'ಐಫೋನ್ ಎಕ್ಸ್'ಗಿಂತಲೂ ಅಧಿಕ ಬೆಲೆಯ ನೂತನ ಆಂಡ್ರಾಯ್ಡ್ ಫೋನ್ ಮಾರುಕಟ್ಟೆಗೆ!!
ಆಪಲ್ ಐಫೋನ್ ಎಕ್ಸ್ಗಿಂತಲೂ ಅಧಿಕ ಬೆಲೆಯ ನೂತನ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿ ಮಾರಾಟ ಮಾಡುವ ಯೋಜನೆಗೆ ಯಾವೊಂದು ಮೊಬೈಲ್ ಕಂಪೆನಿಗಳು ಮುಂದಾಗುವುದಿಲ್ಲ. ಆದರೆ, ಎಲೆಕ್ಟ್ರಾನಿಕ್ಸ್ ದೈತ್ಯ ಸಂಸ್ಥೆ ಎಲ್‌ಜಿ ಮಾತ್ರ ಆಪಲ್ ಐಫೋನ್ ಎಕ್ಸ್ಗಿಂತಲೂ ದುಬಾರಿ ಬೆಲೆಯ ಸ್ಮಾರ್ಟ್‌ಪೋನ್ ಒಂದನ್ನು ಪರಿಚಯಿಸಿಸುತ್ತಿದೆ.!
ಹೌದು, ದಕ್ಷಿಣ ಕೋರಿಯಾದ ತಂತ್ರಜ್ಞಾನ ಸಂಸ್ಥೆ ಎಲ್‌ಜಿ ತನ್ನ ಎಲ್‌ಜಿ ಸಿಗ್ನೇಚರ್ ಎಂಬ ನೂತನ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುತ್ತಿದೆ. 'ಐಫೊನ್ ಎಕ್ಸ್' ಬೆಲೆಯನ್ನು ಮೀರಿಸಿರುವ ಈ ಸ್ಮಾರ್ಟ್‌ಪೋನ್ ಆಂಡ್ರಾಯ್ಡ್ ಮೊಬೈಲ್ಗಳಲ್ಲೇ ಅತೀ ಹೆಚ್ಚಿನ ವಿಶೇಷತೆಗಳನ್ನು ಒಳಗೊಂಡ ಮೊಬೈಲ್ ಆಗಿರಲಿದೆ ಎಂದು ಎಲ್‌ಜಿ ಕಂಪೆನಿ ಈಗಾಗಲೇ ಹೇಳಿಕೊಂಡಿದೆ.

ಇದೆ ಆಗಸ್ಟ್ 20ಕ್ಕೆ ಕಪ್ಪು ಮತ್ತು ಬಿಳುಪು ಬಣ್ಣಗಳಲ್ಲಿ ಎಲ್‌ಜಿ ಸಿಗ್ನೇಚರ್ ಎಡಿಷನ್ ಸ್ಮಾರ್ಟ್‌ಪೋನ್ ಮಾರುಕಟ್ಟೆಗೆ ಕಾಲಿಡುತ್ತಿದ್ದು, ಹಾಗಾದರೆ, ಆಪಲ್ ಐಫೋನ್ ಎಕ್ಸ್ ಬೆಲೆಯನ್ನೂ ಮೀರಿಸಿರುವ ಮೊದಲ ಆಂಡ್ರಾಯ್ಡ್ ಸ್ಮಾರ್ಟ್‌ಪೋನ್ ಹೇಗಿದೆ? ಸ್ಮಾರ್ಟ್‌ಫೋನ್ ಬೆಲೆ ಎಷ್ಟು? ಪೋನ್ ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಡಿಸ್‌ಪ್ಲೇ ಮತ್ತು ವಿನ್ಯಾಸ!
ಎಲ್‌ಜಿ ಸಿಗ್ನೇಚರ್ ಎಡಿಷನ್ ಸ್ಮಾರ್ಟ್‌ಪೋನಿನಲ್ಲಿ 6 ಇಂಚಿನ OLED ಡಿಸ್‌ಪ್ಲೇ ಇರಲಿದೆ. QHD+ ಗುಣಮಟ್ಟದ ಡಿಸ್‌ಪ್ಲೇ ಇದಾಗಿದ್ದು, ಡಿಸ್‌ಪ್ಲೇ ಸ್ಕ್ರಾಚ್ ಆಗಬಾರದು ಎನ್ನುವ ಕಾರಣಕ್ಕೆ ಗೊರಿಲ್ಲಾ ಗ್ಲಾಸ್ 5 ಸುರಕ್ಷತೆಯನ್ನು ನೀಡಲಾಗಿದೆ. ಹಿಂಬಾಗದಲ್ಲಿ ಡ್ಯುಯಲ್ ಕ್ಯಾಮೆರಾ ಹಾಗೂ ಫಿಂಗರ್‌ಪ್ರಿಂಟ್ ಆಯ್ಕೆ ಹೊಂದಿರುವ ಪೋನಿನ ವಿನ್ಯಾಸ ಅದ್ಬುತವಾಗಿದೆ.

