ್ತದೆ. ಚಿತ್ರವನ್ನು ಪರಿಶೀಲಿಸಿ.

#11

#11

ಕ್ವಿಕ್ ರಿಮೋಟ್ ಮತ್ತು QSlide
ಎಲ್‌ಜಿ ಜಿ3 ಯೊಂದಿಗೆ, ನೀವು ಹಲವಾರು ಕರಾಮತ್ತುಗಳನ್ನು ಮಾಡಬಹುದು. ಮೇಲ್ಭಾಗದ ಅಧಿಸೂಚನೆ ಪ್ಯಾನಲ್ ಅನ್ನು ತಟ್ಟಿ, ಇಲ್ಲಿ ನಿಮಗೆ ಎರಡು ಆಯ್ಕೆಗಳನ್ನು ನೋಡಬಹುದು. ಕ್ಯುಸ್ಲೈಡ್ ಮತ್ತು ಕ್ವಿಕ್ ರಿಮೋಟ್. ನಿಮ್ಮ ಹ್ಯಾಂಡ್‌ಸೆಟ್ ಮೂಲಕ ಚಾನಲ್‌ಗಳನ್ನು ಸರ್ಫ್ ಮಾಡಲು ನೀವು ಬಯಸುತ್ತೀರಿ ಎಂದಾದಲ್ಲಿ ಕ್ವಿಕ್ ರಿಮೋಟ್ ಅತ್ಯಗತ್ಯವಾಗಿದೆ.

Best Mobiles in India

Read more about:
English summary
This article tells about Lg G3 smartphone tips and tricks for better use.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X