Home
ಮೊಬೈಲ್

ಹೈ ಡೆಫನಿಶನ್ ಮೊಬೈಲ್ ಗೆ ಸರಿಸಾಟಿ ಯಾವುದು?

By Super
ಹೈ ಡೆಫನಿಶನ್ ಮೊಬೈಲ್ ಗೆ ಸರಿಸಾಟಿ ಯಾವುದು?

ಗ್ರಾಹಕರಿಗೆ ಉತ್ತಮ ಮೊಬೈಲ್ ಗಳನ್ನು ಕಡಿಮೆ ಬೆಲೆಗೆ ನೀಡುತ್ತಾ ಬಂದಿರುವ ಎಲ್ ಜಿ ಕಂಪನಿ ಎಲ್ ಜಿ ನೈಟ್ರೊ ಎಚ್ ಡಿ ಎಂಬ ಮೊಬೈಲನ್ನು ಇತ್ತೀಚೆಗೆ ಬಿಡುಗಡೆಗೊಳಿಸಿದೆ.

ಅತ್ಯಾಧುನಿಕ ಆಂಡ್ರಾಯ್ಡ್ v4.0 ಐಸ್ ಕ್ರೀಂ ಸ್ಯಾಂಡ್ ವಿಚ್ ಆಪರೇಟಿಂಗ್ ಸಿಸ್ಟಮ್ ಮತ್ತು 1.5 GHz ಸ್ಕಾರ್ಪಿಯನ್ ಡ್ಯೂಯಲ್ ಕೋರ್ ಪ್ರೊಸೆಸರ್ ಪಡೆದುಕೊಂಡಿರುವ ಈ ಸ್ಮಾರ್ಟ್ ಫೋನ್ ನಲ್ಲಿ ನಿಮ್ಮ ಮೆಚ್ಚುಗೆ ಗಳಿಸುವ ಅನೇಕ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.

ಎಲೆ ಜಿ ನೈಟ್ರೊ ಎಚ್ ಡಿ, 4.5 ಇಂಚಿನ 720 x 1280 ಪಿಕ್ಸಲ್ ರೆಸೊಲ್ಯೂಷನ್ ಹೊಂದಿರುವ ಡಿಸ್ಪ್ಲೇ ಅತ್ಯುನ್ನತ ವಿನ್ಯಾಸದಿಂದ ಮೂಡಿಬಂದಿದೆ. HD-IPS LCD ವಿಶೇಷ ಟಚ್ ಸ್ಕ್ರೀನ್ ಬೆಂಬಲಿತವಾಗಿದ್ದು, ಅಕ್ಸೆಲೆರೊಮೀಟರ್ ಸೆನ್ಸಾರ್, ಪ್ರಾಕ್ಸಿಮಿಟಿ ಸೆನ್ಸಾರ್ ಮತ್ತು ಸೆನ್ಸಿಟಿವ್ ಕಂಟ್ರೋಲ್ ನೀಡಲಾಗಿದೆ.

3.5 ಎಂಎಂ ಆಡಿಯೋ ಜ್ಯಾಕ್ ನಿಂದ ಉತ್ತಮ ಸಂಗೀತವನ್ನು ಪಡೆಯಬಹುದು. 1 ಜಿಬಿ RAM ಯೊಂದಿಗೆ 4 ಜಿಬಿ ಆಂತರಿಕ ಮೆಮೊರಿ ಮತ್ತು 32 ಜಿಬಿವರೆಗೂ ಮೆಮೊರಿ ಶೇಖರಣಾ ಸಾಮರ್ಥ್ಯವನ್ನೂ ಹೊಂದಿದೆ.

ಸಂಪರ್ಕಕ್ಕೆಂದು GPRS, EDGE, 802.11 b/ g/ n ವೈ-ಫೈ , ಬ್ಲೂಟೂಥ್ ಮತ್ತು USB ಪೋರ್ಟ್ ಆಯ್ಕೆ ಬಳಕೆದಾರರಿಗಿದೆ. ಇನ್ನೊಂದು ವಿಶೇಷವೆಂದರೆ 8 ಮೆಗಾ ಪಿಕ್ಸಲ್ ಕ್ಯಾಮೆರಾ. 3264 x 2448 ಪಿಕ್ಸಲ್ ರೆಸೊಲ್ಯೂಷನ್ ಹೊಂದಿರುವ ಈ ಕ್ಯಾಮೆರಾದಿಂದ ಅತ್ಯುತ್ತಮ ಗುಣಮಟ್ಟದ ಚಿತ್ರಣ ಸಾಧ್ಯವಿದೆ.

ಕ್ಯಾಮೆರಾದೊಂದಿಗೆ ಜಿಯೊ ಟ್ಯಾಗಿಂಗ್, ಫೇಸ್ ಅಂಡ್ ಸ್ಮೈಲ್ ಡಿಟೆಕ್ಷನ್ ಮತ್ತು ಆಟೊ ಫೋಕಸ್, LED ಫ್ಲಾಶ್ ಕೂಡ ಇದೆ. 1080p ಹೈ ಡೆಫನಿಶನ್ ವಿಡಿಯೋ ರೆಕಾರ್ಡಿಂಗ್ ಪ್ಲೇಬ್ಯಾಕ್ ನೀಡುವಷ್ಟು ಸಾಮರ್ಥ್ಯ ಕ್ಯಾಮೆರಾಗಿದೆ.

ಬ್ರೌಸರ್ ಗೆಂದು ಮೊಬೈಲ್ ನಲ್ಲಿ HTML ಬ್ರೌಸರ್ ನೀಡಲಾಗಿದೆ. ಜೊತೆಗೆ ಸ್ಟಿರಿಯೋ ಎಫ್ ಎಂ, RDS ಮತ್ತು A-GPS ನೇವಿಗೇಶನ್ ಇದೆ. HDMI ಔಟ್ ಪುಟ್ ಪೋರ್ಟ್ ಹೊಂದಿದ್ದು ಉತ್ತಮ ಗುಣಮಟ್ಟದ ವಿಡಿಯೋ ನೀಡಲಿದೆ. ಆಡಿಯೋ, ವಿಡಿಯೋ ಪ್ಲೇಬ್ಯಾಕ್ ಜೊತೆ MP3, MPEG4 ಮತ್ತು AAC ಫಾರ್ಮೆಟ್ ಗಳನ್ನು ಬೆಂಬಲಿಸುತ್ತದೆ.

1830mAh ಲೀಥಿಯಂ ಬ್ಯಾಟರಿ ಹೊಂದಿರುವ ಈ ಮೊಬೈಲ್ ಉತ್ತಮ ಟಾಕ್ ಟೈಂ ಮತ್ತು ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ. ಆದರೆ ಈ ಮೊಬೈಲ್ ಬೆಲೆಯನ್ನು ಅಧೀಕೃತವಾಗಿ ಘೋಷಿಸಿಲ್ಲ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+