ಪ್ರೊಸೆಸರ್ ಮತ್ತು RAM!
ಎಲ್‌ಜಿ ಸಿಗ್ನೇಚರ್ ಎಡಿಷನ್ ಸ್ಮಾರ್ಟ್‌ಫೋನಿನಲ್ಲಿ ಟಾಪ್ ಎಂಡ್ ಪ್ರೊಸೆಸರ್ ಎಂದು ಹೆಸರಾಗಿರುವ 'ಸ್ನ್ಯಾಪ್‌ಡ್ರಾಗನ್' 845 ಪ್ರೋಸೆಸರ್ ಅನ್ನು ಅಳವಡಿಸಲಾಗಿದೆ. ಆಡ್ರಿನೋ 630 GPUವನ್ನು ಸಹ ಹೊಂದಿರುವ ಈ ಸ್ಮಾರ್ಟ್‌ಪೋನ್ 6 GB RAM ಹಾಗೂ 256 GB ಆಂತರಿಕ ಮೆಮೊರಿಯನ್ನು ಹೊಂದಿದೆ ಎಂದು ಎಲ್‌ಜಿ ಕಂಪೆನಿ ಮಾಹಿತಿ ನೀಡಿದೆ.

ಕ್ಯಾಮೆರಾ ಸಾಮರ್ಥ್ಯ
ಆಂಡ್ರಾಯ್ಡ್ ಮೊಬೈಲ್ಗಳಲ್ಲೇ ಅತೀ ಹೆಚ್ಚಿನ ವಿಶೇಷತೆಗಳನ್ನು ಹೊಂದಿರಬಹುದಾದ ಈ ಸಿಗ್ನೇಚರ್ ಎಡಿಷನ್ ಸ್ಮಾರ್ಟ್‌ಫೋನಿನಲ್ಲಿ 16 MP + 16 MP ಡ್ಯುಯಲ್ ಕ್ಯಾಮೆರಾಗಳನ್ನು ನೀಡಲಾಗಿದೆ. ಸೆಲ್ಫಿ ಪ್ರಿಯರಿಗಾಗಿ 8 MP ಸೆಲ್ಪೀ ಕ್ಯಾಮೆರಾವಿದ್ದು, ಕ್ಯಾಮೆರಾ ತಂತ್ರಜ್ಞಾನದ ಗುಣಮಟ್ಟದಲ್ಲಿ ಯಾವುದೇ ರಾಜಿಯಾಗಿಲ್ಲ ಎಂಬುದನ್ನು ನಾವಿಲ್ಲಿ ತಿಳಿಯಬಹುದು.

ಬಯೋಪ್ಲೆ H9i ಹೆಡ್ಫೋನ್ ಗಿಫ್ಟ್!!
ಐಫೊನ್ ಎಕ್ಸ್ ಬೆಲೆಯನ್ನು ಮೀರಿಸಿರುವ ಈ ಸ್ಮಾರ್ಟ್‌ಪೋನ್ ಬಿಡುಗಡೆ ಆಫರ್ ಎಂದು ಬ್ಯಾಂಗ್ & ಒಲುಫ್ಸೆನ್ ಅವರ ಬಯೋಪ್ಲೆ H9i ಹೆಡ್ಫೋನ್ ಅನ್ನು ಎಲ್‌ಜಿ ನೀಡಲಿದೆ. LG ಸಿಗ್ನೇಚರ್ ಎಡಿಷನ್ ಸ್ಮಾರ್ಟ್‌ಫೋನ್ ಅನ್ನು ಪ್ರೀಮಿಯಮ್ ಮೆಟಿರಿಯಲ್ ಆಗಿರುವ ಜಿರ್ಕೋನಿಯಮ್ ಸೆರೆಮಿಕ್ ಬ್ಲಾಕ್ ನಿಂದ ಮಾಡಲಾಗಿದೆ.

ಸ್ಮಾರ್ಟ್‌ಫೋನ್ ಬೆಲೆ ಎಷ್ಟು?
ಆಗಸ್ಟ್ 20 ರಂದು ಲಾಂಚ್ ಆಗುತ್ತಿರುವ G ಸಿಗ್ನೇಚರ್ ಎಡಿಷನ್ ಸ್ಮಾರ್ಟ್‌ಫೋನ್ ಅನ್ನು, ಎರಡು ವಾರ ಮುಂಗಡವಾಗಿಯೇ ಮೊಬೈಲ್ ಬುಕ್ಕಿಂಗ್ ಮಾಡಬೇಕಾಗಿದ್ದು, 1,22,820 ರೂ ಬೆಲೆಗೆಕೇವಲ 300 ಮೊಬೈಲ್ಗಳನ್ನು ಮಾರಾಟ ಮಾಡಲು ಎಲ್‌ಜಿ ಕಂಪೆನಿ ತೀರ್ಮಾನಿಸಿದೆ. ಸ್ಮಾರ್ಟ್‌ಫೋನಿನ ಮೇಲೆ ಬಳಕೆದಾರರು ಅವರ ಹೆಸರನ್ನು ಬರೆಸಿಕೊಳ್ಳಬಹುದಾಗಿದೆ.


Click it and Unblock the Notifications








